Chamarajanagar
ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ರವರಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ಎಲ್ ನಾಗೇಂದ್ರಗೌಡ ಅವರಿಂದ ಸನ್ಮಾನ
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ರವರನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ಎಲ್ ನಾಗೇಂದ್ರಗೌಡ ಸನ್ಮಾನಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಮಾತನಾಡಿ ವಿಧಾನಸಭಾ ಚುನಾವಣೆಗೂ ಮುನ್ನ ಮಲೆ ಮಹದೇಶ್ವರ ಬೆಟ್ಟಕ್ಕೆ ಗ್ರಾಮಸ್ಥರೊಡನೆ ಪಾದಯಾತ್ರೆ ಮೂಲಕ ಆಗಮಿಸುವುದಾಗಿ ಹರಕೆ ಹೊತ್ತುಕೊಳ್ಳಲಾಗಿತ್ತು. ಈ ಹಿನ್ನೆಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೂನಗನಹಳ್ಳಿ ಗ್ರಾಮದಿಂದ ಮಳವಳ್ಳಿ ಸಮೀಪದ ದಾಸನಪುರ ಗ್ರಾಮದವರೆಗೆ ಪಾದಯಾತ್ರೆ ಮಾಡಿ ತುರ್ತು ಕೆಲಸವಿರುವುದರಿಂದ ಕಾರಿನ ಮೂಲಕ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದೇನೆ . ಪವಾಡ ಪುರುಷ ಶ್ರೀ ಮಹದೇಶ್ವರ ಸ್ವಾಮಿ ಮುಂದಿನ ದಿನಗಳಲ್ಲಿ ಸರ್ವರಿಗೂ ಒಳ್ಳೆಯದನ್ನು ಮಾಡಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರಾಜ್ಯ ಸಮೃದ್ಧಿಯಿಂದ ಕೂಡಿರಲಿ ಎಂದು ಬೇಡಿಕೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ಕಾಂಗ್ರೆಸ್ ಮುಖಂಡರುಗಳಾದ ಚಂದ್ರು, ಆಟೋ ರಾಜೇಶ್, ಶಾಂತರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
Chamarajanagar
ನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
ಚಾಮರಾಜನಗರ ಜಿಲ್ಲೆ ಹಿರಿಕಾಟಿ ಬಳಿ ಕ್ರಷರ್ ವಿಚಾರವಾಗಿ ಉದ್ಯಮಿಗಳಿಗೆ ಬೆದರಿಕೆ ಹಾಕಿರುವ ಆರೋಪ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್ ಅವರ ಮೇಲೆ ಕೇಳಿ ಬಂದಿದೆ. ಚಾಮರಾಜನಗರದ ಮಾಜಿ ಸಂಸದ ಸುನಿಲ್ ಬೋಸ್ ಅವರ ಹೆಸರು ಕೂಡ ಪ್ರಸ್ತಾಪಿಸಿರುವ ನಂದಕುಮಾರ್, ನನಗೆ ಸಂಸದರ ಬೆಂಬಲವಿದೆ. ನನ್ನ ಪೊಲಿಟಿಕಲ್ ಒವರ್ ಏನು ಅಂತ ತೋರಿಸುತ್ತೇನೆ ಅಂತ ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ಯಮಿಗಳು ನಂದಕುಮಾರ್ ಸೇರಿ ಇತರರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಹಿರಿಕಾಟಿ ಬಳಿ ಕ್ರಷರ್ ಉದ್ಯಮವನ್ನು ಕಾನೂನು ನೀತಿ ನಿಯಾಮವಳಿ ಅನ್ವಯವೇ, ಯಾವುದೇ ಉಲ್ಲಂಘನೆ ಅಗದಂತೆ ನಡೆಸುತ್ತ ಬಂದಿದ್ದೇವೆ. ನಮ್ಮ ಕ್ರಷರ್ ಪಕ್ಕದಲ್ಲೇ ನಂದಕುಮಾರ್ ಅವರ ಕ್ರಷರ್ ಕೂಡ ಇದೆ. ನಮಗೆ ಕಿರುಕುಳ ನೀಡಿ ಇಲ್ಲಿಂದ ನಮ್ಮ ಕ್ರಷರ್ ಅನ್ನ ಬೇರೆಡೆ ಸ್ಥಳಾಂತರ ಮಾಡಲು ಈ ರೀತಿ ಕಿರುಕಳ ನೀಡಿದ್ದಾರೆ ಅಂತ ಬಹಿರಂಗವಾಗಿ ಮಾಧ್ಯಮಗಳೆದುರು ಗಂಭೀರ ಆರೋಪಗಳನ್ನ ಮಾಡಿದ್ದರು.
ಇನ್ನು ಉದ್ಯಮಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಂದಕುಮಾರ್ ನಾನಂಥವನಲ್ಲಾ, ನಾನು ಯಾವುದೇ ಪೊಲಿಟಿಕಲ್ ಪವರ್ ಯೂಸ್ ಮಾಡುವುದಾಗಿ ಹೇಲಿಲ್ಲ. ಅವರು ವಿನಾಕಾರಣ ಸುಳ್ಳು ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರ ಅಂತ ಸ್ಪಷ್ಟನೆ ನೀಡಿದ್ದಾರೆ.
