Hassan
ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿ, ಹಣ ಉಳಿತಾಯ ವಿಜಯ ಅಂಗಡಿ
ಹಾಸನ: ಪ್ರತಿನಿತ್ಯ ಸೈಕಲ್ ಬಳಸುವುದರಿಂದ ಆರೋಗ್ಯ ವೃದ್ಧಿ ಆಗುವುದಲ್ಲದೇ ಮಾಲಿನ್ಯ ತಡೆಗಟ್ಟಿ ವಾತವರಣವನ್ನು ಸಮತೋಲನದಲ್ಲಿ ಇಡಬಹುದು ಹಾಗೂ ಹಣ ಉಳಿತಾಯ ಆಗಲಿದೆ ಎಂದು ಆಕಾಶವಾಣಿ ಮುಖ್ಯಸ್ಥರಾದ ಡಾ|| ವಿಜಯ ಅಂಗಡಿ ಅಭಿಪ್ರಾಯಪಟ್ಟರು.

ನಗರದ ಚನ್ನಪಟ್ಟಣ ವೃತ್ತದ ಬಳಿ ಇರುವ ಗೋಮತಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಸನ ಲಯನ್ಸ್ ಕ್ಲಬ್ ಸದಸ್ಯರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಾಲಿನ್ಯ ಆಗದಂತೆ ತಡೆಗಟ್ಟಲು ಹೊರ ದೇಶದಲ್ಲಿ ಕಾಳಜಿವಹಿಸಿ ಹೆಚ್ಚಿನ ರೀತಿ ಸೈಕಲ್ ಬಳಕೆ ಮಾಡಲಾಗುತ್ತಿದೆ. ಆದರೇ ನಮ್ಮ ದೇಶದಲ್ಲಿ ಒಂದೊಂದು ಮನೆಯಲ್ಲಿ ಮೂರ‍್ನಾಲ್ಕು ಕಾರುಗಳು, ಬೈಕ್ ಗಳ ಕಾಣಬಹುದು. ಇದರಿಂದ ನಾನಾ ರೀತಿ ಅನುಕೂಲ, ಅನಾನುಕೂಲಗಳನ್ನು ಕಂಡಿದ್ದೇವೆ. ಸೈಕಲ್ ನಿಂದ ಆರೋಗ್ಯ ವೃದ್ಧಿ ಆಗುವುದಲ್ಲದೇ ದೇಹವನ್ನು ಸಮತೋಲನದಲ್ಲಿ ಇಡಬಹುದು ಎಂದರು. ಇವೆಲ್ಲವನ್ನು ಗಮನಿಸಿ ಸೈಕಲ್ ಬಳಸಿ ಸುಖ ಗಳಿಸಿ ಎನ್ನುವ ಪುಸ್ತಕ ಬರೆಯಲು ಮುಂದಾಗಿದ್ದೇನೆ. ನಾವು ಚಿಕ್ಕವರಿದ್ದಾಗ ಸೈಕಲನ್ನು ಬಹಳ ಪ್ರೀತಿಯಿಂದ ಅದನ್ನು ಬಳಕೆ ಮಾಡುತ್ತಿದ್ದೇವು. ಆಗೇ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಕೊಡಿಸಿದ್ದೇವೆ. ಆಗೇ ಅನೇಕ ಮನೆಗಳನ್ನು ಸೈಕಲನ್ನು ಕಾಣಬಹುದು. ಬೈಕು, ಕಾರು ಬಳಸುವುದರಿಂದ ಯಾವ ರಾಷ್ಟ್ರ ಪ್ರಶಸ್ತಿ ಸಿಗುವುದಿಲ್ಲ. ಸೈಕಲ್ ಬಳಕೆ ಮಾಡುವುದರಿಂದ ಹಣ ಉಳಿತಾಯ, ಆರೋಗ್ಯ ವೃದ್ಧಿ ಸೇರಿದಂತೆ ನಾನಾ ಲಾಭಗಳಿವೆ ಎಂದು ಕಿವಿಮಾತು ಹೇಳಿದರು. ನಾನು ಸೈಕಲ್ ಬಳಕೆ ಮಾಡುತ್ತಿರುವುದರಿಂದ ಲಕ್ಷಾಂತರ ರೂಗಳ ಉಳಿತಾಯ ಆಗಿದೆ. ಒಂದು ಪ್ರಶಸ್ತಿ ಸಿಗುತ್ತದೆ ಎಂದರೇ ಸಾವಿರಾರು ಜನ ಅರ್ಜಿ ಹಾಕುತ್ತಾರೆ. ಹಣ, ಬಂಗಾರ ಸಿಗುತ್ತದೆ ಎಂದು ಅರ್ಜಿ ಹಾಕುತ್ತಾರೆ. ಏನು ಲಾಭ ಇಲ್ಲ ಇದರಲ್ಲಿ ಎಂದರೇ ಯಾರು ಅರ್ಜಿ ಹಾಕಲು ಮುಂದೆ ಬರುವುದಿಲ್ಲ. ಜೀವನದಲ್ಲಿ ಸರಳವಾಗಿ ಬದುಕುತ್ತೇವೆ ಎಂದು ಹೋದರೇ ಲಕ್ಷಾಂತರ ರೂಗಳ ಹಣ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.

