Hassan
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ವೈದ್ಯಕೀಯ, ಮಾರಾಟ ಪ್ರತಿನಿಧಿಗಳ ಸಂಘದಿಂದ ಮನವಿ
ಹಾಸನ: ನಮ್ಮ ನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಹಾಗೂ ಫೆಡರೇಷನ್ ಆಫ್ ಮೆಡಿಕಲ್ ಮತ್ತು ಮೆಡಿಕಲ್ ಸೇಲ್ಸ್ ರೆಪ್ರೆಸೆಂಟೀಟಿವ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ದಿಂದ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೆ ವೇಳೆ ಸಂಘದ ಅಧ್ಯಕ್ಷರಾದ ಶ್ರೀಕೃಷ್ಣ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ಏSಒ&Sಖಂ), ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿನ್ಸ್ ಅಸೋಸಿಯೇಷನ್ಸ್ ಆನ್ ಇಂಡಿಯಾವು ಅಂಗಸಂಸ್ಥೆಯಾಗಿದ್ದು, ೨೦ನೇ ಡಿಸೆಂಬರ್ ೨೦೨೩ ರಂದು ಎಲ್ಲಾ ಮಾರಾಟ ಪ್ರಚಾರ ಉದ್ಯೋಗಿಗಳಿಗೆ ರಾಷ್ಟ್ರವ್ಯಾಪಿ ಮುಷ್ಕರದ ಕರೆಯನ್ನು ನೀಡಿದೆ. ಮಾರಾಟ ಪ್ರಚಾರ ನೌಕರರ (ಸೇವಾ ಷರತ್ತುಗಳು) ಕಾಯಿದೆ, ೧೯೭೬ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಉದ್ಯಮವನ್ನು ಲೆಕ್ಕಿಸದೆ. ಪ್ರಮುಖ ಬೇಡಿಕೆಗಳನ್ನು ಅನುಸರಿಸಲು. ಎಫ್‌ಎಂಆರ್‌ಎಐ ಈ ಹಿಂದೆ ಎಲ್ಲಾ ಕಂಪನಿಗಳಿಗೆ ನೋಟಿಸ್‌ಗಳನ್ನು ನೀಡಿದೆ ಮತ್ತು ಎಸ್‌ಪಿಇಗಳ ಬೇಡಿಕೆಗಳ ಕುರಿತು ಗೌರವಾನ್ವಿತ ಕೇಂದ್ರ ಕಾರ್ಮಿಕ ಸಚಿವರಿಗೆ ತಿಳಿಸಿತ್ತು. ಆದರೆ ಯಾವುದೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ ಎಂದು ದೂರಿದರು. ಈ ಕಾಳಜಿಗಳ ಬಗ್ಗೆ ಗಮನ ಸೆಳೆಯಲು ಮೊದಲು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆಗಳು ಮತ್ತು ಕಚೇರಿಗಳಲ್ಲಿ ಬೀದಿ ರ‍್ಯಾಲಿಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸುತ್ತದೆ. ಒಕ್ಕೂಟವು ಗೌರವಾನ್ವಿತ ಯೂನಿಯನ್ ಲೇಬರ್‌ಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸುತ್ತದೆ ಎಫ್‌ಎಂಆರ್‌ಎಐ ಬೇಡಿಕೆಗಳ ಕುರಿತು ಸೂಕ್ತ ಕ್ರಮಗಳಿಗೆ ಒತ್ತಾಯಿಸಿ ಎಲ್ಲಾ ಜಿಲ್ಲೆಗಳ ಡಿಸಿಗಳ ಮೂಲಕ ಸಚಿವರುಗಳಿಗೆ ಮನವಿ ರವಾನಿಸುತ್ತಿದ್ದೇವೆ ಎಂದರು.

