Connect with us

Mysore

ಸಾಲಿಗ್ರಾಮ : ಜೋಡಿ ಕೊಲೆ-ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ಶವಗಳು

Published

on

ಸಾಲಿಗ್ರಾಮ  : ಜೋಡಿ ಕೊಲೆ ಮಾಡಿ ಚೀಲದಲ್ಲಿ ತುಂಬಿ ಕಾವೇರಿ ನದಿಗೆ ಬಿಸಾಕಿದ್ದು ಶವವು ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣಾ ಸರಹದ್ದಿನ ಮೂಲೆಪೆಟ್ಲು ಗ್ರಾಮದ ಸಮೀಪದ ಕೆ‌ಆರ್.ಎಸ್ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಕೆ.ಆರ್.ನಗರ ತಾಲೂಕು ಮೂಲೆಪೆಟ್ಲು ಸಮೀಪದ ಸಾಗರಕಟ್ಟೆ ಹಿನ್ನೀರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಪರಿಸ್ಥಿತಿಯಲ್ಲಿ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿವೆ.
ಸುಮಾರು 25 ರಿಂದ 30 ವರ್ಷ ವಯಸ್ಸಿನ ಯುವಕರನ್ನ ಮತ್ತೊಂದು ಸ್ಥಳದಲ್ಲಿ ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಸಾಗರಕಟ್ಟೆ ಹಿನ್ನೀರಿನಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಓರ್ವನ ಕೈ ಮೇಲೆ ನಾಗರಾಜನ್ VR POSTER 4B LEGEND ಎಂದು ಅಚ್ಚೆ ಹಾಕಿರುವುದು ಕಂಡು ಬಂದಿದೆ. ಅದೇ ರೀತಿ ಮತ್ತೊರ್ವನ ಶವ ಬೆಳಗ್ಗೆ ಅದೇ ಸ್ಥಳದಲ್ಲಿ ಪತ್ತೆಯಾಗಿದ್ದು ಮತ್ತೊರ್ವನ ಕೈಯಲ್ಲಿ ಸೂಪರ್ ಮ್ಯಾನ್ , ಅಮ್ಮ ಎಸ್,ಉಪೇಂದ್ರ,VR46 the doctor Legend ಎಂದು ಹಚ್ಚೆ ಹಾಗೂ ಬಲಕೈಯಲ್ಲಿ ಸಿಂಹದ ಚಿತ್ರ ಹಾಗೂ ಶಿಲುಬೆ ಚಿತ್ರ. ಮತ್ತು ಹೃದಯದ ಒಳಗೆ AM ಎಂದು ಹಾಕಲಾಗಿದೆ.


ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿದ ಕೆ.ಆರ್.ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ , ಪಿಎಸ್ ಐ ಗಳಾದ ಧನರಾಜು,ನಂಜಪ್ಪ ಸಿಬ್ಬಂದಿಗಳಾದ ಧನಂಜಯ, ಜವರೇಶ್, ಮಂಜು,ದೇವರಾಜು,ರಾಘವೇಂದ್ರ,ಪುನಿತಾ,ಆಲಿ ತಂಡ ತಡರಾತ್ರಿ ಒಬ್ಬನ ಶವ ಮೇಲೆಕ್ಕೆತ್ತಿ ಪರಿಶೀಲನೆ‌ ನಡೆಸಿದರು.
ಬೆಳ್ಳಂಬೆಳಗ್ಗೆ ಮತ್ತೊರ್ವನ ಶವ ಅದೇ ಸ್ಥಳ( ಹಿನ್ನೀರಿನಲ್ಲಿ) ಪತ್ತೆಯಾಗಿದ್ದು ಅಡಿಷನಲ್ ಎಸ್ಪಿ ನಂದಿನಿ ಮತ್ತು ಡಿವೈಎಸ್ಪಿ ಕರೀಂರಾವತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪೊಲೀಸರು ಮೃತರ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.
ಈರ್ವರನ್ನು ಬೇರೆ ಎಲ್ಲೋ ಕೊಲೆ ಮಾಡಿ ನಂತರ ಚೀಲದಲ್ಲಿ ಕಟ್ಟಿ ಕಾವೇರಿ ನದಿಗೆ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಶವಗಳನ್ನು‌ ಮೈಸೂರಿನ ಕೆ.ಆರ್.ಆಸ್ವತ್ರೆಯ ಹಳೇಶವಗಾರಕ್ಕೆ ಸಾಗಿಸಲಾಗಿದ್ದು ಯಾರಾದರು ವಾರಸುದಾರರು ಇದ್ದರೆ ಕೆ.ಆರ್.ನಗರ ಪೊಲೀಸರನ್ನ ಸಂಪರ್ಕಿಸುವಂತೆ ಕೋರಲಾಗಿದೆ.
ಇದಕ್ಕೂ ಮೊದಲು ಹಿನ್ನೀರಿನಲ್ಲಿ ಬೆಳಗ್ಗೆ ಪತ್ತೆಯಾದ ಶವವನ್ನು ಬೆರಳಚ್ಚು ತಜ್ಞರು, ಎಫ್.ಎಸ್.ಐ.ಎಲ್. ತಂಡ, ಶ್ವಾನದಳ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದರು.

