Connect with us

Chamarajanagar

“ಹನೂರುಗೆ ಆಗಮಿಸಿದ ಸುತ್ತೂರು ಜಾತ್ರೆ ರಥಯಾತ್ರೆ”

Published

on

ಹನೂರು : ಫೆ. 6ರಿಂದ 11ರವರೆಗೆ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ನಿಮಿತ್ತ ಹನೂರು ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆಯನ್ನು ಸ್ಥಳೀಯ ಶಾಸಕ ಎಂ. ಆರ್. ಮಂಜುನಾಥ ಹಾಗೂ ವಿವಿಧ ಸಮುದಾಯದ ಮುಂಖಡರು ಭಕ್ತರು ಬರಮಾಡಿಕೊಂಡರು ರಥದ ಮುಂದೆ ಅಳವಡಿಸಿದ್ದ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿ ಪುಷ್ಪ ಅರ್ಚನೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದಿ ತೀರದಲ್ಲಿ ಶ್ರೀ ಸುತ್ತೂರು ಕ್ಷೇತ್ರವನ್ನು ತಮ್ಮ ದಿವ್ಯ ತಪಸ್ಸಿನಿಂದ ಸ್ಥಾಪಿಸಿ ಬೆಳಗಿದ ಮಹಾಮಹಿಮರಾದ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಫೆಬ್ರವರಿ 6 ರಿಂದ 11ರವರೆಗೆ ನಡೆಯಲಿದೆದೆ ಅದರಿಂದ ನಮ್ಮ ಹನೂರು ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಜನರು ಜಾತ್ರೆಗೆ ಪಾಲ್ಗೊಳ್ಳಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ತಿಳಿಸಿದರು

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಂಡಳ್ಳಿ ಗ್ರಾಮದ ವಿದ್ಯಾರ್ಥಿನಿ ಹೊನ್ನಮ್ಮ ರವರನ್ನು ಶಾಸಕರು ಹಾಗೂ ವೀರಶೈವ ಜನಾಂಗದ ಮುಖಂಡರುಗಳು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ.ಮುಖಂಡರುಗಳಾದ ದತ್ತೇಶ್ ಕುಮಾರ್ , ಅಖಿಲ ಭಾರದ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಆನಾಪುರ ಉಮೇಶ್, ಕಣ್ಣೂರು ಬಸವರಾಜಪ್ಪ.ಅಜ್ಜೀಪುರ ಮುರುಳಿ, ಜಿಕೆ ಹೊಸೂರು ಬಸವರಾಜ, ಮಹದೇವ್ ಪ್ರಸಾದ್. ಮಂಜೇಶ್, ವೆಂಕಟೇಗೌಡ ಹಾಗೂ ಇನ್ನೀತರು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ವಾಣಿಜ್ಯ ವಿಭಾಗದಲ್ಲಿ ಟಾಪರ್ ಅದ ಹಳ್ಳಿ ಹುಡುಗಿ ಸಿ. ಯು ತ್ರಿಷ

Published

on

ಮೂಡಿಗೆರೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಿಗೆರೆಯ ಸೆಂಟ್ ಮಾರ್ಥಾಸ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಸಿ. ಯು. ತ್ರಿಷ 555 ಅಂಕಗಳನ್ನು ಪಡೆದುಕೊಂಡು ಕಾಲೇಜಿನ ಟಾಪರ್ ಆಗಿ ಹೊರಹೋಮ್ಮಿದ್ದಾಳೆ.

