Connect with us

State

ರಾಮನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್’ಗೆ ಸರ್ಕಾರದಿಂದ ಬಿಗ್ ಶಾಕ್- 12 ಲಕ್ಷ ಕೊಡದೆ ಬಾಕಿ ಉಳಿಸಿಕೊಂಡಿರೋ ಗೌರ್ಮೆಂಟ್!!

Published

on

ಅಯೋಧ್ಯೆಯ ರಾಮನ ಮೂರ್ತಿಯನ್ನು ಕೆತ್ತಿರುವ ಅರುಣ್ ಯೋಗಿರಾಜ್ ಅವರಿಗೆ ರಾಜ್ಯ ಸರ್ಕಾರ ಭಾರಿ ನಿರಾಸೆ ಉಂಟು ಮಾಡಿದೆ. ಏಕೆಂದರೆ ಸುಮಾರು 8 ವರ್ಷಗಳಿಂದಲೂ ಅವರಿಗೆ ನೀಡಬೇಕಾದ 12 ಲಕ್ಷ ರೂಪಾಯಿಗಳನ್ನು ಇದುವರೆಗೂ ಬಾಕಿ ಉಳಿಸಿಕೊಂಡಿದೆ.

ಹೌದು, ಶ್ರೇಷ್ಠ ಶಿಲ್ಪಿ ಅರುಣ್ ಯೋಗಿರಾಜ್(Arun yogiraj) ಅವರಿಗೆ ಸೂಕ್ತ ಗೌರವ ಕೊಡದೇ ಸರ್ಕಾರ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದೇ ಘಟನೆ ಸಾಕ್ಷಿಯಾಗಿದೆ. ಇಡೀ ದೇಶವೇ ಕೊಂಡಾಡುವಂತಹ ನಮ್ಮ ರಾಜ್ಯದ ಹೆಮ್ಮೆಯ ಶಿಲ್ಪಿಗೆ ನಮ್ಮ ರಾಜ್ಯ ಸರ್ಕಾರವೇ ಸರಿಯಾದ ಮನ್ನಣೆ ನೀಡದೆ ದೊಡ್ಡ ಮಟ್ಟದಲ್ಲಿ ಅವಮಾನ ಮಾಡಿದೆ.

12 ಬಾಕಿ ಉಳಿಸಿಕೊಂಡ ಸರ್ಕಾರ!!

ಮೈಸೂರಿನ ಅರುಣ್ ಯೋಗಿರಾಜ್ ಅವರಿಗೆ ಮೂರ್ತಿ ಕೆತ್ತನೆ ಮಾಡಿಕೊಡುಂತೆ ಸ್ವತಃ ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಕೊಡಲಾಗಿತ್ತು. ಅಂತೆಯೇ ಅರುಣ್

ಅವರು 2016 ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನು ಕೆತ್ತಿದ್ದರು. ಆದರೆ, ಈ ಮೂರ್ತಿ ಕತ್ತನೆಯಾಗಿ ಹಾಗೂ ಪ್ರತೊಷ್ಠಾಪನೆಗೊಂಡು 8 ವರ್ಷಗಳು ಕಳೆದರೂ ಸಹ, ಇವರಿಗೆ ಸರ್ಕಾರದಿಂದ ಇನ್ನೂ ಹಣವನ್ನೇ ಕೊಟ್ಟಿಲ್ಲ. ಮೂರ್ತಿ ಕೆತ್ತನೆಯಾಗಿ ಪ್ರತಿಷ್ಠಾಪನೆಗೊಂಡ ನಂತರ ಇವರ ಕಾರ್ಯವನ್ನೇ ಮರೆತಿದೆ. ಇದೀಗ ಹಣ ಕೊಡಲು ಸತಾಯಿಸುತ್ತಿದೆ.

ಈ ಕುರಿತಂತೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಟ್ವೀಟ್ ಮಾಡಿದ್ದು, ‘ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನು ಅರುಣ್ ಯೋಗಿರಾಜ್ ಅವರು 2016 ರಲ್ಲೇ ಕೆತ್ತಿದ್ದರು. 8 ವರ್ಷಗಳು ಆದರೂ ಸಹ, ಮೈಸೂರು ಮಹಾನಗರ ಪಾಲಿಕೆಯವರು ಇವರಿಗೆ ಹಣ ಕೊಡದೆ ಸತಾಯಿಸುತ್ತಿರುವುದು ತರವಲ್ಲ. ಇದು ಒಬ್ಬ ಶಿಲ್ಪಿಗೆ ಅಲ್ಲದೆ, ಮೈಸೂರನ್ನು ಬೆಳಗಿದ ಯದುವಂಶದ ಅರಸರಿಗೆ ಮಾಡುವ ಅವಮಾನ. ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇದೆ ಜಿಲ್ಲೆಯವರೇ ಆದ ಸನ್ಮಾನ್ಯ ಮುಖ್ಯ ಮಂತ್ರಿಗಳು ಕೂಡಲೇ ಅರುಣ್ ಯೋಗಿರಾಜರಿಗೆ ಕೊಡಬೇಕಾದ ಮೊತ್ತವನ್ನು ಗೌರವಯುತವಾಗಿ ಹಾಗೂ ತುರ್ತಾಗಿ ಕೊಡಬೇಕು’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

