Connect with us

Chamarajanagar

ವಿಜೃಂಭಣೆಯಿಂದ ನಡೆದ ಬಿಳಿಗಿರಿ ರಂಗನಾಥಸ್ವಾಮಿ ಸಂಕ್ರಾಂತಿಯ ಚಿಕ್ಕ ತೇರುವಿಜೃಂಭಣೆಯಿಂದ ನಡೆದ ಬಿಳಿಗಿರಿ ರಂಗನಾಥಸ್ವಾಮಿ ಸಂಕ್ರಾಂತಿಯ ಚಿಕ್ಕ ತೇರು

Published

on

ತಾಲೂಕಿನ ಬಿಳಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಸಂಕ್ರಾಂತಿ ರಥೋತ್ಸವ ಚಿಕ್ಕಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಹಿನ್ನೆಲೆಯಲ್ಲಿ ವಿವಿಧ ಬಗೆಯ ಹೂಗಳಿಂದ ತೇರನ್ನು ಸಿಂಗರಿಸಲಾಗಿತ್ತು,ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಗೋವಿಂದ ಗೋವಿಂದ ಎಂಬ ಜಯ ಘೋಷ ದೊಂದಿಗೆ ತೇರನ್ನು ಎಳೆದರು. ಮಹಾ ರಥೋತ್ಸವದಲ್ಲಿ ಪ್ರಮುಖವಾಗಿ ಶಂಖ,ಜಾಗಟೆಯ ನೀನಾದ ಮೊಳಗಿದವು.ಸಾವಿರಾರು ಭಕ್ತರು ಮನೆ ಗೋಡೆಗಳ ಮೇಲೆ ಕುಳಿತು ರಥೋತ್ಸವ ವೀಕ್ಷಣೆ ಮಾಡಿದರು.ಬೆಳಗ್ಗೆ 11:50ಕ್ಕೆ ರಥಾರೋಹನ ಮಾಡಲಾಯಿತು. 11:53 ಕ್ಕೆ ಗರುಡ ಹಾರಾಡಿತು.
ನಂತರ 12:25 ಕ್ಕೆ ತೇರನ್ನು ಎಳೆಯಲಾಯಿತು. ದೇವಸ್ಥಾನಕ್ಕೆ ಸುತ್ತು ಹಾಕಿದ ತೇರು ಬಳಿಕ ಸ್ವಸ್ಥಾನದಲ್ಲಿ ಬಂದು ಸೇರಿತ್ತು, ರಥೋತ್ಸವಕ್ಕೆ ಆಗಮಿಸಿದ ನವ ಜೋಡಿಗಳು ಹಾಗೂ ಭಕ್ತರು ತೆರಿಗೆ ಹಣ್ಣು,ದವನ ಎಸೆದು ಹರಕೆ ತೀರಿಸಿದರು.ಅಲ್ಲದೆ ಹೊಸ ವರ್ಷದ ಮೊದಲ ರಥೋತ್ಸವ ಹಿನ್ನೆಲೆಯಲ್ಲಿ ಈ ಭಾಗದ ರೈತರು ತಾವು ಬೆಳೆದ ಧಾನ್ಯಗಳನ್ನು ತೆರಿಗೆ ಎಸೆದು ದೇವರಿಗೆ ಸಮರ್ಪಿಸಿದರು.ಆ ಮೂಲಕ ಮುಂದಿನ ಇಳುವರಿ ವೃದ್ಧಿಸುವಂತೆ ದೇವರಲ್ಲಿ ಮೊರೆ ಇಟ್ಟರು.

