Connect with us

Chamarajanagar

ಹನೂರು ಪಟ್ಟಣದ ವಾಸಿ ದರ್ಶನ್ ರವರ ಮೆದುಳು ಅಪಘಾತದಲ್ಲಿ ಪೆಟ್ಟಾದ ಹಿನ್ನೆಲೆ ಅಂಗಾಂಗ ದಾನ

Published

on

ಹನೂರು : ಪಟ್ಟಣದ ವಾಸಿ ದರ್ಶನ್ ರವರ ಮೆದುಳು ಅಪಘಾತದಲ್ಲಿ ಪೆಟ್ಟಾದ ಹಿನ್ನೆಲೆ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಹನೂರು ಪಟ್ಟಣದ ನಿವಾಸಿಗಳಾದ ಶಶಿ ಮತ್ತು ಸುಶೀಲಾ ದಂಪತಿ ಪುತ್ರ ದರ್ಶನ್ ರಸ್ತೆ ಅಪಘಾತವಾದ ಹಿನ್ನಲೆ
ಮೈಸೂರಿನ ಖಾಸಗಿ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿ ಆಗದೇ ಸಾವನ್ನಪ್ಪಿದರು ಎನ್ನಲಾಗಿದೆ ನಂತರ ಪೋಷಕರು ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಮೂಲಕ ದರ್ಶನ್ ತನ್ನ ಸಾವಿನಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

ಮೈಸೂರಿನ ಅಪೋಲೋ ಆಸ್ಪತ್ರೆಗೆ ದರ್ಶನ್ ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಸ ನಾಶಗಳು, ಪಿತ್ತಕೋಶ(ಲಿವರ್‌), ಮೂತ್ರಪಿಂಡ(ಕಿಡ್ನಿ), ಕಣ್ಣು, ದಾನ ಮಾಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ

Published

on

ಚಾಮರಾಜನಗರ: ತಾಲೂಕಿನ ಇರಸವಾಡಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿರುವ ಘಟನೆ ಸಂಭವಿಸಿದೆ.

ಭಾನುವಾರ ತಡ ರಾತ್ರಿಯಲ್ಲಿ ಗ್ರಾಮದ ರಂಗಸ್ವಾಮಿ ಶೆಟ್ಟಿ ಅವರ ಕೊಟ್ಟಿಗೆಗೆ ನುಗ್ಗಿದ ಚಿರತೆ, ಹಸುವಿನ ಹಿಂದಿನ ಭಾಗವನ್ನು ಸಂಪೂರ್ಣವಾಗಿ ತಿಂದು ಬಲಿ ಪಡೆದಿದೆ.

ಬೆಳಗಿನ ಜಾವ ವಿಷಯ ತಿಳಿದು ಗ್ರಾಮಸ್ಥರಲ್ಲಿ ಭೀತಿ ಮತ್ತು ಆತಂಕ ಉಂಟಾಗಿದೆ. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ಚಿರತೆ ಮರುದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಗಸ್ತು ಹೆಚ್ಚಿಸಬೇಕು ಹಾಗೂ ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Continue Reading

