Connect with us

Uncategorized

ವಿಶ್ವ ವಿಖ್ಯಾತ ಜಂಬೂ ಸವಾರಿಯಲ್ಲಿ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ನೂರಕ್ಕೂ ಹೆಚ್ಚು ಕಲಾ ಪ್ರಕಾರಗಳನ್ನು ಕಲಾತಂಡಗಳು ಪ್ರದರ್ಶಿಸಿದವು.

Published

on

ಮೈಸೂರು:
ಮಂಡ್ಯ ಅರ್ಕೇಶ್ವರನಗರದ ಲೋಕೇಶ್‌ ಕಲಾವಿದರ ವೀರಗಾಸೆ, ಬಾಗಲಕೋಟೆಯ ಸೋಮನಕೊಪ್ಪದ ಶ್ರೀ ಬೀರಲಿಂಗೇಶ್ವರ ತಂಡದ ಡೊಳ್ಳು ಕುಣಿತ, ಬಳ್ಳಾರಿ ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುದಾಯದ ಹಕ್ಕಿ ಪಿಕ್ಕಿ ನೃತ್ಯ, ಡಾ.ಬಿ.ರಾಮಾಂಜನೇಯ ತಂಡದ ಪೋಟಿ ವೇಷ, ಬೆಳಗಾವಿಯ ಶ್ರೀ ಮಾಂತೇಷ ಬಡಿಗರ ಅವರ ಝಾಂಕ್‌ ಪಥಕ್‌, ಮೈಸೂರು ತಲಕಾಡು ಕೃಷ್ಣಮೂರ್ತಿಯವರ ಕಂಸಾಳೆ, ರಾಮನಗರ ಜಿಲ್ಲೆಯ ತೂಬಿನಕೆರೆಯ ಶ್ರೀ ಬೈರವೇಶ್ವರ ಸಾಂಸ್ಕೃತಿ ಕಲಾ ತಂಡದ ಸೋಮನ ಕುಣಿತ, ಬೆಂಗಳೂರು ನೆಲಮಂಗಲದ ಶ್ರೀ ಹನುಮಂತ ರಾಮಣ್ಣ ತಂಡದ ಸೋಮನ ಕುಣಿತ, ಬೆಂಗಳೂರಿನ ಶ್ರೀ ಕೃಷ್ಣ ಜನಪದ ತಂಡದ ನವಿಲು ನೃತ್ಯ, ಕೋಲಾರ ಜಿಲ್ಲೆಯ ಕೀಲು-ಕುದುರೆ ಸಂಘದ ಗಾರುಡಿ ಗೊಂಬೆ, ಬೀದರ್‌ ಜಿಲ್ಲೆಯ ಜೈ ಭವಾನಿ ರಂಗಭೂಮಿ ಕಲಾವಿದರ ಸಂಘದ ಹಲಗೆ ಮೇಳ, ಚಾಮರಾಜನಗರ ರಾಮಸಮುದ್ರದ ಗೊರವನ ಕುಣಿತ ಹಾಗೂ ಗೊರಕನನೃತ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಗಾರುಡಿ ಗೊಂಬೆ, ಬಾಗಲಕೋಟೆಯ ಜಿಲ್ಲೆಯ ಕರಡಿ ಮಜಲು, ಮಂಡ್ಯದ ರಂಗ ಕುಣಿತ, ಚಿಕ್ಕಮಗಳೂರಿನ ವೀರಭದ್ರ ಕುಣಿತ, ಚಿಕ್ಕಮಗಳೂರಿನ ಹಲಗೆ ಮೇಳ ಜನಮನ ಗೆದ್ದವು.
