Connect with us

Hassan

ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಫೆ.11 ರಂದು ಶಿಕಾರಿಪುರದಲ್ಲಿ ರಾಜ್ಯ ಮಟ್ಟದ ಮಹಿಳಾ ಸ್ವ ಸಹಾಯ ಸಂಘಗಳ ಸಮಾವೇಶ

Published

on

ಹಾಸನ: ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಫೆ.11 ರಂದು ಶಿಕಾರಿಪುರದಲ್ಲಿ ರಾಜ್ಯ ಮಟ್ಟದ ಮಹಿಳಾ ಸ್ವ ಸಹಾಯ ಸಂಘಗಳ ಸಮಾವೇಶ ಹಾಗೂ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಠದ ಆಡಳಿತ ಸಮಿತಿ ಸದಸ್ಯ ಈರಣ್ಣಯ್ಯ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಈ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಂದೇ ಇತ್ತು ಇದೀಗ ಶ್ರೀ ಪುಷ್ಪಗಿರಿ ಮಹಿಳಾ ಸ್ವ ಸಹಾಯ ಸಂಘಗಳು ಕೂಡ ಸ್ಥಾಪಿತವಾಗಿದ್ದು ಮಹಿಳೆಯರ ಆರ್ಥಿಕ, ಸಾಮಾಜಿಕವಾಗೀ ಸದೃದವಾಗಿಸುವ ಸಲುವಾಗಿ ಸಂಘಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು.

ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಠದ ಅಭಿವೃದ್ದಿಯ ಜೊತೆಗೆ ಮಹಿಳಾ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ರೈತರಿಗೆ ನೆರವಾಗಿದ್ದಾರೆ ಎಂದರು.

ಮಠದ ಆಡಳಿತಾಧಿಕಾರಿ ಪುಷ್ಪಗಿರಿ ಕಿಟ್ಟಪ್ಪ ಮಾತನಾಡಿ, ಮಹಿಳಾ ಸ್ವ ಸಹಾಯ ಸಂಘದಲ್ಲಿ ಪ್ರತಿ ಸಂಘಕ್ಕೆ 20 ಜನರಣತೆ ಸುಮಾರು 2000 ಸಂಘಗಳಿವೆ,

ಮಾಜಿ ಪ್ರಧಾನಿ ಬಿ ಎಸ್ ಯಡಿಯೂರಪ್ಪ ಅವರ ಸಹಕಾರದೊಂದಿಗೆ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು ಸ್ವ ಸಹಾಯ ಸಂಘಗಳ ಬಲವರ್ಧನೆ ಹಾಗೂ ಶಕ್ತಿ ತುಂಬುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಮಠ ಕೂಡ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಶಿಕಾರಿ ಪುರ ದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ , ವಿಜಯ್ ಕುಮಾರ್, ಯಶೋಧರ, ಅಜಿತ್, ಸತೀಶ್ ಇತರರು ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Hassan

ಗುಡ್ಡಗಾಡು ಓಟ: ಕಲಾ ಕಾಲೇಜು ಅತ್ಯುತ್ತಮ ಸಾಧನೆ

Published

on

ಹಾಸನ: ಹಾಸನ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಅತ್ಯುತ್ತಮ ಸಾಧನೆ ಮೆರೆದಿದೆ.

ಪುರುಷರ ತಂಡವು ಸತತ ಎರಡನೇ ಬಾರಿ ತಂಡ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು, ಮಹಿಳೆಯರ ತಂಡವು ತಂಡ ಕೂಡ ದ್ವಿತೀಯ ಸ್ಥಾನ ಗಳಿಸಿದೆ.

ಪುರುಷರ ವಿಭಾಗದಲ್ಲಿ ಬಿ.ಕೆ. ಲಕ್ಷ್ಮಣ ತೃತೀಯ ಸ್ಥಾನ ಪಡೆದು ಹರಿಯಾಣದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪುರುಷರ ತಂಡದಲ್ಲಿ ಲಕ್ಷ್ಮಣ ಬಿ.ಕೆ., ಹೇಮಂತ್ ಕುಮಾರ್ ಬಿ.ಜೆ., ಶ್ರೀಜನ್ ಕೆ.ಎಸ್., ಜೀವನ್ ಕುಮಾರ್ ಟಿ.ಎಸ್., ಪ್ರಶಾಂತ್ ಎ.ಆರ್. ಹಾಗೂ ರಕ್ಷಿತ್ ಗೌಡ ಕೆ.ಎನ್. ಭಾಗವಹಿಸಿದ್ದರು.

ಮಹಿಳೆಯರ ತಂಡದಲ್ಲಿ ಬಿಂದುಶ್ರೀ ಜೆ.ಎಸ್., ಭಾವನಾ ಜಿ.ಎಚ್., ತೇಜಸ್ವಿನಿ ಸಿ.ಎಲ್., ಮಾನಸ ಕೆ.ವೈ., ಸಿಂಚನ ಸಿ.ಡಿ. ಮತ್ತು ಮಮತಾ ಎಂ.ಎಲ್. ಸ್ಪರ್ಧಿಸಿದ್ದರು.

ವಿಜೇತ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪವನ್ ಕೆ.ಜೆ. ಅವರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಇರ್ಷಾದ್ ಎಂ.ಬಿ., ಶೈಕ್ಷಣಿಕ ಡೀನ್ ರಾಜು ಡಿ.ಎಸ್., ಪರೀಕ್ಷಾ ನಿಯಂತ್ರಕ ಡಾ. ಮುರಳೀಧರ ಕೆ.ಡಿ. ಮತ್ತು ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಕೆ.ಟಿ. ಅಭಿನಂದಿಸಿ ಶುಭ ಹಾರೈಸಿದರು.

