Connect with us

Tech

ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುತ್ತಿದ್ದೀರಾ? ಹಾಗಾದ್ರೆ ಹುಷಾರ್!

Published

on

ಕೆಲವು ವ್ಯಕ್ತಿಗಳು ತಮ್ಮ ಸ್ಟೇಟಸ್ ಸಿಂಬಲ್‌ಗಾಗಿ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಬಳಸುತ್ತಾರೆ. ಅವರು ಹೊಸ ಫೋನ್ ಖರೀದಿಸಲು ಸಾಧ್ಯವಿಲ್ಲ ಅಥವಾ ತಮ್ಮ ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ, ಆದ್ದರಿಂದ ಅವರು ತಮ್ಮ ಆಸೆಗಳನ್ನು ಪೂರೈಸಲು ಸೆಕೆಂಡ್ ಹ್ಯಾಂಡ್ ಫೋನ್‌ಗಳನ್ನು ಖರೀದಿಸುತ್ತಾರೆ.

ಮನುಷ್ಯನಿಗೆ ಗಾಳಿ ಮತ್ತು ನೀರು ಎಷ್ಟು ಬೇಕೋ, ಇಂದು ಜನರಿಗೆ ಮೊಬೈಲ್ ಫೋನ್ ಅಷ್ಟೇ ಅವಶ್ಯಕವಾಗಿದೆ. ಮೊಬೈಲ್ ಇಲ್ಲದೇ ಒಂದು ಕ್ಷಣವೂ ಕಳೆಯದಂತಹ ಪರಿಸ್ಥಿತಿ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಕಾಮನ್ ಆಗಿಬಿಟ್ಟಿದೆ. ಕೆಲವರು ಲಕ್ಷಗಟ್ಟಲೆ ಬೆಲೆಯ ಫೋನ್ ಬಳಸಿದರೆ ಕೆಲವರು ಹತ್ತಾರು ಸಾವಿರದ ಫೋನ್ ಬಳಸುತ್ತಾರೆ. ಆದರೆ ಕೆಲವು ವ್ಯಕ್ತಿಗಳು ತಮ್ಮ ಸ್ಟೇಟಸ್ ಸಿಂಬಲ್‌ಗಾಗಿ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಬಳಸುತ್ತಾರೆ. ಅವರು ಹೊಸ ಫೋನ್ ಖರೀದಿಸಲು ಸಾಧ್ಯವಿಲ್ಲ ಅಥವಾ ತಮ್ಮ ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ, ಆದ್ದರಿಂದ ಅವರು ತಮ್ಮ ಆಸೆಗಳನ್ನು ಪೂರೈಸಲು ಸೆಕೆಂಡ್ ಹ್ಯಾಂಡ್ ಫೋನ್‌ಗಳನ್ನು ಖರೀದಿಸುತ್ತಾರೆ. ನಿಜವಾಗ್ಲೂ ಗಿರಾಕಿ ಅಮ್ಮಿ ನಾದಿದ್ರೆ ಪರವಾಗಿಲ್ಲ. ಕಳುವಾದ ಫೋನ್ ಅಥವಾ ಕೇಸ್ ನಲ್ಲಿ ಫೋನಾದರೆ ತೊಂದರೆ ಆಗುತ್ತೆ.

