Connect with us

Chikmagalur

ಸಡಗರ ಮತ್ತು ಸಂಭ್ರಮದಿಂದ ಹೆಗ್ಗರವಳ್ಳಿ ಶಾಲೆಯಲ್ಲಿ ಗಣರಾಜ್ಯೋತ್ಸವ

Published

on

75 ನೇ ಗಣರಾಜ್ಯೋತ್ಸವವನ್ನು ಇಂದು ಹೆಗ್ಗರವಳ್ಳಿ ಶಾಲೆಯಲ್ಲಿ ಶಾಲೆಯ SDMC ಅಧ್ಯಕ್ಷರಾದ C R ರವಿ ಅವರ ಅಧ್ಯಕ್ಷತೆಯಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಯ ವಿದ್ಯಾರ್ಥಿ ಪುಟಾಣಿಗಳಿಂದ ವಿವಿಧ ನೃತ್ಯ ಮತ್ತು ಗೀತೆ, ಡ್ಯಾನ್ಸ್, ಕೋಲಾಟ ಹಾಗೂ ಭಾಷಣ ಮೂಲಕ ನೆರೆದಿದ್ದ ಗ್ರಾಮಸ್ಥರನ್ನು ರಂಜಿಸಿದರು ಹಾಗೂ ಗಣರಾಜ್ಯೋತ್ಸವದ ಬಗ್ಗೆ ಸುದೀರ್ಘವಾಗಿ ಶಾಲೆಯ SDMC ಉಪಾಧ್ಯಕ್ಷರು ಅದ ಶ್ರೀಯುತ C E ಜಗದೀಶ್ ಅವರ ಭಾಷಣದ ಮೂಲಕ ತಿಳಿಸಿದರು. ವೇದಿಕೆಯಲ್ಲಿ ಶಾಲೆಯ ಮುಕ್ಯೋಪಾಧ್ಯಾಯರಾದ ವೆಂಕಟರಮಣ ಸರ್ ಅವರು ವೇದಿಕೆಯಲ್ಲಿ ನೆರಿದಿದ್ದ ಗಣ್ಯರನ್ನು ಸ್ವಾಗತಿಸಿದರು. ಹಾಗೂ ಗ್ರಾಮದ ಉತ್ಸಹಿ ಯುವಕ C M ರಚಿತ್ ಕುಮಾರ್ ಹಾಗೂ ಅತಿಥಿ ಶಿಕ್ಷಕರಾದ ಸುಜಾತ ಯೋಗೆಂದ್ರ ಅವರು ಮತ್ತು ಶಾಲೆಯ SDMC ಸದಸ್ಯರು ಹಾಗೂ ಗ್ರಾಮಸ್ಥರು ಹಾಗೂ ಅಡುಗೆ ದಾಸೋಹದ ಶ್ರೀಮತಿ ಯಶೋಧ ಸುರೇಶ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಗ್ರಾಮಸ್ಥರನ್ನು ಮೆರಗು ಗೊಳಿಸಿತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೂರ್ವ ತಯಾರಿಗೊಳಿಸಿದ ಸುಜಾತಾ ಅವರು ತುಂಬಾ ಅಚ್ಚುಕಟ್ಟಾಗಿ ತಮ್ಮ ಕಾರ್ಯನಿರ್ವಾಹಿಸಿದ್ದರು.

ವರದಿ : ಸಿ .ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading
Click to comment

