Connect with us

National - International

ರಾಮಮಂದಿರದ ಎರಡನೇ ಮಹಡಿ ನಿರ್ಮಾಣ ಫೆ.15 ರಂದು ಪ್ರಾರಂಭ!

Published

on

Ram Mandir Construction: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಎರಡನೇ ಹಂತದ ಕಾಮಗಾರಿಗೆ ಫೆ.15 ರಂದು ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಲಾಗುತ್ತಿದೆ.

ರಾಮಮಂದಿರ ಟ್ರಸ್ಟ್‌ನ ಅನಿಲ್‌ ಮಿಶ್ರಾ ಅವರು, ” ರಾಮಮಂದಿರದ ಮೊದಲನೇ ಮಹಡಿಯ ನಿರ್ಮಾಣ ಭಾಗಶಃ ಮುಕ್ತಾಯಗೊಂಡಿದ್ದು, ಎರಡನೇ ಮಹಡಿ ಹಾಗೂ ಗೋಪುರ ನಿರ್ಮಾಣದ ಕಾಮಗಾರಿ ಬಾಕಿ ಇದೆ. ಫೆ.15ರಿಂದ ಕಾಮಗಾರಿ ಆರಂಭವಾಗಲಿ, ಸಿದ್ಧತೆ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.

ಫೆ.15 ರಿಂದ ಸುಮಾರು 3,500 ಕಾರ್ಮಿಕರು, ಸಿಬ್ಬಂದಿಯು ನಿರ್ಮಾಣ ಕಾರ್ಯ ಮಾಡಲಿದ್ದಾರೆ.

ಎಲ್‌ ಆಂಡ್‌ ಟಿ ಕಂಪನಿಗೆ ರಾಮಮಂದಿರ ನಿರ್ಮಾಣದ ಹೊಣೆ ನೀಡಲಾಗಿದೆ. ಇನ್ನು ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. 2025ರ ಕೊನೆಯಲ್ಲಿ ರಾಮಮಂದಿರದ ಕಾಮಗಾರಿ ಮುಗಿಯಲಿದೆ ಎಂದು ವರದಿಯಾಗಿದೆ.

Continue Reading
Click to comment

Leave a Reply

Your email address will not be published. Required fields are marked *

National - International

ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಹನಿಟ್ರ್ಯಾಪ್‌ ಪ್ರಕರಣ

Published

on

ನವದೆಹಲಿ: ರಾಜ್ಯದಲ್ಲಿ ಭಾರಿ ಸುದ್ದಿಯಾಗಿರುವ ಹನಿಟ್ರ್ಯಾಪ್‌ ಪ್ರಕರಣವು ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಕರ್ನಾಟಕದಲ್ಲಿ ಸಚಿವರು, ಶಾಸಕರ ವಿರುದ್ಧ ಹನಿಟ್ರ್ಯಾಪ್‌ ನಡೆದಿದೆ ಎನ್ನಲಾದ ಪ್ರಕರಣ ಕುರಿತು ತನಿಖೆ ನಡೆಸುವಂತೆ ವಿನಯ್‌ಕುಮಾರ್‌ ಸಿಂಗ್‌ ಎಂಬುವವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ (ಪಿಐಎಲ್‌) ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ವಿಧಾನಸಭೆ ಅಧಿವೇಶನದ ವೇಳೆ ಸ್ವತಃ ಸಚಿವರೇ ತಮ್ಮ ಮೇಲೆ ಹನಿಟ್ರ್ಯಾಪ್‌ ನಡೆದಿದೆ ಎಂದು ಹೇಳಿದ್ದಾರೆ. ಸಾರ್ವಜನಿಕ ವಿಶ್ವಾಸದ ದೃಷ್ಠಿಯಿಂದ ಕೋರ್ಟ್‌ ನಿಗಾದಲ್ಲಿ ಕೂಡಲೇ ತನಿಖೆ ನಡೆಸಬೇಕು ಎಂದು ವಿನಯ್‌ಕುಮಾರ್‌ ಸಿಂಗ್‌ ಮುಖ್ಯ ನಾಯಾಮೂರ್ತಿ ಬಳಿ ಮನವಿ ಮಾಡಿದ್ದಾರೆ.