ಚಿತ್ರದುರ್ಗದ ಖಾಸಬೇಡರ ಪಡೆ ನೃತ್ಯ, ನಂಜನಗೂಡಿನ ತಮಟೆ-ನಗಾರಿ, ದಕ್ಷಿಣ ಕನ್ನಡ ಜಿಲ್ಲೆಯ ಕಂಗಿಲು ಕುಣಿತ, ನರಸೀಪುರ ತಾಲ್ಲೂಕಿನ ಸ್ಯಾಕ್ಲೋಫೋನ್‌, ದಾವಣಗೆರೆ ಜಿಲ್ಲೆಯ ಡೊಳ್ಳು ಕುಣಿತ, ಬಳ್ಳಾರಿ ಜಿಲ್ಲೆಯ ಹಗಲು ವೇಷ ಕುಣಿತ, ಧಾರವಾಡ ಜಿಲ್ಲೆಯ ಜಗ್ಗಲಗೆ ಮೇಳ, ಗದಗ ಜಿಲ್ಲೆಯ ಕರಡಿ ಮಜ್ಜಲು, ಉತ್ತರ ಕನ್ನಡ ಜಿಲ್ಲೆಯ ಗೊಂಡರ ಡಕ್ಕೆ, ಹಾಸನದ ಸೋಮನ ಕುಣಿತ, ಕಲುಬುರಗಿ ಹಾಗೂ ಧಾರವಾಡ ಜಿಲ್ಲೆಯ ಲಂಬಾಣಿ ನೃತ್ಯ, ಸೋಮವಾರ ಪೇಟೆಯ ಮಲೆನಾಡ ಸುಗ್ಗಿ ಕುಣಿತ, ಕೊಡಗು ಬುಡಕಟ್ಟಿನ ನೃತ್ಯ, ಕೋಲಾರದ ಗಾರುಡಿ ಗೊಂಬೆ, ಬೆಳಗಾವಿ ಡೊಳ್ಳು ಕುಣಿತ, ಮಂಡ್ಯ ಜಿಲ್ಲೆಯ ದೊಣ್ಣೆ ವರಸೆ, ಪಟ ಕುಣಿತ, ಮೈಸೂರಿನ ವೀರಭದ್ರ ಕುಣಿತ, ಪೂಜಾ ಕುಣಿತ, ತಮಟೆ-ನಗಾರಿ ಹಾಗೂ ಕಂಸಾಳೆ, ರಾಯಚೂರಿನ ಹಗಲು ವೇಷ, ರಾಮನಗರದ ಕೋಳಿನೃತ್ಯ, ಶಿವಮೊಗ್ಗದ ಡೊಳ್ಳು ಕುಣಿತ, ಬೆಳಗಾವಿಯ ಝಾಂಕ್‌ ಪಥಕ್‌, ಉಡುಪಿಯ ಗುಮಟೆ ನೃತ್ಯ, ಮಹಿಳಾ ಚಂಡೆ, ಉತ್ತರ ಕನ್ನಡ ಜಿಲ್ಲೆಯ ಗೊಂಡರ ಡಕ್ಕೆ, ಶಿರಸಿಯ ಬೇಡರ ವೇಷ ಈ ನೆಲದ ಸಂಸ್ಕೃತಿ ತೋರಿದವು.
ವಿಜಯಪುರದ ಸುತ್ತಿಗ ಕುಣಿತ, ಹೆಜ್ಜಿಮೇಳ, ವಿಜಯನಗರ ಜಿಲ್ಲೆಯ ಲೇಂಗಿ ನೃತ್ಯ, ನಾಗಪುರದ ತಪ್ಪಟಂ/ಒಯಿಲಾಟಂ ಫುಡ್ಕ/ಧಾಫ್‌ ನೃತ್ಯ, ಡಾಂಗಿ ಡಾಂಗಿ ನೃತ್ಯ, ಗೋಕಾಕ್‌ನ ಝಾಂಜ್‌ ಪಥಕ್‌, ಚಿತ್ರದುರ್ಗದ ಉದಮೆ ಅರೆವಾದ್ಯ, ಬೆಳಗಾವಿಯ ಜಗ್ಗಲಗೆ ಮೇಳ, ಕೊಪ್ಪಳದ ಹಗಲು ವೇಷ, ಬಾಗಲಕೋಟೆಯ ಮುಳ್ಳುಕುಣಿತ, ಚಿಕ್ಕಮಗಳೂರು ಜಿಲ್ಲೆಯ ಚಿಟ್ಟೆಮೇಳ, ಹುಬ್ಬಳ್ಳಿಯ ದಾಲಪಟ, ಜೋಗತಿ ನೃತ್ಯ, ಬೆಳಗಾವಿಯ ದಟ್ಟಿ ಕುಣಿತ, ಹಾಸನ ನಂದಿಕೋಲು, ದೊಡ್ಡ ಹೊಸಗಾವಿಯ ಕರಗ ಕೋಲಾಟ, ರಾಯಚೂರಿನ ಖಣಿವಾದನ, ಬಾಗಲಕೋಟೆಯ ಡಮಾಮಿ ನೃತ್ಯ, ಹೂವಿನ ನೃತ್ಯ, ಬೆಳಗಾವಿಯ ಕರ್ಬಲ್‌ ಕುಣಿತ, ನಾಗಪುರದ ಫೂಮರ್‌ ನೃತ್ಯ, ಗಿಡ್ಡ ಲೂಡ್ಡಿ ನೃತ್ಯ, ಧಾರವಾಡದ ಕಥಕಳಿ ಗೊಂಬೆ ಪ್ರದರ್ಶನ, ಮೈಸೂರು ಜಿಲ್ಲೆಯ ಮರಗಾಲು ಸವಾರಿ ಜನಸ್ತೋಮ ಕಣ್ತುಂಬಿಕೊಂಡರು.

