Connect with us

Mysore

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ : ಶಾಸಕ ಡಿ. ರವಿಶಂಕರ್

Published

on

ಶೈಕ್ಷಣಿಕ ಕ್ಷೇತ್ರಕ್ಕೆ ಅತೀ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಿ.ರವಿಶಂಕರ್ ರವರು ಹೇಳಿದರು.

ತಾಲ್ಲೂಕಿನ ಕರ್ಪೂರವಳ್ಳಿಯ ಜಗದ್ಗುರು ಶ್ರೀ ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಪೋಷಕರು ಮತ್ತು ಶಿಕ್ಷಕರು ಇಬ್ಬರು ಮಕ್ಕಳ ಭವಿಷ್ಯ ವನ್ನು ರೂಪಿಸುವವರು, ಹಾಗಾಗಿ ವಿದ್ಯಾಭ್ಯಾಸ ಮಾಡಿಸಿದಾಗ ಮಾತ್ರ  ಉನ್ನತ ಮಟ್ಟದ ಪದವಿಯನ್ನು ಪಡೆಯಲು ಸಹಾಯವಾಗುತ್ತದೆ ಎಂದರು.

ವಿದ್ಯೆ ಎಂಬುದು ಪ್ರತಿಯೊಬ್ಬರಿಗೂ ದೊಡ್ಡ ಆಸ್ತಿಯಾಗಿದೆ. ಅದನ್ನು ಕರ್ಪೂರವಳ್ಳಿ ಜಂಗಮ ಮಠದ ವಿದ್ಯಾ ಸಂಸ್ಥೆಯು ಉತ್ತಮವಾಗಿ ವಿದ್ಯಾರ್ಥಿಗಳಿಗೆ ನೀಡುವ ಕೆಲಸ ಮಾಡುವ ಮೂಲಕ ಇತರೆ ಶಾಲಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಹಲವು ಗಣ್ಯರುಗಳನ್ನು ಸನ್ಮಾನಿಸಿ ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕರ್ಪೂರವಳ್ಳಿ ಜಂಗಮ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ವಹಿಸಿದ್ದರು.

 

+ಸಮಾರಂಭದಲ್ಲಿ ಕೆ.ಆರ್.ನಗರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್,  ತಾ. ಪಂ. ಮಾಜಿ ಅಧ್ಯಕ್ಷರಾದ ಹಾಡ್ಯ ಮಹದೇವಸ್ವಾಮಿ,

ಹೆಚ್.ಟಿ.ಮಂಜಪ್ಪ, ಚಂದ್ರಶೇಖರ,  ಸಾಲಿಗ್ರಾಮ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾಯನಹಳ್ಳಿ ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ವಕ್ತಾರ ಸಯ್ಯದ್ ಜಾಬೀರ್, ಸಣ್ಣಪ್ಪ, ಧರ್ಮ,ಪಶುಪತಿ ರವಿ, ಲೋಕೇಶ್

ಗ್ರಾ.ಪಂ. ಸದಸ್ಯರುಗಳಾದ ರುಕ್ಮಿಣಿ ಶ್ರೀನಿವಾಸ್, ಜಬೀರ್ ಖಾನ್, ಗೌರಮ್ಮ ರಾಜಯ್ಯ, ಪಿಡಿಓ ಮಂಜುನಾಥ್, ಮುಖಂಡ

ಬಿ.ಟಿ.ಮೋಹನ್ ಕುಮಾರ್, ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕರುಗಳು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹಲವರು ಭಾಗವಹಿಸಿದ್ದರು

