Connect with us

National - International

ವಿಶ್ವಕಪ್ ಚೆಸ್ ಫೈನಲ್ : ಪ್ರಗ್ನಾನಂದ – ಕಾರ್ಲ್‌ಸೆನ್ ನಡುವಿನ 2ನೇ ಪಂದ್ಯವೂ ಡ್ರಾನಲ್ಲಿ ಅಂತ್ಯ!

Published

on

ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ಬುಧವಾರ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ನ ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಮಾಡಿಕೊಂಡಿದ್ದಾರೆ.

ಬಾಕು: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ಬುಧವಾರ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ನ ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲೂ ಡ್ರಾ ಸಾಧಿಸಿದ್ದ ಇಬ್ಬರು ಗ್ರ್ಯಾಂಡ್‌ಮಾಸ್ಟರ್ ಗಳು ಇಂದು ತಮ್ಮ ಆಟವನ್ನು ಮುಂದುವರೆಸಿ 90 ನಿಮಿಷಗಳ ನಂತರ 30 ಚಲನೆಗಳಲ್ಲಿ ಶಾಂತವಾಗಿ ಆಟವಾಡಿ ಡ್ರಾ ಸಾಧಿಸಿದರು.

ಇಂದೂ ಸಹ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಗುರುವಾರ ನಡೆಯುವ ಟೈ-ಬ್ರೇಕ್‌ನಲ್ಲಿ ಚಾಂಪಿಯನ್‌ ಯಾರು ಎಂಬುದು ನಿರ್ಧಾರವಾಗಲಿದೆ.

ಕಾರ್ಲ್‌ಸೆನ್ ಅವರು ಬಿಳಿ ಕಾಯಿಗಳೊಂದಿಗೆ ಆಟ ಆರಂಭಿಸಿದರು. ಪ್ರಗ್ನಾನಂದ ಅವರು ಕಪ್ಪು ಕಾಯಿಗಳೊಂದಿಗೆ ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ. ಇಬ್ಬರ ಸಮಬಲದ ಹೋರಟದಿಂದಾಗಿ 30 ಚಲನೆಗಳ ಬಳಿಕ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

National - International

ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ ಅಧಿಕಾರ ಸ್ವೀಕಾರ

Published

on

ಒಟ್ಟಾವಾ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಇದಕ್ಕೂ ಮೊದಲು ಮಾರ್ಕ್‌ ಕಾರ್ನಿ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಮತ್ತು ಬ್ಯಾಂಕ್‌ ಆಫ್‌ ಕೆನಡಾದ ಅಧ್ಯಕ್ಷರಾಗಿದ್ದರು.

ಕಳೆದ ಜನವರಿಯಲ್ಲಿ ಜಸ್ಟಿನ್‌ ಟ್ರುಡೊ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ನಿ ಅವರು ಲಿಬರಲ್‌ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಕೆನಡಾದ 24ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಬಗ್ಗೆ ಮಾತನಾಡಿದ ಕಾರ್ನಿ ಅವರು, ನಮ್ಮ ಸರ್ಕಾರ ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಕೆನಡಿಯನ್ನರ ನಿರೀಕ್ಷೆ ಪೂರ್ಣಗೊಳಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಕೆನಡಾದ ಭವಿಷ್ಯವನ್ನು ರಕ್ಷಿಸುವ ಅನುಭವಿ ಸಚಿವ ಸಂಪುಟ ನಮ್ಮದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Continue Reading

National - International

ಒಕ್ಕೂಟ ತತ್ವಗಳು ಮತ್ತು ರಾಜ್ಯಗಳ ಹಕ್ಕು ರಕ್ಷಿಸಲು ನಾವು ಬದ್ಧ: ಸ್ಟಾಲಿನ್‌ಗೆ ಸಿದ್ದು ಪತ್ರ

Published

on

ಬೆಂಗಳೂರು: ಒಕ್ಕೂಟ ತತ್ವಗಳು ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು, ಈ ವಿರುದ್ಧ ಮಾರ್ಚ್ 22 ರಂದು ನಡಯುವ ಸಭೆಗೆ ಕರ್ನಾಟಕ ಸರ್ಕಾರದ ಬೆಂಬಲ ಕೋರಿ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಒಕ್ಕೂಟ ತತ್ವಗಳು ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ಮರು ಪತ್ರ ಬರೆದಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಎಂ.ಕೆ ಸ್ಟಾಲಿನ್‌ಗೆ ಬರೆದಿರುವ ಪತ್ರದೊಂದಿಗೆ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ, ರಾಜ್ಯ ಸ್ವಾಯತ್ತತೆ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ನಿರ್ಣಾಯಕ ವಿಷಯಗಳ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರಿಂದ ಪತ್ರ ಬಂದಿದೆ. ಪೂರ್ವ ಬದ್ಧತೆಗಳಿಂದಾಗಿ ಮಾರ್ಚ್ 22 ರಂದು ನಡೆಯುವ ಸಭೆಗೆ ಹಾಜರಾಗಲು ನನಗೆ ಸಾಧ್ಯವಾಗದಿದ್ದರೂ, ಕರ್ನಾಟಕವನ್ನು ಪ್ರತಿನಿಧಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಅವರನ್ನು ಕೇಳಿಕೊಂಡಿದ್ದೇನೆ.