ಚಕ್ಕೂಡಿಗೆ ಸಿ. ಎಲ್ ಉಮೇಶ್ ಮತ್ತು ಲೀಲಾವತಿ ದಂಪತಿಗಳ ಮಗಳಾದ ಸಿ.ಯು.ತ್ರಿಷ ನೆನ್ನೆ ಪ್ರಕಟಗೊಂಡ ದ್ವಿತೀಯ ಪಿ ಯು ಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗ (ಇ ಬಿ ಎ ಎಸ್ )ದಲ್ಲಿ 555 ಅಂಕಗಳನ್ನು ಪಡೆದು ಶೇ 92.5 ಗಳಿಸಿಕೊಂಡು ಸಂತ ಮಾರ್ಥಾಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಟಾಪರ್ ಆಗಿದ್ದು ತ್ರಿಷ ತಂದೆ ತಾಯಿ ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ
ಸಿ. ಎಲ್ ಪೂರ್ಣೇಶ್ ಚಕ್ಕೂಡಿಗೆ

Continue Reading

Chamarajanagar

ಪೊಡುಗಳ ನಿವಾಸಿಗಳು ಮುಂಬರುವ ಲೋಕಸಭಾ ಚುನಾವಣೆಯ ಬಹಿಷ್ಕರಿಸಲು ತೀರ್ಮಾನಿಸಿ ಧರಣಿ ನಡೆಸಿದರು

Published

on

ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಹೊಸ ಪೊಡು, ಯರಕನಗದ್ದೆ ಕಾಲೋನಿ, ಸೀಗೆಬೆಟ್ಟ ಪೊಡು ಮತ್ತು ಬಂಗ್ಲೆ ಪೊಡುಗಳ ನಿವಾಸಿಗಳು ಮುಂಬರುವ ಲೋಕಸಭಾ ಚುನಾವಣೆಯ ಬಹಿಷ್ಕರಿಸಲು ತೀರ್ಮಾನಿಸಿ ಧರಣಿ ನಡೆಸಿದರು.

ಈ ಬಗ್ಗೆ ಸೋಲಿಗ ಮುಖಂಡರು ಮಾತನಾಡಿ ಬೆಟ್ಟದ ಸೋಲಿಗರ ಕಂದಾಯ ಇಲಾಖೆಯಿಂದ 1962-63 ರಲ್ಲಿ ಕಂದಾಯ ಭೂಮಿಯನ್ನು ಆಗಿನ ಸರ್ಕಾರ ಮಂಜೂರು ಮಾಡ ಲಾಗಿದ್ದು ರೂ.30 ಸೋಲಿಗ ಕುಟುಂಬಗಳು ಪಡೆದುಕೊಂಡಿರುತ್ತಾರೆ ಅಲ್ಲಿಂದ ಪ್ರಸ್ತುತ ವರೆಗೂ ಭೂಮಿಯನ್ನು ವ್ಯವಸಾಯಕ್ಕಾಗಿ ಮಾಡಿಕೊಂಡು ಬಂದಿದ್ದಾರೆ ಅದರ ಕಳೆದ 4 ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಸೋಲಿಗರ ಕುಟುಂಬಗಳ ಜಮೀನು ಅರಣ್ಯಕ್ಕೆ ಸೇರಿದೆ ಎಂದು ಹೇಳಿ ಮೂಲ ದಾಖಲಾತಿಗಳನ್ನು ಸಲ್ಲಿಸುವಂತೆ ಹಲವು ಬಾರಿ ತಹಸಿಲ್ದಾರ್ ಉಪವಿಭಾಗಾಧಿಕಾರಿ ನೋಟಿಸ್ ನೀಡಿದ್ದರು.

