Connect with us

Hassan

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ ೧೧ನೇ ವರ್ಷದ ಪುಣ್ಯಾರಾಧನೆ ವಿವಿಧ ಮಠದ ಸ್ವಾಮೀಜಿಗಳು, ರಾಜಕಾರಣಿಗಳು ಬಾಗಿ

Published

on

ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೧೧ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮದ ಅಂಗವಾಗಿ ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮವು ಜರುಗಿತು. ಇದೆ ವೇಳೆ ವಿವಿಧ ಮಠದ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳು ಬಾಗಿಯಾಗಿದ್ದರು.

ಶನಿವಾರದಂದು ಬೆಳಗಿನಿಂದಲೇ ಪೂಜಾ ಕೈಂಕರ್ಯವು ವಿವಿಧ ಮಠದ ಸ್ವಾಮೀಜಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದು, ಬೆಳಗ್ಗೆ ೬ ಗಂಟೆಗೆ ಮಠದ ಆವರಣದಲ್ಲಿರುವ ಶ್ರೀ ಮಹಾ ಗಣಪತಿಗೆ ಅಭಿಷೇಕ ಮತ್ತು ರಜತ ಕವಚಾಲಂಕಾರ ಹಾಗೂ ಮಹಾ ಮಂಗಳಾರತಿ ಮೂಲಕ ಶ್ರೀ ಪಾದುಕೆಗಳಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ದೀಪಾರಾಧನೆ ಮಾಡಲಾಯಿತು. ೯ ರಿಂದ ೯.೩೦ ರ ವರೆಗೆ ಶ್ರೀ ಲಲಿತಾ ಸಹಸ್ರನಾಮ ಭಗನಿಯವರಿಂದ ನಡೆಯಿತು. ೯.೩೦ ರಿಂದ ೧.೩೦ ರ ವರೆಗೆ ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಒಕ್ಕಲಿಗರ ಮಹಿಳಾ ಸಂಘ ಹಾಗೂ ಶ್ರೀ ಶಾರದಾ ಕಲಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ೧೦.೩೦ ರಿಂದ ೧೧ ಗಂಟೆವರೆಗೆ ರೋಹನ್ ಅಯ್ಯರ್ ಮತ್ತು ಶ್ರೀ ಆದಿಚುಂಚನಗಿರಿ ಒಕ್ಕಲಿಗರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಂದ ಭಕ್ತಿಭಾವ ಸಂಗಮ ಜರುಗಿತು. ೧೧ ರಿಂದ ೧೨ ಗಂಟೆವರೆಗೆ ಶ್ರೀ ಶಂಕರಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ೧೨ ಗಂಟೆ ನಂತರ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನೂರಾರು ಮಂದಿ ಮಠದ ಭಕ್ತರು ಹಾಗೂ ಸ್ವಾಮೀಜಿ ಅವರ ಅನುಯಾಯಿಗಳು ಆಗಮಿಸಿದ್ದರು. ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಭಜನಾ ಮಂಡಳಿಯ ಕಾರ್ಯಕ್ರಮವು ನೆರವೇರಿದವು. ಸಂಜೆ ೬ಕ್ಕೆ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮಠದ ಭಕ್ತರು ಸೇರಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪ್ರತಿಮೆಯೊಂದಿಗೆ ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ, ಶ್ರೀ ಜಯದೇವ ಸ್ವಾಮೀಜಿ, ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶ್ರೀ ಗುರುಮೂರ್ತಿ ಸಾಯಿಚರಣ ಸ್ವಾಮೀಜಿ, ಸದಾಶಿವ ಮಹಾಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಶ್ರೀ ಮಠದ ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ ಮದನಗೌಡ, ಪ್ರೋ.ಕೃಷ್ಣೇಗೌಡರು, ಬಿಜಿಎಸ್ ಚಂದ್ರಶೇಖರ್, ಗೋಪಾಲಗೌಡ, ಕೃಷ್ಣೇಗೌಡ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಾಯಕ ರೋಹನ್ ಅಯ್ಯರ್ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ಉಪನ್ಯಾಸಕ ಲಕ್ಷ್ಮೀ ನಾರಾಯಣ್ ನಿರೂಪಣೆ ನಡೆಸಿ ಕೊಟ್ಟರು.

