Connect with us

Politics

ರಾಜ್ಯ ಸಚಿವರು, ಪಕ್ಷದ ಮುಖಂಡರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್; ಸಂಸತ್ ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚೆ ಸಾಧ್ಯತೆ

Published

on

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಲು ಕರ್ನಾಟಕದ ಸಚಿವರು, ಪಕ್ಷದ ಮುಖಂಡರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಆಗಸ್ಟ್ 02 ರಂದು ಆಹ್ವಾನಿತ ಮುಖಂಡರು ನವದೆಹಲಿಗೆ ತೆರಳಲಿದ್ದಾರೆ. ಆಡಳಿತಾರೂಢ ಪಕ್ಷದಲ್ಲಿ ಅಸಮಾಧಾನ ತಲೆದೋರಿರುವ ಲಕ್ಷಣಗಳು ಗೋಚರಿಸಿರುವ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿಲ್ಲ, ಕೆಲವು ಸಚಿವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಹೌದು, ನಮಗೆ ರಾಜಕೀಯ ಅಜೆಂಡಾ ಇದೆ. ಸಂಸತ್ ಚುನಾವಣೆಗೆ ನಾವು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಲೋಕಸಭಾ ಚುನಾವಣೆ ಹಾಗೂ ಟಿಕೆಟ್ ಹಂಚಿಕೆ ಪ್ರಕ್ರಿಯೆಗಾಗಿ ನಾನು ನಾಯಕರಿಗೆ ಅವರ ಜವಾಬ್ದಾರಿಗಳನ್ನು ಹಂಚಿಕೆ ಮಾಡಬೇಕಿದೆ ಎಂದು ಡಿ.ಕೆ ಶಿವಕುಮಾರ್ ಹೈಕಮಾಂಡ್ ಬುಲಾವ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ಸಂಸತ್ ಚುನಾವಣೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಬೇಕು? ಯಾವುದೇ ಸಚಿವರು ಅಥವಾ ಶಾಸಕರನ್ನು ಕಣಕ್ಕೆ ಇಳಿಸಬೇಕೇ? ಯಾರಿಗೆ ಜವಾಬ್ದಾರಿ ನೀಡಬೇಕು ಎಂಬ ಅಂಶಗಳ ಬಗ್ಗೆ ನಾವು ಮಾನದಂಡಗಳನ್ನು ನಿಗದಿಪಡಿಸಬೇಕಿದೆ ಆದ್ದರಿಂದ ಎಲ್ಲಾ ಹಿರಿಯ ನಾಯಕರ ಸಭೆಯನ್ನು ಹೈಕಮಾಂಡ್ ಕರೆದಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಇತರರು ದೆಹಲಿ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಮತ್ತು ಕೆಲವು ಶಾಸಕರು ಸಿಎಲ್‌ಪಿ ಸಭೆಗೆ ಮನವಿ ಮಾಡಿದ್ದಾರೆ, ಅದರಂತೆ ಕಳೆದ ವಾರ ನಡೆದಿತ್ತು ಎಂದಷ್ಟೇ ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Politics

ಉತ್ತರದಲ್ಲಿ ಮೋದಿ ಹವಾ – ದಕ್ಷಿಣದಲ್ಲಿ ರಾಹುಲ್ ಗಾಳಿ.

Published

on

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ.

3 ರಾಜ್ಯಗಳಲ್ಲಿ ಬಿಜೆಪಿ ತ್ರಿವಿಕ್ರಮ.
ತೆಲಂಗಾಣದಲ್ಲಿ ಕೈ ಹಿಡಿದ ಮತದಾರ.

ಮಧ್ಯ ಪ್ರದೇಶ
ಒಟ್ಟು ಸ್ಥಾನ -230
ಬಿಜೆಪಿ-164
ಕಾಂಗ್ರೆಸ್=64


..
ರಾಜಸ್ಥಾನ
ಒಟ್ಟು ಸ್ಥಾನ -199
ಬಿಜೆಪಿ-112
ಕಾಂಗ್ರೆಸ್ -71


..
ಛತ್ತೀಸ್ ಘಡ
ಒಟ್ಟು ಸ್ಥಾನ -90
ಬಿಜೆಪಿ-53
ಕಾಂಗ್ರೆಸ್-35
..

ತೆಲಂಗಾಣ
ಒಟ್ಟು ಸ್ಥಾನ -119
ಕಾಂಗ್ರೆಸ್-65
ಬಿಆರ್ ಎಸ್
ಬಿಜೆಪಿ -9
..
ಲೋಕಸಭಾ ಚುನಾವಣೆ ಗೆ ಮುನ್ನ ಸೆಮಿ ಫೈನಲ್ ಚುನಾವಣೆ ಎಂದೇಬಿಂಬಿಸಲಾಗಿದ್ದ ದೇಶದ ಪ್ರಮುಖ ರಾಜ್ಯಗಳ ಚುನಾವಣೆ.