ಕೇಂದ್ರ ಸರಕಾರಕ್ಕೆ ಮನವಿ ಮಾಡುವ ಪ್ರಮುಖ ಬೇಡಿಕೆಗಳೆಂದರೇ ಮಾರಾಟ ಪ್ರಚಾರ ನೌಕರರನ್ನು ರಕ್ಷಿಸಬೇಕು. ಮಾರಾಟ ಪ್ರಚಾರದ ಉದ್ಯೋಗಿಗಳಿಗೆ ಶಾಸನ ಬದ್ಧ ಕೆಲಸದ ನಿಯಮಗಳನ್ನು ರೂಪಿಸಿ, ಸರ್ಕಾರಿ ಆಸ್ಪತ್ರೆಗಳು, ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರತಿನಿಧಿಗಳ ಪ್ರವೇಶದ ಪ್ರವೇಶದ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿ ಕೆಲಸ ಮಾಡುವ ಹಕ್ಕನ್ನು ಖಾತ್ರಿಪಡಿಸಿಕೊಳ್ಳಬೇಕೆಂದರು. ಬೆಲೆಗಳನ್ನು ಕಡಿಮೆ ಮಾಡಿ ಮತ್ತು ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳ ಜಿ.ಎಸ್.ಟಿ. ಅನ್ನು ತೆಗೆದುಹಾಕಿ. v. ಡೇಟಾ ಗೌಪ್ಯತೆಯನ್ನು ರಕ್ಷಿಸಬೇಕು.

ಉದ್ಯೋಗದಾತರಿಗೆ: ಮಾರಾಟಕ್ಕೆ ಸಂಬಂಧಿಸಿದ ಕಿರುಕುಳ ಮತ್ತು ಬಲಿಪಶುಗಳನ್ನು ನಿಲ್ಲಿಸಿ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಮೂಲಕ ಗೌಪ್ಯತೆಗೆ ಯಾವುದೇ ಒಳನುಗ್ಗುವಿಕೆ ಇಲ್ಲ. ಕೆಲಸದ ಸ್ಥಳಗಳಿಗೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. ಮಾರಾಟ ಪ್ರಚಾರ ನೌಕರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂದೇಶವನ್ನು ಹರಡಲು, ಜಾಗೃತಿ ಮೂಡಿಸಲು ಮತ್ತು ಸಾರ್ವಜನಿಕರಿಗೆ ತಿಳಿಸಲು ಒಕ್ಕೂಟವು ಒತ್ತಾಯಿಸುತ್ತದೆ. ಶೀಘ್ರ ವರಿಹಾರಕ್ಕಾಗಿ ಮಾರಾಟ ಉತ್ತೇಜನಾ ಉದ್ಯೋಗಿಗಳ ದೀರ್ಘಕಾಲದ ಸಮಸ್ಯೆಗಳ ಕುರಿತು ಕಾರ್ಮಿಕ ಅಧಿಕಾರಿಗಳು ಮತ್ತು ಗೌರವಾನ್ವಿತ ಕೇಂದ್ರ ಕಾರ್ಮಿಕ ಸಚಿವರಿಗೆ ಅರಿವು ಮೂಡಿಸುವಲ್ಲಿ ಅವರು ಮಾಧ್ಯಮದ ಬೆಂಬಲವನ್ನು ಬಯಸುತ್ತದೆ ಎಂದು ತಮ್ಮ ಬೇಡಿಕೆಗಳನ್ನು ಹೇಳಿಕೊಂಡರು.
ಇದೆ ವೇಳೆ ಸಂಘದ ಕಾರ್ಯದರ್ಶಿ ಅವಿನಾಶ್, ಖಜಾಂಚಿ ಶಿವ ಗಂಗಾಧರ್, ಗುರುದತ್, ಪ್ರಶಾಂತ್, ವಿನು, ಹೇಮಂತ್ ಇತರರು ಉಪಸ್ಥಿತರಿದ್ದರು.