ಪೋಡುಗಳಿಂದ ಆಗಮಿಸಿದ ಸೋಲಿಗರು

ಬಿಳಿಗಿರಿರಂಗನಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಅರಣ್ಯದ ಪೋಡುಗಳಲ್ಲಿ ವಾಸಿಸುವ ಸಾವಿರಾರು ಸೋಲಿಗರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು, ಸೋಲಿಗರೆ ಈ ತೇರು ಕಟ್ಟುವುದು ಇಲ್ಲಿನ ವಿಶೇಷ.ಬಿಳಿಗಿರಿರಂಗನಾಥ ಸ್ವಾಮಿ ಸೋಲಿಗರ ಕುಸುಮಾಲೆಯನ್ನು ವರಿಸಿದ್ದ ಹಿನ್ನೆಲೆಯಲ್ಲಿ ಸೋಲಿಗರು ರಂಗಭಾವ ಎಂದು ರಂಗಪ್ಪ ನನ್ನು ಕರೆಯುತ್ತಾರೆ.

ಬ್ಯಾಟ ಮಣೆ ಸೇವೆ..

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಬಿಳಿಗಿರಿರಂಗನಾಥ ಸ್ವಾಮಿ ಒಕ್ಕಲಿನವರು ಹಾಗೂ ಭಕ್ತರು ಅಕ್ಕಿ,ಬೆಲ್ಲ,ಕಾಯಿಯನ್ನು ನೀರಿನಲ್ಲಿ ನೆನೆಸಿ ಅದಕ್ಕೆ ಕಜ್ಜಾಯ ಬೆರೆಸಿ ಬ್ಯಾಟಿಮಣೆ ಹಾಕಿ ಅದನ್ನು ಪ್ರಸಾದ ಎಂದು ಸ್ವೀಕರಿಸಿದರು. ಅಲ್ಲದೆ ರಥೋತ್ಸವದಲ್ಲಿ ಭಕ್ತರಿಗೆ ನೀರು ಮಜ್ಜಿಗೆ ಪಾನಕ ಪುಳಿಯೋಗರೆ ಯನ್ನು ವಿತರಿಸಲಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್…

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ಥಳಕ್ಕೆ ಎಸ್.ಪಿ.ಪದ್ಮಿನಿ ಶಾಹೋ,ಎ.ಎಸ್.ಪಿ.ಉದೇಶ್, ಡಿ.ವೈ.ಎಸ್. ಪಿ.ಸೋಮೇಗೌಡ ಸ್ಥಳದಲ್ಲಿ ಮೊಕ್ಕಂ ಹೂಡಿ ಬಿಗಿಪದ್ರತೆ ಕೈಕೊಂಡರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಶಿವಾಜಿಯವರ ಶ್ರೇಷ್ಠ ವ್ಯಕ್ತಿತ್ವ, ಸ್ವಾಭಿಮಾನಿ ರಾಷ್ಟ್ರ ಕಲ್ಪನೆ ಇಂದಿಗೂ ಸ್ಮರಣೀಯ : ಟಿ. ಜವರೇಗೌಡ

Published

on

ಚಾಮರಾಜನಗರ: ಭಾರತೀಯ ಇತಿಹಾಸದಲ್ಲಿ ಶಿವಾಜಿ ಮಹಾರಾಜರ ಶ್ರೇಷ್ಠ ಆದರ್ಶ ವ್ಯಕ್ತಿತ್ವ, ನಾಯಕತ್ವ ಗುಣ, ಸ್ವರಾಜ್ಯ ಕಲ್ಪನೆ, ಸ್ವಾಭಿಮಾನಿ ರಾಷ್ಟ್ರ ಕಲ್ಪನೆ ಹಾಗೂ ಧಾರ್ಮಿಕ ಸಹಿಷ್ಣುತೆ ಇಂದಿಗೂ ಸ್ಮರಣೀಯವಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಹೇಳಿದರು.

ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿಯವರ 399ನೇ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ 1627ರಲ್ಲಿ ಜನಿಸಿದ ಶಿವಾಜಿ ಅವರು ಬಾಲ್ಯದಲ್ಲಿ ತಾಯಿ ಜೀಜಾ ಬಾಯಿ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ತಾಯಿಯವರು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಪರಂಪರೆಯ ಇತಿಹಾಸವನ್ನು ಅರ್ಥೈಸಿಕೊಂಡು ಸದೃಢ ಸ್ವರಾಜ್ಯ ಕಟ್ಟಲು ಮುಂದಾದರು. ಅವರ ಧೈರ್ಯ, ಸಾಹಸ, ಹೋರಾಟ ಗುಣ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.