Continue Reading

Hassan

ವಿದ್ಯಾರ್ಥಿಗಳ ಕೌಶಲ್ಯ ಮತ್ತು ಜ್ಞಾನ ವೃದ್ಧಿಗೆ ಎ.ಇ.ಡಿ.ಪಿ. ಸಹಕಾರಿ: ಡಾ. ನಾಗೇಶ್

Published

on

ಹಾಸನ, ಫೆ 12: ಕೌಶಲ್ಯಾಧರಿತ ಶಿಕ್ಷಣದಿಂದ ಉದ್ಯೋಗ ಖಾತ್ರಿಯ ವಿಫುಲ ಅವಕಾಶಗಳಿದ್ದು, ಅದಕ್ಕಾಗಿ ಪದವಿ ಶಿಕ್ಷಣದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಎ.ಇ. ಡಿ.ಪಿ. ಕಾರ್ಯಕ್ರಮದ ಮೂಲಕ ತರಬೇತುಗೊಳಿಸಲಾಗುತ್ತಿದೆ ಎಂದು ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆಯ ನೋಡಲ್ ಆಫೀಸರ್ ಡಾ.ನಾಗೇಶ್ ಆರ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ರೂಸಾ ವತಿಯಿಂದ ನಡೆದ ಒಂದು ದಿನದ ಎ. ಇ. ಡಿ. ಪಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಶಿಕ್ಷಣ ಮತ್ತು ಕೈಗಾರಿಕೆಯ ನಡುವಿನ ಅಂತರವನ್ನು ಅಳಿಸಿದಾಗ ವಿದ್ಯಾರ್ಥಿಗಳು ಕೌಶಲ್ಯ ಮತ್ತು ಜ್ಞಾನ ಎರಡಕ್ಕೂ ಮುಕ್ತರಾಗುತ್ತಾರೆ. ಅದೇ  ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದಲ್ಲಿ ಅಪ್ರೆಂಟಿಸ್ ಶಿಪ್ ಅನ್ನು ಪರಿಚಯಿಸಿದ್ದು,  ಕೌಶಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ ಇರ್ಷಾದ್ ಅವರು,  ವಿದ್ಯಾರ್ಥಿಗಳು ಪದವಿ ಕಲಿಯುವಾಗಲೇ ವೃತ್ತಿಪರ ತರಬೇತಿಗೆ ತೆರೆದುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಕಡೆಯ ವರ್ಷದ ಪದವಿಯಲ್ಲಿ ಓದಿನ ಜೊತೆಗೆ ದುಡಿಮೆಗೂ ಸಹಕಾರಿಯಾಗಿದೆ ಎಂದರು. ಬಿ.ಕಾಂ. ರೀಟೇಲ್ ಆಪರೇಷನ್ ಕೋರ್ಸಿನಲ್ಲಿ ರಾಜ್ಯಾದ್ಯಂತ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಿದ್ದು  ಶೇ. 90ರವರೆಗಿನ ಉದ್ಯೋಗ ಖಾತ್ರಿ ಇದೆ. ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ  ರೀಟೇಲ್ ಆಪರೇಷನ್ ಕೋರ್ಸ್ ಯಶಸ್ವಿಯಾಗಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅರ್ಜುನ್ ಶತ್ರುಂಜಯ್, ಉಜ್ವಲ್ ಕಿರಣ್, ಶ್ರೀನಾಥ್ ಗಟ್ಟು, ಆರ್. ಸುಬ್ರಹ್ಮಣ್ಯನ್, ಹರೀಶ್ ಜಿ. ವಿ, ಜೈನಾ ಎಂ ಹರನ್ ಅವರು ಮೈಸೂರು, ಮಂಗಳೂರು, ಉಡುಪಿ, ಕಾರ್ಕಳ,  ತಿಪಟೂರು, ತುಮಕೂರು ಸೇರಿದಂತೆ ಹಲವೆಡೆಯಿಂದ ಆಗಮಿಸಿದ್ದ ಆರ್. ಓ . ವಿದ್ಯಾರ್ಥಿಗಳಿಗೆ ಎಇಡಿಪಿ ಬಗ್ಗೆ  ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ರಾಜು ಡಿ. ಎಸ್,  ಪರೀಕ್ಷಾ ನಿಯಂತ್ರಕರಾದ ಡಾ. ಮುರಳೀಧರ್ ಕೆ.ಡಿ., ಪತ್ರಾಂಕಿತ ವ್ಯವಸ್ಥಾಪಕರಾದ ಸತ್ಯಮೂರ್ತಿ ಕೆ.ಟಿ, ಎಇಡಿಪಿ ಸಂಯೋಜಕರಾದ ಶಿವರಾಜ್ ಕುಮಾರ್ ಜೆ, ಕಛೇರಿ ಅಧೀಕ್ಷಕರಾದ ಮಾರುತಿ   ಕೆ. ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗದವರು ಹಾಜರಿದ್ದರು.

ರೂಸಾ ಸಂಯೋಜಕರಾದ ಡಾ. ದಿನೇಶ್ ಕೆ.ಎಸ್. ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಡಾ. ಸವಿತಾ ಕಾರ್ಯಕ್ರಮ ನಿರೂಪಿಸಿದರು. ಬನುಮಾ ಗುರುದತ್ ಪ್ರಾರ್ಥಿಸಿದರು.

Trending

error: Content is protected !!