Hassan
ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕ ಸಮಾರಂಭ
ಹಾಸನ: ಸರ್ವಗುಣ ಯೋಗಿ ಎನಿಸಿಕೊಂಡಿರುವ ರಾಷ್ಟ್ರಕವಿ ಕುವೆಂಪು ಅವರ ಬರಹವನ್ನು ಯುವಕರು ಓದುವ ಮೂಲಕ ಭಾರತೀಯ ಆಧ್ಯಾತಿಕ, ಸಾಂಸ್ಕೃತಿಕ ಪರಂಪರೆಯನ್ನು ಅರಿಯಬೇಕೆಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ, ರೋಟರಿ ಕ್ಲಬ್ ಆಫ್ ಹಾಸನ್ ಟೈಗರ್, ಅಮೋಘ ಸುದ್ದಿ ವಾಹಿನಿ ಸಹಯೋಗದಲ್ಲಿ ಬೆಂಗಳೂರಿನ ಮನೋಜ್ಞ ನೃತ್ಯಕಲಾ ಅಕಾಡೆಮಿ ವತಿಯಿಂದ ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಹಮಿಕೊಂಡಿದ್ದ ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕ ಸಮಾರಂಭದಲ್ಲಿ ಮಾತನಾಡಿದರು.

ಕುವೆಂಪು ಅವರನ್ನು ಎಲ್ಲರಿಗೂ ಪರಿಚಯಿಸಬೇಕಿದೆ. ಸಾಂಸ್ಕೃತಿಕ, ಆಧ್ಯಾತಿಕವಾಗಿ ಭಾರತ ಸಾಕಷ್ಟು ಖ್ಯಾತಿ ಹೊಂದಿದೆ. ಪುರಾತನ ಪರಂಪರೆ ಬಗ್ಗೆ ವಿಶ್ವವೇ ಅಚ್ಚರಿ ವ್ಯಕ್ತಪಡಿಸುತ್ತದೆ. ಅಂತಹ ಶಕ್ತಿಯನ್ನು ಸಾಹಿತ್ಯದ ಮೂಲಕ ಪರಿಚಯಿಸಿಕೊಟ್ಟವರು ರಾಷ್ಟ್ರಕವಿ ಕುವೆಂಪು ಎಂದರು.
ಮನುಷ್ಯ ಚಿಂತನೆಗಲ್ಲಿ ಭಾವ ಹಾಗು ಅಭಾವ ಮುಖ್ಯವಾಗುತ್ತದೆ. ಯಾವುದನ್ನೇ ಆಗಲಿ ಭಾವದಿಂದ ನೋಡಬೇಕೆ ಹೊರತು ಅಭಾವದಿಂದ ಅಲ್ಲ. ಋಷಿಗಳಿಗೆ ನೋಡಿದ್ದೆಲ್ಲ ಭಾವವಾಗಿ ಕಾಣುತ್ತದೆ. ಆದ್ದರಿಂದಲೇ ಅವರು ಅಸಾಧ್ಯವಾದುದನ್ನು ಸಾಧಿಸಿದ್ದಾರೆಂದರು.
ಭಾವನೆಗಳು ಬದಲಾದರೆ ಮನುಷ್ಯರಾಗಲು ಸಾಧ್ಯವಿಲ್ಲ. ಮನುಷ್ಯ ಭಾವನೆಗಳನ್ನು ಹೊಂದಬೇಕು. ವ್ಯಕ್ತಿಯ ಚಿಂತನಾ ಲಹರಿ ಆಳಕ್ಕಿಳಿಯಬೇಕೆಂದರೆ ಕುವೆಂಪು ಸಾಹಿತ್ಯ ಓದಬೇಕು. ಮರಣ ಇಲ್ಲದ ವಸ್ತು ಎಂದರೆ ಪುಸ್ತಕ ಮಾತ್ರ. ಭಗವಂತ ಕೊಟ್ಟ ಸುಂದರ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಸತ್ಕಾರ್ಯಗಳಲ್ಲಿ ನಮನ್ನು ನಾವು ತೊಡಗಿಸಿಕೊಳ್ಳಬೇಕೆಂದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ, ಸಾಹಿತಿ ಪ್ರೊ. ಡಾ. ಜಯಪ್ರಕಾಶ್ ಗೌಡ ಅವರು ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ನಾಡಿನ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸಾಹಿತ್ಯ, ಆಧ್ಯಾತ ಹಾಗು ವೈಜ್ಞಾನಿಕತೆಗೆ ಪ್ರೋತ್ಸಾಹ ನೀಡಿದ್ದರೆಂದರು.
