Connect with us

Hassan

ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಕಾರ್ಯಕ್ರಮ

Published

on

ಹಾಸನ ನಗರ ಸಂಚಾರಿ ಪೊಲೀಸ್ ಇಲಾಖೆಯ ವತಿಯಿಂದ ಹಾಸನ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ವತಿಯಿಂದ ಹಾಗೂ ಕಾಲೇಜಿನ ನೌಕರರ ಕಲ್ಯಾಣ ಸಂಘದ ವತಿಯಿಂದ ದಿನಾಂಕ 17-1-2024 ರಂದು ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಅಲ್ಯೂಮ್ನಿ ಹಾಲ್ ನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ರಾದ ಡಾ. ಎಸ್. ‌‌ಪ್ರದೀಪ್ ರವರು ಮಾತನಾಡಿ ವಿದ್ಯಾರ್ಥಿಗಳು ಹಾಗೂ ಎಲ್ಲಾರು ವಾಹನ ಚಾಲನೆ ಮಾಡುವಾಗ ನಮ್ಮಗೆ ಜವಾಬ್ದಾರಿ ಇರಬೇಕು. ನಮ್ಮ ಜೀವದ ರಕ್ಷಣೆಗೆ ರ‌ಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.


ಯಾರು ಎಷ್ಟೇ ಹೇಳಿದರೂ ವಾಹನ ಚಾಲನೆ ನಿಯಮಗಳನ್ನು ಪಾಲಿಸಲು ನಾವು ಅನುಸರಿಸುತ್ತಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದ ಹಾಸನ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೀಣಾ ರವರು. ಮಾತಾನಾಡಿದ ಅವರು ನಮ್ಮ ಪೊಲೀಸ್ ಇಲಾಖೆಯ ವತಿಯಿಂದ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ರಸ್ತೆ ಸುರಕ್ಷತಾ ಕಾರ್ಯಗಾರ ಪ್ರಚಾರಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಜೀವದ ರಕ್ಷಣೆಗೆ ಒಂದಷ್ಟು ಸಲಹೆಗಳು ಹಾಗೂ ಮಾರ್ಗದರ್ಶನ ನೀಡುವುದು ನಮ್ಮ ಉದ್ದೇಶ ವಾಗಿದೆ, ನಾವೆಲ್ಲ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಕ್ರಮಗಳನ್ನು ಪಾಲಿಸಲೇಬೇಕು, ಬೇಜವಾಬ್ದಾರಿ ಧೋರಣೆ ಇರಬಾರದು, ತ್ರಿಬಲ್ ರೈಡ್ ಮಾಡುವುದು, ಬೈಕ್ ವಿಲ್ಲೀಂಗ್ ಮಾಡುವುದು ಪ್ರಾಣಕ್ಕೆ ಸಂಚಕಾರ ವಾಗುವುದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ವೀಡಿಯೋ .ಮೂಲಕ ಅಪಘಾತದಲ್ಲಿ ನಡೆದ ಮಾಹಿತಿ ನೀಡಿದರು.


ಕಾಲೇಜಿನ ನೌಕರರ ಕಲ್ಯಾಣ ಸಂಘದ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ . ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ರಾದ ಡಾ. ಪಿ .ಸಿ. ಶ್ರಿಕಾಂತ್. ಪ್ರಾಧ್ಯಾಪಕರಾದ ವಿಜಯಕುಮಾರ್ ತೀಲೆ, ಪ್ರಾಧ್ಯಾಪಕರಾದ ಡಾ ಇಂದಿರಾ ಬಹದ್ದೂರ್,ಕಾಲೇಜಿನ ನೌಕರರ ಸಂಘದ ಖಜಾಂಚಿ ಬಿ .ಆರ್. ಕುಮಾರ್ ಸ್ವಾಮಿ. ಉಪಸ್ಥಿತರಿದ್ದರು. ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದ
ಸಹ ಪ್ರಾಧ್ಯಾಪಕರಾದ ಧವಳ ರವರು ನಿರೂಪಣೆ ಮಾಡಿದರು. ಗ್ಯಾರಂಟಿ ರಾಮಣ್ಣ ಕಲಾವಿದರಾದ ಮಾನವ ರವರ ತಂಡದಿಂದ ಜಾನಪದ ರಸ್ತೆ ಸುರಕ್ಷತಾ ಹಾಡಗಳನ್ನು ಹಾಡುವ ಮೂಲಕ ರಸ್ತೆ ಸುರಕ್ಷತಾ ಸಪ್ತಾಹ ಜಾಗ್ರತೆ ಮೂಡಿಸಿದರು ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಮೆರವಣಿಗೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ನಿಸ್ವಾರ್ಥ ಸೇವೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೆಸರುವಾಸಿ: ಸುರೇಶ್ ಗುರೂಜಿ