Continue Reading
Click to comment

Leave a Reply

Your email address will not be published. Required fields are marked *

Hassan

ಬಿಜೆಪಿಯ ಸದಸ್ಯತ್ವ ಅಭಿಯಾನ ಹಿಂದುಗಳ ಸೈದ್ಧಾಂತಿಕ ಆಂದೋಲನ : ಶಾಸಕ ಸಿಮೆಂಟ್ ಮಂಜು

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸುತ್ತಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ, ಜನರ ನಿರೀಕ್ಷೆಗೆ ತಕ್ಕಂತೆ ಸುಧಾರಿಸಲು ಶ್ರಮಿಸುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಹೆಚ್ಚು ಸದಸ್ಯತ್ವ ಮಾಡಿಸಿದ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಮಾತ್ರವಲ್ಲದೆ ಅತ್ಯಂತ ಪ್ರಜಾಸತ್ತಾತ್ಮಕ ಪಕ್ಷವಾಗಿದೆ. ಬಿಜೆಪಿಯಷ್ಟು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಸದಸ್ಯತ್ವ ಅಭಿಯಾನವನ್ನು ಯಾವುದೇ ಪಕ್ಷ ನಡೆಸುವುದಿಲ್ಲ. ಬಿಜೆಪಿ ವಿಶ್ವದಲ್ಲಿಯೇ ಅತ್ಯಂತ ವಿಶ್ವಾಸಾರ್ಹ ರಾಜಕೀಯ ಪಕ್ಷವಾಗಿದೆ, ನಾವು ದೊಡ್ಡ ಕನಸುಗಳನ್ನು ಕಂಡರೂ ಸಹ, ಜನರಿಗೆ ನಾವು ನೀಡುವ ಭರವಸೆಗಳು ಯಾವಾಗಲೂ ನಾವು ಪೂರೈಸುವ ಸಾಮರ್ಥ್ಯದೊಂದಿಗೆ ಹೊಂದಿಕೆಯಾಗಬೇಕು ಎಂದು ಮೋದಿಜಿ ಖಚಿತಪಡಿಸಿದ್ದಾರೆ.

ನಾವು ನಮ್ಮ ಭರವಸೆಗಳನ್ನು ಕ್ರಿಯೆಗಳಾಗಿ ಭಾಷಾಂತರಿಸಲು ಶಕ್ತರಾಗಿರಬೇಕು. ಈ ಕಾರಣಕ್ಕಾಗಿಯೇ ಬಿಜೆಪಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ರಾಜಕೀಯ ಪಕ್ಷವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ದೇಶದಲ್ಲಿ ಬಿಜೆಪಿ ಜನಪರವಾಗಿದೆ. ಬಹುತೇಕರು ಇಷ್ಟಪಡುವ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಗ್ಯ ನೇತೃತ್ವದಿಂದ ಗೌರವ ಹೆಚ್ಚಾಗಿದೆ. ಪಕ್ಷದ ಕಾರ್ಯಕರ್ತರು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ವಿಚಾರ ಹಾಗೂ ಸರಕಾರದ ಕಾರ್ಯಗಳನ್ನು ಬಿತ್ತರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಆಲೂರು ಸಕಲೇಶಪುರ ಕ್ಷೇತ್ರದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಲಾಗಿದ್ದು ಈ ಹಿನ್ನಲೆಯಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿದ ಆಲೂರು ತಾಲೂಕಿನ ಬಿಜೆಪಿ ಕಾರ್ಯಕರ್ತ ದೊರೇಗೌಡ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಲೂರು ಕಟ್ಟಾಯ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಬೈರಾಪುರ ರುದ್ರೇಗೌಡ, ಖಜಾಂಚಿ ಹೇಮಂತ್, ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ಬಾಲಲೋಚನ, ಬಿಜೆಪಿ ಮುಖಂಡರಾದ ಅಜಿತ್, ಲೋಕೇಶ್, ಹನುಮಂತೇಗೌಡ, ಕಿರಣ್, ಬಸವರಾಜ್, ನಂಜುಂಡಪ್ಪ, ಉಮೇಶ್, ಸೊಂಪುರ ನಟರಾಜ್ ಮುಂತಾದವರು ಹಾಜರಿದ್ದರು.