State

ಇನ್ಮುಂದೆ 130 ಕಿ ಮೀ ವೇಗದಲ್ಲಿ ವಾಹನ ಓಡಿಸಿದ್ರೆ ಆಗಸ್ಟ್ 1ರಿಂದ ಬೀಳುತ್ತೆ FIR; ಅಲೋಕ್ ಕುಮಾರ್ ಆದೇಶ

Published

on

Traffic Rules: ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ರಾಜ್ಯ ರಸ್ತೆ ಮತ್ತು ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಮಹತ್ವ ಮಾಹಿತಿ (Traffic Rules) ತಿಳಿಸಿದ್ದಾರೆ. ಇನ್ಮುಂದೆ ಯಾವುದೇ ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿದಲ್ಲಿ ಅಂತವರ ವಿರುದ್ಧ ಆಗಸ್ಟ್ 1 ರಿಂದ ಎಫ್ ಐಆರ್ ದಾಖಲಿಸಲಾಗುವುದು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಅಲೋಕ್ ಕುಮಾರ್ ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಎಲ್ಲಿಯಾದರೂ ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗುವುದು, ದುಡುಕಿನ ಮತ್ತು ಅಪಾಯಕಾರಿ ಚಾಲನೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಮುಖ್ಯವಾಗಿ ಶೇ. 90 ರಷ್ಟು ಅಪಘಾತಗಳಿಗೆ ಅತಿ ವೇಗವು ಕಾರಣವಾಗುತ್ತದೆ. ಗುರುವಾರ,

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, 155 ವಾಹನಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದವು. ಆದ್ದರಿಂದ ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ದಾಖಲಿಸಲಾಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಓವರ್ ಸ್ಪೀಡಿಂಗ್ ಅನ್ನು ಸಾಮಾನ್ಯವಾಗಿ ಕ್ಯಾಮೆರಾ ಪಾಯಿಂಟ್ ಬಳಿ ಸ್ಪಾಟ್ ಸ್ಪೀಡ್ ಅಳೆಯಲಾಗುತ್ತದೆ. ವಿಭಾಗೀಯ ವೇಗವು ಎರಡು ಕ್ಯಾಮೆರಾ ಬಿಂದುಗಳ ನಡುವಿನ ಸರಾಸರಿ ವೇಗವಾಗಿದೆ. ಬೇರೆಡೆ ವೇಗವಾಗಿ ಓಡಿಸಿ ಕ್ಯಾಮರಾಗಳ ಬಳಿ ಚಾಲಕ ವೇಗ ಕಡಿಮೆ ಮಾಡಿದರೂ ಕೇಸ್ ಬುಕ್ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗೆ 105 ಕಿ.ಮೀ ವೇಗದಲ್ಲಿ ಸಂಚರಿಸುವವರಿಗೆ ದಂಡ ವಿಧಿಸಲಾಗುತ್ತದೆ. ಎಫ್‌ಐಆರ್‌ಗಳ ನೋಂದಣಿಗೆ 130 ಕಿಮೀ ಮಿತಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

Continue Reading

State

ಇನ್ಮುಂದೆ 130 ಕಿ ಮೀ ವೇಗದಲ್ಲಿ ವಾಹನ ಓಡಿಸಿದ್ರೆ ಆಗಸ್ಟ್ 1ರಿಂದ ಬೀಳುತ್ತೆ FIR; ಅಲೋಕ್ ಕುಮಾರ್ ಆದೇಶ

