Chamarajanagar
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಕುಂದು ಕೊರತೆ ಸಭೆ….
ಹನೂರು: ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಕುಂದು ಕೊರತೆ ಸಭೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನೌಕರರು ಮಾತನಾಡಿ ನಾವು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದೇವೆ ಆದರೆ ನಮಗೆ ಯಾವುದೇ ಸರ್ಕಾರ ಸೌಲಭ್ಯಗಳು ಸಿಗುತ್ತಿಲ್ಲ, ಮುಖ್ಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಕುಟುಂಬದ ಒಬ್ಬರಿಗೆ ಕೆಲಸ ನೀಡಬೇಕು, ಇದಲ್ಲದೆ ಪ್ರವಾಸ ಭತ್ಯೆ, ಗಳಿಕೆ ರಜೆ, ಟಿ ಎ, ಡಿಎ ಆರನೇ ವೇತನ ಆಯೋಗದಂತೆ ನೌಕರರಿಗೆ ವೇತನ ನೀಡಬೇಕು ವೇತನ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ಭದ್ರತೆ ಇಲ್ಲದೆ ಇರುವುದರಿಂದ ನಮಗೆ ತೊಂದರೆ ಆಗುತ್ತಿದೆ ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಪೌರಕಾರ್ಮಿಕರ ಸಂಘದ ಅಧ್ಯಕ್ಷ ಗೋಪಾಲ್ ಮಾತನಾಡಿ ಪೌರಕಾರ್ಮಿಕರ ಕಾಲೋನಿಯಲ್ಲಿ ನಿರ್ಮಾಣ ಮಾಡಿರುವ ಮನೆಗಳು ತೀವ್ರ ಶಿಥಿಲಗೊಂಡಿದೆ ಆದ್ದರಿಂದ ನಮಗೆ ನಿವೇಶನ ಕೊಟ್ಟು ಮನೆ ನಿರ್ಮಾಣ ಮಾಡಿಕೊಡಬೇಕು ಇದರಿಂದ ನಮಗೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದರು.

ಕೆಲವು ನೌಕರರು ಹಿರಿಯರ ಮಾರ್ಗದರ್ಶನದಲ್ಲಿ ವೃಂದಾ ಮತ್ತು ನೇಮಕಾತಿ ಆಧಾರದಲ್ಲಿ ನಮಗೂ ಸೌಲಭ್ಯ ನೀಡಬೇಕೆಂದು ಮನವಿ ಸಲ್ಲಿಸಲು ಚರ್ಚೆ ನಡೆಸಿದ್ದಾರೆ. ಆದರೆ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಪಟ್ಟಭದ್ರಾ ಹಿತಾಶಕ್ತಿಗಳು ಈ ಮನವಿಯನ್ನು ನೀಡದಂತೆ ತಡೆ ಹಿಡಿದಿದ್ದಾರೆ. ಕಾರಣ ವೃಂದ ಮತ್ತು ನೇಮಕಾತಿ ಆಧಾರದಲ್ಲಿ ನೌಕರರನ್ನು ತೆಗೆದುಕೊಂಡರೆ ಎಲ್ಲಿಗೆ ಬೇಕಾದರೂ ವರ್ಗಾವಣೆ ಮಾಡಬಹುದು ವರ್ಗಾವಣೆ ಮಾಡಿದರೆ ನಮಗೆ ಕೇವಲ 60 ವರ್ಷಗಳು ಮಾತ್ರ ಕರ್ತವ್ಯ ನಿರ್ವಹಿಸಬಹುದು. ಮುಜರಾಯಿ ಇಲಾಖೆ ನಿಯಮದಲ್ಲಿ 65 ವರ್ಷದವರೆಗೂ ಕರ್ತವ್ಯ ನಿರ್ವಹಿಸಬಹುದು ಆದ್ದರಿಂದ ಹೆಚ್ಚುವರಿಯಾಗಿ ಐದು ವರ್ಷ ಕರ್ತವ್ಯ ನಿರ್ವಹಿಸಬಹುದು ಹಾಗಾಗಿ ನೀವು ಈ ಮನವಿಯನ್ನು ನೀಡದಂತೆ ತಡೆ ಹಿಡಿದಿದ್ದಾರೆ.
ವೃಂದ ಮತ್ತು ನೇಮಕಾತಿ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳದೆ ಇರುವುದರಿಂದ ಮಲೆ ಮಾದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್ ಹಾಗೂ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಯಾವುದೇ ಬಡ್ತಿ ಸಿಗುತ್ತಿಲ್ಲ, ಇವರು ಇರುವವರೆಗೂ ಇದೇ ಹುದ್ದೆಯಲ್ಲಿ ನಿವೃತ್ತಿಯಾಗಬೇಕಿದೆ .ಆದ್ದರಿಂದ ಮುಂದಿನ ದಿನಗಳಲ್ಲಿ ಈ ನಿಯಮ ಬದಲಾವಣೆ ಮಾಡಿದರೆ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುವ ನೌಕರರಿಗೆ ಬಡ್ತಿ ಸಿಗಲಿದೆ ಆದ್ದರಿಂದ ಆದಷ್ಟು ಬೇಗ ನಮ್ಮ ಈ ಸಮಸ್ಯೆಯನ್ನು ಬಗೆಹರಿಸುವಂತೆ ಹಲವು ನೌಕರರು ಮನವಿ ಮಾಡಿಕೊಂಡರು.