ಪ್ರತಿನಿತ್ಯ ಬಳಸುವ ಆಹಾರದಲ್ಲಿ ಆರೋಗ್ಯಕರ ಆಹಾರ ಸೇವಿಸಿದರೇ ಆರೋಗ್ಯ ಉತ್ತಮವಾಗಿರುತ್ತದೆ. ಅಕ್ಕಿಗಿಂದ ಹೆಚ್ಚಿನ ರೀತಿ ರಾಗಿ ಬಳಸಿದರೇ ಹೆಚ್ಚಿನ ಕ್ಯಾಲ್ಸಿಯಂ ಪಡೆಯಬಹುದು. ಇದು ಅತ್ಯಂತ ಆರೋಗ್ಯಕರವಾಗಿದೆ. ಇನ್ನು ಮಾಂಸಹಾರಿ ಮತ್ತು ಮದ್ಯ ಸೇವನೆ ಯಾವುದೇ ಆಗಿರಲಿ ಮಿತವಾಗಿರಲಿ. ಹೆಚ್ಚಿನ ರೀತಿ ಸೇವಿಸಿದರೇ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು.

ಇದೆ ವೇಳೆ ಮಾಜಿ ಅಧ್ಯಕ್ಷರ ದಿನವಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ರಾಜ್ಯಪಾಲರಾದ ಬಿ.ವಿ. ಹೆಗಡೆ ಮತ್ತು ಹೆಚ್.ಎಸ್. ಮಂಜುನಾಥ್ ಮೂರ್ತಿ ಇವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹೆಚ್.ಕೆ. ನಾಗೇಶ್, ಕಾರ್ಯದರ್ಶಿ ಸಿ.ಕೆ. ಕಿರಣ್ ಕುಮಾರ್, ಲಿಯೋ ಕ್ಲಬ್ ಕಾರ್ಯದರ್ಶಿ ಸುವರ್ಚಲಾ, ವಲಯ ಅಧ್ಯಕ್ಷ ಹೆಚ್.ಪಿ. ಪ್ರಕಾಶ್, ಮಾಜಿ ಅಧ್ಯಕ್ಷರಾದ ಬಿ.ಎಸ್. ಸೋಮಶೇಖರ್ ಇತರರು ಉಪಸ್ಥಿತರಿದ್ರು.
Hassan
ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ 63.34ಕೋಟಿ ಅನುಮೋದನೆ ನೀಡಿದ ಕ್ಯಾಬಿನೆಟ್
ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ರೂ.63.34 ಕೋಟಿಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಸಭೆಯಲ್ಲಿ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿಸಲು ಜಿಲ್ಲಾ ಉಸ್ತುವಾರಿ ಸಚಿವರಾಗಿ ನನಗೆ ಸಂತೋಷವಾಗುತ್ತಿದೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಉದ್ದೇಶಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಸ್ಥಾಪನೆಯನ್ನು ಈ ಹಿಂದೆಯೇ ಆರಂಭಿಸಲಾಗಿತ್ತು. ಆದರೆ ಅಗತ್ಯ ಅನುದಾನ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಹೀಗಾಗಿ ಆಸ್ಪತ್ರೆಗೆ ಬಂದಂತಹ ರೋಗಿಗಳನ್ನು ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಲಾಗುತ್ತಿದೆ.
ಇದರಿಂದ ಬಡ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವ ವಿಚಾರವನ್ನು ಹಾಸನ ಜಿಲ್ಲೆ ಸಂಸದರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದರು.