ಈ ಬಗ್ಗೆ ಆರ್ ಟಿ ಸಿ ಹಕ್ಕು ಪತ್ರ ಭೂಕಂದಾಯ ರಚನೆ ಕಟ್ಟಿರುವುದನ್ನು ಹಾಗೂ ಸರ್ಕಾರದ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ ಬಿಳಿಗಿರಂಗನ ಬೆಟ್ಟ 595 ಕರೆ ಜಮೀನನ್ನು ಬೆಟ್ಟದಲ್ಲಿ ವಾಸವಾಗಿರುವ ಸೋಲಿಗರು ಮತ್ತು ಇತರ ಜನಾಂಗದ 135 ಜನರಿಗೆ ನೀಡುತ್ತಾರೆ ಆದರೆ ಸೋಲಿಗರ ಜಮೀನನ್ನು ಮಾತ್ರ ಅರಣ್ಯ ಇಲಾಖೆಗೆ ಸೇರಿದೆ ಎಂದು ಪ್ರತ್ಯೇಕ ಸರ್ವೇ ನಂಬರ್ ರಚಿಸಿ ಸೋಲಿಗರ ಜಮೀನುಗಳನ್ನು ಅರಣ್ಯಕ್ಕೆ ಸೇರಿಸಲು ತೀರ್ಮಾನಿಸಿದ್ದಾರೆ ಇತರ ವರ್ಗದ ಜಮೀನನ್ನು ಸರಿಯಾಗಿದೆ ಎಂದು ಹೇಳಿ ಬೆಟ್ಟದ ಮೂಲ ನಿವಾಸಿಗಳಾದ ನಮಗೆ ಅನ್ಯಾಯ ಮಾಡಲಾಗುತ್ತಿದೆ ಸೋಲಿಗರ ಜಮೀನನ್ನು ಪಕ್ಕ ಪೋಡಿ ಅಡಿಯಲ್ಲಿ ತರಬೇಕು ಹೊಸ ಮನೆಗಳಿಗೆ ಮಂಜೂರಾತಿ ನೀಡಿ ಮೂಲ ಸೌಲಭ್ಯ ನೀಡುವಂತೆ ಒತ್ತಾಯಿಸಿದ್ದಾರೆ ಸೋಲಿಗ ಸಮುದಾಯದ ಮುಖಂಡರಾದ ಗಿರಿ ಮಾದೇಗೌಡ ಬಸವರಾಜು ಸಿದ್ದೇಗೌಡ ನಂಜೇಗೌಡ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Continue Reading

Chamarajanagar

ತಾಲೂಕಿನ ಬೆಕ್ಯಾ ಗ್ರಾಮದ ದಿವಾಕರ್ ನಾಪತ್ತೆಯಾಗಿದ್ದಾರೆ

Published

on

ಪಿರಿಯಾಪಟ್ಟಣ: ತಾಲೂಕಿನ ಬೆಕ್ಯಾ ಗ್ರಾಮದ ದಿವಾಕರ್ ನಾಪತ್ತೆಯಾಗಿದ್ದಾರೆ.
ಏ.4 ರ ಮಧ್ಯಾಹ್ನ ಮನೆಯಿಂದ ಹೊರ ಹೋದವರು ಈವರೆಗೂ ಪತ್ತೆಯಾಗಿಲ್ಲ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ವಿಚಾರಿಸಿದರು ಯಾವುದೇ ಮಾಹಿತಿ ದೊರೆತಿಲ್ಲವಾದ ಕಾರಣ ಅವರನ್ನು ಹುಡುಕಿ ಕೊಡುವಂತೆ ದಿವಾಕರ್ ಪತ್ನಿ ತಾರಾ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ನಾಪತ್ತೆಯಾದ ವ್ಯಕ್ತಿಯ ಮಾಹಿತಿ ದೊರೆತವರು ಪಿರಿಯಾಪಟ್ಟಣ ಆರಕ್ಷಕ ಠಾಣೆ ದೂರವಾಣಿ 08223-273100 ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ಮಾಹಿತಿ ನೀಡುವಂತೆ ಇನ್ಸ್ಪೆಕ್ಟರ್ ರಾಘವೇಂದ್ರ ಕೋರಿದ್ದಾರೆ.

ಕಾಣೆಯಾದ ವ್ಯಕ್ತಿ ಚಹರೆ:
ಅಂದಾಜು 45 ವರ್ಷ, ಸಾಧಾರಣ ಮೈಕಟ್ಟು, ದುಂಡು ಮುಖ, ಬೆಳ್ಳಗಿನ ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ.

Continue Reading

Trending

error: Content is protected !!