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ 

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

Published

on

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

ಬಳಿಕ ಸಚಿವ ವೆಂಕಟೇಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಸಾಕುತ್ತಿದ್ದು ಅದರಲ್ಲೇ ಜೀವನ ಸಾಗಿಸುತ್ತಾರೆ ಈ ಗ್ರಾಮದಿಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸುಮಾರು 20 ಕಿ ಮೀ ದೂರ ಹೋಗಬೇಕಾದ ದೃಷ್ಟಿಯಿಂದ ಈ ಕ್ಷೇತ್ರದ ಶಾಸಕರು ಒತ್ತಾಡದ ಮೇರೆಗೆ ಈ ಗ್ರಾಮಕ್ಕೆ ಪಶು ಸಂಗೋಪನೆ ಆಸ್ಪತ್ರೆಗೆ ಅನುದಾನ ನೀಡಲಾಗಿದೆ ಪ್ರತಿಯೊಬ್ಬ ರೈತರು ಸದ್ದುಪಯೋಗ ಪಡೆದುಕೊಳ್ಳಿ ಎಂದರಲ್ಲದೆ ನಮ್ಮ ಸರ್ಕಾರದಿಂದ ಜಾನುವಾರುಗಳು ಸಾವನ್ನಾಪ್ಪಿದರೆ 10 ಸಾವಿರ ಪರಿಹಾರ ನೀಡಲಾಗುತ್ತಿದೆ ಕುರಿ ಸಾವನ್ನಾಪ್ಪಿದರೆ 5 ಸಾವಿರ ಪರಿಹಾರವನ್ನು ನಮ್ಮ ಸರ್ಕಾರ ನೀಡುತ್ತಿದೆ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಮತ್ತೊಂದು ಆಸ್ಪತ್ರೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ ಕಾಡಾಂಚಿನ ಗ್ರಾಮದಲ್ಲಿ ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ತುಂಭಾ ತೊಂದರೆಯಾಗಿರುವ ಬಗ್ಗೆ ನನಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಚಿವರ ಗಮನಕ್ಕೆ ತಂದು ಆಸ್ಪತ್ರೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಕ್ಷೇತ್ರದ ಅಭಿವೃದ್ಧಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್,
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅದ್ಯಕ್ಷರಾದ ಕೆ ಜಿ ಮಹೇಶ್, ಶ್ರೀಕಂಠನಾಯಕ,ಗ್ರಾ ಪಂ ಅದ್ಯಕ್ಷ ಹರೀಶ್ ಕುಮಾರ್, ಸದಸ್ಯ ಕೃಷ್ಣಮೂರ್ತಿ,ಮಹದೇವು,ನಿಂಗಮಣಿ,ಮುಖಂಡರುಗಳಾದ ದೊರೆಸ್ವಾಮಿ ನಾಯಕ,ಸೇರಿದಂತೆ ಪ್ರಮುಖರು ಹಾಜರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ಕಳ್ಳಿಮುದ್ದನಹಳ್ಳಿ ಸಣ್ಣ ಜವರಯ್ಯ ನಿಧನ 

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ತಾಲೂಕಿನ ಕಳ್ಳಿಮುದ್ದನಹಳ್ಳಿ ಗ್ರಾಮದ ಸಣ್ಣ ಜವರಯ್ಯ (74 ವರ್ಷ ) ನಿಧಾನರಾದರು.

ಮೃತರು, ಪತ್ನಿ, ದಲಿತ ಸಂಫರ್ಷ ಸಮಿತಿ (ಅಂಭೇಡ್ಕರ್ ವಾದ)  ಸಂಘಟನೆಯ ಜಿಲ್ಲಾ ಸಂಚಾಲಕ ಚಂದ್ರು, ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನೆರವೇರಿತು.

ಎಸ್ ಸಿ ಘಟಕದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್, ಪತ್ರಕರ್ತರಾದ ಎಸ್ ಬಿ ಹರೀಶ್,ಲಕ್ಕಿಕುಪ್ಪೆ ರಮೇಶ್, ರಾಂಪುರ ಲೋಕೇಶ್ ಸಂತಾಪ ಸೂಚಿಸಿದ್ದಾರೆ.

Continue Reading

Mysore

ಟ್ರ್ಯಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Published

on

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ : ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಚಾಲಕ  ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹಳೆ ಮಿರ್ಲೆ ಗ್ರಾಮದಲ್ಲಿ  ನಡೆದಿದೆ.


ಘಟನೆಯಲ್ಲಿ ಗ್ರಾಮದ ಕುಮಾರ್ ಎಂಬುವರ‌ ಪುತ್ರ ಮನೋಜ್ (23) ಎಂಬಾತನೇ ಮೃತಪಟ್ಟವನಾಗಿದ್ದಾನೆ.
ಮೃತ ಮನೋಜ್ ಜಮೀನು ಒಂದನ್ನು ಉಳುಮೆ ಮಾಡಲು ಚಾಮರಾಜ ನಾಲೆಯ ಏರಿಯ ಮೇಲೆ ಹೋಗುತ್ತಿದ್ದಾಗ ಆಕ್ಮಸಿಕವಾಗಿ ಟ್ಯಾಕ್ಟರ್ ಜಮೀನಿಗೆ ಉರುಳಿ, ಈ ಅವಘಡ ಸಂಭವಿಸಿದೆ.


ಘಟನೆ ನಡೆದ ತಕ್ಷಣವೇ ಮಗುಚಿ ಬಿದ್ದ ಟ್ಯಾಕ್ಟರ್ ನ ಅಡಿಯಲ್ಲಿ ಸಿಲುಕಿದ್ದ ಮನೋಜ್ ನನ್ನ ಮೇಲಕ್ಕೆ ಎತ್ತಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ನಗರ ಆಸ್ವತ್ರೆಗೆ ಕರೆತಂದರು ಯಾವುದೇ ಪ್ರಯೋಜನವಾಗಲಿಲ್ಲ.
ಘಟನೆಯ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!