ಇಂತಹ ಫೋನ್ ಗಳನ್ನು ಕಡಿಮೆ ಬೆಲೆಗೆ ಖರೀದಿಸಿದರೆ ನಿಮ್ಮ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಬೇಕಾಗುತ್ತದೆ. ಅದಕ್ಕಾಗಿಯೇ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವ ಮೊದಲು, ನೀವು ಖರೀದಿಸುವ ಅಂಗಡಿಯವನು ನಂಬಲರ್ಹನೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. ಅಂಗಡಿಯವರಿಂದ ಖರೀದಿಸಿದ ಮೊಬೈಲ್‌ಗೆ imei ಸಂಖ್ಯೆಯೊಂದಿಗೆ ಬಿಲ್ ತೆಗೆದುಕೊಳ್ಳಬೇಕು. ಅವರು ಖರೀದಿಸುವ ಫೋನ್ ಕ್ಲೀನ್ ಆಗಿದೆಯೇ ಅಥವಾ ಕಪ್ಪು ಪಟ್ಟಿಗೆ ಸೇರಿದೆಯೇ ಎಂದು ಪರಿಶೀಲಿಸಬೇಕು.. ಮೊದಲು ಮೊಬೈಲ್‌ನಲ್ಲಿ *06 # ಅನ್ನು ಡಯಲ್ ಮಾಡಿ ನಂತರ ನಿಮಗೆ ಪರದೆಯ ಮೇಲೆ imei ಸಂಖ್ಯೆ ಕಾಣಿಸುತ್ತದೆ. ಅದನ್ನು ಬರೆಯಿರಿ ಈಗ ನಿಮ್ಮ ಫೋನ್‌ನಲ್ಲಿ Google ಅನ್ನು ತೆರೆಯಿರಿ ಮತ್ತು https://www.imei.info/ ಗೆ ಹೋಗಿ ಅಲ್ಲಿ ನೀವು ಪಡೆಯಲು ಬಯಸುವ imei ಅನ್ನು ನಮೂದಿಸಿ ಮತ್ತು ತಕ್ಷಣವೇ ನಿಮ್ಮ ಫೋನ್‌ನ ಸಂಪೂರ್ಣ ಮಾಹಿತಿಯನ್ನು ನೀವು ನೋಡುತ್ತೀರಿ. ಅದರ ಅಡಿಯಲ್ಲಿ, ನೀವು ಫೋನ್ ಚೆಕ್ ಪ್ರೊ ಎಂಬ ಆಯ್ಕೆಯನ್ನು ನೋಡುತ್ತೀರಿ, ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ಅದು ತಕ್ಷಣವೇ ನಿಮ್ಮ ಫೋನ್ ಕಪ್ಪು ಪಟ್ಟಿಗೆ ಸೇರಿದೆಯೇ ಅಥವಾ ಕ್ಲೀನ್ ಆಗಿದೆಯೇ ಎಂದು ತೋರಿಸುತ್ತದೆ.

ಈ ಸೈಟ್ ಹೇಗೆ ಕೆಲಸ ಮಾಡುತ್ತದೆ?

ನಿಮ್ಮ ಫೋನ್ ಕಳ್ಳತನವಾಗಿದೆ ಎಂದು ನೀವು ಭಾವಿಸಿದರೆ, ನೀವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೀರಿ, ಆ ದೂರಿನಲ್ಲಿ ನಿಮ್ಮ ಫೋನ್‌ನ ಇಮೇಐ ನಂ ಸಹ ನಿಮಗೆ ಸಿಗುತ್ತದೆ. ಪೊಲೀಸರು ಈ ಸಂಖ್ಯೆಯನ್ನು ಕಪ್ಪುಪಟ್ಟಿಗೆ ಸೇರಿಸುತ್ತಾರೆ. ಈ ಕಪ್ಪು ಪಟ್ಟಿಯಲ್ಲಿರುವ ಫೋನ್‌ಗಳನ್ನು ನೀವು ಖರೀದಿಸಿದರೆ, ಯಾವುದೇ ಸಮಯದಲ್ಲಿ ತೊಡಕುಗಳು ಉಂಟಾಗುತ್ತವೆ. ಆದ್ದರಿಂದ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವ ಮೊದಲು ಇದನ್ನು ಪರಿಶೀಲಿಸಿ ಮತ್ತು ತೊಡಕುಗಳನ್ನು ತಪ್ಪಿಸಿ.

Continue Reading
Click to comment

Leave a Reply

Your email address will not be published. Required fields are marked *

Tech

ಓಲಾ ಎಲೆಕ್ಟ್ರಿಕ್ ಸ್ಕೂಟಿಯ ಬೆಲೆ ಭರ್ಜರಿ 26 ಸಾವಿರ ರೂ. ಇಳಿಕೆ.. ಈ ರಿಯಾಯಿತಿ ಇನ್ನೂ ಕೆಲವೇ ದಿನ ಮಾತ್ರ

Published

on

Discount on Ola Electric Scooty : ವಿದ್ಯುತ್ ಚಾಲಿತ ವಾಹನ ಮಾರಾಟದಲ್ಲಿ ಪ್ರಸಿದ್ಧವಾಗಿರುವ ಓಲಾ ಕಂಪನಿಯು ಹೆಸರುವಾಸಿಯಾಗಿದ್ದು, ಇದು ಸದ್ಯಕ್ಕೆ ಹೋಳಿ ಹಬ್ಬದ ಪ್ರಯುಕ್ತವಾಗಿ ವಿದ್ಯುತ್ ಚಾಲಿತ ಸ್ಕೂಟರ್ ನ ಬೆಲೆಯನ್ನು ಭರ್ಜರಿ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ.

