Mysore
ರೈತರಿಗೆ ಸರ್ಕಾರ ಹೆಚ್ಚು ಸೌಲಭ್ಯ ನೀಡಬೇಕು ಮನವಿ, ಟ್ರಸ್ಟ್ ಅಧ್ಯಕ್ಷ ಕೇಶವ
ತಾಲೂಕಿನ ಚಿಕ್ಕ ಹನಸೋಗೆ ಗೇಟ್ ನಲ್ಲಿ ರೈತ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.
ರೈತ ಯೋಧ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೇಶವ ಮಾತನಾಡಿ ರೈತರ ಜಯಂತಿಯನ್ನು ಪ್ರತಿ ವರ್ಷ ಆಚರಿಸಬೇಕೆಂದು ಹೇಳಿದರು. ರೈತರು ದೇಶದ ಆಸ್ತಿ ಅವರಿಗೆ ಸರ್ಕಾರ ಹೆಚ್ಚು ಸೌಲಭ್ಯಗಳನ್ನು ಕೊಡಬೇಕು ರೈತರಿಗೆ ಎಲ್ಲಾ ತರದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಸರ್ಕಾರವನ್ನು ಮನವಿ ಮಾಡಿದರು.
ರೈತರುಗಳಾದ ಸುರೇಶ, ಜಗದೀಶ, ಹರೀಶ, ಅರುಣ, ಹೋರಿ ಅಭಿ,ಸಣ್ಣೇಗೌಡನ ಕೊಪ್ಪಲು ರಘು, ಸುರೇಶ, ಚನ್ನಂಗೆರೆ ಕುಮಾರ, ಹನಸೋಗೆ ಮಂಜು, ನಟರಾಜು ಮಧು ಇನ್ನಿತರರು ಇದ್ದರು.
Mysore
ಸಂಸ್ಥೆಗಳ ನೆರವಿಗೆ, ಸಂಘಟನೆಗಳು ಮುಂದಾಗಬೇಕು ಸಚಿವಾಲಯದ ಹಿರಿಯ ಸಹಾಯಕ ಸಿ. ಟಿ. ಮಂಜುನಾಥ್
ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ಬಡವರು, ನಿರ್ಗತಿಕರಿಗೆ, ನಿಸ್ವಾರ್ಥದಿಂದ ಸೇವೆ ಮಾಡುವ ಸಂಘ ಸಂಸ್ಥೆಗಳ ನೆರವಿಗೆ ಸಮುದಾಯಗಳು, ಸಂಘಟನೆಗಳು ಮುಂದಾಗಬೇಕು ಎಂದು ಕರ್ನಾಟಕ ಸರ್ಕಾರ ಸಚಿವಾಲಯದ ಹಿರಿಯ ಸಹಾಯಕರಾದ ಸಿ. ಟಿ ಮಂಜುನಾಥ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಸಮೀಪ ಇರುವ ಏಮ್ ಫಾರ್ ಸೇವಾ ಬಾಲಕರ ವಸತಿ ನಿಲಯದ ಮಕ್ಕಳಿಗೆ ಮಾಜಿ ಸಚಿವ ಸಿ ಎಚ್ ವಿಜಯಶಂಕರ್ ರವರು ಮಣಿಪಾಲದ ರಾಜ್ಯಪಾಲರಾಗಿ ನೇಮಕವಾದ ಹಿನ್ನೆಲೆಯಲ್ಲಿ ಉಚಿತವಾಗಿ ಹೊದಿಕೆಗಳು, ನೋಟ್ ಬುಕ್ ಹಾಗೂ ಆಹಾರ ಧಾನ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಇಂದಿಗೂ ಬಡತನದ ಪ್ರಮಾಣ ಏರುತ್ತಲೇ ಇದ್ದು ಅಂತಹವರ ಸೇವೆಗೆ ಏಮ್ ಫಾರ್ ಸೇವಾದಂತಹ ಹತ್ತಾರು ಸಂಘ ಸಂಸ್ಥೆಗಳು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ದುಡಿಯುತ್ತಿದ್ದು ಇವುಗಳನ್ನು ಬೆಳೆಸುವ ಹೊಣೆಗಾರಿಕೆ ನಮ್ಮದಾಗಿದೆ, ಸಂಸ್ಕಾರಯುತ ಜೀವನ ಮತ್ತು ಕಲಿಕೆ ಇಂದಿನ ಯುವ ಸಮುದಾಯಕ್ಕೆ ಅಗತ್ಯವಾಗಿ ಬೇಕಾಗಿದ್ದು, ಕೇವಲ ಅಂಕ ಗಳಿಕೆಗೆ ಮಾತ್ರ ಶಿಕ್ಷಣ ಸೀಮಿತವಾಗದೆ, ಮೌಲ್ಯಯುತ ಬದುಕನ್ನು ಕಟ್ಟಿ ಕೊಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ತಾಂತ್ರಿಕ ಸಹಾಯಕರಾದ ಸಿ ಎಸ್ ಮೋಹನ್, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಬಾಲ ಮನೋಹರ, ಕುಪ್ಪೆ ಸಹಕಾರ ಸಂಘದ ಸಹಾಯಕ ಜಗದೀಶ್, ಉದಯಕುಮಾರ್, ವೀರಭದ್ರೇಶ್ವರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಮಣಿಕಂಠ ದೊಡ್ಡ ಕೊಪ್ಪಲು ಭರತ್ ವಸತಿ ನಿಲಯದ ವಾರ್ಡನ್ ಆನಂದ್ ಉಪಸ್ಥಿತರಿದ್ದರು.