ಉತ್ತರದಲ್ಲಿ ಕಮಲ ಪಕ್ಷದ ಕಮಾಲ್.
ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಕಾಂಗ್ರೆಸ್.
ತೆಲಂಗಾಣದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೊಂದಿದ್ದರು.
ಉಳಿದ 3 ರಾಜ್ಯಗಳಲ್ಲಿ ಹಿಂದೂ ಪರ ಹೇಳಿಕೆಗಳು ಬಿಜೆಪಿ ಭರ್ಜರಿ ಗೆಲುವಿಗೆ ಕಾರಣ ಆದವು.

Continue Reading

Politics

Telangana Election: ತೆಲಂಗಾಣದಲ್ಲಿ BJPಯನ್ನು ಗೆಲ್ಲಿಸಿದ ಕಾಂಗ್ರೆಸ್ !!

Published

on

Telangana Election: ಇಡೀ ದೇಶವೇ ಪಂಚರಾಜ್ಯ ಚುನಾವಣೆಗಳ ಫಲಿತಾಂಶದತ್ತ ದೃಷ್ಟಿ ನೆಟ್ಟಿದೆ. ಇಂದು ಕೇವಲ 4 ರಾಜ್ಯಗಳತ ಎಣಿಕೆ ನಡೆಯುತ್ತಿದ್ದರೂ ಭಾರೀ ಕುತೂಹಲ ಕೆರಳಿಸಿದೆ. ಅಚ್ಚರಿಯಂತೆ ಹಿನ್ನಡೆ, ಮುನ್ನಡೆಗಳು ಆಗುತ್ತಿವೆ. ಊಹಿಸದಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಆದರೆ ಎಲ್ಲಿ ಕಾಂಗ್ರೆಸ್ ತಾನು ಗೆಲ್ಲುವುದರೊಂದಿಗೆ ಬಿಜೆಪಿಯನ್ನೂ ಗೆಲ್ಲಿಸಿಬಿಟ್ಟಿದೆ. ಅರೆ ಏನಪ್ಪಾ ಇದು ಹೊಸ ಸುದ್ದಿ ಅಂತೀರಾ?! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಲೆಕ್ಕಾಚಾರ .

ಹೌದು, ಮಧ್ಯಪ್ರದೇಶ , ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಉದಾಖಲಿಸಿದೆ. ಅಂತೆಯೇ ತೆಲಂಗಾಣದಲ್ಲಿ(Telangana Election) ಎಲ್ಲರೂ ಊಹಿಸಿದಂತೆ ಕಾಂಗ್ರೆಸ್ ಭರ್ಜರಿ ಗೆಲುವೊಂದಿಗೆ ಇತಿಹಾಹ ಸೃಷ್ಟಿಸಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಎರಡನೇ ರಾಜ್ಯದಲ್ಲಿ ತನ್ನ ಅಧಿಪತ್ಯ ಸಾಧಿಸಿದೆ. ಗ್ಯಾರಂಟಿಗಳು ಕೊನೆಗೂ ಕಾಂಗ್ರೆಸ್ ಗೆ ಜಯಭೇರಿ ತಂದಿವೆ. ಆದರೆ ಈ ನಡುವೆ ಕಾಂಗ್ರೆಸ್ ಗೆಲುವು ಬಿಜೆಪಿಗೂ ಲಾಭವನ್ನು ತಂದಿದೆ.

ಕಾಂಗ್ರೆಸ್ ಗೆಲುವು ಬಿಜೆಪಿಗೆ ಲಾಭ !!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಪ್ರತಿಪಕ್ಷಗಳೆಲ್ಲವೂ ಸೇರಿ ‘ಇಂಡಿಯಾ’ ಮೈತ್ರಿ ಕೂಟವನ್ನು ರಚಿಸಿಕೊಂಡಿವೆ. ಇದರಲ್ಲಿ ಕಾಂಗ್ರೆಸ್ ಹಾಗೂ ಕೆಲವೊಂದು ಪ್ರಮುಖ ಪಕ್ಷಗಳನ್ನು ಬಿಟ್ಟರೆ ಉಳಿದವೆಲ್ಲವೂ ಪ್ರಾದೇಶಿಕ ಪಕ್ಷಗಳು. ಮೋದಿ ಹವಾ ಮುಂದೆ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳ ವರ್ಚಸ್ಸು ಕಮ್ಮಿಯಾಗುತ್ತಿರುವದರಿಂದ ಎಲ್ಲವೂ ‘ಇಂಡಿಯಾ’ ಕೂಟ ಸೇರಿವೆ. ಆದರೆ ಹೀಗೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೊಂದು ರಾಜ್ಯವನ್ನು ಗೆಲ್ಲುತ್ತಾ ಬಂದಂತೆ ಅಲ್ಲಿನ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಗೆ ವಿರುದ್ಧವಾಗುತ್ತವೆ. ಅದರಲ್ಲೂ ದಕ್ಷಿಣ ಭಾರತ ಪ್ರಾದೇಶಿಕ ಪಕ್ಷಗಳ ನಾಡು ಆದ್ದರಿಂದ ಇದು ಸಂಭವಿಸುದು ಪಕ್ಕಾ ಎನ್ನಲಾಗುತ್ತೆ.

