Connect with us

Kodagu

ರೋಹನ್ ಬೋಪಣ್ಣ ವಿಶ್ವ ‘ನಂಬರ್ 1’

Published

on

ಮಡಿಕೇರಿ : ಕೊಡಗಿನವರಾದ ಟೆನ್ನಿಸ್ ಕ್ರೀಡಾಪಟು ಮಚ್ಚಂಡ ರೋಹನ್ ಬೋಪಣ್ಣ ಅವರು ಅಂತರಾಷ್ಟ್ರೀಯ ಟೆನ್ನಿಸ್ ಪುರುಷರ ಡಬಲ್ಸ್ ವಿಭಾಗದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಸಾಧನೆ ಗೈದಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಪಟುಗಳು ಬಹುತೇಕ ತಮ್ಮ ೪೦ನೇ ವಯಸ್ಸಿಗೆ ಕಾಲಿಡುವ ಮೊದಲೇ ‘ಫಿಟ್ನೆಸ್’ ನಿರ್ವಹಣೆ ಕಷ್ಟಸಾಧ್ಯ ವಾಗಿರುವ ಕಾರಣ ನಿವೃತ್ತಿ ಹೊಂದುತ್ತರಾದರೂ ಮೂಲತಃ ಮಾದಾಪುರ ಗ್ರಾಮದ ಕಾಫಿ ಬೆಳೆಗಾರ ಮಚ್ಚಂಡ ಜಿ. ಬೋಪಣ್ಣ ಹಾಗೂ ಮಲ್ಲಿಕಾ ಬೋಪಣ್ಣ ದಂಪತಿಯ ಪುತ್ರರಾಗಿರುವ ರೋಹನ್ ಬೋಪಣ್ಣ ಅವರು ತಮ್ಮ ೪೩ನೇ ವಯಸ್ಸಿನಲ್ಲಿ ತಮಗಿಂತ ಕಿರಿಯ ಟೆನ್ನಿಸ್ ಪಟುಗಳೊಂದಿಗೆ ಸೆಣಸಾಡಿ ಜಯಿಸಿ ವಿಶ್ವ ಕ್ರಮಾಂಕ ‘ಒಂದಕ್ಕೆ’ ಏರಿರುವ ಅತ್ಯಂತ ಹಿರಿಯ ಆಟಗಾರ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.


ತಾ.೨೪ ರಂದು ಆಸ್ಟ್ರೇಲಿಯಾದ ಮೆಲ್‌ಬೋರ್ನ್ನಲ್ಲಿ ಜರುಗಿದ ‘ಆಸ್ಟ್ರೇಲಿಯಾ ಓಪನ್’ – ಪುರುಷರ ಡಬಲ್ಸ್ನ ಕ್ವಾರ್ಟರ್ ಫೈನಲ್‌ನಲ್ಲಿ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥಿವ್ ಎಬ್ಡನ್ ಜೋಡಿ, ಅರ್ಜಂಟೀನಾದ ಗೊನ್ಸಾಲೆಸ್ – ಮಾಲ್ಟೆನಿ ಜೋಡಿಯನ್ನು ಮೊದಲ ಸೆಟ್‌ನಲ್ಲಿ ೬-೪ ಗೇಮ್‌ಗಳಿಂದ ಮಣಿಸಿತು. ಎರಡನೆಯ ಸೆಟ್‌ನಲ್ಲಿ ೬-೬ ಸಮಬಲದ ಬಳಿಕ ಟೈ-ಬ್ರೇಕರ್‌ನಲ್ಲಿ ೭-೫ ಅಂಕಗಳಿAದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ತಾ.೨೫ ರಂದು (ಇಂದು) ಚೀನಾದ ಜ್ಯಾಂಗ್ ಹಾಗೂ ಚೆಕ್ ದೇಶದ ಮಚಾಕ್ ಅವರೊಂದಿಗೆ ಸೆಮಿಫೈನಲ್‌ನಲ್ಲಿ ಬೋಪಣ್ಣ-ಎಬ್ಡನ್ ಜೋಡಿ ಸೆಣಸಾಡಲಿದ್ದಾರೆ. ಟೂರ್ನಿಗೂ ಮುನ್ನ ವಿಶ್ವದ ೩ನೇ ಕ್ರಮಾಂಕದಲ್ಲಿ ಸ್ಥಾನ ಗಳಿಸಿದ್ದ ಬೋಪಣ್ಣ ಅವರು ಈ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿ ೨ನೇ ಕ್ರಮಾಂಕವನ್ನು ದೃಢೀಕರಿಸಿಕೊಂಡಿದ್ದರು. ಇದೀಗ ಸೆಮಿಫೈನಲ್ ಪ್ರವೇಶಿಸಿ ಪುರುಷರ ಡಬಲ್ಸ್ನಲ್ಲಿ ವಿಶ್ವ ನಂಬರ್-೧ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರ ಜೋಡಿ ಮ್ಯಾಥಿವ್ ಎಬ್ಡನ್ ೨ನೇ ಕ್ರಮಾಂಕವನ್ನು ಅಲಂಕರಿಸಿದ್ದಾರೆ. ಪಂದ್ಯಾಟ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದ ರೋಹನ್ ಅವರ ಪತ್ನಿ ಸುಪ್ರಿಯಾ ಅವರು ಕೂಡ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಕಾರ್ಯಕಾರಿ ಸಮಿತಿಗೆ ಚುನಾವಣೆ – ಆಯ್ಕೆ