ಈ ಆಫರ್ ಕೇವಲ ಇನ್ನೂ ಕೆಲವೇ ದಿನಗಳವರೆಗೆ ಮಾತ್ರ ಇದ್ದುದ್ದು, ನಾವು ಎಲೆಕ್ಟ್ರಿಕ್ ಸ್ಕೂಟಿ ಖರೀದಿಸಬೇಕು ಎಂಬ ಆಸೆ ಇಟ್ಟುಕೊಂಡಿರುವವರಿಗೆ ಇದು ಸುವರ್ಣ ಅವಕಾಶವಾಗಿದೆ.

ಅಂತಿಮ ದರ ಎಷ್ಟು?

ಹೋಳಿ ಹಬ್ಬದ ಪ್ರಯುಕ್ತವಾಗಿ ಓಲಾ ಕಂಪನಿಯ ಎಸ್ 1 ಏರ್ ಸ್ಕೂಟರ್ ನ ಬೆಲೆಯಲ್ಲಿ ಭರ್ಜರಿ ₹26,750 ರೂಪಾಯಿ ರಿಯಾಯಿತಿ ನೀಡಿದ್ದು ಸದ್ಯಕ್ಕೆ ಇದು ಗ್ರಾಹಕರಿಗೆ ಕೇವಲ 89,999 ರೂ. ಗೆ ದೊರೆಯುತ್ತಿದೆ.

ಅದರಲ್ಲಿಯೇ ಮತ್ತೊಂದು ಮಾದರಿಯ ಸ್ಕೂಟರ್, ಎಸ್ 1 ಎಕ್ಸ್ ಪ್ಲಸ್ (Gen 2) ಸ್ಕೂಟಿಯ ಬೆಲೆಯಲ್ಲಿ 22 ಸಾವಿರ ರೂ. ರಿಯಾಯಿತಿ ಘೋಷಿಸಿದ್ದು, ಇದು ಮಾರುಕಟ್ಟೆಯಲ್ಲಿ 82,999ರೂ. ಗೆ ಲಭ್ಯವಿದೆ.

ಅದೇ ರೀತಿ ಎಸ್ 1 ಸರಣಿ ಮತ್ತು ಇತ್ತೀಚಿಗೆ ಹೊಸದಾಗಿ ಬಿಡುಗಡೆಯಾಗಿರುವಂತಹ ಎಸ್ 1 ಜೆನ್ 3 ಸರಣಿಯ ಸ್ಕೂಟಿ ದರದಲ್ಲಿ 25,000 ರೂ. ವರೆಗೆ ರಿಯಾಯಿತಿ ಪ್ರಕಟಿಸಲಾಗಿದ್ದು ಗ್ರಾಹಕರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

ಈ ರಿಯಾಯಿತಿ ಎಲ್ಲಿಯವರೆಗೆ ಇರಲಿದೆ?

ಈ ರಿಯಾಯಿತಿಯನ್ನು ಕೇವಲ ಹೋಳಿ ಹಬ್ಬದ ಪ್ರಯುಕ್ತವಾಗಿ ನೀಡಿದ್ದು ಇದು ಕೇವಲ ಮಾರ್ಚ್ 17ರ ವರೆಗೆ ಗ್ರಾಹಕರಿಗೆ ಲಭ್ಯವಿರಲಿದೆ ಎಂದು ಕಂಪನಿಯು ಪ್ರಕಟಿಸಿದೆ.

