Connect with us

Chamarajanagar

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘದ ರಚನೆ

Published

on

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಜನಾರ್ಧನ್ ಕಾರ್ಯದರ್ಶಿಯಾಗಿ ಸ್ವಾಮಿ ರವರನ್ನು ಅವಿರೋಧ ಆಯ್ಕೆ ಮಾಡಲಾಯಿತು.

ಈ ಹಿಂದೆ ಪ್ರಾಧಿಕಾರದ ನೌಕರರಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದ ಹಿನ್ನೆಲೆ ಯಾವುದೇ ಸಭೆಗಳಲ್ಲಿ ಬಂದು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ, ಕೇವಲ ರಾಜಕೀಯ ಮುಖಂಡರುಗಳು ಹಾಗೂ ಅಧಿಕಾರಿಗಳನಷ್ಟೇ ಭೇಟಿ ಮಾಡಲು ಸಾಧ್ಯವಾಗುತ್ತಿತ್ತು ಇದರಿಂದ ನೌಕರರ ಸಮಸ್ಯೆ ಬಗೆಹರಿಯುತಿರಲಿಲ್ಲ, ಆದ್ದರಿಂದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಗೌರವ ಅಧ್ಯಕ್ಷರಾಗಿ ಗೋಪಾಲ್, ಅಧ್ಯಕ್ಷರಾಗಿ ಜನಾರ್ಧನ್, ಕಾರ್ಯದರ್ಶಿಯಾಗಿ ಸ್ವಾಮಿ, ಉಪಾಧ್ಯಕ್ಷರಾಗಿ ಸರಗೂರು ಮಹಾದೇವಸ್ವಾಮಿ, ಸುಮಿತ್ರ ಬಾಯಿ ಸಹ ಕಾರ್ಯದರ್ಶಿಯಾಗಿ ರಾಜು, ಸಂಘಟನಾ ಕಾರ್ಯದರ್ಶಿಯಾಗಿ ಉಮೇಶ್, ಮಹೇಶ್ ಖಜಾಂಚಿಯಾಗಿ ಕಲಾವಿದ ರವಿ, ಜಂಟಿ ಕಾರ್ಯದರ್ಶಿಯಾಗಿ ಮಾದೇಶ್ ಸೇರಿದಂತೆ ಇನ್ನಿತರರನ್ನು ಪದಾಧಿಕಾರಿಗಳನ್ನಾಗಿ ಸರ್ವ ಸದಸ್ಯರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ನಾವು ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಹಮ್ಮಿಕೊಂಡಿರುವ ಗಡಿನಾಡ ಉತ್ಸವ ಕಾರ್ಯಕ್ರಮ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ರವರನ್ನು ಭೇಟಿ ಮಾಡಲು ಆಗಮಿಸಿದ್ದೆವು .ಆದರೆ ಕಾಕತಾಳಿಯ ಎಂಬಂತೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಂತಸ ತಂದಿದೆ ನಾವು ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೆ ಸಂಘಟನೆ ಅತಿ ಮುಖ್ಯವಾಗಿದೆ.ನಾವು ಯಾವುದೇ ಹೋರಾಟಗಳನ್ನು ಮಾಡಬೇಕಾದರೂ ಸಂಘಟನೆ ಇದ್ದರೆ ಮಾತ್ರ ಯಶಸ್ಸು ಪಡೆಯಬಹುದು ಆದ್ದರಿಂದ ಈಗ ರಚನೆ ಮಾಡಿಕೊಂಡಿರುವ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಘವನ್ನು ಎತ್ತರಕ್ಕೆ ಬೆಳೆಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು, ನಾವು ಎಲ್ಲರೂ ಒಗ್ಗಟ್ಟಾಗಿ ಎಲ್ಲವನ್ನು ಎದುರಿಸಿದರೆ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ಕಾರ್ಯದರ್ಶಿ ಸರಸ್ವತಿ ಮಾತನಾಡಿ ನೂತನವಾಗಿ ರಚನೆ ಮಾಡಿಕೊಂಡಿರುವ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸಿ ನೌಕರರ ಹಿತ ಕಾಪಾಡಲಿ, ನೌಕರರ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಭೇಟಿ ಮಾಡಿ ಸಮಸ್ಯೆಯನ್ನು ಬಗೆಹರಿಸಲು ನಾನು ಸಹ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು .

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮಹದೇವಸ್ವಾಮಿ, ಕ್ರೀಡಾ ಕಾರ್ಯದರ್ಶಿಗಳಾದ ರಕ್ಷಿತ್ ಕುಮಾರ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ , ಹನೂರು ತಾಲೂಕು ಅಧ್ಯಕ್ಷರಾದ ಗುರುಸ್ವಾಮಿ, ಪ್ರಭಾರ ಕಾರ್ಯದರ್ಶಿಗಳಾದ ಚಂದ್ರಶೇಖರ್, ಜಿಲ್ಲಾ ಸರ್ಕಾರಿ ನೌಕರರ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ್ ಸೇರಿದಂತೆ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ನಾಯ್ಡು, ಪ್ರೀತಮ್ ಇನ್ನಿತರರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಸೋಲಿಗರ ಆರಾಧ್ಯ ದೈವ ಶ್ರೀಬಿಳಿಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Published

on

ಯಳಂದೂರು ಏಪ್ರಿಲ್ 23

ಸೋಲಿಗರ ಆರಾಧ್ಯ ದೈವ ಶ್ರೀಬಿಳಿಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆಯಿಂದಲೇ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ಮತ್ತು ಆಲಮೇಲು ರಂಗನಾಯಕಿ ಅಮ್ಮ ನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವೈಖಾನಾಸ ಆಗ ಮೊಕ್ತವಾಗಿ ಪೂರ್ವ ಪದ್ಧತಿಯಂತೆ ವೇದ ಮಂತ್ರಗಳನ್ನು ಉಚ್ಚರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಚಂಪಕಾರಣ್ಯವಾಸಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿಗೆ ವಿಜಯಭ್ಯುದಯ ಶಾಲಿವಾಹನ ಶಕ ೧೯೪೫ನೇ ಶ್ರೀ ಶೋಭಾಕ್ಕೃತ್ ನಾಮ ಸಂವತ್ಸರದ ಉತ್ತರಾಯಣ ವಸಂತ ಋತು ವೈಖಾಸನ ಶುದ್ಧ ಚತುರ್ದಶಿ ತಿಥಿಮಾಸ ಪೂರ್ವ ಪದ್ಧತಿಯಂತೆ ಬೆಳಗ್ಗೆ 4 ಗಂಟೆಗೆ ಕಲ್ಯಾಣೋತ್ಸವ, 6:00ಗೆ ಪ್ರಸನ್ನ ಮಂಟಪೋತ್ಸವ ಗಳು ನಡೆಯಿತು. ನಂತರ ಬೆಳಗ್ಗೆ
10 .53 ರಿಂದ 11. 08ಎಂಟರ ಒಳಗೆ ಸಲ್ಲುವ ಶುಭ ಮಿಥುನ ಲಗ್ನದ ಮೇಷ ಕುಜ ನವಾಂಶದ ಶುಭ ಮುಹೂರ್ತದಲ್ಲಿ ಮಹಾ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ರಂಗನಾಥಸ್ವಾಮಿ, ಪದ್ಮಾವತಿ, ತುಳಸಿ ಅಮ್ಮನವರ ಉತ್ಸವ ಮೂರ್ತಿಯನ್ನು ರಂಗನಾಥ ಸ್ವಾಮಿ ದೊಡ್ಡ ರಥೋತ್ಸವದಲ್ಲಿ ಕೂರಿಸಿ ಆಕಾಶದಲ್ಲಿ ಗರುಡ ಪಕ್ಷಿ ದೊಡ್ಡ ರಥೋತ್ಸವವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಿದ್ದಂತೆ ಸೋಲಿಗರು ಹಾಗೂ ಭಕ್ತರು ಶ್ರೀ ಬಿಳಿಗಿರಂಗನಾಥನ ನಾಮಸ್ಮರಣೆ ಮಾಡುತ್ತಾ ರಂಗಪ್ಪನ ತೇರು ಎಳೆದು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಮಜ್ಜಿಗೆ ಪಾನಕ ವಿತರಣೆ.