Published

on

ವಿರಾಜಪೇಟೆ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ವಿರಾಜಪೇಟೆ ತಾಲೂಕು ಶಾಖೆಯ 2024-2029ನೇ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಸರಕಾರಿ ಪ್ರೌಢ ಶಾಲೆ ಮತಕ್ಷೇತ್ರದಿಂದ ರಾಘವೇಂದ್ರ ಸಿ.ಎಂ ಅರಣ್ಯ ಇಲಾಖೆ ಮತಕ್ಷೇತ್ರದಿಂದ ಉಮಾಶಂಕರ್ ಎ.ಎಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆ ಮತಕ್ಷೇತ್ರದಿಂದ ಲಲಿತಾ ಎ.ಬಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಳಿದ ಸಿಬ್ಬಂದಿಗಳು ಮತಕ್ಷೇತ್ರದಿಂದ ಎರಡು ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾರ್ಯಪ್ಪ ಎ.ಯು, ಲಲಿತಾ ಪಿ.ಎ ಅವರು ಸ್ಪರ್ಧಿಸಿ ಜಯಶೀಲರಾಗಿದ್ದಾರೆ.


ಉಳಿದ ಇಲಾಖೆಗಳ ಮತಕ್ಷೇತ್ರಗಳಾದ ಕೃಷಿ ಇಲಾಖೆ ಮತಕ್ಷೇತ್ರದಿಂದ ಅಶ್ವಿನ್ ಕುಮಾರ್ ಹೆಚ್.ಬಿ, ಪಶುಪಾಲನಾ ಮತ್ತು ವೈದ್ಯ ಇಲಾಖೆ ಮತಕ್ಷೇತ್ರದಿಂದ ಸರ್ವರ್ ಪಾಷಾ, ಕಂದಾಯ ಇಲಾಖೆ ತಾಲೂಕು ಕಚೇರಿ ಮತಕ್ಷೇತ್ರದಿಂದ ಸೋಮಣ್ಣ ಕೆ.ಎಂ, ಕಂದಾಯ ಇಲಾಖೆ ಕ್ಷೇತ್ರ ಸಿಬ್ಬಂದಿಗಳು ಮತಕ್ಷೇತ್ರದಿಂದ ಹರೀಶ್ ಎಂ.ಎಲ್, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಮತಕ್ಷೇತ್ರದಿಂದ ಸುಬ್ಬಯ್ಯ ಟಿ.ಪಿ, ಸರಕಾರಿ ಪ್ರಾಥಮಿಕ ಶಾಲೆಗಳು ಮತಕ್ಷೇತ್ರದಿಂದ ಸುರೇಂದ್ರ ಈ, ದೇವರಾಜ್ ಬಿ.ಟಿ, ರಮಾನಂದ ಟಿ.ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಚೇರಿ ಮತಕ್ಷೇತ್ರದಿಂದ ಕುಶಾಲಪ್ಪ ಎಂ.ಎನ್, ಸರಕಾರಿ ಪದವಿಪೂರ್ವ ಕಾಲೇಜುಗಳು ಮತಕ್ಷೇತ್ರದಿಂದ ಚಾರ್ಲ್ಸ್ ಡಿಸೋಜ, ಪದವಿ ಕಾಲೇಜುಗಳು ಮತಕ್ಷೇತ್ರದಿಂದ ಡಾ.ದಯಾನಂದ ಕೆ.ಸಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಮತಕ್ಷೇತ್ರದಿಂದ ನಾಗರಾಜು ಹೆಚ್.ಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತಕ್ಷೇತ್ರದಿಂದ ಶಶಿಕಾಂತ್ ಎಂ.ಪಿ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಮತಕ್ಷೇತ್ರದಿಂದ ಸಣ್ಣ ಜವರಯ್ಯ, ನ್ಯಾಯಾಂಗ ಇಲಾಖೆ ಮತಕ್ಷೇತ್ರದಿಂದ ಸ್ಟೀಫನ್ ಡಿಸೋಜ ಎಂ.