ಕೂಡಲೇ ಈ ಸಮಸ್ಯೆಗೆ ಪರಿಹಾರ ನೀಡುವ ಸಂಬಂಧ ನಾನು ಬೆಂಗಳೂರಿಗೆ ಮರಳಿದ ಕೂಡಲೇ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸೂಪರ್ ಸ್ಪೇಷಲಿಟಿ ಆಸ್ಪತ್ರೆಯ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಒದಗಿಸುವುದು ಈಗಿನ ತುರ್ತು ಅವಶ್ಯಕವಾಗಿರುತ್ತದೆ ಹೀಗಾಗಿ ಇದನ್ನು ಪೂರೈಸಲು ಮನವಿ ಮಾಡಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ನಮ್ಮ ಮನವಿಗೆ ಸ್ಪಂದಿಸಿ, ಈ ವಿಚಾರಕ್ಕೆ ಪರಿಹಾರ ನೀಡಲು ಸೂಚಿಸಿರುತ್ತಾರೆ.
ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಬೇಕಾಗಿರುವ ಹೆಚ್ಚುವರಿ ಮೊತ್ತದ ಮಂಜೂರಾತಿಗಾಗಿ ಸದರಿ ವಿಷಯವನ್ನು ಸಚಿವ ಸಂಪುಟದ ಮುಂದೆ ಇಂದು ತರಲಾಗಿತ್ತು. ಅದರಂತೆ ಈ ಬಗ್ಗೆ ಚರ್ಚೆ ನಡೆಸಿದ ಸಂಪುಟ ಸಭೆ ರೂ.63.34 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿರುವುದು ಸಂತಸದ ವಿಚಾರ. ಶೀಘ್ರದಲ್ಲೇ ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ನಾನು ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆ.

ನಮ್ಮ ಮನವಿಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಹಾಸನ ಜಿಲ್ಲೆಯ ಜನರ ಪರವಾಗಿ ಧನ್ಯವಾದಗಳು.
Hassan
ಆಲೂರು ತಾಲೂಕು ಕ್ರೀಡಾಂಗಣದಲ್ಲಿ ಪಾಳ್ಯ ವೃತ್ತ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಚಾಲನೆ
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ವಿದ್ಯಾರ್ಥಿ ಜೀವನದಲ್ಲಿ ಪಠ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಕ್ರೀಡೆಗಳಿಗೂ ನೀಡುವ ಅಗತ್ಯವಿದೆ. ಈ ಮೂಲಕ ಪರಿಪೂರ್ಣ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಲೂರು ತಾಲೂಕು ಪಾಳ್ಯ ವೃತ್ತ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಿಂದ ಮಾನಸಿಕ ಉಲ್ಲಾಸ ಪಡೆಯಬಹುದು, ದೈಹಿಕ ಆರೋಗ್ಯವು ಕ್ರೀಡೆಗಳಿಂದ ಸಾಧ್ಯವಿದೆ. ಹಲವು ಅನಾರೋಗ್ಯ ಸಮಸ್ಯೆಗಳಿಗೆ ಕ್ರೀಡೆಯೇ ಪರಿಹಾರವಾಗಿದೆ ಎಂದ ಅವರು.ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಸೋಲಿನಿಂದ ಎದೆಗುಂದದೆ ನಿರಂತರ ಪರಿಶ್ರಮಪಟ್ಟರೆ ಗೆಲುವು ಸಾಧ್ಯವಾಗುತ್ತದೆ. ಮೊದಲು ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಾಲೂಕಿನ ಯಾವುದೇ ಸರ್ಕಾರಿ ಶಾಲೆಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆ ಮಾಡಲು ಮುಂದಾದರೆ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಸಂತ ಜೋಸೆಫರ ದೇವಾಲಯ ಧರ್ಮಗುರುಗಳಾದ ಒಂದನೀಯ ಪಾದರ್ ಬಾಲರಾಜು ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ. ಸೋಲು-ಗೆಲುವು ಗಣನೆಗೆ ತೆಗೆದುಕೊಳ್ಳದೆ ಕ್ರೀಡೆಯಲ್ಲಿ ಭಾಗವಹಿಸಬೇಕು, ಶಾಲಾ ಶಿಕ್ಷಕರು ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತರಬೇಕು ಎಂದರು.
ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಕರಿಬಸವರಾಜು, ಶಿಕ್ಷಕ, ಶಿಕ್ಷಣ ಸಂಯೋಜಕರಾದ ದಿವಾಕರ್, ತಿಮ್ಮಶೆಟ್ಟಿ , ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹಿಮ, ಸಂತ ಜೋಸೆಫರ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಲೀಸಿ ಅಬ್ರಹಾಂ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಆಶಾಲತಾ, ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವರ್ಗದವರು ಮತ್ತು ಪಾಳ್ಯ ಹೋಬಳಿ ಸಮೂಹ ಸಂಪನ್ಮೂಲ ವ್ಯಕ್ತಿ ಜಯಣ್ಣ ಸೇರಿದಂತೆ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Hassan
ಮನೆ ಮನೆ ಕವಿಗೋಷ್ಠಿ ವತಿಯಿಂದ 333ನೇ ಮನೆ ಮನೆ ಕವಿಗೋಷ್ಠಿ
ಹಾಸನ : ಮನೆ ಮನೆ ಕವಿಗೋಷ್ಠಿ ವತಿಯಿಂದ 333ನೇ ಮನೆ ಮನೆ ಕವಿಗೋಷ್ಠಿಯನ್ನು ಭಾನುವಾರ ದಿನಾಂಕ 07.09.25 ರ ಇಳಿಹೊತ್ತು 3:00 ಗಂಟೆಗೆ ರೆಡ್ ರೋಜ್ ,ಶ್ರೀಮತಿ ಹೇಮಾ ಅನಂತರಾಜುರವರ ನಿವಾಸ , ಮನೆ ಸಂಖ್ಯೆ ಎಚ್ಐಜಿ 59, 60 ಮೂರನೇ ಕ್ರಾಸ್ ಕೆಜಿಐಡಿ ಕಚೇರಿ ಎದುರು ರಸ್ತೆ, ಕುವೆಂಪುನಗರ ಹಾಸನ, ಇಲ್ಲಿ ಆಯೋಜಿಸಲಾಗಿದೆ.