Continue Reading

Tech

ಸುಲಭವಾಗಿ ಮೊಬೈಲ್ ನಲ್ಲಿ ಸಾಲ ಸಿಗುತ್ತದೆ ಎಂದು ಮೋಸ ಹೋಗದಿರಿ : ಆನ್ಲೈನ್ ಲೋನ್ ಪಡೆಯುವಾಗ ಈ ವಿಷಯಗಳು ನೆನಪಿರಲಿ

Published

on

Things to keep in mind before taking Online Loans : ತಂತ್ರಜ್ಞಾನ ಹೆಚ್ಚಾದಂತೆ ಮಾನವನಿಗೆ ಪ್ರತಿಯೊಂದು ಕೂಡ ಸುಲಭವಾಗಿ ಸಿಗುತ್ತಿದೆ. ನಿಮಗೆ ಗೊತ್ತಿರುವ ಹಾಗೆ ಈಗಿನ ದಿನಗಳಲ್ಲಿ ಕೇವಲ ನಿಮ್ಮ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಮುಖಾಂತರ ನೀವು ನಿಮ್ಮ ಮೊಬೈಲ್ ನಲ್ಲಿಯೇ ಕೆಲವೇ ಕ್ಷಣಗಳಲ್ಲಿ ಲೋನ್ ಪಡೆಯುವ ಅವಕಾಶವಿದೆ.

ತುರ್ತು ಸಂದರ್ಭದಲ್ಲಿ ಹಣಕಾಸಿನ ಅಗತ್ಯತೆ ಹಲವು ಜನರಿಗೆ ಇರುವುದನ್ನು ಆಧಾರವಿಟ್ಟುಕೊಂಡು ಲೋನ್ ಕೊಡುವ ಸೋಗಿನಲ್ಲಿ ಜನಸಾಮಾನ್ಯರಿಗೆ ಸೈಬರ್ ವಂಚಕರು ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ನಾವು ಮೊಬೈಲ್ನಲ್ಲಿ ಆನ್ಲೈನ್ ಮುಖಾಂತರ ಯಾವುದೇ ರೀತಿಯ ಲೋನ್ ಗೆ ಅಪ್ಲೈ ಮಾಡುವ ಸಮಯದಲ್ಲಿ ಹಾಗೂ ಲೋನ್ ಪಡೆದ ನಂತರ ಕೆಲವೊಂದಿಷ್ಟು ಸಣ್ಣ ಸಣ್ಣ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ.

ಇಂತಹ ಮಾತುಗಳಿಗೆ ಬಲಿಯಾಗದಿರಿ?

ಯಾವುದೇ ಸೈಬರ್ ವಂಚಕರು ಗ್ರಾಹಕರಿಗೆ ಮೊದಲು ಅಸೆ ಹುಟ್ಟಿಸುತ್ತಾರೆ. ಅದು ಹೇಗೆಂದರೆ ಹಲವಾರು ಜನರ ವೀಕ್ನೆಸ್ ಗಳಾದ, ಕಡಿಮೆ ಸಿಬಿಲ್ ಸ್ಕೋರ್, ಯಾವುದೇ ದಾಖಲೆಗಳಿಲ್ಲದೆ ಸಾಲ ಎಂಬ ಇತ್ಯಾದಿ ಮಾತುಗಳಿಂದ ನಿಮ್ಮ ಆಕರ್ಷಸಿ ಸಾಲ ತೆಗೆದುಕೊಳ್ಳುವ ಹಾಗೆ ಮಾಡುತ್ತಾರೆ ಅಥವಾ ಅವರ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಹಾಗೆ ನಿಮ್ಮಲ್ಲಿ ಆಸೆ ಹುಟ್ಟಿಸುತ್ತಾರೆ.

