Connect with us

Chamarajanagar

ವಿದ್ಯಾರ್ಥಿಗಳಿಗಾಗಿ “ಬ್ಯಾಂಕ್ ಭೇಟಿ”(Bank Visit) ಕಾರ್ಯಕ್ರಮ

Published

on

ಯಳಂದೂರು ಸಮೀಪದ ಸಂತೆಮರಹಳಿ ಗ್ರಾಮದಲ್ಲಿ ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ “ಬ್ಯಾಂಕ್ ಭೇಟಿ”(Bank Visit) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂತೆಮರಹಳ್ಳಿ ಶಾಖೆಗೆ ಭೇಟಿ ನೀಡಲಾಯಿತು. ಶಾಖೆಯ ವ್ಯವಸ್ಥಾಪಕರಾದ ಶ್ರೀ.ಚನ್ನಕೇಶವ ರವರು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ತಿಳಿಸುವುದರ ಜೊತೆಗೆ ಬ್ಯಾಂಕಿನ ಕಾರ್ಯಾಚರಣೆಯನ್ನು ವಿವರಿಸಿದರು. ವಿವಿಧ ರೀತಿಯ ಠೇವಣಿಗಳು, ಕೃಷಿಗೆ ದೊರೆಯುವ ಸಾಲ ಸೌಲಭ್ಯಗಳು, ಸರ್ಕಾರದ ಕೃಷಿ ಯೋಜನೆಗಳು, ಆನ್ಲೈನ್ ವ್ಯವಹಾರಗಳು ಮತ್ತು ಆನ್ಲೈನ್ ಮೋಸ, ವಿದ್ಯಾರ್ಥಿಗಳಿಗೆ ದೊರೆಯುವ ಶೈಕ್ಷಣಿಕ ಸಾಲ ಸೌಲಭ್ಯ, KYC, NPA, NEFT, RTGS, ಚೆಕ್
ಚಲನ್ ಮುಂತಾದ ಹಲವಾರು ಬ್ಯಾಂಕಿಂಗ್ ವಿಚಾರಗಳನ್ನು ತಿಳಿಸಿದರು. ಅಲ್ಲದೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಂವಹಿಸುವ ಮೂಲಕ ಹಲವಾರು ವಿಷಯಗಳನ್ನು ಚರ್ಚಿಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಗಿರಿಜ. ಎಂ ರವರು, ತರಗತಿಯಲ್ಲಿ ಕೇಳಿ ಕಲಿಯುವ ಪಠ್ಯಗಳನ್ನು ಪ್ರಾಯೋಗಿಕವಾಗಿ ಕ್ಷೇತ್ರ ಭೇಟಿ ಮಾಡುವ ಮೂಲಕ ಅಧ್ಯಯನ ಮಾಡುವುದರಿಂದ ಕಲಿಕಾ ಸಾಮರ್ಥ್ಯ ಮತ್ತು ಚಿಂತನಾ ಶಕ್ತಿ ಹೆಚ್ಚಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನನಗೊಳಿಸಿದರು.
ಭೇಟಿಯಲ್ಲಿ ಭಾಗವಹಿಸಿದ್ದ ಡಾ. ಲಿಖಿತಾ S ಅನುರಾಧರವರು, ಪ್ರಾಯೋಗಿಕ ವಿಷಯಜ್ಞಾನ ವಿದ್ಯಾರ್ಥಿ ಜೀವನಕ್ಕೆ ಅತ್ಯವಶ್ಯಕವಾಗಿದೆ. NEP ಆಶಯವು ಇದಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು ಅದನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಜಯ್ ರವರು ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠವನ್ನು ಹೇಳುವ ಜೊತೆಗೆ ಈ ಭೇಟಿಯ ನೈಜ ಉದ್ದೇಶವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳವ ಮೂಲಕ ಶೈಕ್ಷಣಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Published

on

ಚಾಮರಾಜನಗರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಚಾಮರಾಜನಗರ ಜಿಲ್ಲೆಯಲ್ಲಿರುವ ವಿವಿಧ ವಸತಿ ಶಾಲೆಗಳಿಗೆ 2025-26ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಹತ್ತಿರದ ವಸತಿ ಶಾಲೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 25ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆಯನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Continue Reading

Chamarajanagar

ಮೂರು ಚಕ್ರದ ಸ್ಕೂಟರ್‌ಗೆ ವಿಕಲಚೇತನರಿಂದ ಅರ್ಜಿ ಆಹ್ವಾನ

Published

on

ಚಾಮರಾಜನಗರ:- ಕೊಳ್ಳೇಗಾಲ ನಗರಸಭೆಯ ೨೦೨೦-೨೧ ಮತ್ತು೨೦೨೧-೨೨ನೇ ಸಾಲಿನ ಎಸ್.ಎಫ್.ಸಿ ಸಾಲಿನ ಶೇ.೫ರ ಅನುಮೋದಿತ ಕ್ರಿಯಾ ಯೋಜನೆಯಂತೆ ಯಂತ್ರಚಾಲಿತ ಕಂಪನಿಯ ಮೂರು ಚಕ್ರದ ಸ್ಕೂಟರ್‌ಗಳನ್ನು ನೀಡಲು ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುವ ಶೇ.೭೫ರಷ್ಟು ಮೇಲ್ಪಟ್ಟ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ನಗರಸಭಾ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದೃಢೀಕರಿಸಿ ಜನವರಿ ೩೦ ರೊಳಗೆ ಕಚೇರಿಗೆ ಸಲ್ಲಿಸಬೇಕು.

Continue Reading

Chamarajanagar

ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ.ನಾಳೆ ನವೋದಯ ಪರೀಕ್ಷೆ

Published

on

ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ.ನಾಳೆ ನವೋದಯ ಪರೀಕ್ಷೆ

ಪಟ್ಟಣದ ಪಬ್ಲಿಕ್ ಶಾಲೆಯಲ್ಲಿ ನಡೆದ ನವೋದಯ ಪರೀಕ್ಷೆಯ ಪೂರ್ವ ಸಿದ್ಧತೆಯನ್ನು ಶಿಕ್ಷಕರಿಗೆ ತಿಳಿಸಿದ್ದಾರೆ
ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ರವರು ನವೋದಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಸಲಹೆ ನೀಡಿದರು

ಮಾತನಾಡಿದ ಶಾಖೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ರವರು ನಮ್ಮ ಶಾಲೆಯಲ್ಲಿ ನಡೆಯುವ ನವೋದಯ ಪರೀಕ್ಷೆಯು ಯಶಸ್ವೀಯಾಗಿ ನಡೆಸಿ ಕೋಡಿ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಶಶಿಧರ, ಮಹೇಶ್ ಕುಮಾರ್, ಪುಟ್ಟರಾಜು, ಹಾಜರಿದ್ದರು,

Continue Reading

Trending

error: Content is protected !!