Connect with us

Education

ವಿಶ್ವವಿದ್ಯಾಲಯ ಸದ್ಯದರಲ್ಲೇ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಿದೆ.

Published

on

ಮೈಸೂರು: ಪ್ರಶ್ನೆ ಪತ್ರಿಕೆ ಮಾರಾಟವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಬಿಕಾಂ ಕಂಪ್ಯೂಟರ್ ಇನ್ ಬ್ಯುಸಿನೆಸ್ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲು ನಿರ್ಧರಿಸಿದೆ. ವಿಶ್ವವಿದ್ಯಾಲಯ ಸದ್ಯದರಲ್ಲೇ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಿದೆ.

ಪ್ರಶ್ನೆ ಪತ್ರಿಕೆ ಮಾರಾಟ ಪ್ರಕರಣದಲ್ಲಿ ಜಯಲಕ್ಷ್ಮಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನವೀನ್, ಮುರುಳೀಧರ್ ಬಂಧಿತ ಆರೋಪಿಗಳು.

ಪ್ರಶ್ನೆ ಪತ್ರಿಕೆ ಮಾರಾಟ

ಪರೀಕ್ಷೆಗೆ ಒಂದು ದಿನ ಮೊದಲೇ ವಿಶ್ವವಿದ್ಯಾಲಯದ ಬಿಕಾಂನ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪ್ರಶ್ನೆ ಪತ್ರಿಕೆ ಮಾರಾಟವಾಗಿತ್ತು. ಕೆಎಸ್‌ ಓಯು ಮಂಗಳೂರು ಕೇಂದ್ರದ ಸಿಬ್ಬಂದಿ 2000 ರೂ.ಗೆ ಮಾರಾಟ ಮಾಡಿದ್ದಾರೆ.

ಆರೋಪಿಗಳನ್ನು ಪರಿಶೀಲನೆ ಮಾಡಲು ಹಣ ನೀಡಿ ಪ್ರಶ್ನೆ ಪತ್ರಿಕೆ ಖರೀದಿಸಿದ್ದು, ಪರೀಕ್ಷೆ ದಿನ ನೀಡಿದ ಪ್ರಶ್ನೆ ಪತ್ರಿಕೆ ಹಾಗೂ ಮಾರಾಟವಾದ ಪ್ರಶ್ನೆ ಪತ್ರಿಕೆ ಎರಡು ಒಂದೇ ಆಗಿದ್ದವು. ಈ ಬಗ್ಗೆ ವಿದ್ಯಾರ್ಥಿ ಚಂದು.ಹೆಚ್.ಎಸ್. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Education

ದ್ವಿಚಕ್ರ ವಾಹನ ಖರೀದಿಸಲು ಕೇಂದ್ರದಿಂದ 32,500ರೂ. ತನಕ ಸಹಾಯಧನ : ಅರ್ಜಿ ಸಲ್ಲಿಸೋದು ಹೇಗೆ?

Published

on

PM E Drive Scheme : ದೇಶದಲ್ಲಿ ವಿದ್ಯುತ್ ಚಲನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಾನ್ಯ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟವು ಸೆಪ್ಟೆಂಬರ್ 11, 2024ರಂದು PM ಎಲೆಕ್ಟ್ರಿಕ್ ಡ್ರೈವ್ ಎಂಬ ಯೋಜನೆಗೆ ಅನುಮೋದನೆ ನೀಡಿತು. ಈ ಯೋಜನೆಯು ಎರಡು ವರ್ಷದ ಅವಧಿಯಲ್ಲಿ ಒಟ್ಟು ₹10,900 ಕೋಟಿ ಆರ್ಥಿಕ ವೆಚ್ಚವನ್ನು ಹೊಂದಿದೆ.