ಅಲ್ಲದೆ ತನ್ನ ಗೆಲುವಿನ ಪ್ರಾಬಲ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಟಿನ ಕ್ಷೇತ್ರಗಳನ್ನು ಕೇಳಬಹುದು. ಇದು ಪ್ರಾಧೇಶಿಕ ಪಕ್ಷಗಳ ಅಸ್ತಿತ್ವವನ್ನೇ ಕಸಿದಂತೆ. ಕರ್ನಾಟಕದಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲು ಮೈತ್ರಿ ಮಾಡಿಕೊಂಡಿದ್ದವು. ಬಳಿಕ ಬೇರೆ ಬೇರೆಯಾದವು. ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಬಳಿಕವಂತೂ ಹಾವು ಮುಂಗುಸಿಯಾಗಿದವು. ಇದೀಗ ತೆಲಂಗಾಣದಲ್ಲೂ ಅದೇ ಪರಿಸ್ಥಿತಿ ಉಂಟಾಗಬಹುದು. ಯಾವ ಮೈತ್ರಿ ಸೇರದೆ ತಟಸ್ಥವಾಗಿರುವ ಕೆಸಿಆರ್ ಪಾರ್ಟಿ ಕಾಂಗ್ರೆಸ್ ದೋಸ್ತಿ ತೊರೆದು, ರಾಜ್ಯದಲ್ಲಿ ಅದನ್ನು ಎದುರಿಸಲು NDA ಮೈತ್ರಿ ಸೇರಬಹುದು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಬಿರುಕಿನಿಂದ ನೇರವಾಗಿ ಲಾಭವಾಗಬಹುದು. ಇದು ಬಿಜೆಪಿಗೆ ದೊಡ್ಡ ಲಾಭ ಆಗುತ್ತದೆ. ಕಾಂಗ್ರೆಸ್ ತಾನು ಗೆಲ್ಲುವುದರೂಂದಿಖೆ ಸುಲಭವಾಗಿ ಬಿಜೆಪಿಯನ್ನು ಗೆಲ್ಲಿಸಿದಂತಾಗಿದೆ.

Continue Reading

Hassan

ಹಾಸನ : ಇಂದು ತವರು ಜಿಲ್ಲೆಗೆ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಭೇಟಿ

Published

on

ಸಂಸದರು, ಶಾಸಕರು, ಮಾಜಿಶಾಸಕರು, ಮಾಜಿ ಜಿ.ಪಂ., ತಾ.ಪಂ. ಅಧ್ಯಕ್ಷರು, ಮಾಜಿ ಸದಸ್ಯರು, ನಗರಸಭೆ, ಪುರಸಭೆ ಹಾಲಿ, ಮಾಜಿ ಅಧ್ಯಕ್ಷರು, ಹಾಲಿ, ಮಾಜಿ ಸದಸ್ಯರು, ಹಾಲಿ, ಮಾಜಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳ ಸಭೆ ಕರೆದಿರುವ ಎಚ್.ಡಿ.ದೇವೇಗೌಡರು

ಹೊಳೆನರಸೀಪುರ ತಾಲ್ಲೂಕಿನ, ಹಳೇಕೋಟೆ ಹೋಬಳಿ, ಶ್ರೀರಾಮದೇವರಕಟ್ಟೆಯಲ್ಲಿ ಮ.12.15 ಕ್ಕೆ ನಡೆಯಲಿರುವ ಸಭೆ

ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ

ಮುಂಬರುವ, ತಾ.ಪಂ., ಜಿ.ಪಂ., ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಭೆ ಕರೆದಿರುವ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು

ಸಭೆಯಲ್ಲಿ ಭಾಗಲಿರುವ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರು

Continue Reading

Trending