ಇದಕ್ಕೆ ಶೀಘ್ರವೇ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದ್ದು, ಹನಿಟ್ರ್ಯಾಪ್‌ ವಿಚಾರಣೆಯನ್ನು ಇಂದು ಅಥವಾ ನಾಳೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಿಜೆಐ ತಿಳಿಸಿದ್ದಾರೆ.

Continue Reading

National - International

ಅಣ್ಣಾಮಲೈ ಒಬ್ಬ ಪುವರ್‌ ಮ್ಯಾನ್‌: ಡಿಕೆ ಶಿವಕುಮಾರ್‌ ಹೀಗೇಳಿದ್ದೇಕೆ?

Published

on

ತಮಿಳುನಾಡು: ಜನಸಂಖ್ಯಾ ಆಧಾರಿತ ಲೋಕಸಭಾ ಕ್ಷೇತ್ರಗಳ ಮರು ವಿಂಗಡನೆ ಕುರಿತಂತೆ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಐಎನ್‌ಡಿಐಎ ಮೈತ್ತಿ ಪಕ್ಷಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು.

ಈ ಸಭೆಯಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕರ್ನಾಟಕದಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಭಾಗವಹಿಸಿದ್ದರು.

ಈ ಸಭೆ ವಿರುದ್ಧ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಮೇಕೆದಾಟು ಯೋಜನೆಗೆ ಮುಂದಾಗಿ ತಮಿಳುನಾಡು ರಾಜ್ಯದ ಜನರಿಗೆ ಅನ್ಯಾಯ ಮಾಡಿ, ಕ್ಷೇತ್ರ ಮರುವಿಂಗಡಣೆ ಸಭೆಗೆ ಹಾಜರಾಗಿದ್ದಾರೆ ಎಂದು ವಿರೋಧಿಸಿ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಿದರು.

ಇನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಕಾವೇರಿ ಮತ್ತು ಮುಲ್ಲೈ ಪೆರಿಯಾರ್ ವಿಷಯದಲ್ಲಿ ತಮಿಳುನಾಡು ರೈತರಿಗೆ ನಿರಂತರವಾಗಿ ದ್ರೋಹ ಬಗೆದ, ನಮ್ಮ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಿಸುತ್ತಿರುವ ಮತ್ತು ತಮಿಳುನಾಡು ಗಡಿ ಜಿಲ್ಲೆಗಳನ್ನು ಕೇರಳದ ವೈದ್ಯಕೀಯ ತ್ಯಾಜ್ಯವನ್ನು ಸುರಿಯುವ ಸ್ಥಳವನ್ನಾಗಿ ಪರಿವರ್ತಿಸುತ್ತಿರುವ ತಮ್ಮ INDIA ಮೈತ್ರಿಕೂಟದ ಪಾಲುದಾರರಿಗೆ ಕೆಂಪು ಹಾಸಿನ ಸ್ವಾಗತ ನೀಡಿದ್ದಕ್ಕಾಗಿ ತಮಿಳುನಾಡು ಬಿಜೆಪಿ ಸಹೋದರ ಸಹೋದರಿಯರು ತಮ್ಮ ಮನೆಗಳ ಮುಂದೆ ಕಪ್ಪು ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬರೆದುಕೊಂಡದ್ದರು.

ಈ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಡಿಸಿಎಂ ಡಿಕೆ ಶಿವಕುಮಾರ್‌, ಅಣ್ಣಾಮಲೈ ಒಬ್ಬ ಪುವರ್‌ ಮ್ಯಾನ್‌, ಕರ್ನಾಟಕದಲ್ಲಿ ಕೆಲಸ ನಿರ್ವಹಿಸುವ ವೇಳೆ ನನ್ನ ಶಕ್ತಿ ಬಗ್ಗೆ ಆತನಿಗೆ ಗೊತ್ತಿದೆ. ಪ್ರತಿಭಟನೆ ಮಾಡಲಿ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆತನಿಗೆ ಶುಭವಾಗಲಿ ಎಂದು ನಸುನಕ್ಕರು.

https://x.com/annamalai_k/status/1903348499267326152

ಡಿಕೆ ರಿಯಾಕ್ಷನ್‌ಗೆ ಮತ್ತೊಂದು ಪೋಸ್ಟ್‌ ಮಾಡಿರುವ ಅಣ್ಣಾಮಲೈ, ಹೌದು, ನಾನು ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ಜನರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದೇನೆ. ಗಮನಾರ್ಹ ಉಲ್ಲೇಖಕ್ಕಾಗಿ ಧನ್ಯವಾದಗಳು ಡಿಸಿಎಂ ಡಿಕೆ ಶಿವಕುಮಾರ್‌ ಅವರೇ.