ಕೊಲೆಯಾದವರ ವಾರಸ್ಸುದಾರರು ಪತ್ತೆಯಾದರೇ ಸುಲಭವಾಗಿ ಕೊಲೆಗಾರರನ್ನು ಕಂಡು ಹಿಡಿಯಲಾಗವುದು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ತಿಳಿಸಿದರು.


ಒಂದೇ ತಂಡದಿಂದಲೇ ಕೃತ್ಯ,   ಪೊಲೀಸರಿಗೆ ತಲೆ ನೋವಾದ ಪ್ರಕರಣ :
ಕೊಲೆ ಮಾಡಿ ಎರಡು ಶವಗಳನ್ನು ಚೀಲದಲ್ಲಿ ತುಂಬಿ ಬಿಸಾಕಿರುವ ಪ್ರಕರಣ ನೋಡಿದರೆ    ಒಂದೇ ತಂಡ ದಿಂದಲೇ ಈ ಕೊಲೆ ನಡೆದಿರುವ ಅನುಮಾನ ಪೊಲೀಸ್ ಇಲಾಖೆಯಿಂದ ವ್ಯಕ್ತವಾಗುತ್ತಿದೆ.
ಮೂಲೆಪೆಟ್ಲು ಬಳಿ ಕಾವೇರಿ ಹಿನ್ನೀರಿನ ಬಳಿ ಕೊಲೆ ಮಾಡಿ ಎರಡು ಶವಗಳನ್ನು ಚೀಲಗಳಲ್ಲಿ ತುಂಬಿ ಕಟ್ಟು ಹಾಕಿ ಬಿಸಾಡಿ ಹೋಗಿದ್ದು ಈ ಶವಗಳನ್ನು ತುಂಬಿದ ಚೀಲಗಳು ತೇಲುತ್ತಿರುದನ್ನು ನೋಡಲಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ
ಈ ಎರಡು ಶವಗಳು ಮತ್ತು ಚೀಲಗಳನ್ನು ಕಟ್ಟು   ಹಾ ಕಿರುವುದನ್ನು ನೋಡಿದರೇ ಯಾವುದೋ ಒಂದು ತಂಡ ಈ ಇಬ್ಬರನ್ನು ಕೊಲೆ ಮಾಡಿ ನಂತರ ಇವುಗಳನ್ನು ಚೀಲದಲ್ಲಿ ತುಂಬಿ ಕಟ್ಟು ಹಾಕಿ ನಂತರ ತಂದು ಇಲ್ಲಿಗೆ ಎಸೆದು ಹೋಗಿರು ಶಂಕೆ ವ್ಯಕ್ತವಾಗಿದೆ.
ಇದೀಗ ಕೊಲೆಯಾಗಿರುವ ಶವಗಳು ಮೂಲೆ ಪೆಟ್ಟು ಬಳಿ ಸಿಕ್ಕಿರುವ ಪರಿಣಾಮ ಇದೀಗ ಕೊಲೆಗಳ ಪ್ರಕರಣದವನ್ನು ಭೇದಿಸಬೇಕಾದ ಜವಬ್ದಾರಿ ಕೆ.ಆರ್.ನಗರ ಪೊಲೀಸರ ಮೇಲೆ ಬಿದ್ದು ಇದೀಗ ಕೊಲೆ ಆಗಿರುವ ವ್ಯಕ್ತಿಗಳು ಹಾಕಿಸಿ ಕೊಂಡಿರುವ ಹಚ್ಚೆಗುರುತುಗಳು ಪೊಲೀಸರಿಗೆ ಯಾವ ರೀತಿ ತನಿಖೆ ಸಹಕರಿಸಲಿದೆ ಎಂಬುದು ನಿಗೂಡವಾಗಿದ್ದರು ಪೊಲೀಸರು ತಮ್ಮದೇ ಅದ     ರೀತಿಯಲ್ಲಿ    ತನಿಖೆ  ನಡೆಸುತ್ತಿದ್ದಾರೆ.