ಕುವೆಂಪು ಅವರನ್ನು ನೃತ್ಯದ ಮೂಲಕ ಅರಿಯಬೇಕೆಂದು ಹಾಸನದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಪ್ರೌಢ ಶಾಲಾ ಹಂತದಿಂದಲೇ ನೃತ್ಯದ ಮೂಲಕ ಗಮನ ಸೆಳೆದ ಡಾ. ಮಾನಸಾ ಅವರು ಬಿಇ ಪದವಿ ಪಡೆದು ಪಿಹೆಚ್.ಡಿ. ಕೂಡ ಮಾಡಿದ್ದಾರೆ. ರಾಜ್ಯ ಮಾತ್ರವಲ್ಲದೆ ಅನೇಕ ಕಡೆ ನೃತ್ಯ ಕಾರ್ಯಕ್ರಮಗಳ ಮೂಲಕ ಕುವೆಂಪು ಅವರನ್ನು ರಾಷ್ಟ್ರಕ್ಕೆ ಪರಿಚಯಿಸುತ್ತಿದ್ದಾರೆಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ, ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಶಿವರಾಮೇಗೌಡ ಮಾತನಾಡಿದರು.

ವಿಜಯ ಸ್ಕೂಲ್‌ನ ತಾರಾ ಎಸ್. ಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಾಗೂರು ಕೃಷ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ನಗರಸಭೆ ಮಾಜಿ ಅಧ್ಯಕ್ಷ ಡಾ. ಹೆಚ್.ಎಸ್.ಅನಿಲ್ ಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ಟೈಗರ್ ಅಧ್ಯಕ್ಷ ನಿಶ್ಚಯ್ ಧನಪಾಲ್ ಜೈನ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ರಘು, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು ಮತ್ತಿತರರಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಬಿ.ಮದನಗೌಡ ಸ್ವಾಗತಿಸಿದರು.
Hassan
ಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
ಬೇಲೂರು : ಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ತಾಲೂಕಿನಲ್ಲಿ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಮೇಶ್ ಆತ್ಮಹತ್ಯೆ ಮಾಡಿಕೊಂಡ ರೈತ ಬೇಲೂರು ತಾಲೂಕಿನ ಹಳೇಬೀಡುಸೋ ಸಮೀಪದ ಗೋಣಿ ಸೋಮೇನಹಳ್ಳಿ ಗ್ರಾಮದ ರೈತ. ಕಳೆದ ಹತ್ತು ವರ್ಷಗಳ ಹಿಂದೆ ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಕೃಷಿಗಾಗಿ ಮಾಡಿ ಕೊಂಡಿದ್ದ ಸಾಲವನ್ನ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕಿನಲ್ಲಿ ಸಾಲ ಮಾಡಿ ಹಣದಿಂದ ಕೃಷಿ ಚಟುವಟಿಕೆ ಮಾಡಿದ್ದು ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ನಡುವೆ, ಸರಿಯಾದ ಬೆಂಬಲ ಬೆಲೆ ಸಿಗದೇ ಹಿನ್ನೆಲೆ, ನಷ್ಟವನ್ನ ಅನುಭವಿಸಿತು ಬ್ಯಾಂಕ್ ಮತ್ತು ಕೈ ಸಾಲ ಸೇರಿಸುಮಾರು 20 ಲಕ್ಷದ ತನಕ ಸಾಲ ಮಾಡಿದ್ದ ಎನ್ನಲಾಗಿದೆ.