Chamarajanagar
ಪರಿಶ್ರಮದಿಂದ ಯಶಸ್ಸು ಸಾಧ್ಯ: ದೈಹಿಕ ನಿರ್ದೇಶಕ ಡಾ. ಶಾಂತರಾಜು
ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾಪಟುಗಳು ದೇಶ ಹಾಗೂ ರಾಜ್ಯದ ಮಹಿಳಾ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯವಾಗಲಿದೆ ಎಂದು ಚಾಮರಾಜನಗರ ವಿ.ವಿ ದೈಹಿಕ ನಿರ್ದೇಶಕ ಡಾ. ಶಾಂತರಾಜು ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಇಂದು ಫೆಬ್ರವರಿ 11 ರಿಂದ 15 ರವರೆಗೆ ತಮಿಳುನಾಡಿನ ದಿಂಡಿಗಲ್ ನ ಪಿಎಸ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಚಾಮರಾಜನಗರ ವಿವಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ತಮಿಳುನಾಡಿನ ದಿಂಡಿಗಲ್ ನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಂತಸದ ವಿಚಾರ. ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಗಡಿ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಯಶೀಲರಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿಎಸ್. ಮಹದೇವಸ್ವಾಮಿ, ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲಹೆ ಸಮಿತಿ ಸದಸ್ಯ ಜಿ ಬಂಗಾರು, ಕೊಳ್ಳೇಗಾಲ ಜೆಎಸ್‌ಎಸ್ ಮಹಿಳಾ ಕಾಲೇಜು ದೈಹಿಕ ಉಪನ್ಯಾಸಕರಾದ ಎಸ್. ಶ್ರೀಧರ್, ಇತರರು ಇದ್ದರು.
Chamarajanagar
ಜಾನುವಾರುಗಳ ಮರಣಕ್ಕೆ ರೋಗೋದ್ರೇಕ ಕಾರಣವಲ್ಲ : ಜಿಲ್ಲಾಧಿಕಾರಿ ಶ್ರೀರೂಪ ಸ್ಪಷ್ಟನೆ
ಚಾಮರಾಜನಗರ: ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ 6 ದನಗಳು ಹಾಗೂ ಗುನ್ನೂರು ಬಯಲು ಪಳನಿಮೇಡು ಗ್ರಾಮದ 5 ದನಗಳು ವಿಷಯುಕ್ತ ನೀರು ಸೇವಿಸಿ ಮರಣಹೊಂದಿದೆ. ಈ ಜಾನುವಾರುಗಳು ಯಾವುದೇ ರೋಗೋದ್ರೇಕ ಕಾರಣಗಳಿಂದ ಮರಣ ಹೊಂದಿಲ್ಲ ಎಂಬುವುದು ದೃಢಪಟ್ಟಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.
ಫೆ. 4 ರಂದು ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಅವರ 6 ದನಗಳು (ಹಳ್ಳಿಕಾರ್) ಹಾಗೂ ಫೆ. 5 ರಂದು ಗುನ್ನೂರು ಬಯಲು ಪಳನಿಮೇಡು ಗ್ರಾಮದ ತಂಗರಾಜು ಅವರ 5 ದನಗಳು (ಸ್ಥಳೀಯ) ಮೇಯಲು ಹೋಗಿದ್ದ ಸಂದರ್ಭದಲ್ಲಿ ಹಠಾತ್ ಆಗಿ ಒಟ್ಟು 11 ಜಾನುವಾರುಗಳು ಮೃತಪಟ್ಟಿವೆ.

ಸದರಿ ದನಗಳ ಮರೋಣೋತ್ತರ ಪರೀಕ್ಷೆಯನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ (ಐಎಎಚ್ ಮತ್ತು ವಿಬಿ, ಬೆಂಗಳೂರು) ತಜ್ಞ ವಿಜ್ಞಾನಿಗಳ ತಂಡವು ನಡೆಸಿದ್ದು, ವಿಷಯುಕ್ತ ನೀರು ಸೇವಿಸಿರುವುದರಿಂದ ಜಾನುವಾರುಗಳು ಮರಣ ಹೊಂದಿರುತ್ತದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿರುತ್ತದೆ.
ಈ ಜಾನುವಾರುಗಳು ಯಾವುದೇ ರೋಗೋದ್ರೇಕ ಕಾರಣಗಳಿಂದ ಮರಣ ಹೊಂದಿಲ್ಲ ಎಂಬುವುದು ದೃಢಪಟ್ಟಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Chikmagalur20 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan16 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Hassan18 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
State20 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Kodagu16 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
Chamarajanagar23 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
State22 hours agoಜಿಬಿಎ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ: ಬಿ.ವೈ.ವಿಜಯೇಂದ್ರ
-
Mandya17 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