ಪಿ. ಎಂ. ಇ ಡ್ರೈವ್ ಯೋಜನೆಯ ಉದ್ದೇಶ :

ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳಿಂದ ಪರಿಸರದ ಮಾಲಿನ್ಯದ ಹೆಚ್ಚಾಗುತ್ತಿದ್ದೂ, ಇದನ್ನು ಹತೋಟಿಗೆ ತರಲು ಮತ್ತು ವಿದ್ಯುತ್ ಚಾಲಿತ ವಾಹನ ಉಪಯೋಗವನ್ನು ಹೆಚ್ಚಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಈ ಯೋಜನೆಯ ಅಡಿಯಲ್ಲಿ ವಿವಿಧ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಕೇಂದ್ರ ಸರ್ಕಾರವು 32,500ರೂ. ವರೆಗೆ ಸಬ್ಸಿಡಿ ನೀಡುತ್ತಿದೆ.

ಯಾವ ವಾಹನಗಳಿಗೆ ಎಷ್ಟು ಸಬ್ಸಿಡಿ ?

• ಎಲೆಕ್ಟ್ರಿಕ್ ದ್ವಿ-ಚಕ್ರ ವಾಹನ ಖರೀದಿಸುವವರಿಗೆ ಮೊದಲ ವರ್ಷದಲ್ಲಿ 10,000ರೂ. ಹಾಗೂ ಎರಡನೇ ವರ್ಷ 5,000ರೂ. ನೀಡಲಾಗುವುದು.
• ತ್ರಿ-ಚಕ್ರ ವಾಹನಗಳಿಗೆ ಮೊದಲ ವರ್ಷ 25,000ರೂ. ಹಾಗೂ ಎರಡನೇ ವರ್ಷ 12,500ರೂ. ನೀಡಲಾಗುತ್ತದೆ.

ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಯ ಅಡಿಯಲ್ಲಿ ಲಾಭ ಪಡೆಯಲು ಮೊದಲು ನಿಮ್ಮ ವಿದ್ಯುತ್ ವಾಹನವನ್ನು ನಿಮ್ಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಮಾಡಿಸಿರಿ. ನಂತರದಲ್ಲಿ ನಿಮ್ಮ ವಾಹನದ ಡಿಲರ್ ನಿಮ್ಮ ಆಧಾರ್ ಸಂಖ್ಯೆ ಬಳಸಿ ನಿಮಗೆ e-Voucher ನೀಡುತ್ತಾರೆ.

ಇದರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ – https://pmedrive.heavyindustries.gov.in/

Continue Reading

Education

ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಸರ್ಕಾರದಿಂದ ಮಹಿಳೆಯರಿಗೆ ಕೊಡುಗೆ : ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಜಮಾ!

Published

on

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಇಲ್ಲಿಯವರೆಗೆ 15 ಕಂತಿನಲ್ಲಿ 30,000ರೂ. ನೀಡಲಾಗಿದೆ.

ಈ ಯೋಜನೆಯ ಹಣವನ್ನು ಪ್ರತಿ ತಿಂಗಳು ಅರ್ಹ ಮಹಿಳಾ ಪಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆಯ (DBT – Direct Benefit Transfer) ಮುಕಾಂತರ 2,000ರೂ. ಹಣವನ್ನು ಜಮಾ ಮಾಡಲಾಗುತ್ತಿದೆ.

16ನೇ ಕಂತಿನ ಹಣವನ್ನು ಯಾವಾಗ ಜಮಾ ಮಾಡಲಾಗುವುದು?

ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣವನ್ನು ಪ್ರತಿ ತಿಂಗಳು 11ನೇ ತಾರೀಕಿನಿಂದ 16ನೇ ತಾರೀಕಿನ ಒಳಗಾಗಿ ಜಮಾ ಮಾಡಲಾಗುತ್ತಿದೆ. ಅದೇ ರೀತಿ ಈ 16ನೇ ಕಂತಿನ 2,000ರೂ. ಹಣವನ್ನು ಜನವರಿ 11, 2025ರಿಂದ ಜನವರಿ 16, 2025ನೇ ತಾರೀಕಿನ ಒಳಗಾಗಿ ಜಮಾ ಮಾಡಲಾಗುವುದು…

Continue Reading

Education

ಯುವನಿಧಿ ಯೋಜನೆಯ ಅರ್ಜಿ ಸಲ್ಲಿಕೆ ಕುರಿತು ಸರ್ಕಾರದಿಂದ ಹೊಸ ಆದೇಶ : ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಮಾಸಿಕ 3,000ರೂ.

