Connect with us

Chikmagalur

ರಾಮಮಂದಿರ ಉದ್ಘಾಟನೆಗೆ ರಜೆ ಹಾಕಿದ್ರೆ ಸೆಂಟ್ ಜೋಸೆಫ್ ಶಾಲೆಯಲ್ಲಿ 1000 ರೂ ದಂಡ

Published

on

ಚಿಕ್ಕಮಗಳೂರು:  ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಜನವರಿ 22 ರಂದು ನಡೆಯಲಿದ್ದು, ದೇಶ-ವಿದೇಶಗಳಿಂದಲೂ ರಾಮನ ದರ್ಶನಕ್ಕೆ ಕಾದು ಕುಳಿತಿದ್ದಾರೆ. ಹೀಗಿರುವಾಗ ಕಾಫಿನಾಡು ಚಿಕ್ಕಮಗಳೂರಿನ ಕ್ರಿಶ್ಚಿಯನ್ ಶಾಲೆಯೊಂದರ ನಡೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ರಾಮಮಂದಿರ ಉದ್ಘಾಟನೆ ದಿನ ಯಾರೂ ಶಾಲೆಗೆ ರಜೆ ಹಾಕುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಸೋಮವಾರ ಶಾಲೆಗೆ ರಜೆ ಹಾಕಿದರೆ 1000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಚಿಕ್ಕಮಗಳೂರು ನಗರದ ಸೆಂಟ್ ಜೋಸೆಫ್ ಶಾಲೆಯೊಂದರ ಆಡಳಿತ ಮಂಡಳಿ ಮಕ್ಕಳಿಗೆ ಎಚ್ಚರಿಕೆ ನೀಡಿದೆ. ಶಾಲೆಯ ಈ ನಡೆಯಿಂದ ಬಜರಂಗದಳ, ವಿ.ಎಚ್.ಪಿ. ಪ್ರತಿಭಟನೆಗೆ ಇಳಿದಿದ್ದು, ಆದೇಶವನ್ನು ಹಿಂದೆ ಪಡೆಯುವಂತೆ ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಸಂಘಟನೆಯಿಂದ ಎಚ್ಚರಿಕೆ:
ಶಾಲೆಗಳಿಗೆ ರಜೆ ಕೊಡಬೇಕು ಎನ್ನುವುದು ನಮ್ಮ ಮೊದಲ ಬೇಡಿಕೆ, ಅದು ಸಾಧ್ಯವಾಗದೆ ಇದ್ದರೆ ಶಾಲೆಗಳಲ್ಲಿ ಎಲ್.ಇ.ಡಿ ಹಾಕಿ ಮಂದಿರ ಲೋಕಾರ್ಪಣೆಯನ್ನು ನೋಡುವ ವ್ಯವಸ್ಥೆ ಮಾಡಬಹುದು. ಇಲ್ಲವೇ ಯಾರಿಗೆಲ್ಲ ನೋಡಲು ಮನಸಿದೆಯೇ ಅವರು ರಜೆ ಹಾಕಿ ನೋಡಲಿ. ಅದನ್ನು ಬಿಟ್ಟು ಶಾಲೆಗೆ ಬರದಿದ್ದರೆ ದಂಡ ವಿಧಿಸುತ್ತೇವೆ ಎಂಬ ನಿಲುವು ನಡೆಯುವುದಿಲ್ಲ ಎಂದು ಹೇಳುವ ಮೂಲಕ ಇಡೀ ಜಿಲ್ಲೆಯಲ್ಲಿ ಇಂಥ ಕೃತ್ಯಗಳು ನಡೆಯಬಾರದು ಎಂದು ವಿಹಿಂಪ ಹಾಗೂ ಬಜರಂಗ ದಳ ಎಚ್ಚರಿಸಿದೆ.