ಫೋಟೋ ಕ್ಯಾಪ್ಶನ್: ಆಲೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದ ಆಲೂರು ತಾಲೂಕಿನ ಬಿಜೆಪಿ ಕಾರ್ಯಕರ್ತ ದೊರೇಗೌಡ ಅವರನ್ನು ಶಾಸಕ ಸಿಮೆಂಟ್ ಮಂಜು ಹಾಗೂ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಗೌರವಿಸಿ ಸನ್ಮಾನಿಸಲಾಯಿತು

Continue Reading

Hassan

ಹೊಯ್ಸಳ ಪಬ್ಲಿಕ್ ಶಾಲೆಯ ಕ್ರೀಡಾ ಸಂಘದ ಉದ್ಘಾಟನೆ

Published

on

ಹಾಸನ: ನಗರದ ತಣ್ಣೀರುಹಳ್ಳಿ, ಹಾಲುವಾಗಿಲು ರಸ್ತೆ ಬಳಿ ಇರುವ ಹೊಯ್ಸಳ ಪಬ್ಲಿಕ್ ಶಾಲೆ ಆವರಣದಲ್ಲಿ ಐಶ್ವರ್ಯ ಎಜುಕೇಶನ್ ಟ್ರಸ್ಟ್, ಹೊಯ್ಸಳ ಡೀಸೆಂಟ್ ಸಿಟಿಜನ್ ಸ್ಪೋರ್ಟ್ಸ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಕ್ರೀಡಾ ಸಂಘದ ಉದ್ಘಾಟನೆಯನ್ನು ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರರು ಎನ್.ಕೆ. ಮಂಜೇಶಗೌಡ, ಮೈಸೂರು ಜಿಲ್ಲಾ ಕಬ್ಬಡಿ ತೀರ್ಪಗಾರರ ಸಂಘದ ಅಧ್ಯಕ್ಷ ವಿ. ರವಿ ಹಾಗೂ ಹೊಯ್ಸಳ ಪಬ್ಲಿಕ್ ಶಾಲೆಯ ಗೌರವಾಧ್ಯಕ್ಷ ನಾಗರಾಜು ನೆರವೇರಿಸಿದರು.

ನಂತರ ಮೈಸೂರು ಜಿಲ್ಲಾ ಕಬ್ಬಡಿ ತೀರ್ಪಗಾರರ ಸಂಘದ ಅಧ್ಯಕ್ಷ ವಿ. ರವಿ ಮಾತನಾಡಿ, ನಾವು ಓದುವ ಕಾಲದಲ್ಲಿ ಗುರಿ ಇರುತಿತ್ತು. ಗುರು ಇರಲಿಲ್ಲ. ಅದರಲ್ಲೂ ಕ್ರೀಡೆಯಲ್ಲಿ ಆಟವಾಡಿದರೇ ಮೊದಲು ನಮ್ಮ ಆರೋಗ್ಯ ಕಾಪಾಡುತ್ತದೆ. ಆಟೋಟದಲ್ಲಿ ಅನೇಕ ರೀತಿಯ ಅನುಕೂಲಗಳಿದ್ದು, ಹಿಂದಿನ ದಿನಗಳಲ್ಲಿ ಯಾವ ಚಿನ್ನದ ಪದಕಗಳು ಹೆಚ್ಚು ಬರುತ್ತಿರಲಿಲ್ಲ. ಮುಖ್ಯವಾಗಿ ಕಲಿಸುವ ಗುರುಗಳು ಇರಲಿಲ್ಲ. ಈಗ ಪ್ರತ್ರಿ ಕ್ರೀಡೆಗೂ ಪ್ರತ್ಯೇಕ ಕೋಚರ್ ಗಳು ಇದ್ದಾರೆ. ಸ್ಪೋರ್ಟ್ಸ್ ಅಕಾಡೆಮಿ ಇದೆ. ಇದರ ಸದುಪಯೋಗ ಪಡೆದುಕೊಂಡು ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರಲೆಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಹೊಯ್ಸಳ ಪಬ್ಲಿಕ್ ಶಾಲೆ ಪ್ರಾಂಶುಪಾಲ ನವೀನ್ ಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Hassan