ಕವಿಗೋಷ್ಠಿಗೆಆಗಮಿಸಿದ ಕವಿಗಳಿಂದ ಕವನವಾಚನ ವಿಮರ್ಶೆ ನಡೆಯಲಿದೆ. ನಂತರ ಸಾಹಿತಿ ಸ ವೆಂ ಪೂರ್ಣಿಮಾ ರವರ ಒಂದೆಲೆ ಮೇಲಿನ ಕಾಡು ಎಂಬ ಕೃತಿಯನ್ನು ಸಾಹಿತಿಗಳಾದ ಗೊರೂರು ಶಿವೇಶರವರು ವಿಮರ್ಶೆ ಮಾಡಲಿದ್ದಾರೆ.

ಲೇಖಕಿ ಸ ವೆಂ ಪೂರ್ಣಿಮಾರವರು ಪ್ರಾಯೋಜಕತ್ವವನ್ನು ವಹಿಸಲಿದ್ದಾರೆ.ಈ ಕಾರ್ಯಕ್ರಮಕ್ಕೆ ತಮ್ಮ ಉಪಸ್ಥಿತಿ ಅಮೂಲ್ಯವಾಗಿದ್ದು, ತಾವು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನೆಮನೆ ಕವಿಗೋಷ್ಠಿಯ
ಸಂಚಾಲಕರಾದ ಸುಕನ್ಯಾ ಮುಕುಂದ ಅವರು ಕೋರಿದ್ದಾರೆ.
-
Hassan18 hours agoಪಂಜ ಕುಸ್ತಿ ಸ್ಪರ್ಧೆಯಲ್ಲಿ ಅಕ್ಕ ತಂಗಿಯರ ಕಾಮಾಲ್
-
Mysore19 hours agoಶಾಸಕರು ಹುಣಸೂರು ನಗರಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ : ಸದಸ್ಯ ಮಾಲಿಕ್ ಪಾ
-
Hassan20 hours agoಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಶಿಕ್ಷಕರಿಗಾಗಿ ವಿಶೇಷ ಕೊಡುಗೆ
-
Mysore23 hours agoಮೈಸೂರು ದಸರಾ: ಮಾನ್ಯ ಸಿಎಂ ಸಿದ್ದರಾಮಯ್ಯಗೆ ಅಧಿಕೃತ ಆಹ್ವಾನ
-
Special22 hours agoಕರ್ನಾಟಕ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ : ಕರ್ನಾಟಕ ಸರ್ಕಾರದಿಂದ ಅರ್ಜಿ ಆಹ್ವಾನ
-
Mysore15 hours agoಅಧಿಕಾರಿಗಳ ನಿರ್ಲಕ್ಷ : ಬೆಳೆ ನಾಶ ರೈತ ಕುಟುಂಬ ಆತ್ಮಹತ್ಯೆಗೆ ಸಿದ್ದ
-
Hassan19 hours agoನಗರದಲ್ಲಿ ಬಸವ ಸಂಸ್ಕೃತಿ ರಥಯಾತ್ರೆ ಸ್ವಾಗತಕ್ಕೆ ಸಿದ್ಧತೆ
-
Kodagu19 hours agoದುಬೈನಲ್ಲಿ ಎಮ್ಮೆಮಾಡು ಯುಎಇ ಸಮಿತಿ ವತಿಯಿಂದ ಯಶಸ್ವಿಯಾಗಿ ನಡೆದ ಬೃಹತ್ ಮೀಲಾದ್ ಸಮಾವೇಶ