ಗೆರಿಲ್ಲಾ ಯುದ್ಧತಂತ್ರದ ಮೂಲಕ ಮೊಘಲರು ಮತ್ತು ಬಿಜಾಪುರದ ಆದಿಲ್ ಶಾಹಿಗಳಿಗೆ ಸಿಂಹಸ್ವಪ್ನರಾಗಿದ್ದ ಶಿವಾಜಿಯವರು ಆಡಳಿತದಲ್ಲಿ ಎಲ್ಲಾ ವರ್ಗದ ಜನರನ್ನು ಸಮಾನತೆಯಿಂದ ಕಾಣುತ್ತಿದ್ದರು. ದೇಶ ಸಂರಕ್ಷಣೆಗೆ ಸೈನ್ಯವನ್ನು ಸಜ್ಜುಗೊಳಿಸುವುದರಲ್ಲಿ ಇತರೆ ರಾಜರಿಗೂ ಶಿವಾಜಿ ಮಾದರಿಯಾಗಿದ್ದರು. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಶಿವಾಜಿಯವರು ಸದಾಕಾಲ ಸ್ಮರಣೀಯರಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ ಬಾಲ್ಯದಲ್ಲಿಯೇ ಹೋರಾಟ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ ಮಹಾರಾಜರು ಒಬ್ಬ ಆದರ್ಶ ರಾಜ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ. ಅವರ ಧೈರ್ಯ, ಶೌರ್ಯ, ವೀರತ್ವ ಹಾಗೂ ಮುಂಚೂಣಿ ನಾಯಕತ್ವ ಗುಣಗಳು ಚಿರಸ್ಥಾಯಿಯಾಗಿವೆ. ಈ ದೇಶಕ್ಕೆ, ನಾಡಿಗೆ ಅಪಾರ ಕೊಡುಗೆ ನೀಡಿರುವ ಶಿವಾಜಿ ಮಹಾರಾಜರ ಆದರ್ಶಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷರಾದ ವೆಂಕಟರಾವ್ ಸಾಠೆ ಅವರು ಮಾತನಾಡಿ ದೇಶಾದ್ಯಂತ ಇಂದು ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುತ್ತಿದೆ. ಉತ್ತಮ ಚಾಣಾಕ್ಷರು ಹಾಗೂ ಧರ್ಮ ಸಹಿಷ್ಣುವಾಗಿದ್ದ ಶಿವಾಜಿ ಮಹಾರಾಜರು ತನ್ನ ರಾಜ್ಯದಲ್ಲಿ ಎಲ್ಲಾ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದ್ದರು. ಎಲ್ಲರನ್ನು ಸರ್ವ ಸಮಾನತೆಯಿಂದ ನೋಡಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನೆಡೆಯಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ನಗರದ ಪೊಲೀಸ್ ವೃತ್ತ ನಿರೀಕ್ಷಕರಾದ ಜಗದೀಶ್, ಸಮುದಾಯದ ಮುಖಂಡರಾದ ಚಂದ್ರರಾವ್, ಶ್ರೀನಿವಾಸ್, ಮಮತಾ ಬಾಯಿ, ಲೋಕೇಶ್ ರಾವ್, ಬಾಬು ರಾವ್, ಅಭಿರಾಮ್, ಶಿವಕುಮಾರ್, ಅನಿತಾ ಬಾಯಿ, ಎಲ್. ಸುರೇಶ್, ಇತರರು ಇದ್ದರು.