ಒಕ್ಕೂಟ ತತ್ವಗಳು ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

Continue Reading

National - International

ಸ್ಟಾರ್‌ಲಿಂಕ್‌ ಜೊತೆಗೆ ಏರ್‌ಟೆಲ್‌, ಜಿಯೋ ಒಪ್ಪಂದ: ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್‌

Published

on

ನವದೆಹಲಿ: ವಿಶ್ವದ ಅಗ್ರಗಣ್ಯ ಉದ್ಯಮಿ ಎಲಾನ್‌ ಮಸ್ಕ್‌ ಅವರ ಸ್ಟಾರ್‌ಲಿಂಕ್‌ ಕಂಪೆನಿಯೊಂದಿಗೆ ಏರ್‌ಟೆಲ್‌ ಹಾಗೂ ಜಿಯೋ ಕಂಪೆನಿಗಳು ಒಪ್ಪಂದ ಮಾಡಿಕೊಂಡಿರುವುದಕ್ಕೆ ಕಾಂಗ್ರೆಸ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಖುಷಿ ಪಡಿಸಲು ಪ್ರಧಾನಿ ಮೋದಿ ಮುಂದೆ ನಿಂತು ಈ ಒಪ್ಪಂದ ಮಾಡಿಸಿದ್ದಾರೆ. ಇದು ದೇಶದ ಭದ್ರತೆಗೆ ಧಕ್ಕೆ ಉಂಟುಮಾಡಲಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

https://x.com/Jairam_Ramesh/status/1900058528104276088

ಕೇವಲ 12 ಗಂಟೆಗಳಲ್ಲಿ ಏರ್‌ಟೆಲ್ ಮತ್ತು ಜಿಯೋ ಎರಡೂ ಸ್ಟಾರ್‌ಲಿಂಕ್‌ ಜೊತೆ ಪಾಲುದಾರಿಕೆಯನ್ನು ಘೋಷಿಸಿವೆ, ಭಾರತಕ್ಕೆ ಅದರ ಪ್ರವೇಶಕ್ಕೆ ಅವರ ಎಲ್ಲಾ ಆಕ್ಷೇಪಣೆಗಳನ್ನು ನಿವಾರಿಸಿದಂತೆ ತೋರುತ್ತಿದೆ – ಅವರು ಬಹಳ ಸಮಯದಿಂದ ಧ್ವನಿಸುತ್ತಿದ್ದಾರೆ.

ಸ್ಟಾರ್‌ಲಿಂಕ್‌ನ ಮಾಲೀಕ ಶ್ರೀ ಎಲಾನ್ ಮಸ್ಕ್ ಮೂಲಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಸದ್ಭಾವನೆಯನ್ನು ಖರೀದಿಸಲು ಈ ಪಾಲುದಾರಿಕೆಗಳನ್ನು ಬೇರೆ ಯಾರೂ ಅಲ್ಲ, ಸ್ವತಃ ಪ್ರಧಾನಿಯೇ ಸಂಘಟಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಆದರೆ ಹಲವು ಪ್ರಶ್ನೆಗಳು ಉಳಿದಿವೆ. ಬಹುಶಃ ಅತ್ಯಂತ ಮುಖ್ಯವಾದದ್ದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ರಾಷ್ಟ್ರೀಯ ಭದ್ರತೆಗೆ ಅಗತ್ಯವಿರುವಾಗ ಸಂಪರ್ಕವನ್ನು ಆನ್ ಅಥವಾ ಆಫ್ ಮಾಡುವ ಅಧಿಕಾರ ಯಾರಿಗೆ ಇರುತ್ತದೆ? ಅದು ಸ್ಟಾರ್‌ಲಿಂಕ್ ಅಥವಾ ಅದರ ಭಾರತೀಯ ಪಾಲುದಾರರಾಗುತ್ತದೆಯೇ? ಇತರ ಉಪಗ್ರಹ ಆಧಾರಿತ ಸಂಪರ್ಕ ಪೂರೈಕೆದಾರರಿಗೂ ಅನುಮತಿ ನೀಡಲಾಗುತ್ತದೆಯೇ ಮತ್ತು ಯಾವ ಆಧಾರದ ಮೇಲೆ?

ಮತ್ತು, ಸಹಜವಾಗಿ, ಭಾರತದಲ್ಲಿ ಟೆಸ್ಲಾ ಉತ್ಪಾದನೆಯ ದೊಡ್ಡ ಪ್ರಶ್ನೆ ಉಳಿದಿದೆ. ಸ್ಟಾರ್‌ಲಿಂಕ್ ಭಾರತಕ್ಕೆ ಪ್ರವೇಶವನ್ನು ಸುಗಮಗೊಳಿಸಲಾಗಿರುವುದರಿಂದ ಈಗ ಅದಕ್ಕೆ ಸ್ವಲ್ಪ ಬದ್ಧತೆ ಇದೆಯೇ? ಎಂದು ಹಲವು ಪ್ರಶ್ನಗಳನ್ನು ಜೈರಾಮ್‌ ರಮೇಶ್‌ ಕೇಳಿದ್ದಾರೆ.

Continue Reading

Trending

error: Content is protected !!