Continue Reading
Click to comment

Leave a Reply

Your email address will not be published. Required fields are marked *

Uncategorized

ಬಿರಿಯಾನಿ ತಿಂದು ೧೭ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Published

on

ಚಿಕ್ಕಮಗಳೂರು : ಬಿರಿಯಾನಿ ತಿಂದು 17 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

ಒಂದು ದಿನ ಹಿಂದೆ ಮಾಡಿದ್ದ ಬಿರಿಯಾನಿ ತಿಂದಿದ್ದ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಬಿರಿಯಾನಿ ಸೇವಿಸಿದವರಲ್ಲಿ 17 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಡೂರು ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಶುಭಕಾರ್ಯ ಮುಗಿಸಿ ಸಂಜೆ ಸಂಬಂಧಿಕರಿಗಾಗಿ ಬಿರಿಯಾನಿ ಮಾಡಲಾಗಿತ್ತು. ಆದರೆ, ಬಿರಿಯಾನಿಯನ್ನು ತಿಂದ ಕೂಡಲೇ ವಾಂತಿ ಭೇದಿಯಾಗಿದೆ.
ತಕ್ಷಣ ಅಸ್ವಸ್ಥಗೊಂಡವರನ್ನು ಕಡೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕ್ಕ ಪುಟ್ಟ ಮಕ್ಕಳು ಸೇರಿದಂತೆ 17 ಜನ ಅಸ್ವಸ್ಥಗೊಂಡು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ, ಇನ್ನೂ ವಿಷಯ ತಿಳಿಯುತ್ತಿದ್ದಂತೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ

Continue Reading

Uncategorized

ಮಾದಕ ವಸ್ತು ಮಾರಾಟ ಮಾಡುತಿದ್ದ ಇಬ್ಬರ ಬಂಧನ

Published

on

ಮಡಿಕೇರಿ : ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹೆಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ನ. 19 ರಂದು ಮಡಿಕೇರಿ – ಮಂಗಳೂರು ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಕುಂಜಿಲ ನಿವಾಸಿ ನೌಫಲ್ (25), ಎಮ್ಮೆಮಾಡು ಪೈಸಾರಿ ನಿವಾಸಿ ಸಾದಿಕ್ (32) ಎಂಬುವವರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಜಿಲಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.

Continue Reading

Uncategorized

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೀರ್ಣೋದ್ಧಾರ ಹಾಗೂ ಕಳಸ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Published

on

ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಚನ್ನರಾಯಪಟ್ಟಣ ತಾಲ್ಲೂಕು ಅತ್ತಿಹಳ್ಳಿ ಗ್ರಾಮದ
ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವಸ್ಥಾನದ
ಜೀರ್ಣೋದ್ಧಾರ ಹಾಗೂ ಕಳಸ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೊತೆಯಲ್ಲಿ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ ರವರು ಹಾಗೂ ಗ್ರಾಮಸ್ಥರು ಇದ್ದರು.

Continue Reading

Trending

error: Content is protected !!