Continue Reading

Chamarajanagar

ನಾಳೆ ಗುಂಡ್ಲುಪೇಟೆ, ಬೇಗೂರು ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

Published

on

ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಗುಂಡ್ಲುಪೇಟೆ ಮತ್ತು ಬೇಗೂರು ಉಪವಿಭಾಗ ವ್ಯಾಪ್ತಿಯಲ್ಲಿ 4ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಫೆಬ್ರವರಿ 20ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹಂಗಳ ವ್ಯಾಪ್ತಿಯ ಹಂಗಳ, ಶಿವಪುರ, ಕಲ್ಲಿಗೌಡನಹಳ್ಳಿ ಎನ್.ಜೆ.ವೈ, ಎಲಚಟ್ಟಿ, ಗೋಪಾಲ್‌ಪುರ ಎನ್.ಜೆ.ವೈ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಮಲ್ಲಯ್ಯನಪುರ, ಬರಗಿ ವ್ಯಾಪ್ತಿಯ ಹೊಂಗಹಳ್ಳಿ, ಪಾಳ್ಯ ಎನ್.ಜೆ.ವೈ, ಆಲತ್ತೂರು ಐಪಿ, ಚನ್ನಮಲ್ಲಿಪುರ ಎನ್.ಜೆ.ವೈ, ಮುಂಟಿಪುರ ಐಪಿ, ಮೂಕ್ಕಳ್ಳಿ ಕಾಲೋನಿ ಐಪಿ, ಹೆಚ್.ಎಸ್. ಹುಂಡಿ ಎನ್.ಜೆ.ವೈ, ಬರಗಿ, ನಾಗಪಟ್ಟಣ, ಬೇಗೂರು ವ್ಯಾಪ್ತಿಯ ಹಿರಿಕಾಟಿ, ನಿಟ್ರೆ, ಬೇಗೂರು, ವಾಟರ್ ಸಪ್ಲೆ ಹೆಗ್ಗಡಹಳ್ಳಿ, ಮಂಚಳ್ಳಿ ಎನ್.ಜೆ.ವೈ, ಶೆಟ್ಟಹಳ್ಳಿ, ದೇಸಿಪುರ, ಇಂಡಸ್ಟಿçಯಲ್, ಹೊರೆಯಾಲ, ಬೆಟ್ಟಮಾದಹಳ್ಳಿ, ರಂಗುಪುರ, ಯಡವನಹಳ್ಳಿ ಐಪಿ ಫೀಡರ್, ಹೊಸಪುರ ಎನ್.ಜೆ.ವೈ, ಹಾಲಳ್ಳಿ, ಕಮರಹಳ್ಳಿ, ಬೊಗ್ಗನಪುರ, ಮರಳಾಪುರ, ರಂಗನಾಥಪುರ, ತೊರವಳ್ಳಿ, ನಿಟ್ರೆ, ಹಿರಿಕಾಟಿ, ಚಿಕ್ಕಾಟಿ, ಅರೆಪುರ, ತೊಂಡವಾಡಿ ಮತ್ತು ಹೊರೆಯಾಲ ವ್ಯಾಪ್ತಿಯ ತೊಂಡವಾಡಿ ಐಪಿ, ದೊಡ್ಡಹುಂಡಿ ಐಪಿ, ಓಂಕಾರ್ ಎನ್.ಜೆ.ವೈ, ಅರೆಪುರ ಇಂಡಸ್ಟಿçಯಲ್, ಹಿರಿಕಾಟಿ ಇಂಡಸ್ಟಿçಯಲ್, ಕುರುಬರಹುಂಡಿ ವಾಟರ್ ಸಪ್ಲೆ ಕಮರಹಳ್ಳಿ ಐಪಿ, ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಸಂಪರ್ಕಿಸುವಂತೆ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