Published

on

ಹಾಸನ: ನಿಸ್ವಾರ್ಥ ಸೇವೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೆಸರುವಾಸಿ ಯಾಗಿದ್ದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಜನಜಾಗೃತಿ ಸುರೇಶ್ ಗುರೂಜಿ ಹೇಳಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಕಳಕಳಿ ಜೊತೆಗೆ ಆರ್ಥಿಕವಾಗಿ ಕೂಡ ಸಹಯಸ್ಥ ಚಾಚುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಅಲ್ಲದೆ ದೇಶದ ಆರ್ಥಿಕ ಅಭಿವೃದ್ದಿಗೆ ಕೂಡ ಸಹಕಾರಿಯಾಗಿದೆ ಎಂದು ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘ್ಸಿಸಿದರು.

ಯೋಜನಾ ನಿರ್ದೇಶಕಿ ಮಮತಾ ಹರೀಶ್ ರಾವ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸ್ವ ಸಹಾಯ ಗುಂಪುಗಳನ್ನು ರಚಿಸಿ ಅವರಿಗೆ ಆರ್ಥಿಕವಾಗಿ ನೆರವಾಗುವ ಕೆಲಸವನ್ನು ಮಾಡುತ್ತಿದೆ ಎಂದರು.

ಜೊತೆಗೆ ಕಡು ಬಡವರನ್ನು ಗುರುತಿಸಿ ಅವರಿಗೆ ನೆಮ್ಮದಿಯ ಜೀವನ ಸಾಗಿಸಲು ಅಗತ್ಯ ಇರುವ ಎಲ್ಲಾ ರೀತಿಯ ಸೌಲಭ್ಯ ನೀಡಲು ಮುಂದಾಗಿದೆ, ಆರಂಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸೀಮಿತ ವಾಗಿದ್ದ ಕಾರ್ಯವೈಖರಿ ಇದೀಗ ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ, ಇದರಿಂದ ಲಕ್ಷಾಂತರ ಜನರಿಗೆ ಅನುಕೂಲ ಆಗಿದೆ ಎಂದರು.

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಜನರನ್ನು ಸವಲರನ್ನಾಗಿ ಮಾಡಿ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ,

ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಆಲೋಚನೆಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳು ರೂಪಿತವಾಗಿದ್ದು ಆವರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಒಂದು ಒಕ್ಕೂಟವನ್ನು ರಚಸಿ ಪದಾಧಿಕಾರಿಗಳನ್ನು ನೇಮಕ ಮಾಡಿ ಆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಮುದಾಗಿದ್ದೇವೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಜೆ. ಪಿ ಶೇಖರ್ ಮಾತನಾಡಿ, ರಾಜಕೀಯ ಕ್ಷೇತ್ರ ಹೊರತುಪಡಿಸಿ ಎಲ್ಲಾ ರೀತಿಯ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಾಜ್ಯದ ಕೋಟ್ಯಂತರ ಜನರಿಗೆ ಆರ್ಥಿಕವಾಗಿಯೂ ನೆರವಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ. ಪ್ರತಿಯೊಬ್ಬರ ಸ್ವಾವಲಂಬಿ ಜೀವನಕ್ಕೆ ದಾರಿ ದೀಪವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಕಳಕಳಿ ದೃಷ್ಟಿಯಿಂದ ಏನೆಲ್ಲಾ ಕೆಲಸಗಳನ್ನು ಮಾಡಬಹುದು ಎಲ್ಲಾ ರೀತಿಯ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ. ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ದೃಷ್ಟಿಯಿಂದ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಇಂತಹ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಲಿ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷ ದಿನೇಶ, ಬ್ಯಾಂಕ್ ವ್ಯವಸ್ಥಾಪಕ ಧರಣೇಂದ್ರ ಕುಮಾರ್, ಜನಜಾಗೃತಿ ವೇದಿಕೆಯ ಶ್ರೇಯಸ್ ಜೈನ್, ಯೋಜನಾಧಿಕಾರಿ ಶಾರಿಕಾ, ತೋಷಕ್, ರಾಮಣ್ಣ ಗೌಡ, ಕೃಷಿ ಅಧಿಕಾರಿ ಚಂದ್ರಪ್ರಭ, ಬಬಿತಾ ಇತರರು ಇದ್ದರು.