Leave a Reply

Your email address will not be published. Required fields are marked *

Chikmagalur

ಭಾವೈಕ್ಯತೆ ಸಂದೇಶ ರವಾನಿಸಿದ ಗಣಪತಿ ಪ್ರತಿಷ್ಠಾಪನೆ

Published

on

ಚಿಕ್ಕಮಗಳೂರು: ಗಣೇಶ ಚತುರ್ಥಿ ಆಚರಣೆ, ಗಣೇಶ ವಿಸರ್ಜನೆ ವೇಳೆಯಲ್ಲಿ ಹಲವೆಡೆ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗುತ್ತದೆ. ಆದ್ದರಿಂದ ಹಬ್ಬದ ಸಮಯದಲ್ಲಿ ಪೊಲೀಸರು ಶಾಂತಿ ಸಭೆಗಳನ್ನು ನಡೆಸುತ್ತಾರೆ, ಕಟ್ಟೆಚ್ಚರ ವಹಿಸುತ್ತಾರೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಯದಾಯದವರು ಒಟ್ಟಾಗಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಸಮಾಜದಲ್ಲಿ ಭಾವೈಕ್ಯತೆ ಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.
ಕಾಫಿನಾಡೆಂದು ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಪಟ್ಟಣದ ರಾಜೀವ್ ನಗರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ಗಣೇಶಮೂರ್ತಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಭಾನುವಾರ ಬೆಳಿಗ್ಗೆ ೯ ಗಂಟೆಗೆ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ವಿಘ್ನವಿನಾಶಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಭ್ರಮಿಸಿದರು.
ಮುಸ್ಲಿಂ ಮಹಿಳೆಯೇ ಅಧ್ಯಕ್ಷೆ: ವಿನಾಯಕ ಸೇವಾ ಸಮಿತಿಯಿಂದ ರಾಜೀವ್ ನಗರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನಿಗೆ ಭಾವೈಕ್ಯ ತೆಯ ಗಣಪ ಎಂದೇ ಹೆಸರಿಡಲಾಗಿದೆ. ಅಲ್ಲದೇ ಈ ಗಣಪತಿ ಸಮಿತಿಗೆ ಅಧ್ಯಕ್ಷೆಯೇ ಮುಸ್ಲಿಂ ಮಹಿಳೆ ಆಗಿರುವುದು ವಿಶೇಷ. ಹಿಂದೂ ಮುಸ್ಲಿಮರ ಮಧ್ಯೆ ಆಗಾಗ್ಗೆ ಅನೇಕ ವಿಚಾರಕ್ಕೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಂತಹ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
ರಾಜೀವ್ ನಗರದಲ್ಲಿ ಪ್ರತಿಷ್ಠಾಪನೆಯಾಗಿರುವ ಗಣೇಶ ಧರ್ಮವನ್ನೂ ಮೀರಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಕಳೆದ ೧೪ ವರ್ಷಗಳಿಂದ ಇದೇ ಗ್ರಾಮದ ಮುಸ್ಲಿಂ ಮಹಿಳೆ ಜುಬೇದಾ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಹಿಂದೂ ಸಮುದಾಯದರ ಜೊತೆ ಸೇರಿ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ.


ಈ ಬಾರಿಯೂ ಗಣೇಶನಮೂರ್ತಿಯನ್ನು ತಂದು ಭಾನುವಾರ ಬೆಳಗ್ಗೆ ಪ್ರತಿಷ್ಠಾಪಿಸಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮಕ್ಕಳನ್ನು ಒಂದೆಡೆ ಸೇರಿಸಿ ಯಾವುದೇ ತಾರತಮ್ಯವಿಲ್ಲದೇ ಎಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸಿದ್ದಾರೆ. ಮಕ್ಕಳಿಗೂ ಸಹ ಭಾವೈಕ್ಯತೆ ಸಂದೇಶವನ್ನು ಸಾರಲಾಗಿದೆ.
ಭಾನುವಾರ ಬೆಳಗ್ಗೆ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಮಕ್ಕಳು, ಹಿರಿಯರು ಒಂದಾಗಿ ಸೇರಿ ಗಣಪತಿ ಬಪ್ಪ ಮೋರಿಯ… ಗಣಪತಿ ಬಪ್ಪ ಮೋರಿಯ… ಎಂದು ಘೋಷಣೆ ಕೂಗಿದರು. ರಾಜೀವ್ ನಗರದ ಗಣಪತಿಗೆ ಜೈ ಜೈ ಎಂದು ಘೋಷಣೆಗಳನ್ನು ಮೊಳಗಿಸಿದರು.
ಈ ಕುರಿತು ರಾಜೀವ್ ನಗರದ ಗಣಪತಿ ಸೇವಾ ಸಮಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದರು. ಪ್ರತಿ ವರ್ಷದಂತೆ ಈ ವರ್ಷವೂ ನಾವು ರಾಜೀವ್ ನಗರದಲ್ಲಿ ಭಾವೈಕ್ಯತೆಯ ಗಣಪತಿಯನ್ನು ಪ್ರತಿಷ್ಠಾಪಿಸಿದ್ದೇವೆ.೧೪ ವರ್ಷಗಳಿಂದ ಗಣಪತಿ ಸೇವಾ ಸಮಿತಿ ಮೂಲಕ ಗಣಪತಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದೇವೆ. ಯಾವ ಧರ್ಮದ ಭೇದವಿಲ್ಲದೇ ಎಲ್ಲರೂ ಗಣೇಶನನ್ನು ಪೂಜಿಸುತ್ತಾರೆ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಯದಾಯದವರು ಸೇರಿ ಪ್ರತಿವರ್ಷ ಹಬ್ಬ ಆಚರಣೆ ಮಾಡುವುದು ಇಲ್ಲಿನ ವಿಶೇಷವೆಂದರು.
ಈ ಬಡಾವಣೆಯ ಮಕ್ಕಳಲ್ಲಿ ಸಹ ಈ ಕುರಿತು ತಿಳುವಳಿಕೆ ಮೂಡಿಸುತ್ತಿದ್ದೇವೆ. ಕ್ರಿಶ್ಚಿಯನ್ ಸಮುದಾಯದವರು ಸಹ ಈ ಗಣಪತಿ ಸೇವಾ ಸಮಿತಿಯ ಸದಸ್ಯರಾಗಿದ್ದಾರೆ. ಸರ್ವರಿಗೂ ದೇವರು ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.