ಅವರ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಆದ ಬಳಿಕ ಅವರ ಅಸಲಿ ಆಟ ಶುರು ಆಗುತ್ತದೆ. ಏಕೆಂದರೆ ಆ ಆಪ್ ಗಳು ಸಾಮಾಜಿಕ ಜಾಲತಾಣದ ಮುಖಾಂತರ ಹರಿದಾಡಿರುವ APK ಫೈಲಗಳಾಗಿರುತ್ತವೆ. ಇದರಿಂದ ಅವರು ಸುಲಭವಾಗಿ ನಿಮ್ಮ ಮೊಬೈಲ್ ಹ್ಯಾಕ್ ಮಾಡಬಹುದು ಹಾಗೂ ನಿಮ್ಮ ಹಲವಾರು ಗೌಪ್ಯತೆಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಆದ್ದರಿಂದ ಯಾವುದೇ ರೀತಿಯ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಬಹುಜಾಗೃತರಾಗಿರಿ. ವಿಪರ್ಯಾಸ ಏನೆಂದರೆ ಈ ಲೋನ್ ಅಪ್ ಗಳು ಆಪ್ ನ ಮೇಲೆ ನಂಬಿಕೆ ಬರಲಿ ಎಂಬ ಉದ್ದೇಶದಿಂದ ಮೊದಲು ಸಣ್ಣ ಪುಟ್ಟ ಮೊತ್ತದ ಸಾಲ ನೀಡಿ ಬಿಡುತ್ತವೆ. ನಂತರದಲ್ಲಿ ಜನಸಾಮಾನ್ಯರು ನಂಬಿಕಸ್ತ ಸಾಲ ಕೊಡುವ ಕಂಪನಿ ಎಂದು ನಂಬಿ ಮೋಸ ಹೋಗುತ್ತಾರೆ.

ಇವರು ಹೇಗೆ ನಿಮಗೆ ಮೋಸ ಮಾಡುತ್ತಾರೆ ಎಂದರೆ, ಸಣ್ಣ ಪುಟ್ಟ ಸಾಲ ನೀಡಿದ ನಂತರ ನಿಮಗೆ ಸ್ವಲ್ಪ್ ದೊಡ್ಡ ಮೊತ್ತದ ಸಾಲ ನೀಡುತ್ತಾರೆ. ಮೊದಲಿಗೆ ನಿಮಗೆ ಹೇಳುವ ಬಡ್ಡಿ ದರವೆ ಬೇರೆ, ಮರುಪಾವತಿ ಸಮಯದಲ್ಲಿ ನಿಮ್ಮ ಸಾಲದ ಮೇಲೆ ವಿಧಿಸುವ ಬಡ್ಡಿದರವೆ ಬೇರೆ. ನಂತರ ಈ ಬಡ್ಡಿ ಹಾಗೂ ಅಸಲಿನ ಮರುಪಾವತಿಗಾಗಿ ನಿಮ್ಮನ್ನು ಬೆನ್ನತ್ತುತ್ತಾರೆ.

ಗಳೇಒಂದು ವೇಳೆ ನೀವು ಅವರಿಗೆ ಮರುಪಾವತಿ ಮಾಡದೇ ಇದ್ದಲ್ಲಿ, ನಿಮ್ಮ ಡೇಟಾ ಕಳ್ಳತನ. ಅದು ಹೇಗೆಂದರೆ ಅವರ ಅಪ್ ಡೌನ್ಲೋಡ್ ಮಾಡಿಕೊಂಡಾಗ ನಿಮ್ಮ ಎಲ್ಲಾ ಮಾಹಿತಿಯನ್ನು ಉಪಯೋಗಿಕೊಳ್ಳಲು ನೀಮಗೆ ಗೊತ್ತಿಲ್ಲದೇ ನೀವೆ ಅವರಿಗೆ ಅನುಮತಿ ನೀಡಿರುತ್ತಿರಿ. ನಿಮ್ಮ ಗೌಪ್ಯತೆಯ ಫೋಟೋ ಹಾಗೂ ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ಇಟ್ಟುಕೊಂಡು ನಿಮಗೆ ಆಟ ಆಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ನೀವು ಮಾಧ್ಯಮಗಳಲ್ಲಿ ನೋಡುತ್ತಿರಬಹುದು, ಹಲವಾರು ಯುವಕ ಯುವತಿಯರು ಇಂತಹ ಬಲೆಗಳಿಗೆ ಬಿದ್ದು ತಮ್ಮ ಜೀವ ಮತ್ತು ಜೀವನವನ್ನೇ ಕಳೆದುಕೊಂಡಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ಹಾಗಿದ್ದರೆ ಇಂತಹ ಸೈಬರ್ ವಂಚನೆಗಳಿಂದ ಸುರಕ್ಷವಾಗಿರುವುದು ಹೇಗೆ?