ಇನ್ನು 108 ಅಡಿ ಪ್ರತಿಮೆ ಕಾಮಗಾರಿಗೆ ಜಮೀನು ನೀಡಿರುವವರಿಗೆ ಇದುವರೆಗೂ ಜಮೀನು ನೀಡಿಲ್ಲ ಆದ್ದರಿಂದ ನಮಗೆ ಪ್ರಾಧಿಕಾರದಲ್ಲಿ ಕೆಲಸ ಕೊಡುವಂತೆ ಹಲವರು ಮನವಿ ಸಲ್ಲಿಸಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಹಾಗೂ ಜಾತ್ರಾ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಕರ್ತವ್ಯಕ್ಕೆ ತೆಗೆದುಕೊಳ್ಳುವ ಸಿಬ್ಬಂದಿಗಳಿಗೂ ಸಹ ಶಾಶ್ವತವಾಗಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.
ಒಟ್ಟಾರೆ ಪ್ರಾಧಿಕಾರದ ನೌಕರರ ಸಿಬ್ಬಂದಿಗಳಿಗೆ ಸ್ಪಂದಿಸಿರುವ ಕಾರ್ಯದರ್ಶಿ ಸರಸ್ವತಿ ರವರು ಸರ್ಕಾರಿ ನೌಕರರುಗಳಂತೆ ನಿಮಗೂ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ, ಇನ್ನು ಪೌರಕಾರ್ಮಿಕರ ಗಳಿಗೆ ಸೂಕ್ತ ನಿವೇಶನ ನೀಡಿ ಗುಂಪು ನಿರ್ಮಾಣ ಮಾಡಲು ಆದಷ್ಟು ಬೇಗ ಸ್ಥಳ ಗುರುತಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

Chamarajanagar
ಪ್ರೋತ್ಸಾಹಧನಕ್ಕೆ ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ
ಚಾಮರಾಜನಗರ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿಗೆ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ (ಮಂಗಳಮುಖಿ) ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಿಗಮದಿಂದ ನೀಡಲಾಗುವ 30,000 ರೂ. ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕಡ್ಡಾಯವಾಗಿ ಖಾತೆ ಹೊಂದಿದ್ದು, ಬ್ಯಾಂಕ್ ಖಾತೆಯ ಪ್ರತಿಯನ್ನು ಲಗತ್ತಿಸಬೇಕು. ಬ್ಯಾಂಕ್ ಖಾತೆಯೊಂದಿಗೆ ಅರ್ಜಿದಾರರ ಆಧಾರ್ ಲಿಂಕೇಜ್ ಆಗಿರಬೇಕು. ಅರ್ಜಿದಾರರು ಯಾವುದೇ ಆರ್ಥಿಕ ಸಂಸ್ಥೆ/ಬ್ಯಾಂಕುಗಳಲ್ಲಿ ಸುಸ್ತಿದಾರರಾಗಿರಬಾರದು ಎಂಬ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಬೇಕು.