ಎಸ್ ಬಿ ಹರೀಶ್ ಸಾಲಿಗ್ರಾಮ 

Continue Reading
Click to comment

Leave a Reply

Your email address will not be published. Required fields are marked *

Mysore

ಅಂಬೇಡ್ಕರ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆ

Published

on

ನಗರದಲ್ಲಿ ಜುಲೈ 13 ಅಥವಾ 14ರಂದು ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗಿದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಳಿ ತಾರೀಕನ್ನು ನಿಗದಿ ಪಡಿಸುತ್ತೇನೆ
ಎಂದು ಕ್ಷೇತ್ರದ ಶಾಸಕ ದರ್ಶನ್ ದ್ರುವ ನಾರಾಯಣ್ ತಿಳಿಸಿದ್ದಾರೆ.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಮುಖಂಡರ ಅಭಿಪ್ರಾಯಗಳನ್ನು ತಿಳಿದುಕೊಂಡು ಅಂಬೇಡ್ಕರ್ ಜಯಂತಿಯನ್ನು ಸಾಮರಸ್ಯದಿಂದ ಆಚರಿಸೋಣ ಎಂದು ತೀರ್ಮಾನಿಸಿದರು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಚಾಮರಾಜನಗರ ಸಂಸದರಾದ ಸುನಿಲ್ ಬೋಸ್, ಎಂಎಲ್ಸಿ ಯತೀಂದ್ರ ಸಿದ್ರರಾಮಯ್ಯ,
ಶಾಸಕರುಗಳಾದ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಭಾಗವಹಿಸಲಿದ್ದಾರೆ.

ಅಂಬೇಡ್ಕರ್ ಜಯಂತಿಯ ಮೊದಲಿಗೆ 9 ಗಂಟೆಗೆ ಮೆರವಣಿಗೆಯನ್ನು ಪ್ರಾರಂಭಿಸಬೇಕು. 12 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಬೇಕು ಎಂದು ಸಲಹೆ ಸೂಚಿಸಿದರು.

ನಗರದ ಪ್ರಮುಖ ಬೀದಿಯಲ್ಲಿ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಮತ್ತು ಬುದ್ಧ ಹಾಗೂ ಸಂವಿಧಾನ ಪೀಠಿಕೆಯ ಸ್ತಬ್ದ ಚಿತ್ರಗಳೊಂದಿಗೆ ಜಾನಪದ ಕಲಾತಂಡಗಳ ಮೂಲಕ ವಿಚಾರ ಸಂಕೀರಣ ನಡೆಯಲಿದೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಬ್ಲಾಕ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ನಾಗೇಶ್ ರಾಜ್, ಶಂಕರಪುರ ಸುರೇಶ್, ನಗಲೆ೯ ವಿಜಯ್ ಕುಮಾರ್, ಮಲ್ಲಹಳ್ಳಿ ನಾರಾಯಣ್, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ದೇಬೂರು ಅಶೋಕ್, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ರಪ್ತು ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವನ್ನು ಹೆಚ್ಚಿಸುತ್ತದೆ – ಟಿ ದಿನೇಶ್

Published

on

ಮೈಸೂರು, ಜೂ.24: ರಪ್ತು ಮಾಡುವುದರಿಂದ ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ.ದಿನೇಶ್ ಅವರು ತಿಳಿಸಿದರು.