ಎ, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ತಾಲೂಕು ಪಂಚಾಯತ್ ಕಚೇರಿ ಮತಕ್ಷೇತ್ರದಿಂದ ಗುರುರಾಜ್ ಬಿ.ಎಸ್, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಉಳಿದ ಸಿಬ್ಬಂದಿಗಳು ಮತಕ್ಷೇತ್ರದಿಂದ ತಿಮ್ಮಯ್ಯ ಕೆ.ಎಂ, ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆ ಮತಕ್ಷೇತ್ರದಿಂದ ಸಂತೋಷ್, ಇತರ ಇಲಾಖೆ ಪರಿಷಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಮತಕ್ಷೇತ್ರದಿಂದ ಬಸವರಾಜು ಎನ್.ಎಸ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ವಿರಾಜಪೇಟೆ ತಾಲೂಕು ಶಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Kodagu

ನ.03ರಂದು ಚೆಟ್ಟಳ್ಳಿಯಲ್ಲಿ ಪತ್ರಕರ್ತರ ಫುಟ್ಬಾಲ್ ಪಂದ್ಯಾವಳಿ

Published

on

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಪತ್ರಕರ್ತರ ಕಾಲ್ಚೆಂಡು ಪಂದ್ಯವಾಳಿಯು ನವೆಂಬರ್ 03 ರಂದು ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ‌ ಎಂದು ಕ್ರೀಡಾಕೂಟದ ಸಂಚಾಲಕರಾದ ಪ್ರೆಸ್ ಕ್ಲಬ್ ನಿರ್ದೇಶಕರಾಗಿರುವ ಇಸ್ಮಾಯಿಲ್ ಕಂಡಕರೆ ಹಾಗೂ ವಿನೋದ್ ಕೆ.ಎಂ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯು ಲೀಗ್ ಮಾದರಿಯಲ್ಲಿ ನಡೆಯಲಿದ್ದು,ಸೂಪರ್ ಸೆವೆನ್ಸ್ ಮಾದರಿಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳ ಭಾಗವಹಿಸಲಿದೆ.
ಗೋಪಾಲ್ ಸೋಮಯ್ಯ ನಾಯಕತ್ವದ ಮೀಡಿಯಾ ಯುನೈಟೆಡ್ ತಂಡದಲ್ಲಿ,ರೆಜಿತ್ ಕುಮಾರ್ ಗುಹ್ಯ,ವಿವಿ ಅರುಣ್ ಕುಮಾರ್,ಕುಡೆಕಲ್ ಸಂತೋಷ್,ಶಶಿಕುಮಾರ್ ರೈ,ಅಬ್ದುಲ್ಲಾ,ಎಚ್.ಸಿ ಜಯಪ್ರಕಾಶ್, ಕೆ.ಬಿ ಶಂಶುದ್ದೀನ್,ವಿಶ್ವ ಕುಂಬೂರು,ದುರ್ಗ ಪ್ರಸಾದ್,ಚಂದನ್ ನಂದರಬೆಟ್ಟು,ಮತ್ತು ರವಿಕುಮಾರ್ ಸ್ಥಾನ ಪಡೆದಿದ್ದಾರೆ.
ಸುರ್ಜಿತ್ ನಾಯಕತ್ವದ ರಾಕ್ ಸ್ಟಾರ್ ತಂಡದಲ್ಲಿ ಸುಬ್ರಮಣಿ ಸಿದ್ದಾಪುರ, ಮಂಜು ಸುವರ್ಣ,ಮುಸ್ತಫಾ ಸಿದ್ದಾಪುರ,ಮನು,ರಿಜ್ವಾನ್ ಹುಸೇನ್,ಲೋಕೇಶ್ ಕಾಟಕೇರಿ,ಕಿಶೋರ್ ನಾಚಪ್ಪ,ಅಂತೋಣಿ, ಚಿತನ್,ಮಹಮ್ಮದ್ ಮುಸ್ತಫಾ, ಸ್ಥಾನ ಪಡೆದಿದ್ದಾರೆ.
ವಿಜಯ್ ರಾಯ್ ನಾಯಕತ್ವದ ಟೀಮ್ ಫೀನಿಕ್ಸ್ ಹಂಟರ್ ತಂಡದಲ್ಲಿ ನವೀನ್


