Kodagu
ಶನಿವಾರಸಂತೆಯಲ್ಲಿ ಕಾರ್ಗಿಲ್ ದಿನ ಆಚರಣೆ

ಶನಿವಾರಸಂತೆ : ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ ವತಿಯಿಂದ ಬುಧವಾರ ನಿವೃತ್ತ ಸೈನಿಕರ ಸಂಘದ
ಕಛೇರಿಯಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ನಿವೃತ್ತ ಸೈನಿಕ ಸಂಘದ ಕಚೇರಿ ಮುಂಭಾಗದಲ್ಲಿ ಅಳವಡಿಸಿದ ಭಾರತೀಯ ಸೈನಿಕ ಲಾಂಛನಕ್ಕೆ ನಿವೃತ್ತ ಸೈನಿಕರು
ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಗಿಲ್ ಯುದ್ದಲ್ಲಿ ಮಡಿದ ಸೈನಿಕರಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ನಂತರ ನಡೆದ ಸಭೆಯಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎ.ಎಸ್.ಮಹೇಶ್ ಮಾತನಾಡಿ, ೧೯೯೯ರಲ್ಲಿ ನಡೆದ ಕಾರ್ಗಿಲ್
ಯುದ್ದದಲ್ಲಿ ನಮ್ಮ ದೇಶದ ವೀರ ಸೈನಿಕರು ಕುತಂತ್ರಿ ಪಾಕಿಸ್ತಾನದ ಸೈನಿಕರನ್ನು ಸೋಲಿಸಿದರು. ಆದರೆ
ಯುದ್ದದಲ್ಲಿ ಐನೂರುಕಿಂತ ಹೆಚ್ಚಿನ ನಮ್ಮ ಸೈನಿಕರು ವೀರ ಮರಣ ಹೊಂದಿದರು. ಸುಮಾರು ಐನೂರು ಸೈನಿಕರು
ಗಾಯಗೊಂಡಿದ್ದರು. ಕಾರ್ಗಿಲ್ ಯುದ್ದದಲ್ಲಿ ನಮ್ಮ ಸೈನಿಕರು ವಿಜಯಿಗಳಾಗಿದ್ದರು ಇದರ ಅಂಗವಾಗಿ ಕಾರ್ಗಿಲ್
ವಿಜಯೋತ್ಸವದ ದಿವನ್ನಾಗಿ ಜು೨೬ ರಂದು ಆಚರಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಮತ್ತು ಯುವಕರು ದೇಶ ಸೇವೆ ಮಹತ್ವದ ಬಗ್ಗೆ ಅರಿತುಕೊಂಡರೆ ರಾಷ್ಟç ಪ್ರೇಮ
ಬೆಳೆಯುತ್ತದೆ ಹಾಗೂ ಸೇನೆಗೆ ಸೇರಲು ಆಸಕ್ತಿವಹಿಸಬೇಕಿದೆ ಪೋಷಕರು ತಮ್ಮ ಮಕ್ಕಳನ್ನು ಸೇನೆಗೆ
ಸೇರುವಂತೆ ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎನ್.ಗಂಗಾಧರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ
ಎಸ್.ಎನ್.ಪಾಂಡು, ಪದಾಧಿಕಾರಿಗಳಾದ ಕೆ.ಡಿ.ಚಂದ್ರಪ್ಪ, ತಿಮ್ಮಯ್ಯ, ಗಿರೀಶ್, ಪ್ರಸನ್ನ, ಆನಂದ್, ಸಂಘದ ಸದಸ್ಯರು
ಪಾಲ್ಗೊಂಡಿದ್ದರು.
Kodagu
ಮೂರ್ನಾಡು ಮಡಿಕೇರಿ ಮುಖ್ಯ ರಸ್ತೆಯಲ್ಲಿ ಕಾರು ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ-ಕಾರು ಚಾಲಕ ಗಂಭೀರ

ನಾಪೋಕ್ಲು : ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಮೂರ್ನಾಡು ಮಡಿಕೇರಿ ಮುಖ್ಯರಸ್ತೆಯ ಮುತ್ತಾರುಮುಡಿ ಎಂಬಲ್ಲಿ ನಡೆದಿದೆ.
ಮೂರ್ನಾಡು ಕಡೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರು ಹಾಗೂ ಮಡಿಕೇರಿ ಕಡೆಯಿಂದ ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಹಾಗೂ ಬಸ್ಸಿನ ಮುಂಭಾಗ ಜಖಂಗೊಂಡಿದ್ದು ಕಾರು ಚಾಲಕ ಎಮ್ಮೆಮಾಡು ಗ್ರಾಮದ ನಿವಾಸಿ ಇಬ್ರಾಹಿಂ ಸಅದಿ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Crime
ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ವ್ಯಕ್ತಿ ಬಂಧನ

ವಿರಾಜಪೇಟೆ : ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಅಸ್ಸಾಂ ರಾಜ್ಯದ ಅಬ್ದುಲ್ ಮಜೀದ್ (31) ಬಂಧಿತ ಆರೋಪಿ. ಆರೋಪಿಯನ್ನು 300 ಗ್ರಾಂ ಗಾಂಜಾದೊAದಿಗೆ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುವ ಹಿನ್ನೆಲೆ ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್ ಮೋಹನ್ ಕುಮಾರ್ ಹಾಗೂ ಇತರ ಸಿಬ್ಬಂದಿಗಳ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಡಿ. 4 ರಂದು ಕಡಂಗಮರೂರು-ಬೆಳ್ಳುಮಾಡು ಜಂಕ್ಷನ್ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Kodagu
ಅನುಮಾನಸ್ಪದವಾಗಿ ವೈದ್ಯನ ಮೃತದೇಹ ಪತ್ತೆ

ಮಡಿಕೇರಿ: ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 275 ರ
ಆನೆಕಾಡು ಬಳಿ ರಸ್ತೆ ಬದಿ ನಿಂತಿದ್ದ ಕಾರಿನಲ್ಲಿ ಪಿರಿಯಾಪಟ್ಟಣ ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ.ಸತೀಶ್ ಮೃತದೇಹ ಅನುಮಾನಸ್ಪದವಾಗಿ ಪತ್ತೆಯಾಗಿದೆ.
ಮೂಲತಹ ಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಶಿವಳ್ಳಿ ಗ್ರಾಮದವರಾದ ಡಾ. ಸತೀಶ್ (47) ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೊಣಸುಾರು ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು ಪಟ್ಟಣದ ತಾಲೂಕು ಆಯುರ್ವೇದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಘಟನೆ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಕಡೆಯವವರಿಗೆ ಮಾಹಿತಿ ನೀಡಿದ್ದಾರೆ
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Mysore4 days ago
ಮುಖ್ಯ ಶಿಕ್ಷಕ ಮತ್ತು ಡಿ ದರ್ಜೆ ನೌಕರ, ಶಾಲಾ ಪ್ರವಾಸದ ಸಂದರ್ಭ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ – ಆರೋಪ
-
Hassan1 day ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore4 days ago
ಹಳೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ದರಿದ್ರ ನನಗೆ ಬಂದಿಲ್ಲ, ಹೊಸದಾಗಿ ತರುವ ತಾಕತ್ತು ನನಗೆ ಇದೆ – ಶಾಸಕ ಡಿ. ರವಿಶಂಕರ್