Continue Reading

Hassan

ಸಕಲೇಶಪುರ ತಾಲೂಕಿನ ಕಡ್ರಹಳ್ಳಿಯಲ್ಲಿ ಸಾವನಪ್ಪಿದ ಹೆಣ್ಣು ಆನೆಯ ಸಾವು ಆಕಸ್ಮಿಕವಲ್ಲ – ಜುರುಡಿ ವಿಕ್ರಂ

Published

on

ಹಾಸನ: ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಅನೇಕ ಆನೆಗಳು ಸಾವನಪ್ಪಿದ್ದು, ಈ ಬಗ್ಗೆ ಸರಕಾರವು ಸೂಕ್ತ ತನಿಖೆ ಮಾಡಬೇಕು. ಆನೆಗಳ ಗುಂಪು ದಾಟಲು ಸೇತುವೆ ಮಾಡಿಕೊಡಬೇಕು. ಹಾಗೂ ಅರ್ಜುನ ಆನೆ ಸತ್ತು ಒಂದು ವರ್ಷವಾಗಿದ್ದು, ಇದುವರೆಗೂ ಸಾವಿನ ಬಗ್ಗೆ ವರದಿ ಕೊಟ್ಟಿರುವುದಿಲ್ಲ. ಈ ಆನೆಯ ಮೂಳೆಯನ್ನು ಮೈಸೂರು ಅರಮನೆಯಲ್ಲಿ ಇಡಬೇಕು ಹಾಗೂ ಭೀಮ ಆನೆ ದಾಳಿಯಿಂದ ಸಾವನಪ್ಪಿದ ವೆಂಕಟೇಶ್ ಗೆ ಮರಣೋತ್ತರ ಪ್ರಶಸ್ತಿ ನೀಡಿ ಆತನ ಮಗನಿಗೆ ಸರಕಾರಿ ಹುದ್ದೆ ಕೊಡಬೇಕೆಂದು ಕಾಡಾನೆ ವಿಚಾರವಾಗಿ ಜುರುಡಿ ವಿಕ್ರಂ ಆಗ್ರಹಿಸಿದರು.

ಕಳೆದ ಒಂದು ವಾರಗಳ ಹಿಂದೆ ಸಕಲೇಶಪುರ ತಾಲೂಕಿನ ಕಡ್ರಹಳ್ಳಿಯಲ್ಲಿ ಸಾವನಪ್ಪಿದ ಹೆಣ್ಣು ಆನೆಯ ಸಾವು ಆಕಸ್ಮಿಕವಲ್ಲ. ಒಂದು ವಾರಕ್ಕೂ ಹೆಚ್ಚು ದಿನ ಅನಾರೋಗ್ಯದಿಂದ ನೆರಳುತ್ತಿದ್ದು, ಯಾವ ಚಿಕಿತ್ಸೆ ಕೊಡದೆ ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ಮಾಡಿ ಆ ಆನೆಯ ಸಾವಿಗೆ ಕಾರಣರಾಗಿದ್ದಾರೆ. ಈ ಆನೆಯ ಬಗ್ಗೆ ನಿಕರವಾದ ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕು ಎಂದರು. ಯಸಲೂರು ಅರಣ್ಯ ವಲಯಕ್ಕೆ ಸೇರಿರುವ ಹಳ್ಳಿಗಳ ಬಳಿ ಆನೆಗಳು ಸತ್ತಿದೆ. ಒಟ್ಟು ೪ ಹೆಣ್ಣಾನೆ, ೫ ಗಂಡಾನೆಗಳು ಕೊನೆ ಉಸಿರು ಎಳೆದಿದೆ. ಗಂಡಾನೆಗಳ ದಂತಕ್ಕಾಗಿ ಗುಂಡೇಟಿಗೆ ಬಲಿಯಾಗಿದೆ. ಇದೆ ಸೋಮವಾರ ಪೇಟೆಯಲ್ಲಿ ಒಂದು ಆನೆಯ ದಂತ ಪತ್ತೆಯಾಗಿದೆ. ಹೊಸಳ್ಳಿ ಬೆಟ್ಟದ ಹತ್ತಿರ ಸತ್ತ ಗಂಡಾನೆ ಕೊರೆ ಅರಣ್ಯ ಇಲಾಖೆಯವರು ವಶಪಡಿಸಿಕೊಂಡರು. ಉಳಿದ ನಾಲ್ಕು ಆನೆಯ ಕೊರೆಗಳು ದಂತ ಕಳ್ಳರ ಪಾಲಾದವು. ಬಹುಃಶ ಕರ್ನಾಟಕದಲ್ಲಿ ಎಲ್ಲೂ ಈ ರೀತಿಯ ಆನೆಗಳ ಕಗ್ಗೊಲೆ ಬೇರೆಡೆ ನಡೆಯುತ್ತಿಲ್ಲ. ಸರಕಾರಿ ಇಲ್ಲಿ ಆನೆಗಳ ಸರಣಿ ಸಾವುಗಳ ಬಗ್ಗೆ ಎಚ್ಚೆತ್ತುಕೊಂಡು ತನಿಖೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದರು.