ಇನ್ನು ಶನಿವಾರ ನವೋದಯ ಶಾಲೆಗಳ ಪ್ರವೇಶಕ್ಕೆ ಸಂಬಂಧಿಸಿದ ಪರೀಕ್ಷೆ ಇರುವುದರಿಂದ ಸೆಂಟ್ ಜೋಸೆಫ್ ಶಾಲೆಗೆ ರಜೆ ನೀಡಲಾಗಿದೆ. ಬಜರಂಗ ದಳ, ವಿ.ಎಚ್.ಪಿ. ಕಾರ್ಯಕರ್ತರು ಶಾಲೆಯ ಮುಂದೆ ಜಮಾಯಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಧಾವಿಸಿ, ಸೆಂಟ್ ಜೋಸೆಫ್ ಶಾಲೆಗೆ ಎಎಸ್ಪಿ ಕೃಷ್ಣಮೂರ್ತಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಭಾರಿ ಮಳೆ- ದ.ಕ ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯುಸಿಗೆ ರಜೆ

Published

on

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 16 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ , ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ರಜೆಯನ್ನು ಘೋಷಿಸಲಾಗಿದೆ.

ಈ ವೇಳೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ. ದುರ್ಬಲ / ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ
ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸುವುದು. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

Continue Reading

Chikmagalur

ಮಲೆನಾಡ ಆರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ*

Published

on

 

ಚಿಕ್ಕಮಗಳೂರು :

ಕಾಫಿನಾಡಲ್ಲಿ ಮಳೆ ಅಬ್ಬರ ಹಿನ್ನೆಲೆ

*ಮಲೆನಾಡ ಆರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ*

*ಚಿಕ್ಕಮಗಳೂರು, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಶಾಲೆಗಳಿಗೆ ರಜೆ*

*ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ*

ನಾಳೆ ಒಂದು ರಜೆ ಘೋಷಿಸಿದ ಜಿಲ್ಲಾಡಳಿತ

ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಿಂದ ಆದೇಶ

Continue Reading

Chikmagalur

ರೀಲ್ಸ್ ರೋಮಿಯೋಗಳ ವಿರುದ್ಧ ಪ್ರಕರಣ ದಾಖಲು

Published

on

ಚಿಕ್ಕಮಗಳೂರು :

ರೀಲ್ಸ್ ರೋಮಿಯೋಗಳ ವಿರುದ್ಧ ಪ್ರಕರಣ ದಾಖಲು

ರೀಲ್ಸ್ ಹುಚ್ಚಿಗೆ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡಿದ್ದ ಯುವಕರು

ಐವರು ಯುವಕರಿಂದ 5 ಕಿ.ಮೀ.ರಸ್ತೆ ಸಂಪೂರ್ಣ ಹಾಳು

ಐವರು ಯುವಕರನ್ನು ವಶಕ್ಕೆ ಪಡೆದ‌ ಪೊಲೀಸರು

ಮಂಗಳೂರಿನ ಉಜಿರೆ ಮೂಲದ ಗಿರೀಶ್, ಗಣೇಶ್, ಗಣೇಶ್ ಕುಮಾರ್, ಪ್ರವೀಣ್, ರೋಹಿತ್ ಬಂಧಿತ ಯುವಕರು

ಮೂಡಿಗೆರೆ ತಾಲೂಕಿನ ರಾಣಿ ಝರಿ ರಸ್ತೆ ಬಳಿ ವೀಲ್ಹಿಂಗ್ ಮಾಡಿದ್ದ ಯುವಕರು

ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ್ದ ಬೈಕ್ ಗಳನ್ನು ವಶಕ್ಕೆ‌ ಪಡೆದ ಪೊಲೀಸರು

ಐವರು ಯುವಕರ ಮೇಲೆ‌ ಸಾರ್ವಜನಿಕ ರಸ್ತೆ ಹಾಳು, ಜನರಿಗೆ ತೊಂದರೆ ಹಿನ್ನೆಲೆ ಪ್ರಕರಣ ದಾಖಲು

ಬಾಳೂರು ಪೊಲೀಸರಿಂದ ಯುವಕರ ಬಂಧನ

ಚಿಕ್ಕಮಗಳೂರು ಜಿಲ್ಲೆಯ‌ ಮೂಡಿಗೆರೆ ತಾಲೂಕು

Continue Reading

Trending

error: Content is protected !!