Connect with us

Chikmagalur

ಶೃಂಗೇರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನನ್ನು ಹಿಂಪಡೆಯುವಂತೆ ಪ್ರತಿಭಟನೆ

Published

on

ಶೃಂಗೇರಿ:  ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನಿನಲ್ಲಿ 7 ಲಕ್ಷ ರೂಪಾಯಿ ದಂಡ ಮತ್ತು ಹಿಟ್ ಆ್ಯಂಡ್ ರನ್ ರಸ್ತೆ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಇಂದು ಶೃಂಗೇರಿ ವಾಹನ ಮಾಲೀಕರು ಹಾಗೂ ಚಾಲಕರು, ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ (ನೋ) ಶೃಂಗೇರಿ, ವತಿಯಿಂದ ಹೊಸ ಕಾನೂನನ್ನು ಹಿಂಪಡೆಯುವಂತೆ ಬಸ್ ಸ್ಟ್ಯಾಂಡ್ ಮೂಲಕ ಭಾರತಿ ಬೀದಿ ಮುಖಾಂತರ ವೆಲ್ಕಂ ಗೇಟ್ ನಿಂದ ಸಾಗಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ರಾಘವೇಂದ್ರ, ಕಾರ್ಯಾದರ್ಶಿ ಅಕ್ಬರ್ ಅಲಿ, ಜಿಲ್ಲಾ ಕಾರ್ಯಕಾರಿಣಿ ರಿಯಾಜ್, ಮಾಲೀಕರು ಕುಮಾರ, ನಾಗೇಶ, ನವೀನ, ಪ್ರಭಾಕರ ಸೇರಿದಂತೆ ವಾಹನ ಚಾಲಕರು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Chikmagalur

ಬಿಜೆಪಿ ಯುವ ಮೋರ್ಚಾದಿಂದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನ

Published

on

ಚಿಕ್ಕಮಗಳೂರು : ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ದಿನ ಹಿನ್ನೆಲೆ ಬಿಜೆಪಿ ಯುವ ಮೋರ್ಚಾದಿಂದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಕೈ ಕಚೇರಿಗೆ ಕರಪತ್ರ ಅಂಟಿಸಲು ಬಿಜೆಪಿ ಪಕ್ಷದ 20 ಕ್ಕೂ ಹೆಚ್ಚು ಯುವ ಮೋರ್ಚಾ ಕಾರ್ಯಕರ್ತರು ತೆರಳಿದಾಗ ರಸ್ತೆಯಲ್ಲೇ ಪೊಲೀಸರು ತಡೆದರು ಈ ವೇಳೆ ಪೊಲೀಸರ ವಿರುದ್ಧವೇ ಘೋಷಣೆ ಕೂಗಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು, ಪೊಲೀಸರ ಸರ್ಪಗಾವಲಿನಲ್ಲೂ ಕರಪತ್ರ ಅಂಟಿಸಲು ಯತ್ನಿಸಲಾಯಿತು.

ಇಂದು ಬೆಳಗ್ಗೆ ಚಿಕ್ಕಮಗಳೂರು ನಗರದ ಅಲ್ಲಲ್ಲಿ ಕರಪತ್ರ ಅಂಟಿಸಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಬೇಕು ಎಂದು ಕರಪತ್ರ ಅಂಟಿಸಿದ್ದ ಬಿಜೆಪಿ ಯುವಮೋರ್ಚಾ ರನ್ನು ಪೊಲೀಸರು ಹುಡುಕುತ್ತಿದ್ದರು.

ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವು ಸಂವಿಧಾನ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದ್ದರು. ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ ವಿರುದ್ಧವೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದರು. ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಸಮೀಪಕ್ಕೆ ಹೋಗುವ ಮುನ್ನವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

Continue Reading

Chikmagalur

ಬಿಜೆಪಿ ಪಕ್ಷದ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್

Published

on

ಚಿಕ್ಕಮಗಳೂರು : ರಾಜಕೀಯ ದ್ವೇಷಕ್ಕೆ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪವನ್ನು ಮಾಡಿಸಿದ ತಪ್ಪಿಗೆ ಶೃಂಗೇರಿ ಗ್ರಾಮ ಪಂಚಾಯ್ತಿ ಸದಸ್ಯ ಶಬರೀಶ್ ಇದೀಗ ತಾನೆ ತಗಾಲಾಕಿಕೊಂಡಿದ್ದಾನೆ ಶಬರೀಶ್ ವಿರುದ್ಧವೇ ಫೋಕ್ಲೋ ಪ್ರಕರಣ ದಾಖಲಾಗಿದ್ದು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಕೇಸಲ್ಲಿ MLC ಸೂರಜ್ ರೇವಣ್ಣ ಬಂಧನ ಬೆನ್ನಲೇ ಕಾಫಿನಾಡಲ್ಲೂ ಬಿಜೆಪಿ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರಿಬ್ಬರ ಮೇಲೆ ದೌರ್ಜನ್ಯದ ಆರೋಪ ಎಂಬ ಸುದ್ದಿ ನಿನ್ನೆ ದಿನವಿಡೀ ಹರಿದಾಡಿತ್ತು, ಆದರೆ ದಾಲ್ ಮೆ ಕುಚ್ ಕಾಲಾ ಹೈ ಎಂದು ಅನಿಸಿತ್ತು ಅದು ಇಂದು ಸತ್ಯ ವಾಗಿದೆ. ಶೃಂಗೇರಿ ಬಿಜೆಪಿ ಪಕ್ಷದ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದಲಿತ ಬಾಲಕರ ಮೇಲೆ ಬಿಜೆಪಿ ಮುಖಂಡನಿಂದ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ

ಸಲಿಂಗಕಾಮಕ್ಕೆ ಅಪ್ರಾಪ್ತ ಬಾಲಕರನ್ನ ಬಳಸಿಕೊಂಡ ಆರೋಪ ಸುಳ್ಳಾಗಿದೆ. ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಅಪ್ರಾಪ್ತ ಬಾಲಕರ ವಿಡಿಯೋ ಮಾಡಿ ಅದು ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ್ದ ಶೃಂಗೇರಿ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕೌನ್ಸಿಲಿಂಗ್ ನಲ್ಲಿ ಸತ್ಯ ಬಯಲಾಗಿದೆ. ಅಪ್ರಾಪ್ತ ಬಾಲಕನ ಬಳಸಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಸಿದ್ದ ಇಬ್ಬರ ವಿರುದ್ಧ ಪೋಕೋ ಕೇಸ್ ದಾಖಲಾಗಿದೆ. ರಾಜಕೀಯ ದ್ವೇಷಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುವಂತೆ ಬಾಲಕರಿಗೆ ಧಮ್ಮಿ ಹಾಕಿ ವಿಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದ ಇಬ್ಬರ ವಿರುದ್ಧ FIR ದಾಖಲಾಗಿದೆ. ಇಬ್ಬರಲ್ಲಿ ಓರ್ವನ ಬಂಧನವಾಗಿದ್ದು ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಪ್ರಾಪ್ತ ಬಾಲಕರನ್ನ ಬಳಸಿಕೊಂಡು ದುರ್ಬಳಕೆಗೆ ಯತ್ನ ಮಾಡಿದ್ದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರರಿಂದ ಶೃಂಗೇರಿ ಪೊಲೀಸರಿಗೆ ದೂರು ನೀಡಲಾಗಿದೆ. ಗ್ರಾಮ ಪಂಚಾಯತಿ ಸದಸ್ಯ ಶಬರೀಶ್ ಹಾಗೂ ಸೂರ್ಯ ವಿರುದ್ಧ ರಾಘವೇಂದ್ರ ದೂರು ನೀಡಿದ್ದಾರೆ. ಸದ್ಯ ಶಬರೀಶ್ ನನ್ನು ಬಂಧಿಸಿರುವ ಶೃಂಗೇರಿ ಇನ್ಸ್‌ಪೆಕ್ಟರ್ ಜಿ.ಎಸ್ ಸಂದೀಪ್ ವಿಚಾರಣೆ ನಡೆಸುತ್ತಿದ್ದಾರೆ

. ಪಟ್ಟಣ ಪಂಚಾಯ್ತಿ ಸದಸ್ಯ ಹರೀಶ್ ಶೆಟ್ಟಿ ಹಾಗೂ ಶಬರೀಶ್ ನಡುವೆ ವೈಯಕ್ತಿಕ. ಹಾಗೂ ರಾಜಕೀಯ ದ್ವೇಷವಿತ್ತು.
ಸೂರಜ್ ರೇವಣ್ಣ ಪ್ರಕರಣ ಹೊರ ಬರುತ್ತಿದ್ದಂತೆ ಬಾಲಕರನ್ನ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿ ಶೃಂಗೇರಿ ಬಿಜೆಪಿ ಮುಖಂಡ ಹರೀಶ್ ಶೆಟ್ಟಿ ವಿರುದ್ಧ ಇದೇ ರೀತಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಸಿದ್ದ ಶಬರೀಶ್ ವಿರುದ್ಧ ಫೋಕೋ ಕೇಸ್ ದಾಖಲಾಗಿದೆ.

Continue Reading

Chikmagalur

ಲಾಂಗ್, ತಲವಾರ್ ಹಿಡಿದು ಹುಚ್ಚಾಟ, ಇಬ್ಬರ ಬಂಧನ

Published

on

ಚಿಕ್ಕಮಗಳೂರು : ಕಾರಿನಲ್ಲಿ ಲಾಂಗ್ ಇಟ್ಟುಕೊಂಡಿದ್ದ ಇಬ್ಬರು ಯುವಕರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಬೆಟ್ಟಗೆರೆ ನಿವಾಸಿ ಸೈಯ್ಯದ್ ಸಲ್ಮಾನ್ (22) ಹಾಗೂ ಮಹಮ್ಮದ್ ಸಾಧಿಕ್ (25) ಬಂಧಿತರು.

ಶೆಟ್ಟಿಕೊಪ್ಪ ಕಡೆಯಿಂದ ಕಾರಿನಲ್ಲಿ ಇಬ್ಬರು ಯುವಕರು ಲಾಂಗ್ ಇಟ್ಟುಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಬರುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಸೌತಿಕೆರೆ ಸಮೀಪ ವಾಹನ ಪರಿಶೀಲನೆ ನಡೆಸಿದಾಗ ಇಬ್ಬರು ಆರೋಪಿಗಳು ಕಾರಿನಲ್ಲಿ ಲಾಂಗ್ ಇಟ್ಟುಕೊಂಡಿರುವುದು ಪತ್ತೆಯಾಗಿದೆ.

ವಿಚಾರಿಸಿದಾಗ ನಮ್ಮನ್ನು ನೋಡಿ ಜನರು ಹೆದರಿಕೊಳ್ಳಲಿ ಎಂದು ಲಾಂಗ್ ತೋರಿಸಿಕೊಂಡು ಓಡಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಲಾಂಗ್ ಹಿಡಿದಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಅಪ್ ಲೋಡ್ ಮಾಡಿರುವುದು ತಿಳಿದುಬಂದಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Continue Reading

Trending

error: Content is protected !!