Continue Reading

Chikmagalur

ಶೃಂಗೇರಿಯಲ್ಲಿ ವಿಜೃಂಭಣೆಯ ಗೌರಿ-ಗಣೇಶ ಹಬ್ಬ ನೈವೇದ್ಯಗಳನ್ನು ಅರ್ಪಿಸಿ ಗಣಪತಿಯನ್ನು ಪೂಜಿಸಿದರು

Published

on

ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಶನಿವಾರ ಗಣಪತಿ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಗಣಪತಿಗಳನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಅರ್ಪಿಸಿ ಶ್ರದ್ಧಾಭಕ್ತಿಯಿಂದ ಗಣಪತಿಯನ್ನು ಪೂಜಿಸಿದರು.
ಶೃಂಗೇರಿ ತಾಲ್ಲೂಕಿನ ನಲ್ಲೂರು, ಬೇಗಾರು, ಕಾಂಚೀನಗರ, ವಿದ್ಯಾರಣ್ಯಪುರ, ನೆರಲಕೂಡಿಗೆ, ಆನೆಗುಂದ, ತೆಕ್ಕೂರು. ಬೆಟ್ಟಗೆರೆ, ಶಿಡ್ಲೆ, ಮಳೂರು, ಗಂಡಘಟ್ಟ, ಅಡ್ಡಗದ್ದೆ, ಕೆಳಕೊಪ್ಪ, ತೊರೆಹಡ್ಲು, ಮೆಣಸೆ, ಕಿಗ್ಗಾ, ಕೋರನಕೂಡಿಗೆ, ವೈಕುಂಠಪುರ, ಹೆಬ್ಬಾರಗದ್ದೆ, ಪಟ್ಟಣದ ಭಾರತೀ ಬೀದಿಯ ಗಣಪತಿ ದೇವಾಲಯ, ವಿ.ಆರ್ ಗೌರೀಶಂಕರ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿ, ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಲಾದ ವಿನಾಯಕನಿಗೆ ವಿಶೇಷ ಪೂಜೆ, ಗಣಹೋಮ ನಡೆಸಲಾಯಿತು. ಗಣೇಶನಿಗೆ ಪಾಯಸ, ಕಡಬು, ಪಂಚಕಜ್ಜಾಯ ಮೊದಲಾದ ನೈವೇದ್ಯಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.