ಆಸಕ್ತರು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ 2026ರ ಜನವರಿ 15 ರೊಳಗೆ ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಆಯುರ್ವೇದ ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ
ಚಾಮರಾಜನಗರ: ಜಿಲ್ಲೆಯ ಆಯುಷ್ ಇಲಾಖೆ ವ್ಯಾಪ್ತಿಗೆ ಬರುವ ಕೇಂದ್ರ ಪುರಸ್ಕೃತ ಯೋಜನೆಯಡಿ ಮೇಲ್ದರ್ಜೆಗೇರಿಸಲಾದ ಚಾಮರಾಜನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಖಾಲಿ ಇರುವ ಆಯುರ್ವೇದ ತಜ್ಞ ವೈದ್ಯರ ಒಂದು ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಮೀಸಲಾತಿ (ಪರಿಶಿಷ್ಟ ಜಾತಿ) ಮೀಸಲಾತಿ (ಸಾಮಾನ್ಯ) ವರ್ಗದ ಅಭ್ಯರ್ಥಿಗಳು ಆಯುರ್ವೇದದಲ್ಲಿ ಸ್ನಾತ್ತಕೋತ್ತರ (ಎಂ.ಎಸ್ ಇನ್ ಶೈಲತಂತ್ರ ಅಥವಾ ಎಂ.ಡಿ ಇನ್ ಪಂಚಕರ್ಮ/ಕಾಯಚಿಕಿಸ್ಟ ವಿಷಯದಲ್ಲಿ ಸ್ನಾತಕೋತ್ತರ) ಪದವಿ ಹೊಂದಿರಬೇಕು. ಅಭ್ಯರ್ಥಿಗಳು ಗರಿಷ್ಠ 45 ವರ್ಷದವರಾಗಿರಬೇಕು.

ನಿಗದಿತ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದ 3ನೇ ಮಹಡಿಯಲ್ಲಿರುವ ಜಿಲ್ಲಾ ಆಯುಷ್ ಕಚೇರಿಯಲ್ಲಿ (ಕೊಠಡಿ ಸಂ 304) ವಿತರಿಸಲಾಗುವುದು. ಅರ್ಜಿ ಸಲ್ಲಿಸಲು 2026ರ ಜನವರಿ 6 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Chamarajanagar
ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಚಾಮರಾಜನಗರ: ಯಡಿಯೂರು ಗ್ರಾಮದ ನಿವಾಸಿ ಮಿಥುನ್ ಎಂಬ ಬಾಲಕ ಕಾಣೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.
13 ವರ್ಷದ ಮಿಥುನ್ 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಳದಿ ಮತ್ತು ಬಿಳಿ ಬಣ್ಣದ ಚೆಕ್ಸ್ ಶರ್ಟ್ ಹಾಗೂ ನೀಲಿ ಬೂದು ಬಣ್ಣ ಮಿಶ್ರಿತ ಪ್ಯಾಂಟ್ ಧರಿಸಿದ್ದಾನೆ.

ಬಾಲಕನ ಸುಳಿವು ದೊರೆತಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ 08226-222383, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ದೂ.ಸಂ. 08226-222047 ಸಂಪರ್ಕಿಸುವಂತೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Kodagu4 hours agoಹೆಚ್.ಎ.ನಗ್ಮಾಭಾನು ಅವರಿಗೆ ಯುವ ಮಹಿಳಾ ಸಂಶೋಧಕಿ ಪ್ರಶಸ್ತಿ
-
Hassan5 hours agoಹಳ್ಳಿಮೈಸೂರು ಹೋಬಳಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಗ್ರಾಮಸ್ಥರಿಂದ ಡಿಸಿಗೆ ಮನವಿ
-
Kodagu7 hours agoಜ್ಯೋತಿ ಪ್ರಧಾನ ಕಾರ್ಯಕ್ರಮ
-
Mysore2 hours agoದೇವರಸನಹಳ್ಳಿ ಗ್ರಾಂ.ಪಂ.ನಲ್ಲಿ ವ್ಯಾಪಕ ಭ್ರಷ್ಟಾಚಾರ : ತನಿಖೆ ನಡೆಸುವಂತೆ ಮಾಜಿ ಗ್ರಾಂ.ಪಂ.ಸದಸ್ಯ ಮಹದೇವು ಆಗ್ರಹ
-
Hassan16 hours agoತಾಯಿಯಾದ 10 ತರಗತಿ ವಿದ್ಯಾರ್ಥಿನಿ: ಕಾರಣ ಕರ್ತ ಕೀಚಕ ಪರಾರಿ
-
Mysore7 hours agoನಾಲ್ಕನೇ ವರ್ಷದ ಅದ್ದೂರಿ ಹನುಮ ಜಯಂತಿ
-
Mysore2 hours agoತಿ.ನರಸೀಪುರ ಗುಂಜಾ ನರಸಿಂಹಸ್ವಾಮಿ ಹುಂಡಿ ಎಣಿಕೆ
-
Hassan8 hours agoಬಂದೂಕು ಪರವಾನಗಿ ನವೀಕರಣ ವಿಳಂಬ: ಜಿಲ್ಲಾಡಳಿತ ವಿರುದ್ಧ ರೈತರ ಆಕ್ರೋಶ