ಬಿಳಿಗಿರಿ ರಂಗನಾಥ ಸ್ವಾಮಿ ತೆರಿಗೆ ರಾಜ ಬೀದಿಯಲ್ಲಿ ಅರವಟ್ಟಿಕೆಗಳಲ್ಲಿ ಭಕ್ತರು ಮಜ್ಜಿಗೆ ಪಾನಕ ಕೋಸಂಬರಿ ವಿತರಣೆ ಮಾಡಿದರು. ಅಲ್ಲದೆ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನ್ನ ಸಂತರ್ಪಣೆ ಮಾಡಿದರು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಹ ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿ ವರ್ಷದಂತೆ ಸಹ ಈ ವರ್ಷವೂ ಬಸ್ಸಿಗೆ ಸಮಸ್ಯೆ ಉಂಟಾಯಿತು. ಈ ಬಾರಿ ಜಿಲ್ಲಾಡಳಿತ 60ಕ್ಕೂ ಹೆಚ್ಚು ಬಸ್ಸುಗಳನ್ನು ಬಿಟ್ಟಿದ್ದರು ಸಹ ಬಸ್ ಬಾರದೆ ಭಕ್ತರು ಚಡಪಡಿಸಿದರು. ದ್ವಿಚಕ್ರ ವಾಹನ ನಿಷೇಧ ಮಾಡಿದ್ದರಿಂದ ಟ್ರಾಫಿಕ್ ಸಮಸ್ಯೆ ಇರಲಿಲ್ಲ. ದಾರಿ ಉದ್ದಕ್ಕೂ ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜನೆಗೊಂಡಿದ್ದರಿಂದ ಕಾನೂನು ಸುವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಿತು.

ಬಹುಪರಾಕ್.

ಗ್ರಾಮೀಣ ಜನರು ಅಕ್ಕಿ, ಬೆಲ್ಲ, ಎಳ್ಳು ,ಕಾಯಿ, ಹಸಿಗಡಲೆ, ಕಜ್ಜಾಯ ಪುರಿ ಪಳಾರ ಮಾಡಿ ಬಿಳಿಗಿರಿ ರಂಗನಾಥ ಸ್ವಾಮಿ ದಾಸಯ್ಯರಿಂದ ಬ್ಯಾಟ ಮನೆ ಹಾಕಿಸಿ ಹಾಪರ ಗೋಪರ ಕೂಗಿ ಬಿಳಿಗಿರಿ ರಂಗನಾಥ ಸ್ವಾಮಿಗೆ ಬಹುಪರಾಕ್ ಹಾಕಿಸಿದರು.

ಮಳೆಗಾಗಿ ಪ್ರಾರ್ಥನೆ.

ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆ ಬರದೇ ಇರುವುದರಿಂದ ಮೈಸೂರು ಚಾಮರಾಜನಗರ ಮಂಡ್ಯ ಜಿಲ್ಲೆಗಳಿಂದ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಉತ್ತಮ ಮಳೆ ಬೆಳೆಯಾಗುವಂತೆ ರಂಗನಾಥ ಸ್ವಾಮಿಯಲ್ಲಿ ಬೇಡಿಕೊಂಡರು.