Mysore
ಮುಕ್ತ ವಿವಿ ಪರೀಕ್ಷೆ ಮುಂದೂಡಿಕೆ
ಮೈಸೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 13 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಮುಂದೂಡಲಾದ ಸ್ನಾತಕ ಪರೀಕ್ಷೆಯನ್ನು ನವೆಂಬರ್ 25 ರಂದು ಹಾಗೂ ಸ್ನಾತಕೋತ್ತರ ಪರೀಕ್ಷೆಯನ್ನು ಡಿಸೆಂಬರ್ 2 ರಂದು ನಡೆಸಲಾಗುವುದು. ಉಳಿದಂತೆ ನಿಗದಿಪಡಿಸಿರುವ ಎಲ್ಲ ಪರೀಕ್ಷೆಗಳು ಪರೀಕ್ಷಾ ವೇಳಾಪಟ್ಟಿಯಂತೆ ನಡೆಯುತ್ತದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಡಾ.ಎಚ್.ವಿಶ್ವನಾಥ್ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Mysore
ಹೂಟಗಳ್ಳಿ ಶಾಲೆಯಲ್ಲಿ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟನೆ
ಸಾಮಾನ್ಯ ಮಕ್ಕಳಂತೆ ವಿಶೇಷಚೇತನ ಮಕ್ಕಳನ್ನು ಕಾಣಬೇಕು. ಅಂಗವೈಕಲ್ಯತೆಯಿಂದ ಬಳಲುವ ಮಕ್ಕಳನ್ನು ತಾತ್ಸಾರ ಮನೋಭಾವದಿಂದ ನೋಡದೆ ಸರಿಸಮಾನವಾಗಿ ಕಂಡು ಅವಕಾಶ ಒದಗಿಸಿದರೆ ಖಂಡಿತ ಎಲ್ಲರಂತೆ ಸಮಾಜದಲ್ಲಿ ಬದುಕಬಲ್ಲರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಹೂಟಗಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಹಾಗೂ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆರು ವರ್ಷದ ಮೇಲ್ಪಟ್ಟ ೧೫ ವರ್ಷದೊಳಗಿನ ಅಂಗವಿಕಲತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಅಲೀಂ ಸಂಸ್ಥೆ ವತಿಯಿಂದ ಆಯೋಜಿಸಲಾಗಿದೆ. ಕಣ್ಣು,ಕಿವಿ, ಕಾಲು ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳನ್ನು ವೈದ್ಯರು ತಪಾಸಣೆ ನಡೆಸಲಿದ್ದಾರೆ. ಹೂಟಗಳ್ಳಿ ಶಾಲೆಯಲ್ಲಿ ಆರಂಭವಾಗಿರುವ ಈ ಶಿಬಿರವನ್ನು ಡಿಸೆಂಬರ್ ೩೧ರವರೆಗೆ ನಡೆಸಲು ತೀರ್ಮಾನ ಮಾಡಿದ್ದಾರೆ.ಶಿಕ್ಷಕರು, ಪೋಷಕರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಶಿಕ್ಷಕರು ತಂತಮ್ಮ ಶಾಲೆಯ ಮಕ್ಕಳಿಗೆ ತಿಳಿವಳಿಕೆ ಮೂಡಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಅನೇಕರಿಗೆ ಕಿವಿ,ಕಣ್ಣಿನ ಸಮಸ್ಯೆ ಇರುತ್ತದೆ. ಆದರೆ, ಅದನ್ನು ಗುರುತಿಸಲು ಸಾಧ್ಯವಾಗಿರಲ್ಲ. ಆಸ್ಪತ್ರೆಗೆ ತೋರಿಸಲು ಹಣವಿಲ್ಲವೆಂದು ಕೈ ಚೆಲ್ಲಿ ಕೂರುವ ಪೋಷಕರು ಯಾವುದೇ ಆತುರ ಮಾಡಿಕೊಳ್ಳದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಬೇಕು ಎಂದು ಸಲಹೆನೀಡಿದರು.