ನಗರದ ಹೋಟೆಲ್ ಪ್ರೆಸಿಡೆಂಟ್ ನಲ್ಲಿ ಇಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ರಪ್ತು ಹಮ್ಮಿಕೊಂಡಿದ್ದ ರಪ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಉದ್ದಿಮೆದಾರರಿಗೆ ನಾನು ಪ್ರತಿದಿನ ಹೊಸತನ್ನು ಕಲಿಯಬೇಕು ಎನ್ನುವ ಹಂಬಲ ಇರಬೇಕು. ದೇಶದಲ್ಲಿ 778 ಮಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ರಪ್ತು ಮಾಡಿದ್ದು, 860 ಮಿಲಿಯನ್ ಡಾಲರ್ ಮೊತ್ತದ ಸರಕನ್ನು ಆಮದನ್ನು ಮಾಡಿಕೊಂಡಿದ್ದೇವೆ. ಕರ್ನಾಟಕವು ರಪ್ತು ಮಾಡುವುದರಲ್ಲಿ 4 ನೇ ಸ್ಥಾನದಲ್ಲಿ ಇದೆ. ನಮ್ಮ ರಾಜ್ಯವು ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರಬೇಕು ಎಂದರು.

ಭಾರತ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ರಫ್ತು ಉತ್ತೇಜನ ಕೇಂದ್ರವನ್ನು ಸ್ಥಾಪಿಸಿದೆ. ಮೈಸೂರು ಜಿಲ್ಲೆಯಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ಪ್ರತಿ ವರ್ಷ ಶೇಕಡಾ 5% ರಫ್ತನ್ನು ಹೆಚ್ಚಳ ಮಾಡಬೇಕು ಎಂದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕರಾದ ಸಿ.ಎಸ್.ಬಾಬು ನಾಗೇಶ್ ಅವರು ಮಾತನಾಡಿ, ತಾವೆಲ್ಲರೂ ಯುವ ಉದ್ಯಮಿಗಳು ಇದ್ದೀರಾ. 6 ದಿನಗಳ ಕಾಲ ಹಮ್ಮಿಕೊಂಡಿರುವ ರಪ್ತು ನಿರ್ವಹಣಾ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ. ರಪ್ತು ಕೈಗಾರಿಕೆಗಳ ಆರ್ಥಿಕ ಆದಾಯವನ್ನು ಹೆಚ್ಚಿಸುತ್ತದೆ. ಇದರಿಂದ ಹೆಚ್ಚಿನ ಉತ್ಪಾದನೆ ಮಾಡಿ ಕೈಗಾರಿಕೆಯು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಗಳಾದ ಸುರೇಶ್ ಕುಮಾರ್ ಜೈನ್ ಅವರು ಮಾತನಾಡಿ, ಮೈಸೂರಿನಲ್ಲಿ ರಪ್ತು ಕೇಂದ್ರ ಸ್ಥಾಪನೆ ಆಗುತ್ತಿದೆ. ಕಟ್ಟಡ ಈಗಾಗಲೇ ಪ್ರಾರಂಭವಾಗಿದೆ. ರಫ್ತಿನಲ್ಲಿ ಪ್ಯಾಕಿಂಗ್ ಉತ್ತಮ. ನಮ್ಮ ವಸ್ತುಗಳು ತಲುಪಬೇಕಾದ ಸ್ಥಳವನ್ನು ಕೆಡದಂತೆ ಸಕಾಲದಲ್ಲಿ ತಲುಪಬೇಕು. ರಪ್ತು ದೇಶದ ಆದಾಯವನ್ನು ಹೆಚ್ಚಿಸುತ್ತದೆ. ರಫ್ತಿನಲ್ಲಿ ಸಣ್ಣ ಕೈಗಾರಿಕೆಗಳ ಪಾಲು ಶೇಕಡಾ 45 ರಷ್ಟು ಇದೆ. ನೋಟು ಮುದ್ರಣವನ್ನು ಸಹ ಮೈಸೂರಿನಲ್ಲಿ ಮಾಡುತ್ತೇವೆ. ಮೈಸೂರು ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದೆ. ಸೆಮಿ ಕಂಡಕ್ಟರ್ ಗಳ ಉತ್ಪಾದನಾ ಕೇಂದ್ರ ಸ್ಥಾಪನೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ.ಲಿಂಗರಾಜು ಅವರು ಮಾತನಾಡಿ, ಯಾವುದೇ ಪದಾರ್ಥವನ್ನು ನಾವು ರಪ್ತು ಮಾಡಲು ರಾಸಾಯನಿಕ ಮುಕ್ತವಾಗಿ ಇರಬೇಕು. ನಾವು ರಪ್ತು ಮಾಡುವ ಉತ್ಪಾದನೆ ಗುಣಮಟ್ಟದಿಂದ ಕೂಡಿರಬೇಕು. ಮೈಸೂರಿನಲ್ಲಿ ಈಗಾಗಲೇ ಸುಮಾರು 165 ಜನ ರಪ್ತು ಮಾಡುತ್ತಾ ಇದ್ದಾರೆ. ಇನ್ನು ಹೆಚ್ಚಿನ ಜನರು ದೇಶ ವಿದೇಶಕ್ಕೆ ರಪ್ತು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ರಪ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕರಾದ ಮೇಘಲಾ ಸೇರಿದಂತೆ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

