Connect with us

Hassan

ಸಿಎಂ ಆಗಮನಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗಿಂತ ಹೆಚ್ಚು ಕೆಲಸ ಡಿಸಿ ಮಾಡ್ತಿದ್ದಾರೆ ಪರೋಕ್ಷವಾಗಿ ಅಸಮದಾನ ವ್ಯಕ್ತಪಡಿಸಿದ ಹೆಚ್.ಡಿ. ರೇವಣ್ಣ

Published

on

ಹಾಸನ : ಶುಕ್ರವಾರದಂದು ನಗರಕ್ಕೆ ಸಿಎಂ ಆಗಮಿಸಲಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗಿಂದ ಎಲ್ಲಾ ತಯಾರುಗಳನ್ನು ಜಿಲ್ಲಾಧಿಕಾರಿಗಳು ಹೆಚ್ಚು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಅಸಮಧಾನವನ್ನು ಹೆಚ್.ಡಿ. ರೇವಣ್ಣ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಅಹಾಕಾರ ಉಂಟಾಗಿದ್ದರೂ ಸರಬರಾಜು ಮಾಡುತ್ತಿಲ್ಲ. ಕುಡಿಯುವ ನೀರಿಗೆ ಜಿಲ್ಲಾ ಪಂಚಾಯತ್ ಗೆ ೨೫ ಲಕ್ಷ ಕೊಡ್ತಿವಿ ಅಂದಿದ್ದರು, ಇನ್ನೂ ಕೊಟ್ಟಿಲ್ಲ. ಜಿಲ್ಲಾಧಿಕಾರಿ ಅಕೌಂಟ್‌ಗೆ ೫೦ ಲಕ್ಷ ಕೊಟ್ಟಿದ್ದಾರೆ. ಎನ್.ಡಿ.ಆರ್.ಎಫ್. ನಾರ್ಮ್ಸ್ ಪ್ರಕಾರ ಒಂದು ರೂಪಾಯಿ ಖರ್ಚು ಮಾಡಲು ಆಗಲ್ಲ. ರೈತರ ಬೆಳೆ ಹಾನಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ನಮ್ಮ ಜಿಲ್ಲೆಯ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ಫ್ಲೈ ಒವರ್‌ಗೆ ರಾಜ್ಯ ಸರ್ಕಾರ ೪೮ ಕೋಟಿ ಬಿಡುಗಡೆ ಮಾಡಬೇಕು ಅದನ್ನು ಮಾಡಿಲ್ಲ. ಈ ಹಿಂದೆ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ೧೪೦ ಕೋಟಿ ರೂಗಳ ಹಣ ತರಲಾಗಿತ್ತು. ಆದರೇ ಈಗ ಅದು ನೆನೆಗುದಿಗೆ ಬಿದ್ದಿದೆ. ಈ ಕೆಲಸ ಪೂರ್ಣಗೊಳಿಸಲು ಮನವಿ ಮಾಡಬೇಕು. ಹಾಸನ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಿ ವಿಧ್ಯಾರ್ಥಿ ನಿಯರಿಗೆ ನೆರವಾಗಬೇಕು, ಜೊತೆಗೆ ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಅಲ್ಲದೆ ಈಗಾಗಲೇ ಜಿಲ್ಲೆಯಲ್ಲಿ ವಿವಿಧ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಅವುಗಳಿಗೂ ಅಗತ್ಯ ಹಣ ಬಿಡುಗಡೆ ಮಾಡಲು ಒತ್ತಾಯಿಸಬೇಕು ಎಂದು ಆಗ್ರಹಿಸಿದರು. ನಾಳೆ ಸಿಎಂ ಹಾಸನದಲ್ಲಿ ೧೨೦೦ ಕೋಟಿ ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ ಮಾಡುತ್ತಿದ್ದಾರೆ. ಮಾಡಲಿ ನಮಗೆ ಸಂತೋಷ. ಡಿಸಿಯವರು ಜಿಲ್ಲೆಯ ಸಮಸ್ಯೆ ಬಗ್ಗೆ ಇವೆಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ನಾಲ್ಕಾರು ಕಾಸು ಕೊಟ್ಟರೆ ಒಳ್ಳೆಯದು. ರಾಜಕಾರಣ ಆಮೇಲೆ ಮಾಡೋಣ! ಈ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಸಿಎಂಗೆ ಮನವರಿಕೆ ಮಾಡಿಕೊಡಲಿ ಎಂದು ಮನವಿ ಮಾಡಿದರು.