ನವ ಜೋಡಿಗಳ ಕಲರವ

ಬಣ್ಣ ಬಣ್ಣದ ಉಡುಗೆ ತೊಟ್ಟ ನವ ಜೋಡಿಗಳು ಬಿಳಿಗಿರಿ ರಂಗನಾಥ ಸ್ವಾಮಿ ರಥೋತ್ಸವಕ್ಕೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಹಣ್ಣು ಜವನ ಎಸೆದು ಜೀವನ ಸುಖಮಯವಾಗಿರಲಿ ಎಂದು ರಂಗನಾಥ ಸ್ವಾಮಿಯಲ್ಲಿ ಕೋರಿದರು.

ಜಿಲ್ಲೆಯ ನಾನಾ ಭಾಗದ ಸೋಲಿಗ ಸಮುದಾಯದ ಜನರು ಜಾತ್ರೆಗೆ ಬಂದಿದ್ದು, ಬಿಳಿಗಿರಿರಂಗನಾಥ ಸ್ವಾಮಿ ತಮ್ಮದೇ ಸಮುದಾಯದ ಕುಸುಮಲೆಯನ್ನು ವರಿಸಿದ ಎಂಬ ಇತಿಹಾಸ ಇರುವುದರಿಂದ ಸೋಲಿಗರು ರಂಗನಾಥ ಸ್ವಾಮಿಯನ್ನು ರಂಗಾಭಾವ ಎಂದು ಕರೆಯುವ ಪದ್ಧತಿ ಹಿಂದಿನಿಂದಲೂ ಬಂದಿದ್ದು ತೇರಿನ ದಿವಸ ಎಲ್ಲಾ ಸೋಲಿಗರು ಬಿಳಿಗಿರಿರಂಗನ ಬೆಟಕ್ಕೆ ಆಗಮಿಸಿ ರಂಗನಾಥ ಸ್ವಾಮಿ ದರ್ಶನ ಪಡೆಯುತ್ತಾರೆ.

Continue Reading

Chamarajanagar

ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜ್ ರೋಡ್ ಶೋ ಮುಖಾಂತರ ಮತದಾರರ ಬಳಿ ಮತಯಾಚನೆ

Published

on

ಹನೂರು ಕ್ಷೇತ್ರ ವ್ಯಾಪ್ತಿಯ ವಿವಿಧಡೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜ್ ರೋಡ್ ಶೋ ಮುಖಾಂತರ ಮತದಾರರ ಬಳಿ ಮತಯಾಚನೆ ನಡೆಸಿದರು.

ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ, ರಾಮಾಪುರ,ಕೌದಳ್ಳಿ ಮಹಾ ಶಕ್ತಿ ಕೇಂದ್ರದಲ್ಲಿ ಎಸ್ ಬಾಲರಾಜು.
ಮತಯಾಚನೆ ವೇಳೆ ಮಾತನಾಡಿ

ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿ ಅವರು ಹತ್ತು ವರ್ಷಗಳ ಕಾಲ ಉತ್ತಮ ಆಡಳಿತವನ್ನು ನೀಡಿದ್ದಾರೆ, ನಾನು , ನಿಮ್ಮ ಮನೆ ಮಗನು, ಬಡತನದಲ್ಲಿ ಹುಟ್ಟಿ ಈ ಮಟ್ಟಕ್ಕೆ ಬಂದಿದ್ದೇನೆ, ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ, ಕಾಂಗ್ರೆಸ್ ಪಕ್ಷ ದಲಿತರಿಗೆ ಅನ್ಯಾಯ ಮಾಡಿದೆ, ಎಸ್ಸಿ. ಎಸ್ಟಿ ಅನುದಾನವನ್ನ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ನರೇಂದ್ರ ಮೋದಿ ರವರು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ಯನ್ನು ನೀಡಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಿಶೇಷವಾದ ಕಾಯ್ದೆಗಳನ್ನು ಜಾರಿ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಆಗಾಗಿ ಈ ಚುನಾವಣೆ ಯಲ್ಲಿ ನನ್ನನ್ನು ಅತೀ ಹೆಚ್ಚು ಮತಗಳನ್ನ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಬೂತ್ ಮಟ್ಟದಲ್ಲಿ ಬಿಜೆಪಿಗೆ ಮತ ಹಾಕಿಸಿ ಮುಂದಿನ ದಿನಗಳಲ್ಲಿ ಸಂಸದರಾಗಿ ಬಾಲರಾಜ್ ರನ್ನು ನಾವು ಆಹ್ವಾನಿಸೋಣ ಶಾಸಕರಾಗಿ ನಾನ ಸಹ ಅವರ ಜೊತೆಗೂಡಿ ಕ್ಷೇತ್ರದ ಅಭಿವೃದ್ದಿಯನ್ನು ಹೆಚ್ಚಿನ ರೀತಿಯಲ್ಲಿ ಮಾಡುತ್ತೇವೆ ಎಂದರು

ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜನಧ್ವನಿ ವೆಂಕಟೇಶ್ ಮುಖಂಡರಾದ ದತ್ತೇಶ್‌ಕುಮಾರ್, ಪ್ರೀತನ್ ನಾಗಪ್ಪ, ನಿಶಾಂತ್ ಸೇರಿದಂತೆ ಮಂಡಲ ಅದ್ಯಕ್ಷ ಚಂಗವಾಡಿ ರಾಜಣ್ಣ, ವಿಜಯ್, ಸೇರಿದಂತೆ ಹಲವರು ಹಾಜರಿದ್ದರು

Continue Reading

Chamarajanagar

ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ- 2024 ರ ಅಂಗವಾಗಿ ಯಳಂದೂರು ಪಟ್ಟಣದಲ್ಲಿಂದು ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಮಹೇಶ್ ಕುಮಾರ್ ಚಾಲನೆ ನೀಡಿದರು .

Published

on

ಬಳಿಕ ಮಾತನಾಡಿದ ಅವರು ಎಲ್ಲರೂ 26ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಬೇಕು. ನಿಮ್ಮ ಹೆಸರು ಮತದಾನ ಪಟ್ಟಿಯಲ್ಲಿ ಇರುವ ಬಗ್ಗೆ ಹೆಲ್ಪ್ಲೈನ್ ಆಪ್ ಮುಖಾಂತರ ಖಚಿತಪಡಿಸಿಕೊಳ್ಳಬೇಕು. ಚುನಾವಣೆ ಸಂಬಂಧ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಸಿವಿಜಿಲ್ ಆಪ್ ನಲ್ಲಿ ದೂರು ಸಲ್ಲಿಸಬಹುದು ಎಂದರು. ನಂತರ ಪಟ್ಟಣದ 7 ಮತಗಟ್ಟೆಗಳಿಗೆ ತೆರಳಿ ಮತದಾನದ ಧ್ವಜ ರೋಹಣ ನೆರವರಿಸಿ ಬಳಿಕ ಮತಗಟ್ಟೆ ವೀಕ್ಷಣೆ ಮಾಡಿದರು. ಪಟ್ಟಣದ ಏಳು ಮತಗಟ್ಟೆಗಳಲ್ಲಿ ಸಹ ರಂಗೋಲಿ ಬಿಡಿಸಿ ಆಕರ್ಷಕವಾಗಿ ಮತಗಟ್ಟೆಗಳನ್ನು ಸಿಂಗರಿಸಿದ್ದರು. ಪಟ್ಟಣದಲ್ಲಿ ಈ ಬಾರಿ ಅತಿ ಹೆಚ್ಚು ಮತದಾನ ಆಗಬೇಕು ಹಣ ಹೆಂಡ ಈತರೆ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು ಮತದಾನ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಾಲೂಕು ಸ್ವೀಪ್ ಸಮಿತಿ ಸದಸ್ಯರು ಹಾಜರಿದ್ದರು.

Continue Reading

Trending

error: Content is protected !!