ಶೃಂಗೇರಿ ಶಾರದ ಮಠದ ಪ್ರವಚನ ಮಂದಿರದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಶಕ್ತಿಗಣಪತಿ, ಹೊರ ಪ್ರಾಂಗಣದಲ್ಲಿರುವ ತೋರಣಗಣಪತಿಯ ಸನ್ನಿಧಿಯಲ್ಲಿ, ಮಲಹಾನಿಕರೇಶ್ವರ ದೇವಾಲಯದ ಸ್ತಂಭಗಣಪತಿ, ವಿದ್ಯಾಶಂಕರ ದೇವಾಲಯದ ವಿದ್ಯಾಗಣಪತಿ, ದೇವಾಲಯದ ಹೊರಗೆ ಇರುವ ಕಡಲೆ ಗಣಪತಿಗೆ ಋತ್ವಿಜರು ಪೂಜೆ ಸಲ್ಲಿಸಿದರು.
ನರಸಿಂಹವನದ ಗುರುನಿವಾಸದಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ಬಲಭಾಗದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿಗೆ ವಿಶೇಷ ಪೂಜೆಯನ್ನು ಉಭಯ ಸ್ವಾಮಿಜಿಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿಯವರು ಸಲ್ಲಿಸಿ, ವರಸಿದ್ಧಿ ವಿನಾಯಕ ವ್ರತವನ್ನು ನೆರವೇರಿಸಿದರು. ವಿವಿಧ ಹೂಗಳಿಂದ ಅಲಂಕೃತವಾದ ಗಣಪತಿಗೆ ಗರಿಕೆಯನ್ನು ಏರಿಸಿ ಪೂಜೆ ಸಲ್ಲಿಸಲಾಯಿತು. ಉಭಯ ಸ್ವಾಮಿಜೀಗಳ ಸಲ್ಲಿಸುತ್ತಿರುವ ಪೂಜೆಯನ್ನು ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು.


ಶೃಂಗೇರಿ ಪಟ್ಟಣದ ಗೌರೀಶಂಕರ್ ಸಭಾಂಗಣದಲ್ಲಿ ೬೪ನೇ ವರ್ಷದ ಮಹಾಗಣಪತಿಯನ್ನು ಶನಿವಾರ ಬೆಳಿಗ್ಗೆ ಅರ್ಚಕರಾದ ನಾಗರಾಜ್ ಭಟ್‌ರವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದರು. ಸಂಜೆ ಶಾರದಾ ಮಠದ ಹರೀಶ್ ಭಟ್ ಸಂಗಡಿಗರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಿತು.

Continue Reading

Chikmagalur

ಟಾಟಾ ಏಸ್ ಆಟೋ ಪಲ್ಟಿ ಆಗಿ ಇಬ್ಬರು ಸ್ಥಳದಲ್ಲೇ ಇಬ್ಬರು ಸಾವಪ್ಪಿದ್ದಾರೆ.

Published

on

 

 

ಚಿಕ್ಕಮಗಳೂರು : ಟಾಟಾ ಏಸ್ ಆಟೋ ಪಲ್ಟಿ ಆಗಿ ಇಬ್ಬರು ಸ್ಥಳದಲ್ಲೇ ಇಬ್ಬರು ಸಾವಪ್ಪಿದ್ದಾರೆ.
ಗಣಪತಿ ತರಲು 9 ಜನ ಯುವಕರು ತೆರಳುತ್ತಿದ್ದಾಗ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಈ‌ ಘಟನೆ ನಡೆದಿದೆ.

ಶ್ರೀಧರ್ (20) ಧನುಷ್ (20) ಮೃತಪಟ್ಟಿದ್ದು, ಇಬ್ಬರು ಯುವಕರ ತಲೆಗೆ ಗಂಭೀರ ಗಾಯ ಆಗಿ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ರವಾನಿ
ಇನ್ನು ಮೂವರು ಯುವಕರಿಗೆ ಗಾಯವಾಗಿ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರು ಹಾಗೂ ಗಾಯಾಳುಗಳೆಲ್ಲ ಲಿಂಗದಹಳ್ಳಿ ನಿವಾಸಿಗಳು, ಗಣಪತಿ ತರಲು ಟಾಟಾ ಏಸ್ ನಲ್ಲಿ ತರೀಕೆರೆಗೆ ಹೋಗುತ್ತಿದ್ದರು, ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ ಆಗಿದೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

Continue Reading

Trending

error: Content is protected !!