೨೦೩೦ರ ವೇಳೆ ವೈದ್ಯರಿಗೆ ನಿರುದ್ಯೋಗದ ಬಿಕ್ಕಟ್ಟು ತಟ್ಟುವ ಸಾಧ್ಯತೆ

Published

on

ಹಾಸನ: ೨೦೩೦ರ ವೇಳೆಗೆ, ಬೃಹತ್ ನಿರುದ್ಯೋಗ ಬಿಕ್ಕಟ್ಟು ವೈದ್ಯರಿಗೆ ತಟ್ಟುವ ಸಾಧ್ಯತೆಯಿದ್ದು, ಇದು ವೃತ್ತಿಪರರ ಕೊರತೆಯಿಂದಾಗಿ ಅಲ್ಲ, ಆದರೆ ರಾಷ್ಟ್ರದಾದ್ಯಂತ ವೃತ್ತಿಪರರ ಕಳಪೆ ವಿತರಣೆಯಿಂದಾಗಿ. ಈ ಅಸಮಾನತೆಯನ್ನು ಪರಿಹರಿಸಲು, ಗ್ರಾಮೀಣ ವೈದ್ಯಕೀಯ ಸೇವೆಯನ್ನು ವೈದ್ಯರಿಗೆ ಹೆಚ್ಚು ರುಚಿಕರಗೊಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ನಗರದ ಹಿಮ್ಸ್ ಸಭಾಂಗಣದಲ್ಲಿ ಕರ್ನಾಟಕ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೩೪ನೇ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ೨೦೩೦ರ ವೇಳೆಗೆ ದೇಶಾದ್ಯಂತ ಸುಮಾರು ೧೭ ಲಕ್ಷ ವೈದ್ಯರು ಅಭ್ಯಾಸ ಮಾಡುವ ಸಾಧ್ಯತೆಯಿದೆ.

ಇದು ಈಗ ೧೫ ಲಕ್ಷ ಅಲೋಪತಿ ವೈದ್ಯರನ್ನು ಒಳಗೊಂಡಿದೆ ಮತ್ತು ೫ ಲಕ್ಷ ಪ್ರಸ್ತುತ ಆಯುಷ್ ವೈದ್ಯರು. ಸಂಸದನಾಗಿ ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ದಕ್ಷಿಣ ಭಾರತಕ್ಕೆ ಮುಂದೆ ಯಾವುದೇ ವೈದ್ಯಕೀಯ ಕಾಲೇಜುಗಳ ಅಗತ್ಯವಿಲ್ಲ. ಮತ್ತು ವೈದ್ಯಕೀಯ ಪ್ರತಿಭೆ ಮತ್ತು ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುವುದು ಉತ್ತಮ ಎಂದರು. ಉತ್ತರ ಮತ್ತು ಪೂರ್ವ ರಾಜ್ಯಗಳಲ್ಲಿ ಹೆಚ್ಚು ಇರಬೇಕು ಎಂದು ಅವರು ಹೇಳಿದರು. ೨೦೩೦ರ ವೇಳೆಗೆ, ಬೃಹತ್ ನಿರುದ್ಯೋಗ ಬಿಕ್ಕಟ್ಟು ವೈದ್ಯರಿಗೆ ತಟ್ಟುವ ಸಾಧ್ಯತೆಯಿದೆ ಎಂದು ಹೇಳಿದರು. ಇದು ವೃತ್ತಿಪರರ ಕೊರತೆಯಿಂದಾಗಿ ಅಲ್ಲ, ಆದರೆ ರಾಷ್ಟ್ರದಾದ್ಯಂತ ವೃತ್ತಿಪರರ ಕಳಪೆ ವಿತರಣೆಯಿಂದಾಗಿ. ಈ ಅಸಮಾನತೆಯನ್ನು ಪರಿಹರಿಸಲು, ಗ್ರಾಮೀಣ ವೈದ್ಯಕೀಯ ಸೇವೆಯನ್ನು ವೈದ್ಯರಿಗೆ ಹೆಚ್ಚು ರುಚಿಕರಗೊಳಿಸಬೇಕು, ಪ್ರಸ್ತುತ, ನಗರೇತರ ಸೆಟ್ಟಿಂಗ್‌ಗಳಲ್ಲಿ ಕೆಲಸ ಮಾಡಲು ಪ್ರೋತ್ಸಾಹ ತುಂಬಾ ಕಳಪೆಯಾಗಿದೆ.

ದೂರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಪ್ರೇರಣೆಯಾಗಬೇಕಾದರೆ ಉತ್ತಮ ಕಾರ್ಯಕ್ಷೇತ್ರದ ಸಂಸ್ಕೃತಿ ಅಗತ್ಯ ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಪ್ರದೇಶಗಳು ನಿಧಾನಗತಿಯ ಜೀವನ ಮತ್ತು ಖ್ಯಾತಿಯನ್ನು ನಿರ್ಮಿಸಲು ಉತ್ತಮ ಅವಕಾಶವನ್ನು ನೀಡುತ್ತದೆ ಆದರೆ ಅಂತಹ ಬದ್ಧತೆಯ ಆರ್ಥಿಕ ಪ್ರತಿಫಲವು ಪ್ರಸ್ತುತ ವೈದ್ಯಾಧಿಕಾರಿಗಳಿಗೆ ಸ್ಪೂರ್ತಿದಾಯಕವಾಗಿಲ್ಲ ಎಂದು ಕಿವಿಮಾತು ಹೇಳಿದರು. ಔಷಧದಲ್ಲಿನ ಮೌಲ್ಯಗಳು’ ವಿಷಯದ ಕುರಿತು ಮಾತನಾಡಿದ ಅವರು, ’ಮೌಲ್ಯ’ ವೈದ್ಯರು ಪ್ರಾಮಾಣಿಕತೆಯನ್ನು ಅಭ್ಯಾಸ ಮಾಡಿದಾಗ ಮಾತ್ರ ಔಷಧವು ವರ್ಧಿಸುತ್ತದೆ ಮತ್ತು ದುರ್ಬಲ ರೋಗಿಯು ಪ್ರತಿ ಬಾರಿಯೂ ’ಶಸ್ತ್ರಚಿಕಿತ್ಸೆಯ ಬೆಟ್’ಗೆ ಬೀಳುವುದಿಲ್ಲ. ಅವರು ಇಲಿ ರೇಸ್‌ಗೆ ಬೀಳದಂತೆ ತಡೆಯಲು ವೈದ್ಯರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಸಂಘದ ಅಧ್ಯಕ್ಷೆ ಡಾ|| ಭಾರತಿ ರಾಜಶೇಖರ್ ಹಿಮ್ಸ ನಿರ್ದೇಶಕರಾದ ರಾಜಣ್ಣ. ಡಾ|| ಎ.ಸಾವಿತ್ರಿ. ಡಾ|| ಸೌಮ್ಯಮಣಿ, ಡಾ|| ನಾಗರಾಜ್ ಪ್ರಸೂತಿ ತಜ್ಞರಾದ ಡಾ. ಸುಧಾ, ಡಾ. ಗಿರಿಜಾ, ಡಾ. ಸೌಮ್ಯಾಮಣಿ, ಡಾ. ಪೂರ್ಣಿಮಾ, ಡಾ.ಶ್ರೀ ವಿದ್ಯಾ, ಡಾ. ಕಿರಣಾ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!