Continue Reading

Mysore

ಮಡೆ ಹಬ್ಬದ ಪ್ರಯುಕ್ತ ಗಮನ ಸೆಳೆದ ಬಡವ- ರೈತರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ- ಕೊಡವ್ವ”ಘೋಷಣೆ 

Published

on

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ತಾಲೂಕಿನ    ಚಿಕ್ಕಕ್ಕೊಪ್ಪಲು ಗ್ರಾಮದಲ್ಲಿ ಮಡೆ ಹಬ್ಬದ ಪ್ರಯುಕ್ತ ನಡೆದ ತಂಬಿಟ್ಟಿನ ಮೆರವಣಿಗೆ ಮತ್ತು ಗುಡ್ಡದ ತಂಡದ ಹಾಡು ನೃತ್ಯ ಇನ್ನೊಂದೆಡೆ ಜೈಕಾರದ ಪಟಾಕಿಗಳ ಆರ್ಭಟದ ನಡುವೆ ಯುವಕರು ಬಡವರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ…ರೈತರ ಮಕ್ಕಳಿಗೆ ಹೆಣ್ಣು ಕೊಡವ್ವ ಆರ್ಶಿವಾದ ಮಾಡವ್ವ ಮುತ್ತುತಾಳಮ್ಮ‌ ಎಂಬ ಘೋಷಣೆ ಹಬ್ಬದಲ್ಲಿ‌ ವಿಶೇಷವಾಗಿ ಗಮನ ಸೆಳೆಯಿತು.

 

ಗ್ರಾಮದಲ್ಲಿ ಮಡೆ ಹಬ್ಬವು ತಂಬಿಟ್ಟಿನ ಅರತಿಯೊಂದಿಗೆ ಸಾವಿರಾರು ಮಂದಿಯ ಸಮ್ಮುಖದಲ್ಲಿ ಬಾರಿ ಸಂಭ್ರಮ ಮತ್ತು ಪಟಾಕಿಗಳ ಆರ್ಭಟದೊಂದಿಗೆ ವೈಭವಯುತವಾಗಿ ನಡೆಯಿತು.
ಗ್ರಾಮದ ಹೊರವಲಯದಲ್ಲಿರುವ ಮಲ್ಲಮ್ಮನ ಕೊಳದ ಬಳಿ ಗ್ರಾಮದ ಮಹಿಳೆಯರು ಗಂಗೆ ಪೂಜೆ ಮಾಡಿ, ಕಿಚಡಿ ಅನ್ನದ ಪ್ರಸಾದವನ್ನು ತಯಾರಿಸಿ, ತಂಬಿಟ್ಟು ಮಾಡಿ,ಅಲ್ಲಿಯೇ ಪ್ರತಿಷ್ಠಾಪಿಸಲಾಗಿದ್ದ ಆದಿ ಶಕ್ತಿ ಮುತ್ತು ತಾಳಮ್ಮ‌ ದೇವರಿಗೆ ಮಹಿಳೆಯರು ಮತ್ತು ಗ್ರಾಮಸ್ಥರು ಪೂಜೆ ಸಲ್ಲಿಸಿದರು. ನಂತರ ಹಬ್ಬಕ್ಕಾಗಿ ಕರೆಸಲಾಗಿದ್ದ ಕೆ.ಆರ್.ನಗರದ ಮಧುವನಹಳ್ಳಿಯ ಗುಡ್ದೆದೇವರುಗಳ ತಂಡದವರು ನಡೆಸಿ ಕೊಟ್ಟ ದೇವರ ವಿವಿಧ ಭಕ್ತಿಯ ಹಾಡಿನ ಮೂಲಕ ಮನೆಸೂರೆಗೊಳ್ಳುವ ನೃತ್ಯದ ನಂತರ ಗ್ರಾಮದ ಕನ್ನಂಬಾಡಮ್ಮ,