Chamarajanagar

ನಾನಂಥವನಲ್ಲಾ ಎಂದ ನಂದಕುಮಮಾರ್‌: ಚಾಮರಾಜನಗರ ಹಿರಿಕಾಟಿ ಕ್ರಷರ್‌ ವಿವಾದಕ್ಕೆ ಸ್ಪಷ್ಟನೆ

Published

on

ಚಾಮರಾಜನಗರ ಜಿಲ್ಲೆ ಹಿರಿಕಾಟಿ ಬಳಿ ಕ್ರಷರ್‌ ವಿಚಾರವಾಗಿ ಉದ್ಯಮಿಗಳಿಗೆ ಬೆದರಿಕೆ ಹಾಕಿರುವ ಆರೋಪ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್‌ ಅವರ ಮೇಲೆ ಕೇಳಿ ಬಂದಿದೆ. ಚಾಮರಾಜನಗರದ  ಸಂಸದ ಸುನಿಲ್‌ ಬೋಸ್‌ ಅವರ ಹೆಸರು ಕೂಡ ಪ್ರಸ್ತಾಪಿಸಿರುವ ನಂದಕುಮಾರ್‌, ನನಗೆ ಸಂಸದರ ಬೆಂಬಲವಿದೆ. ನನ್ನ ಪೊಲಿಟಿಕಲ್‌ ಒವರ್‌ ಏನು ಅಂತ ತೋರಿಸುತ್ತೇನೆ ಅಂತ ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ಯಮಿಗಳು ನಂದಕುಮಾರ್‌ ಸೇರಿ ಇತರರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಹಿರಿಕಾಟಿ ಬಳಿ ಕ್ರಷರ್‌ ಉದ್ಯಮವನ್ನು ಕಾನೂನು ನೀತಿ ನಿಯಾಮವಳಿ ಅನ್ವಯವೇ, ಯಾವುದೇ ಉಲ್ಲಂಘನೆ ಅಗದಂತೆ ನಡೆಸುತ್ತ ಬಂದಿದ್ದೇವೆ. ನಮ್ಮ ಕ್ರಷರ್‌ ಪಕ್ಕದಲ್ಲೇ ನಂದಕುಮಾರ್ ಅವರ ಕ್ರಷರ್‌ ಕೂಡ ಇದೆ. ನಮಗೆ ಕಿರುಕುಳ ನೀಡಿ ಇಲ್ಲಿಂದ ನಮ್ಮ ಕ್ರಷರ್‌ ಅನ್ನ ಬೇರೆಡೆ ಸ್ಥಳಾಂತರ ಮಾಡಲು ಈ ರೀತಿ ಕಿರುಕಳ ನೀಡಿದ್ದಾರೆ ಅಂತ ಬಹಿರಂಗವಾಗಿ ಮಾಧ್ಯಮಗಳೆದುರು ಗಂಭೀರ ಆರೋಪಗಳನ್ನ ಮಾಡಿದ್ದರು.

ಇನ್ನು ಉದ್ಯಮಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಂದಕುಮಾರ್‌ ನಾನಂಥವನಲ್ಲಾ, ನಾನು ಯಾವುದೇ ಪೊಲಿಟಿಕಲ್‌ ಪವರ್‌ ಯೂಸ್‌ ಮಾಡುವುದಾಗಿ ಹೇಲಿಲ್ಲ. ಅವರು ವಿನಾಕಾರಣ ಸುಳ್ಳು ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರ ಅಂತ ಸ್ಪಷ್ಟನೆ ನೀಡಿದ್ದಾರೆ.

Continue Reading

Chamarajanagar

ಪರಿಶ್ರಮದಿಂದ ಯಶಸ್ಸು ಸಾಧ್ಯ: ದೈಹಿಕ ನಿರ್ದೇಶಕ ಡಾ. ಶಾಂತರಾಜು

Published

on

ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾಪಟುಗಳು ದೇಶ ಹಾಗೂ ರಾಜ್ಯದ ಮಹಿಳಾ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯವಾಗಲಿದೆ ಎಂದು ಚಾಮರಾಜನಗರ ವಿ.ವಿ ದೈಹಿಕ ನಿರ್ದೇಶಕ ಡಾ. ಶಾಂತರಾಜು ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಇಂದು ಫೆಬ್ರವರಿ 11 ರಿಂದ 15 ರವರೆಗೆ ತಮಿಳುನಾಡಿನ ದಿಂಡಿಗಲ್ ನ ಪಿಎಸ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಚಾಮರಾಜನಗರ ವಿವಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ತಮಿಳುನಾಡಿನ ದಿಂಡಿಗಲ್ ನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಂತಸದ ವಿಚಾರ. ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಗಡಿ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಯಶೀಲರಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿಎಸ್. ಮಹದೇವಸ್ವಾಮಿ, ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲಹೆ ಸಮಿತಿ ಸದಸ್ಯ ಜಿ ಬಂಗಾರು, ಕೊಳ್ಳೇಗಾಲ ಜೆಎಸ್‌ಎಸ್ ಮಹಿಳಾ ಕಾಲೇಜು ದೈಹಿಕ ಉಪನ್ಯಾಸಕರಾದ ಎಸ್. ಶ್ರೀಧರ್, ಇತರರು ಇದ್ದರು.

Continue Reading

Trending

error: Content is protected !!