ಹೈವೆ ರಸ್ತೆಯಿಂದ ಆನೆಗಳ ಹಿಂಡು ರಸ್ತೆ ದಾಟಲು ಆಗುತ್ತಿರಲಿಲ್ಲ. ಇದೆ ಕಾರಣಕ್ಕೆ ಸಕಲೇಶಪುರ, ಆಲೂರು ಭಾಗಕ್ಕೆ ಬೇಲೂರು ಭಾಗದಿಂದ ಬರಲು ಆನೆಗಳ ಹಿಂಡುಗೆ ಸಾಧ್ಯವಾಗುತ್ತಿಲ್ಲ. ಹೊಸೂರು ಎಸ್ಟೇಟ್ ನ ಹೊಟೆಲ್ ಹತ್ತಿರದಿಂದ ಗುಳಗಳಲೆ, ಯಡಹಳ್ಳಿ ವರೆಗೂ ೪ ಕಿಮಿ ಮಾತ್ರ ಆನೆ ಕಾರಿಡರ್ ಇರುತ್ತದೆ. ಬೆಳಗೊಡಿನಿಂದ ಎತ್ತಿನಹೊಳೆ ನೀರಿನ ಕಾಲುವೆ ಅಡ್ಡ ಬರುವುದರಿಂದ ಆನೆಗಳ ಕಾರಿಡರ್ ಕಟ್ ಆಗಿದೆ. ಗುಳಗಳಲೆ ಹೊಸೂರು ಎಸ್ಟೇಟ್ ನ ಹೊಟೇಲ್ ಗಳ ಮಧ್ಯೆ ೨ ಕಿಮಿ ಅಂತರದಲ್ಲಿ ಆನೆಗಳು ದಾಟಲು ಒಂದು ಸೇತುವೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಯೂರೊಪ್, ಸಿಂಗಾಪುರ ದೇಶದಲ್ಲಿ ಇ ರೀತಿಯ ಪ್ರಾಣಿಗಳು ದಾಟಲು ಸೇತುವೆ ಮಾಡಿರುವುದಾಗಿ ಹೇಳಿದರು.

ಕಳೆದ ವರ್ಷ ಡಿಸೆಂಬರ್ ೬ ರಲ್ಲಿ ಅರ್ಜುನ ಸತ್ತು ಒಂದು ವರ್ಷ ಆಗುತ್ತದೆ. ಇಷ್ಟು ದಿವಸ ಆದರೂ ಅರ್ಜುನ ಆನೆಯ ಸಾವಿನ ವರದಿ ಬಹಿರಂಗಪಡಿಸಿರುವುದಿಲ್ಲ. ೬೪ ವರ್ಷದ ಅರ್ಜುನ ಸೇವೆಯಿಂದ ನಿವೃತ್ತವಾಗಿದ್ದು, ಅವನಿಗೆ ಮದ ಬಂದಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ೬೦ ವರ್ಷ ದಾಟಿದ ಯಾವ ಆನೆಯನ್ನು ಯಾವ ಸೇವೆಗೂ ಬಳಸಬಾರದು. ಕಾಡಾನೆ ಹಿಡಿಯಲು ಅರ್ಜುನನ್ನು ಕಾಡಿಮೆ ಕರೆದುಕೊಂಡು ಹೋಗಿ ಆನೆಗಳ ನಡುವೆ ಕುಸ್ತಿ ಮಾಡಲು ಬಿಡಲಾಗಿದೆ. ಈ ವೇಳೆ ಸಾವನಪ್ಪಿದೆ. ಅರ್ಜುನನ ಸಮಾದಿಯಿಂದ ಮೂಳೆ ತೆಗೆದು ಮೈಸೂರು ಅರಮನೆಯಲ್ಲಿ ಮೂಳೆಗಳನ್ನು ಕೂಡಿಸಿ ಅಸ್ಥಿ ಪಂಜರ ಮಾಡಿ ಇಡುವ ಮೂಲಕ ಮುಂದಿನ ಪೀಳಿಗೆಗೆನೋಡಲು ಅವಕಾಶ ಮಾಡಿಕೊಡಬೇಕು. ಜೊತೆಗೆ ಆನೆಯ ಮರ್ಡರ್ ಮಾಡಿದಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಭೀಮ ಆನೆಯ ದಾಳಿಯಿಂದ ಸಾವನಪ್ಪಿದ ನೂರ ಐವತ್ತು ಆನೆ ಹೊಡೆದಿದ್ದ ವೆಂಕಟೇಶ್ ರವರಿಗೆ ಜಿಲ್ಲಾಡಳಿತ, ರಾಜ್ಯ ಸರಕಾರವು ಮರಣೋತ್ತರ ಪ್ರಶಸ್ತಿ ಕೊಡಬೇಕು. ಇವರ ಮಗ ಮೋಹಿತ್ ಗೆ ಅರಣ್ಯ ಇಲಾಖೆ ಮಂತ್ರಿ ಖಂಡ್ರೆ ಅವರು ಕೆಲಸ ಕೊಡುವುದಾಗಿ ಹೇಳಿದ್ದು, ಇನ್ನು ಕೊಟ್ಟಿರುವುದಿಲ್ಲ. ಶೀಘ್ರವೇ ಅರಣ್ಯ ಇಲಾಖೆಯವರು ಮೋಹಿತ್ತುಗೆ ಕೆಲಸ ಕೊಡುವಂತೆ ಮನವಿ ಮಾಡಿದರು.