Published

on

Yuva Nidhi Scheme 2025 – ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಯುವ ನಿಧಿ” ಯೋಜನೆಯ ಅರ್ಜಿ ಅಹ್ವಾನದ ಕುರಿತು ಕರ್ನಾಟಕ ಸರ್ಕಾರವು ನೂತನ ಪ್ರಕಟಣೆಯನ್ನು ಹೊರಡಿಸಿದ್ದು, ಇದರ ಮಾಹಿತಿ ಇಲ್ಲಿದೆ..

ಪ್ರಕಟಣೆಯಲ್ಲಿ ಏನಿದೆ?

2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 5,27,273 ಅಭ್ಯರ್ಥಿಗಳ ಮಾಹಿತಿ ನ್ಯಾಡ್ ಪೋರ್ಟಲ್ ನಲ್ಲಿ ಅಪ್ಲೋಡ್ ಆಗಿದ್ದರೂ ಕೂಡ ಬಹಳಷ್ಟು ಅರ್ಹತೆ ಹೊಂದಿರುವ ಯುವಜನರು ಯುವನಿಧಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿಲ್ಲ.

ಆದ್ದರಿಂದ ಯುವನಿಧಿ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಿ ಎಂಬ ಉದ್ದೇಶದಿಂದ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯು “ಯುವನಿಧಿ ವಿಶೇಷ ನೋಂದಣಿ ಅಭಿಯಾನ” ವನ್ನು ಜನವರಿ 06, 2025 ರಿಂದ ಜನವರಿ 20, 2025 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ.

ಕಾಲೇಜು ಮತ್ತು ಸ್ಥಳೀಯ ಪ್ರದೇಶಗಳಲ್ಲಿ ಬ್ಯಾನರ್, ಪೋಸ್ಟರ್ ಸೇರಿದಂತೆ ವಿವಿಧ ಮಾಧ್ಯಮದ ಮುಕಾಂತರ ವ್ಯಾಪಾಕ ಪ್ರಚಾರ ಮಾಡಲು ಸೂಚಿಸಿದೆ. ಇದರಿಂದ ಹೆಚ್ಚು ವಿದ್ಯಾರ್ಥಿಗಳಿಗೆ ಈ ಯೋಜನೆಯ ಸಿಗಲಿ ಎಂಬ ಉದ್ದೇಶ ಶಿಕ್ಷಣ ಇಲಾಖೆಯದ್ದಾಗಿದೆ.

ಈ ಯೋಜನೆಯಲ್ಲಿ ಯಾರಿಗೆ ಎಷ್ಟು ರೂ. ಹಣ ಸಿಗಲಿದೆ?

2023 ಹಾಗೂ 2024ನೇ ಶೈಕ್ಷಣಿಕ ಸಾಲಿನಲ್ಲಿ ತೇರ್ಗಡೆ ಹೊಂದಿದ ಡಿಪ್ಲೋಮ ನಿರುದ್ಯೋಗಿ ಅಭ್ಯರ್ಥಿಗಳಿಗೆ ಮಾಸಿಕ 1,500ರೂ. ಹಾಗೂ ಪದವಿ ಮುಗಿಸಿದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಮಾಸಿಕ 3,000ರೂ. ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ಮುಖ್ಯ ದಾಖಲೆಗಳು :

• ನಿರುದ್ಯೋಗ ಪ್ರಮಾಣ ಪತ್ರ
• ಪದವಿ ಅಥವಾ ಡಿಪ್ಲೋಮ ಪ್ರಮಾಣ ಪತ್ರ
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್

ಸೇವಾ ಸಿಂಧು ಪೋರ್ಟಲ್ ಮುಕಾಂತರ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ – https://sevasindhuservices.karnataka.gov.in/directApply.do?serviceId=2079

Continue Reading

Trending

error: Content is protected !!