Published

on

ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ರಾಜ್ಯ ರಸ್ತೆ ಮತ್ತು ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಮಹತ್ವ ಮಾಹಿತಿ (Traffic Rules) ತಿಳಿಸಿದ್ದಾರೆ. ಇನ್ಮುಂದೆ ಯಾವುದೇ ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿದಲ್ಲಿ ಅಂತವರ ವಿರುದ್ಧ ಆಗಸ್ಟ್ 1 ರಿಂದ ಎಫ್ ಐಆರ್ ದಾಖಲಿಸಲಾಗುವುದು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಅಲೋಕ್ ಕುಮಾರ್ ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಎಲ್ಲಿಯಾದರೂ ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗುವುದು, ದುಡುಕಿನ ಮತ್ತು ಅಪಾಯಕಾರಿ ಚಾಲನೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಮುಖ್ಯವಾಗಿ ಶೇ. 90 ರಷ್ಟು ಅಪಘಾತಗಳಿಗೆ ಅತಿ ವೇಗವು ಕಾರಣವಾಗುತ್ತದೆ. ಗುರುವಾರ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, 155 ವಾಹನಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದವು. ಆದ್ದರಿಂದ ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ದಾಖಲಿಸಲಾಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಓವರ್ ಸ್ಪೀಡಿಂಗ್ ಅನ್ನು ಸಾಮಾನ್ಯವಾಗಿ ಕ್ಯಾಮೆರಾ ಪಾಯಿಂಟ್ ಬಳಿ ಸ್ಪಾಟ್ ಸ್ಪೀಡ್ ಅಳೆಯಲಾಗುತ್ತದೆ. ವಿಭಾಗೀಯ ವೇಗವು ಎರಡು ಕ್ಯಾಮೆರಾ ಬಿಂದುಗಳ ನಡುವಿನ ಸರಾಸರಿ ವೇಗವಾಗಿದೆ. ಬೇರೆಡೆ ವೇಗವಾಗಿ ಓಡಿಸಿ ಕ್ಯಾಮರಾಗಳ ಬಳಿ ಚಾಲಕ ವೇಗ ಕಡಿಮೆ ಮಾಡಿದರೂ ಕೇಸ್ ಬುಕ್ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗೆ 105 ಕಿ.ಮೀ ವೇಗದಲ್ಲಿ ಸಂಚರಿಸುವವರಿಗೆ ದಂಡ ವಿಧಿಸಲಾಗುತ್ತದೆ. ಎಫ್‌ಐಆರ್‌ಗಳ ನೋಂದಣಿಗೆ 130 ಕಿಮೀ ಮಿತಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

Continue Reading

State

ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ ಯೋಜನೆಗೆ ಅರ್ಜಿ ಆಹ್ವಾನ…

Published

on

ಭಾಗ್ಯಲಕ್ಷ್ಮಿ -ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ.3000 ದಂತೆ 15 ವರ್ಷಗಳವರೆಗೆ ಒಟ್ಟು 45,000 ಗಳನ್ನು ಅಂಚೆ ಇಲಾಖೆಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ. ಮಗುವಿಗೆ 21 ವರ್ಷ ಪೂರ್ಣಗೊಂಡ ನಂತರ ಪರಿಪಕ್ವ ಮೊತ್ತ ಅಂದಾಜು 1.27 ಲಕ್ಷ ನೀಡಲಾಗುತ್ತದೆ.


ಮಗುವನ್ನು ನೋಂದಾಯಿಸಲು ಅವಶ್ಯಕ ದಾಖಲೆಗಳು: ಅರ್ಜಿ ನಮೂನೆ, ಪೋಷಕರೊಂದಿಗೆ ಮಗುವಿನ ಭಾವಚಿತ್ರ, ಮಗುವಿನ ಜನನ ಪ್ರಮಾಣ ಪತ್ರದ ಪ್ರತಿ, ಆದ್ಯತಾ ಕುಟುಂಬ ಪಡಿತರ ಚೀಟಿಯ ಪ್ರತಿ/(ತಾಯಿಯ ಹೆಸರು ಇರುವ), ಪೋಷಕರ ಆಧಾರ್ ಕಾರ್ಡ್, ಮಗುವಿನ ಆಧಾರ್ ಕಾರ್ಡ್ ಪ್ರತಿ, ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣ ಪತ್ರ, ವಿವಾಹ ನೋಂದಣಿ ಪ್ರಮಾಣ ಪತ್ರ, ಪೋಷಕರ ಸ್ವಯಂ ಘೋಷಣಾ ವಿವಾಹ ದೃಢೀಕರಣ ಪತ್ರ(ನಮೂನೆ-6 ರಲ್ಲಿ), ಭರ್ತಿ ಮಾಡಿದ ಅರ್ಜಿಯನ್ನು ಮಗು ಹುಟ್ಟಿದ ದಿನಾಂಕದಿAದ 2 ವರ್ಷ ಪೂರ್ಣಗೊಳ್ಳುವ ಮೊದಲು ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿಯನ್ನು ಪಡೆದುಕೊಂಡು ಅಂಗನವಾಡಿ ಕಾರ್ಯಕರ್ತೆಗೆ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಭಾಗ್ಯಲಕ್ಷಿö್ಮ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಹತ್ತಿರದ ಅಂಗನವಾಡಿ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜು ಅವರು ತಿಳಿಸಿದ್ದಾರೆ.

Continue Reading

Trending

error: Content is protected !!