ಮನೆ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಮನೆ ಜಪ್ತಿ ಮಾಡಲು ಬಂದಾಗ ತನಗಿದ್ದ ಜಮೀನನ್ನ ಮಾರಾಟ ಮಾಡಿ ಬಡ್ಡಿ ರಹಿತ ಸಾಲ ಪಾವತಿಸಿದ. ಅಲ್ಲದೆ ಕೈ ಸಾಲ ಮತ್ತು ಮತ್ತೊಂದು ಬ್ಯಾಂಕಿನಲ್ಲಿ ಸಾಲ ಪಡೆದಿದ್ದು, ಜಮೀನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಮುಂದೆ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎಂದು ಯೋಚಿಸಿ ಎಂದು ಬೆಳಗ್ಗೆ, ತನ್ನ ಜಮೀನಿನ ಪಕ್ಕದ ದಿನೇಶ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ತೇಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಈ ಸಂಬಂಧ ಹಳೆಬೀಡು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Hassan
ಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
ಅರಕಲಗೂಡು: ಪಟ್ಟಣದ ಬ್ರಾಹ್ಮಣ ಬೀದಿಯಲ್ಲಿ ವಾಸವಾಗಿರುವ ಅರ್ಪಿತ ಎಂಬುವವರು ಸಹಾಯಕ್ಕಾಗಿ 112 ಕರೆ ಮಾಡಿದರೆ ಸಮಯಕ್ಕೆ ಸರಿಯಾಗಿ ವಾಹನ ಬಾರದೇ ಇದ್ದರಿಂದ ಪೊಲೀಸ್ ಠಾಣೆಗೆ ಕರೆ ಮಾಡಿದ್ದರು. ಆಗ ಎಎಸ್ಐ ದೇವರಾಜ್ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಏನಿದು ಘಟನೆ?
ಅಸಹಾಯಕ ಅರ್ಪಿತಾ ಅವರ ಅತ್ತೆ ಭಾಗ್ಯಮ್ಮ, ಅತ್ತಿಗೆ ಗೀತಾ, ನಾದಿನಿ ಜ್ಯೋತಿ, ಬಾವ ಲೋಕೇಶ್ ಎಲ್ಲಾ ಸೇರಿ ಗಂಡ ಇಲ್ಲದ ವೇಳೆ ಅವರ ಮೇಲೆ ದಾಳಿ ಮಾಡಿದ್ದರು. ಅಲ್ಲದೇ ಮನೆಯ ಮಹಡಿಯ ಮೇಲೆ ವಾಸವಿದ್ದ ಅವರ ಮನೆಗೆ ಬೀಗ ಹಾಕಿ ಅವರನ್ನು ಮನೆ ಇಂದ ಹೊರ ಹಾಕುವ ಪ್ರಯತ್ನ ಮಾಡಿದ್ದರು.
ಅರ್ಪಿತಾ ಅವರಿಗೆ ಪ್ರೀತಿಸಿ 5 ವರ್ಷದ ಹಿಂದೆ ಮದುವೆ ಆಗಿತ್ತು. ಆದರೆ ಒಂದು ವರ್ಷದಿಂದ ಚೆನ್ನಾಗಿ ನೋಡಿಕೊಳ್ಳದೆ ಹೆಂಡತಿ ಇದ್ದರಿಂದ ಗಂಡನಿಂದ ದೂರ ಉಳಿದ್ದರು. ಇದೀಗ ಅರ್ಪಿತಾ ಅವರನ್ನು ಮನೆ ಖಾಲಿ ಮಾಡಿಸೋದಕ್ಕೆ ಅವರ ಅತ್ತೆ ಬಂದಿದ್ದಾರೆ.

ಈ ವೇಳೆ ಪೊಲೀಸರು ಆಕೆಯ ಸಹಾಯಕ್ಕೆ ಬಾರದೇ ಹಲ್ಲೆ ಮಾಡಿದವರ ಜೊತೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಹಲ್ಲೆಗೊಳಗಾದ ಅಸಹಾಯಕ ಮಹಿಳೆ ದೂರು ತೆಗೆದುಕೊಳ್ಳಲು ಎಎಸ್ಐ ದೇವರಾಜ್ ನಿರಾಕರಿಸಿದ್ದಾರೆ. ಆ ಅಸಹಾಯಕ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ, ನ್ಯಾಯ ಸಿಗದೇ ಕಣ್ಣೀರು ಹಾಕಿಕೊಂಡು ತನ್ನ ಅಳಲನ್ನು ತೋಡಿಕೊಂಡು ಬೀದಿಗೆ ಬಿದ್ದಿದ್ದಾರೆ.

ಈ ಸಂತ್ರಸ್ಥೆಯೂ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-
Chikmagalur22 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan18 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Hassan20 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
State22 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Kodagu18 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
Hassan19 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
-
Mandya20 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
-
Hassan2 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