ದ್ವಿತೀಯ ಪಿಯುಸಿ ಪರೀಕ್ಷೆ : ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

Published

on

ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆ ಇದೇ ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದು, ಪರೀಕ್ಷಾ ಕಾರ್ಯವನ್ನು ಪಾರದರ್ಶಕವಾಗಿ ನಡೆಸಲು ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ನಡೆದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 6285 ಹೊಸ ವಿದ್ಯಾರ್ಥಿಗಳು, 150 ಖಾಸಗಿ ವಿದ್ಯಾರ್ಥಿಗಳು, 474 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 6909 ವಿದ್ಯಾರ್ಥಿಗಳು ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ಕಾರ್ಯವು ಮುಕ್ತ, ಸುವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಯಲು ಅಧಿಕಾರಿಗಳು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳಿಗೆ ಅವಶ್ಯಕತೆಗನುಗುಣವಾಗಿ ಸೂಕ್ತ ಪೊಲೀಸ್ ಬಂದೋ ಬಸ್ತ್ ಒದಗಿಸಬೇಕು. ಅಗತ್ಯಕ್ಕೆ ತಕ್ಕಂತೆ ಮಹಿಳಾ ಸಿಬ್ಬಂದಿಯನ್ನು ಸಹ ನಿಯೋಜಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಅನಧಿಕೃತ ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡದಂತೆ ತಡೆಯಬೇಕು. ಪರೀಕ್ಷಾ ಕೇಂದ್ರಗಳ ಬಳಿ ಅಕ್ರಮಗಳಿಗೆ ಪ್ರಚೋದಿಸುವವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪರೀಕ್ಷಾ ಅಕ್ರಮಗಳಿಗೆ ಆಸ್ಪದ ಕೊಡಬಾರದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಶುಶ್ರೂಷಕರನ್ನು ಪ್ರಥಮ ಚಿಕಿತ್ಸೆ ಕಿಟ್ ನೊಂದಿಗೆ ನೇಮಕ ಮಾಡಬೇಕು. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಗಳಿಗೆ ತೊಂದರೆಯಾಗದಂತೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಮೂಲ ಸೌಕರ್ಯಗಳು ಸಮರ್ಪಕವಾಗಿ ಇರುವಂತೆ ಮೊದಲೇ ನೋಡಿಕೊಳ್ಳಬೇಕು ಎಂದರು.

ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಸಂಚರಿಸಲು ಆದೇಶಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅನುಕೂಲವಾಗುವಂತೆ ಪಟ್ಟಣ ಹಾಗೂ ಎಲ್ಲ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳಿರುವ ಮಾರ್ಗಗಳಲ್ಲಿ ವಿದ್ಯಾರ್ಥಿಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಬಸ್ ನಿಲುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ಪರೀಕ್ಷೆ ಹಾಗೂ ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಗೊಂದಲ, ಸಂದೇಹ, ಸುಳ್ಳು ವದಂತಿ ಹಬ್ಬಿಸುವ ಹಾಗೂ ರವಾನಿಸುವವರ ವಿರುದ್ದ ಕಾನೂನಿನ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಾರ್ವಜನಿಕರು, ಪೋಷಕರು, ವಿದ್ಯಾರ್ಥಿಗಳು ಪರೀಕ್ಷೆ ಸಂಬಂಧ ಸುಳ್ಳು ಮಾಹಿತಿಗಳಿಗೆ ಕಿವಿಗೊಡಬಾರದು. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದರು.

ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಶಿಸ್ತು ಬದ್ದವಾಗಿ ಪರೀಕ್ಷಾ ಕಾರ್ಯವನ್ನು ನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಯಶಸ್ವಿಯಾಗಿ ಪರೀಕ್ಷಾ ಕರ್ತವ್ಯವನ್ನು ಪೂರೈಸಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುರೇಶ್, ಖಜಾನೆ ಇಲಾಖೆ ಉಪನಿರ್ದೇಶಕರಾದ ಕೆ.ಎಸ್. ರಾಜೇಶ್ವರಿ, ತಾಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಾಂಶುಪಾಲರು ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸಭೆಗೂ ಮೊದಲು ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಪ್ರಾಂಶುಪಾಲರೊಂದಿಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಗತಿ ಸುಧಾರಣಾ ಸಂಬಂಧ ಸಭೆ ನಡೆಸಲಾಯಿತು.

Continue Reading

Trending

error: Content is protected !!