ನೀವು ಯಾವುದೇ ರೀತಿಯ ತುರ್ತು ಸಮಯದಲ್ಲಿ ಹಣಕಾಸಿನ ಅಗತ್ಯ ಇದ್ದಲ್ಲಿ ಆನ್ಲೈನ್ ಲೋನ್ ಪಡೆಯುವುದರ ಬದಲಾಗಿ ನಿಮ್ಮ ಆಪ್ತರಿಂದ ಸಹಾಯ ಪಡೆಯಲು ಮೊದಲನೇ ಆದ್ಯತೆ ನೀಡಿ. ಆನ್ಲೈನ್ ಲೋನ್ ಪಡೆಯಲೇ ಬೇಕು ಎಂಬ ಸಂಧರ್ಭದಲ್ಲಿ ನಿಮಗೆ ಲೋನ್ ನೀಡುವ ಮೈಕ್ರೋ ಫೈನಾನ್ಸ್ ಅಪ್ ಗಳು RBI ನಿಂದ ಮಾನ್ಯತೆ ಪಡೆದಿದೆಯೋ ಇಲ್ಲವೋ ಎಂಬುದನ್ನು ಖಚಿತಪಡೆಸಿಕೊಳ್ಳಿ. ಒಂದು ವೇಳೆ ನೀವು ಪ್ಲೇ ಸ್ಟೋರಗಳಲ್ಲಿ ಆಪ್ ಡೌನ್ಲೋಡ್ ಮಾಡಿಕೊಳ್ಳುವಾಗ ರಿವ್ಯೂಗಳನ್ನು ಒಂದು ಸಲ ಓದಿರಿ.

ಯಾವುದೇ ಅಪ್ ಗಳನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಗೌಪ್ಯತೆಗೆ ಸಂಬಂದಿಸಿದ ಯಾವುದೇ ರೀತಿಯ ಅನಗತ್ಯ ಅನುಮತಿ ನೀಡಲೆಬೇಡಿ. ನಿಮಗೆ ಇಂತಹ ಯಾವುದೇ ಅನುಮಾನ ಬಂದಲ್ಲಿ ತಕ್ಷಣವೇ ಸೈಬರ್ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ.

Continue Reading

Tech

ಹ್ಯುಂಡೈ ಕಂಪನಿಯ ಎರಡು ಹೊಸ ವೆರಿಯಂಟ್ ಬಿಡುಗಡೆ ಮಾಡಿದ್ದು, ಕಾರು ಪ್ರಿಯರಿಗೆ ಭರ್ಜರಿ ಗಿಫ್ಟ್ ನೀಡಿದೆ!

Published

on

Hyundai Creta New Variants Released : ಭಾರತದಲ್ಲಿ ಕಾರು ಪ್ರಿಯರ ಭರವಸೆಯ ಕಂಪನಿಯಾದ ಹ್ಯುಂಡೈ, ಎರಡು ಹೊಚ್ಚ ಹೊಸ ವೆರಿಯಂಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಹಲವು ವೈಶಿಷ್ಟಗಳನ್ನು ಹೊಂದಿವೆ. ಇದರ ಬೆಲೆ ಎಷ್ಟು? ಇದರ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ..

ಹ್ಯುಂಡೈ ಕ್ರೆಟಾ ಕಾರ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಗ್ರಾಹಕರ ಮನಗೆದ್ದಿದೆ. ಇದನ್ನು ಅರಿತ ಕಂಪನಿಯು 2 ಹೊಸ ವೆರಿಯಂಟ್ ಗಳನ್ನು ಬಿಡುಗಡೆ ಮಾಡಿದೆ.

ಬಿಡುಗಡೆಯಾದ ಹೊಸ ವೆರಿಯಂಟ್ ಗಳ ಹೆಸರು :

1. ಹ್ಯುಂಡೈ ಕ್ರೆಟಾ ಎಸ್‌ಯುವಿಯ ‘ಇಎಕ್ಸ್ (ಓ) – Hyundai Creta SUV EX (O)
2. ಹ್ಯುಂಡೈ ಕ್ರೆಟಾ ಎಸ್‌ಯುವಿಯ ‘ಎಸ್ (ಓ) – Hyundai Creta SUV S(O)

ಹ್ಯುಂಡೈ ಕ್ರೆಟಾ ಎಸ್‌ಯುವಿಯ ‘ಇಎಕ್ಸ್ (ಓ) ನ ವಿವರಗಳು :