ವಿಶೇಷಚೇತನರ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಸಾಮಾನ್ಯ ಮಕ್ಕಳಂತೆ ಈ ಮಕ್ಕಳನ್ನು ಸರಿಸಮಾನವಾಗಿ ಕಂಡು ಪ್ರೋತ್ಸಾಹ ನೀಡಬೇಕು. ಹುಟ್ಟು-ಸಾವು ಯಾವ ರೀತಿ ಇರುತ್ತದೋ ಅದೇ ರೀತಿ ಕೆಲವು ಮಕ್ಕಳಿಗೆ ಹುಟ್ಟಿನಿಂದ ಬರುವ ಸಮಸ್ಯೆಗೆ ದೂಷಣೆ ಮಾಡದೆ ದೇವರು ಕೊಟ್ಟ ಮಗು ಎನ್ನುವಂತೆ ನೋಡಿ ಬೆಳೆಸಬೇಕು. ನಾವು ಅವರನ್ನು ನಿರ್ಲಕ್ಷ್ಯ ಮಾಡುವ ಬದಲಿಗೆ ಅವಕಾಶ ಕೊಡಬೇಕು ಎಂದರು. ದೃಷ್ಟಿಹೀನತೆ,ಬಲಹೀನತೆ ಮಕ್ಕಳೆಂದು ನೋಡದೆ ಪುಣ್ಯದ ಕೆಲಸವಾಗಿ ಕಾಣಬೇಕು. ಈ ವಿಚಾರದಲ್ಲಿ ಅಲೀಂ ಸಂಸ್ಥೆಯ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಸಾಧನಾ ಸಲಕರಣೆಗಳನ್ನು ವಿತರಿಸುತ್ತಿದ್ದಾರೆ. ಪ್ರತಿ ಮಗುವಿಗೆ ಅಗತ್ಯವಿರುವ ಸಲಕರಣೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಡಿಡಿಪಿಐ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಹೂಟಗಳ್ಳಿ ಮುಖಂಡರಾದ ಸುರೇಶ್,ಲೋಕೇಶ್, ಮಹದೇವು,ಮಹೇಶ್, ಸಿದ್ದರಾಜು ಮತ್ತಿತರರು ಹಾಜರಿದ್ದರು.
ಮೈಸೂರಿನ ಹೂಟಗಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಹಾಗೂ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭವನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.ಡಿಡಿಪಿಐ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಹೂಟಗಳ್ಳಿ ಮುಖಂಡರಾದ ಸುರೇಶ್,ಲೋಕೇಶ್, ಮಹದೇವು,ಮಹೇಶ್, ಸಿದ್ದರಾಜು ಮತ್ತಿತರರು ಹಾಜರಿದ್ದರು.
-
Mysore7 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State9 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State9 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health9 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan7 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized5 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized11 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State9 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.