ಅಲ್ಲದೆ, ಈ ಬಡವನಿಗೆ ಶುಭ ಹಾರೈಸಿದ್ದಕ್ಕಾಗಿ ಧನ್ಯವಾದಗಳು ಮತ್ತು ಸಿದ್ದರಾಮಯ್ಯ ಅವರನ್ನು ಅವರ ಕುರ್ಚಿಯಿಂದ ಕೆಳಗಿಳಿಸಿ ಕರ್ನಾಟಕದ ಮುಖ್ಯಮಂತ್ರಿಯಾಗುವ ನಿಮ್ಮ ನಿರಂತರ ಪ್ರಯತ್ನಗಳಲ್ಲಿ ನಿಮಗೆ ನನ್ನ ಶುಭಾಶಯಗಳು! ಎಂದು ಬರೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Continue Reading

National - International

ಭಾಷೆಗಳ ನಡುವಿನ ಭಾಷಾಂತರಕ್ಕೆ ಮೊಬೈಲ್‌ ಆಪ್‌: ಅಮಿತ್‌ ಶಾ

Published

on

ನವದೆಹಲಿ: ಭಾರತದ ಯಾವುದೇ ಭಾಷೆ ಅಥವಾ ರಾಜ್ಯದ ಜನರ ಮೇಲೆ ನಾವು ಹಿಂದಿ ಏರಿಕೆ ಮಾಡುತ್ತಿಲ್ಲ. ಭಾರತೀಯ ಭಾಷೆಗಳು ಈ ದೇಶದ ಸಂಪತ್ತಾಗಿದ್ದು, ಭಾಷೆಗಳ ಕುರಿತು ರಾಜಭಾಷಾ ವಿಭಾಗದಡಿಯಲ್ಲಿ ಹೊಸ ಇಲಾಖೆ ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ಶುಕ್ರವಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎಲ್ಲಾ ಭಾಷೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಲಾಖೆ ತೆರೆಯಲಾಗುತ್ತಿದ್ದು, ಭಾಷೆಗಳ ನಡುವಣ ಭಾಷಾಂತರಕ್ಕೆ ಮೊಬೈಲ್‌ ಆಪ್‌ ಹೊರತರಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ತಮ್ಮ ಭ್ರಷ್ಟಾಚಾರ, ಇತರೆ ಅಂಶಗಳನ್ನು ಮರೆಮಾಚುವ ಉದ್ದೇಶದಿಂದ ಹಾಗೂ ತಮ್ಮ ರಾಜಕೀಯ ಲಾಭಕ್ಕಾಗಿ ಭಾಷಾ ವಿವಾದವನ್ನು ವಿರೋಧ ಪಕ್ಷಗಳು ಹುಟ್ಟುಹಾಕುತ್ತಿದ್ದಾವೆ. ಭಾಷೆಗಳ ರಕ್ಷಣೆಗಾಗಿ ಡಿಸೆಂಬರ್‌ ನಂತರದ ಬಳಿಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದ ಜೊತೆಗೂಡಿ ಚರ್ಚೆ ಮಾಡಲಾಗುವುದು ಎಂದರು.

ಭಾಷಾ ವಿಚಾರವಾಗಿ ದೇಶದಲ್ಲಿ ಹಲವಾರು ವಿಭಜನೆಗಳಿಗೆ ದಾರಿಯಾಗಿವೆ. ಹಿಂದೆ ಯಾವುದೇ ಭಾಷೆಯೊಂದಿಗೆ ಸ್ಪರ್ಧೆಗೆ ಇಳಿದಿಲ್ಲ. ಎಲ್ಲಾ ಭಾಷೆಗಳ ಉತ್ತಮ ಸ್ನೇಹಿತ ಹಿಂದಿಯಾಗಿದೆ. ಇದನ್ನು ಕೆಲವರು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುವ ಮೂಲಕ ವಿವಾದ ಸೃಷ್ಠಿಸುತ್ತಿವೆ ಎಂದು ಅಮಿತ್‌ ಶಾ ಆರೋಪಿಸಿದ್ದಾರೆ.

Continue Reading

Trending

error: Content is protected !!