Continue Reading

Hassan

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಅ.16 ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಹೆಚ್.ಪಿ. ಶಂಕರ್ ರಾಜು ಹೇಳಿಕೆ

Published

on

ಹಾಸನ : ಕಳೆದ ೩೦ ವರ್ಷಗಳ ಬೇಡಿಕೆ ಆಗಿರುವ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಅಕ್ಟೋಬರ್ ೧೬ರ ಬುಧವಾರದಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಮಾದಿಗ ದಂಡೋರ ದಿಂದ ಹೆಚ್.ಪಿ. ಶಂಕರ್ ರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಅದೇ ರೀತಿಯಾಗಿ ಹಾಸನ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ನಮ್ಮ ಬೇಡಿಕೆಯಾದ ೩೦ ವರ್ಷಗಳಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹೋರಾಟಕ್ಕಾಗಿ ಇಡೀ ರಾಜ್ಯದಲ್ಲಿ ಹಲವಾರು ಹೋರಾಟಗಳು ಮತ್ತು ಪ್ರಾಣತ್ಯಾಗ ಮಾಡಿಕೊಂಡಿದ್ದು, ನಮ್ಮನ್ನಾಳುವ ಸರ್ಕಾರ ಇದುವರೆಗೂ ಒಳ ಮೀಸಲಾತಿಯನ್ನು ಜಾರಿಗೊಳಿಸದೇ ಇರುವುದರಿಂದ ನಮ್ಮ ಸಂಘಟನೆ ವತಿಯಿಂದ ಸುಪ್ರಿಮ್ ಕೋರ್ಟ್ ಮೆಟ್ಟಿಲೇರಿದ್ದು, ಇದೇ ಆಗಸ್ಟ್ ೧ನೇ ತಾರಿಖು ಸುಪ್ರಿಮ್ನಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿರುತ್ತದೆ ಆಯಾಯ ರಾಜ್ಯಗಳು ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿಯನ್ನು

ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುತ್ತದೆ ಎಂದರು. ಆದರೆ ನಮ್ಮ ಕರ್ನಾಟಕ ಸರ್ಕಾರ ಸುಪ್ರಿಮ್ ಕೋರ್ಟ್ ಆದೇಶವನ್ನು ಯತಾವತ್ತಾಗಿ ಜಾರಿಗೊಳಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಾ ಕಾಲತಳ್ಳುತ್ತಿದೆ ಆದ ಕಾರಣ ಹಾಸನ ಜಿಲ್ಲಾ ಮಾದಿಗ ಸಂಘಟನೆಗಳ ವತಿಯಿಂದ ೧೬/೧೦/೨೦೨೪ ರಂದು ಬೃಹತ್ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಮಸ್ತ ಹಾಸನ ಜಿಲ್ಲೆಯ ಮಾದಿಗ ಸಮಾಜದ ಬಂಧುಗಳು ಪ್ರತಿಭಟನೆಯಲ್ಲಿ ಭಾಗವಿಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಕೋರುತ್ತೇವೆ. ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಒತ್ತಾಯವನ್ನು ಮಾಡುತ್ತೇವೆ. ಮಾದಿಗ ಸಮಾಜದ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಮತ್ತು ದಲಿತ ಸಂಘರ್ಷಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಬೇಕಾಗಿ ಕೋರಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಲೂರು ವೆಂಕಟಯ್ಯ, ಲೋಕೇಶ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!