ಡಿಸೋಜಾ,ಶಿವರಾಜ್, ಪ್ರೇಮ್ ಕುಮಾರ್,ಪುತ್ತಂ ಪ್ರದೀಪ್,ಗಣೇಶ್ ಕುಡೆಕಲ್,ಸಂತೋಷ್ ರೈ, ದಿವಾಕರ್,ಕಿಶೋರ್ ಕುಮಾರ್ ಶೆಟ್ಟಿ,ಕಿರಣ್ ರಾಜ್ ಹಾಗೂ ಹನೀಫ್ ಕೊಡ್ಲಿಪೇಟೆ ಆಡಲಿದ್ದಾರೆ.
ಇಸ್ಮಾಯಿಲ್ ಕಂಡಕರೆ ನಾಯಕತ್ವದ ಮಾಸ್ಟರ್ ಎಫ್.ಸಿ ತಂಡದಲ್ಲಿ, ಎಂ‌.ಕೆ ಆದರ್ಶ್, ವಿನೋದ್ ಕೆ.ಎಂ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಸವಿತಾ ರೈ,ಬೊಳ್ಳಜಿರ ಬಿ‌.ಅಯ್ಯಪ್ಪ, ಶಿವು ಕಾಂತರಾಜ್, ಸವಾದ್ ಉಸ್ಮಾನ್,ಟಿ.ಆರ್ ಪ್ರಭುದೇವ್, ಉದಿಯಂಡ ಜಯಂತಿ, ಹಾಗೂ ಎನ್.ಎನ್ ದಿನೇಶ್ ಸ್ಥಾನ ಪಡೆದಿದ್ದಾರೆ.

ಬಹುಮಾನಗಳ ವಿವರ:

ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.
ಅದಲ್ಲದೇ ಚಾಂಪಿಯನ್ ತಂಡದ ನಾಯಕನಿಗೆ ವೈಯಕ್ತಿಕವಾಗಿ 1500 ರೂ ನಗದು ಬಹುಮಾನ ಮತ್ತು ಎಲ್ಲಾ ಆಟಗಾರರಿಗೆ ತಲಾ ಸಾವಿರ ರೂ ನೀಡಲಾಗುವುದು.
ರನ್ನರ್ಸ್ ಪ್ರಶಸ್ತಿ ವಿಜೇತ ತಂಡಕ್ಕೆ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿಯೊಂದಿಗೆ ತಂಡಕ ನಾಯಕನಿಗೆ ವೈಯಕ್ತಿಕವಾಗಿ 1000 ರೂ ಹಾಗೂ ತಂಡದ ಎಲ್ಲಾ ಆಟಗಾರರಿಗೆ ತಲಾ 500 ರೂ ಬಹುಮಾನ ನೀಡಲಾಗುವುದು.
ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೂ ಕೂಡ ಟ್ರೋಫಿ ನೀಡಲಾಗುತ್ತದೆ.ಅದಲ್ಲದೇ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಟ್ರೋಫಿ ನೀಡಿ ಗೌರವಿಸಲಾಗುವುದು.
ಬೆಸ್ಟ್ ಪ್ಲೇಯರ್ ಆಫ್ ದಿ-ಟೂರ್ನಮೆಂಟ್,ಟಾಪ್ ಸ್ಕೋರರ್,ಬೆಸ್ಟ್ ಗೋಲ್ ಕೀಪರ್, ಬೆಸ್ಟ್ ಡಿಫೆಂಡರ್,ಬೆಸ್ಟ್ ಮಹಿಳಾ ಆಟಗಾರ್ತಿ,ಬೆಸ್ಟ್ ಎಮರ್ಜಿಂಗ್ ಪ್ಲೇಯರ್,ಫೈನಲ್ ಹಿರೋ ಆಫ್-ದಿ‌ಮ್ಯಾಚ್ ಹಾಗೂ ಲೀಗ್ ಮಾದರಿಯ ಎಲ್ಲಾ ಪಂದ್ಯದಲ್ಲಿ ಹಿರೋ-ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗುತ್ತದೆ ಎಂದು ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯ ಸಂಚಾಲಕರಾದ ಇಸ್ಮಾಯಿಲ್ ಕಂಡಕರೆ ಹಾಗೂ ವಿನೋದ್ ಕೆ.ಎಂ ಮಾಹಿತಿ ನೀಡಿದ್ದಾರೆ.

Continue Reading

Kodagu

ರೋಟರಿಯಿಂದ ಪೋಲಿಯೋ ನಿರ್ಮೂಲನೆ ಜಾಗ್ರತಿ ಬೈಕ್ ಜಾಥಾ

Published

on

ಮಡಿಕೇರಿ : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ರೋಟರಿ ವುಡ್ಸ್ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಜಾಗತಿಕ ಪೊಲೀಯೋ ನಿಮೂ೯ಲನ ದಿನದ ಅಂಗಲಾಗಿ ಬೈಕ್ ಜಾಥಾ ಆಯೋಜಿತವಾಗಿತ್ತು.

ನಗರದ ಜನರಲ್ ತಿಮ್ಮಯ್ಯ ವೖತ್ತದಲ್ಲಿ ಬೈಕ್ ಜಾಥಾಕ್ಕೆ ಮಡಿಕೇರಿ ಪೊಲೀಸ್ ವೖತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ ಲೋಕೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.


ಪೊಲೀಯೋ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಪೊಲಿಯೋ ನಿಮೂ೯ಲನೆಗೆ ಸಹಕರಿಸುವಂತೆ ಮಡಿಕೇರಿಯ ಮುಖ್ಯರಸ್ತೆ ಮೂಲಕ 32 ಬೈಕ್ ಸವಾರರು ಸಂದೇಶವನ್ನು ಸಾರಿದರು.

ಈ ಜಾಥಾವು ಪೋಲಿಯೋ ವಿರೋಧದ ಹೋರಾಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ತಿಳಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಕಟ್ಟೆಮನೆ ಸೋನಜಿತ್, ಖಜಾಂಜಿ ಲಿಂಗರಾಜುಸ ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾಯ೯ದಶಿ೯ ಕಿರಣ್ ಕುಂದೂರು, ರೋಟರಿ ಪ್ರಮುಖರಾದ ಕೆ. ಕೆ ವಿಶ್ವನಾಥ್, ಎ.ಕೆ ಜೀವನ್, ಪ್ರಮೋದ್ ಕುಮಾರ್ ರೈ, ಎಸ್ ಎಸ್ ಸಂಪತ್ ಕುಮಾರ್, ವಸಂತ್ ಕುಮಾರ್, ಅಜ್ಜೇಟಿರ ಲೋಕೇಶ್, ಎ.ಕೆ ವಿನೋದ್ ,ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Continue Reading

Trending

error: Content is protected !!