ನಾಳೆ ಹಾಸನ ನಗರಕ್ಕೆ ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ನಾವು ಹೋದಾಗ ಯಾರಿಗೂ ಮುಜುಗರ ಆಗಬಾರದು. ಅಲ್ಲಿ ನಮ್ಮ ಮೇಲೆ ಯಾರಾದರೂ ಸುಮ್ಮನೆ ಧಿಕ್ಕಾರ ಹಾಕಿದ್ರೆ! ಯೋಚನೆ ಮಾಡ್ತಿನಿ, ಆದ್ರೆ ಹೋಗ್ತಿನಿ. ನನ್ನ ಕ್ಷೇತ್ರ ಆಗಿದ್ದರೆ ಬರಬಹುದಿತ್ತು. ಸ್ವರೂಪ್‌ಪ್ರಕಾಶ್ ಅವರ ಕ್ಷೇತ್ರ ಅವರು ಪಾಲ್ಗೊಳ್ಳುತ್ತಾರೆ. ಮುಖ್ಯಮಂತ್ರಿಗಳು ಬರುವ ಕಾರ್ಯಕ್ರಮವನ್ನೇಲ್ಲಾ ಜಿಲ್ಲಾಧಿಕಾರಿ ಎಲ್ಲಾ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಜನ ಕರೆಸೋದು, ಬಸ್ ವ್ಯವಸ್ಥೆ ಎಲ್ಲಾ ಅವರೇ ವಹಿಸಿಕೊಂಡಿದ್ದಾರೆ. ರಾಜಕೀಯ ಮಾಡುವುದೇ ಬೇರೆ. ನಮ್ಮ ಜಿಲ್ಲೆಗೆ ಕೊಡುಗೆ ಕೊಡ್ತಿನಿ ಅಂತ ಬರ್ತಾರ್ವೆ. ಜಿಲ್ಲಾಧಿಕಾರಿ ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಸಿಎಂ ಗಮನಕ್ಕೆ ತರಬೇಕು. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯನ್ನು ಫುಲ್ ಕಂಟ್ರೋಲ್ ತೆಗೆದುಕೊಂಡಿದ್ದಾರೆ. ನಾನು ಇಪ್ಪತ್ತೈದು ವರ್ಷ ಎಂಎಲ್‌ಎ ಆಗಿದ್ದೇನೆ. ಜಿಲ್ಲಾಧಿಕಾರಿಗಳೇ ಬಸ್ ವ್ಯವಸ್ಥೆ ಮಾಡಿ ಜನರನ್ನು ಕರೆದುಕೊಂಡು ಬರಲು ಒಂದೊಂದು ಇಲಾಖೆ ಟಾರ್ಗೆಟ್ ಕೊಟ್ಟಿದ್ದಾರೆ.

ಜಿಲ್ಲಾಧಿಕಾರಿಗಳು ಕಾಂಗ್ರೆಸ್ ಮುಖಂಡರನ್ನು ಬದಿಗೊತ್ತಿ ಜನರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ಓಡಾಡುತ್ತಿದ್ದಾರೆ. ಬಾಣಾವರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಅವರ ಪಕ್ಷದ ಕೆಲಸ ಅವರು ಮಾಡಿದ್ದಾರೆ ಎಂದು ಕುಟುಕಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೇವಣ್ಣ ಅವರು, ಯಾರೇ ಆಗಲಿ ಆ ರೀತಿ ಕೂಗಿದರೆ ತಪ್ಪು. ಆ ಘಟನೆ ಬಗ್ಗೆ ಈಗಾಗಲೇ ಗೃಹ ಸಚಿವರು ಹೇಳಿದ್ದಾರೆ. ಎಫ್‌ಎಸ್‌ಎಲ್ ವರದಿ, ತನಿಖಾ ವರದಿ ಬರಲಿ. ತನಿಖೆಯಾಗಲಿ ಆಮೇಲೆ, ನಿಜಾಂಶ ತಿಳಿಯುತ್ತದೆ ಎಲ್ಲಿವರೆಗೂ ಮಾತನಾಡುವುದಿಲ್ಲ ಎಂದರು. ಶಿವರಾತ್ರಿ ಕಳೆದ ಮೇಲೆ ಸೀಟ್ ಹಂಚಿಕೆಯಾಗಲಿದೆ. ನಮಗೆ ಸೀಟ್ ಮುಖ್ಯವಲ್ಲ. ಮೋದಿಯವರು ಪ್ರಧಾನಮಂತ್ರಿ ಆಗಬೇಕು. ಈ ಜಿಲ್ಲೆಗೆ ಮೋದಿಯವರ ಕೊಡುಗೆ ಅಪಾರ ಇದೆ. ಈಗಾಗಲೇ ದೇವೇಗೌಡರೇ ಆ ಬಗ್ಗೆ ಹೇಳಿದ್ದಾರೆ. ಈಶ್ವರನ ಹಬ್ಬ ಕಳೆದ ಮೇಲೆ ಎಲ್ಲಾ ಹಂಚಿಕೆ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೊತೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ನಗರಸಭೆ ಸದಸ್ಯ ಚಂದ್ರೇಗೌಡ, ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Published

on

ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ

ಡಿಡಿಪಿಯು ಮಹಾಲಿಂಗಯ್ಯ ಆದೇಶ

ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಉಳಿದ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾದರೆ ರಜೆ ನೀಡುವ ಬಗ್ಗೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ

ಡಿಸಿ ಅನುಮತಿ ಪಡೆದು ರಜೆ ಘೋಷಣೆ ಮಾಡಿದ ಡಿಡಿಪಿಯು

Continue Reading

Hassan

ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

Published

on

ಹಾಸನ : ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

ರಾಜೇಶ್ (9) ಸಾವನ್ನಪ್ಪಿದ ಬಾಲಕ

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮಾಡಾಳು ಗ್ರಾಮದಲ್ಲಿ ಘಟನೆ

ಗ್ರಾಮದ ಗೌರಮ್ಮ-ನಾಗರಾಜ ದಂಪತಿ ಪುತ್ರ ರಾಜೇಶ್

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ರಾಜೇಶ್

ನಾಲ್ಕು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್

ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್

ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಹಿಮ್ಸ್‌ಗೆ ದಾಖಲಾಗಿದ್ದ ರಾಜೇಶ್

ಚಿಕಿತ್ಸೆ ಫಲಕಾರಿಯಾಗದೆ ಇಂದು ರಾಜೇಶ್ ಸಾವು

Continue Reading

Hassan

2 ತಿಂಗಳ ಮಗುವಿಗೆ ಅನಾರೋಗ್ಯ ಬೇಸೆತ್ತ ಅಪ್ಪ ಆತ್ಮಹತ್ಯೆಗೆ ಯತ್ನ

Published

on

ಹಾಸನ: ಮಗುವಿನ ಆರೋಗ್ಯವು ಸುಧಾರಿಸದೇ ದಿನೆ ದಿನೆ ಹೆಚ್ಚಾದ ಹಿನ್ನಲೆಯಲ್ಲಿ ಮನಸ್ಸಿಗೆ ನೋವುಂಟು ಮಾಡಿದ ಹಿನ್ನಲೆಯಲ್ಲಿ ಏನು ಮಾಡುವುದು ಎಂಬುದು ತೋಚದೇ ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆ ಕಟ್ಟಡದ ಮೇಲೆ ಹೋಗಿ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಕೊನೆಗೆ ಆಸ್ಪತ್ರೆ ಸಿಬ್ಬಂದಿಗಳು ಆತನ ಮನವೊಲಿಸುವಲ್ಲಿ ಯಶಸ್ವಿಯಾಗಿ ಬದುಕಿಸಿದ ಘಟನೆ ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬಸವರಾಯನಪುರ ಗ್ರಾಮದ ಗಂಗಸ್ವಾಮಿ ಎಂಬುವರ ಎರಡು ತಿಂಗಳ ಮಗುವಿನ ಅನಾರೋಗ್ಯವು ಹೆಚ್ಚಾಗುತ್ತಿರುವ ಬಗ್ಗೆ ತಿಳಿದು ಬೇಸರದಿಂದ ಆತ್ಮಹತ್ಯೆ ಯತ್ನಿಸಿರುವುದಾಗಿ ಹೇಳಲಾಗಿದೆ. ಮಗುವಿನ ಅನಾರೋಗ್ಯದಿಂದ ತಂದೆ ಮನನೊಂದಿದ್ದು, ಹಾಸನದ ಜಿಲ್ಲಾ ಹಿಮ್ಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಮೇಲೇರಿ ಸಾಯುವ ಹೈಡ್ರಾಮ ಮಾಡಲಾಗಿದೆ. ಕಟ್ಟಡದ ಐದನೇ ಮಹಡಿಯ ತುದಿಯಲ್ಲಿ ನಿಂತು ಆತ್ಮಹತ್ಯೆ ಬೆದರಿಕೆ ಹೊಡ್ಡಿದ್ದು,

ಮಗುವಿನ ಅರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆ ಯತ್ನ ಮಾಡಲಾಗಿದೆ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದ ಅನಾಹುತ ತಪ್ಪಿದಂತಾಗಿದೆ. ಗಂಗಸ್ವಾಮಿಯನ್ನ ಆಸ್ಪತ್ರೆ ಕಟ್ಟಡದಿಂದ ಕೆಳಗಿಳಿಸಿ ನಂತರ ಪೊಲಿಸ್ ಠಾಣೆಗೆ ಆಸ್ಪತ್ರೆ ಸಿಬ್ಬಂದಿಗಳು ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ರಸ್ತೆಯಲ್ಲಿ ಸಾರ್ವಜನಿಕರು ನೋಡಿದ್ದು, ವಿಡಿಯೋ ಸೆರೆ ಹಿಡಿದಿದ್ದಾರೆ.

Continue Reading

Trending

error: Content is protected !!