ಹ್ಯುಂಡೈನ ಕ್ರೆಟಾ (Hyundai Creta) ಎಸ್‌ಯುವಿಯ ಹೊಸ ‘ಇಎಕ್ಸ್ (ಒ)’ ರೂಪಾಂತರದ ಎಕ್ಸ್ ಶೋರೂಮ್ ಬೆಲೆಯು 12.97 ಲಕ್ಷ ಇದ್ದು, ಇದು ಹಲವು ಆಕರ್ಷಕ ವೈಶಿಷ್ಟಗಳನ್ನು ಹೊಂದಿದೆ. ಪ್ರಮುಖವಾದ ವಿಶೇಷತೆ ಏನೆಂದರೆ ಇದು ಪನೋರಮಿಕ್ ಸನ್‌ರೂಫ್ ಹೊಂದಿದ್ದು, ಎಲ್ಇಡಿ ರೀಡಿಂಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಹ್ಯುಂಡೈ ಕ್ರೆಟಾ ಎಸ್‌ಯುವಿಯ ‘ಎಸ್ (ಓ) ನ ವಿವರಗಳು :

ಹ್ಯುಂಡೈ ಕ್ರೆಟಾದ ಮತ್ತೊಂದು ವೆರಿಯಂಟ್ ನ ಎಕ್ಸ್ ಶೋರೂಂ ಬೆಲೆಯು 16.18 ಲಕ್ಷ ರೂ. ಇದ್ದು, ವೆಂಟಿಲೇಟೆಡ್ ಫ್ರೆಂಟ್ ಸೀಟ್ ಗಳನ್ನು ಹೊಂದಿದೆ. ಹೊಂದಾಣಿಕೆ ಮಾಡಿಕೊಳ್ಳಬಹುದಾದ 8-ವೇ ಪವರ್ ಡ್ರೈವಿಂಗ್ ಸೀಟ್, ಪ್ರಯಾಣಿಕರಿಗೆ ಆಕರ್ಷಕಗೊಳ್ಳುವ ಸೌಂಡ್ ಸಿಸ್ಟಮ್ ಇದು ಹೊಂದಿದೆ.

ಮೈಲೇಜ್ ಎಷ್ಟು? ಯಾವ ಯಾವ ಬಣ್ಣಗಳ ಆಯ್ಕೆಗಳಿವೆ?

ಈ ಮಾದರಿಯ ಕಾರ್ ಗಳು ಸಾಮಾನ್ಯವಾಗಿ 17.4 ರಿಂದ 21.8 km ವರೆಗೆ ಮೈಲೇಜ್ ನೀಡುತ್ತದೆ. ಇವುಗಳು ಟೈಟಾನ್ ಗ್ರೇ, ರೇಂಜರ್ ಖಾಕಿ, ಅಬಿಸ್ ಬ್ಲಾಕ್ ಹಾಗೂ ಅಟ್ಲಾಸ್ ವೈಟ್ ಬಣ್ಣಗಳೊಂದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿವೆ.

ಇತರೆ ವಿಶೇಷತೆಗಳು : ಇವು 5 ಜನರ ಸಾಮರ್ಥ್ಯದ ಕಾರ್ ಗಳಾಗಿದ್ದು, ದೂರದ ಪ್ರಯಾಣಕ್ಕೆ ಅವಶ್ಯಕತೆ ಇರುವ ಹೆಚ್ಚಿನ ಬ್ಯಾಗ್, ಲಗೇಜ್ ತೆಗೆದುಕೊಂಡು ಹೋಗಲು ಹೆಚ್ಚು ಸಾಮರ್ಥ್ಯದ ಭೂಟ್ ಸ್ಪೇಸ್ ಹೊಂದಿವೆ. ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳನ್ನು ಹೊಂದಿದೆ.

ಒಟ್ಟಾರೆಯಾಗಿ ಸುರಕ್ಷತೆ ಹಾಗೂ ಗ್ರಾಹಕರಿಗೆ ಆಕರ್ಷಕರ ಕಾರ್ ಇದಾಗಿದ್ದು, ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

Continue Reading

Trending

error: Content is protected !!