ಮುತ್ತುತಾಳಮ್ಮ,ಬಂದಂತೆಯಮ್ಮ, ಹಳಿಯೂರು ದೊಡಮ್ಮ ದೇವತೆಗಳನ್ನು ಬರಮಾಡಿ ಕೊಂಡರು.
ಬಳಿಕ ಮಡೆ ಹಬ್ಬಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಹಾಜರಿದ್ದ ಸಾವಿರಾರು ಗ್ರಾಮಸ್ಥರು ಮತ್ತು ಮಹಿಳೆಯರು ಉತ್ತಮ ಮಳೆ, ಬೆಳೆ ಅಗಲಿ, ಗ್ರಾಮಕ್ಕೆ ಒಳಿತಾಗಲಿ, ಮತ್ತು ತಮ್ಮ‌ ಹತ್ತಾರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಆದಿಶಕ್ತಿ ಮುತ್ತುತ್ತಾಳಮ್ಮ ದೇವರಲ್ಲಿ ಪ್ರಾರ್ಥಿಸಿ ಕೊಂಡು‌ಭಕ್ತಿ ಪರವಶವಾದರು.

ಬಳಿಕ ತಂಬಿಟ್ಟಿನ ಆರತಿ ಹೊತ್ತ ಮಹಿಳೆಯರು ಮತ್ತು ಕಳಸ ಹೊತ್ತ ಬಾಲಕಿಯರು ಗ್ರಾಮದ ದೇವರಹಟ್ಟಿ ಮಾರ್ಗವಾಗಿ ಗ್ರಾಮದ ಚೌಡಿ ಬೀದಿಯ ವರಗೆ ಮೆರವಣಿಗೆ ನಡೆಸುವ ವೇಳೆ ಗ್ರಾಮಸ್ಥರು ಆಡು,ಕುರಿಗಳನ್ನು ಬಲಿ ಕೊಟ್ಟು ಮುತ್ತುತಾಳಮ್ಮ ದೇವರಿಗೆ ಆರ್ಶಿವಾದ ಕೋರಿದ ಬಳಿಕ‌ ಚೌಡಿ ಬೀದಿಯಲ್ಲಿ ಗುಡ್ಡೆ ದೇವರ ತಂಡದವರ ನೃತ್ಯದೊಂದಿಗೆ ಮಡೆ ಹಬ್ಬ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ 13 ಕೋಮಿನ ಯಜಮಾನರಲ್ಲಿ‌ ಒಬ್ಬರಾದ ಟಿ.ಪುರುಷೋತ್ತಮ್ ಕಳೆದ 11 ವರ್ಷದ ಹಿಂದೆ ನಡೆದಿದ್ದ ಈ ಹಬ್ಬ ಮುತ್ತುತ್ತಾಳಮ್ಮ ತಾಯಿ ಅನುಗ್ರಹ ದಿಂದ ಈ ಬಾರಿ ಈ ಬಂಡಿ ಮತ್ತು ಮಡೆ ಹಬ್ಬ ಯಶಸ್ವಿಯಾಗಿದ್ದು, ಇದಕ್ಕೆ ಸಹಕಾರ ನೀಡಿದ ಗ್ರಾಮಸ್ಥರಿಗೆ ಎಲ್ಲಾ ಕೋಮಿನ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು,ಸಾವಿರಾರು ಮಂದಿ ಭಕ್ತರು  ಹಾಜರಿದ್ದರು.

Continue Reading

Trending

error: Content is protected !!