Connect with us

Chikmagalur

ರಸ್ತೆ ತಡೆಗೋಡೆ ಕುಸಿತ -ರಸ್ತೆ ಬಿರುಕು

Published

on

ಮೂಡಿಗೆರೆ: ಪಟ್ಟಣದಿಂದ ಮುಗ್ರಹಳ್ಳಿ, ಕೋಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗೆ ಹೊಂದಿಕೊಂಡಿರುವ ರಸ್ತೆ ಹಾಗೂ ತಡೆಗೋಡೆ ಮಳೆಯಿಂದ ಕುಸಿದಿದ್ದು, ಕಳಪೆ ಕಾಮಗಾರಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 4 ವರ್ಷದ ಹಿಂದೆ ಸುರಿದ ಮಹಾ ಮಳೆಗೆ ಮುಗ್ರಹಳ್ಳಿ ಸೇತುವೆ ಬಿರುಕು ಬಿಟ್ಟಿದ್ದು, ನೂತನ ಸೇತುವೆ ನಿರ್ಮಾಣಕ್ಕೆ ಸುಮಾರು ಕೋಟಿ ಅನುದಾನ ಬಿಡುಗಡೆಯಾಗಿತ್ತು.ಇದೀಗ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸೇತುವೆ
ಉದ್ಘಾಟನೆಗೂ ಮುನ್ನವೇ ಈ ಬಾರಿ ಸುರಿದ 675 ಮಿ.ಮೀ ಮಳೆಗೆ ಸೇತುವೆಗೆ ಹೊಂದಿಕೊಂಡಿರುವ ತಡೆಗೋಡೆ ಹಾಗೂ ರಸ್ತೆ ಬಿರುಕು ಬಿಟ್ಟಿದೆ.

ತಡೆಗೋಡೆ ಕಾಮಗಾರಿಯನ್ನು ಜರ್ಮನ್ ಮಾದರಿಯಲ್ಲಿ ಕಾಂಕ್ರೀಟ್ ಹಾಕಿ  ನಿರ್ಮಿಸಬೇಕಿತ್ತು. ಆದರೆ ತಡೆಗೋಡೆಯನ್ನು ಕೇವಲ ಮಣ್ಣಿನಿಂದ ನಿರ್ಮಿಸಿದ್ದರಿಂದ ಸಣ್ಣ ಮಳೆಗೆ ಬಿರುಕು ಬಿಟ್ಟಿದೆ. ಅಲ್ಲದೇ ರಸ್ತೆ ಕಾಮಗಾರಿ ಕೂಡ
ಕಳೆಪೆಯಾಗಿದೆ ಎಂದು ರಸ್ತಯಲ್ಲಿ ಡಾಂಬರಿಗೆ ಅಂಟಿರುವ ಜೆಲ್ಲಿ ಪುಡಿಯನ್ನು ಸ್ಥಳೀಯರು ಕೈಗೆತ್ತಿಕೊಂಡು ಪ್ರದರ್ಶಿಸಿದರು. ಕನಿಷ್ಟ 50 ವರ್ಷವಾದರೂ ಬಾಳಿಕೆ ಬರಬೇಕಿದ್ದ ಸೇತುವೆ ಕೇವಲ ಸಣ್ಣ ಮಳೆಗೆ ಸೇತುವೆಗೆ
ಹೊಂದಿಕೊಂಡಿರುವ ತಡೆಗೋಡೆ ಮತ್ತು ರಸ್ತೆ ಬಿರುಕು ಬಿಟ್ಟಿದ್ದು, ಇದರಿಂದ ಸೇತುವೆ ಮತ್ತೊಮ್ಮೆ ಬಿರುಕು ಬೀಳುವ ಅಪಾಯ ಎದುರಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಕೋಟ್ಯಾಂತರ ರೂ ಅನುದಾನ
ಬಿಡುಗಡೆ ಮಾಡಿದರೆ, ಅದನ್ನು ಸಮರ್ಪಕವಾಗಿ ಬಳಸಿ ಗುಣಮಟ್ಟದ ಕಾಮಗಾರಿ ನಡೆಸಬೇಕಿದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು, ಕಳಪೆ ಕಾಮಗಾರಿ ಮಾಡುವ ಮೂಲಕ ಸರಕಾರ ಹಣವನ್ನು ಪೋಲು ಮಾಡಲು ಹೊರಟಿದ್ದಾರೆಂದು
ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ಕಳಪೆ ಕಾಮಗಾರಿ ನಡೆಸಿರುವ ಪಿಡಬ್ಲೂಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ನಿವೃತ್ತ ಸೈನಿಕ ದೇವರಾಜು, ಬೆಟ್ಟಗೆರೆ ಗ್ರಾ.ಪಂ. ಮಾಜಿ
ಅಧ್ಯಕ್ಷ ವಸಂತ್, ಹಾಲಿ ಸದಸ್ಯ ಸಂಪತ್ ಆಗ್ರಹಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಿಲ್ಲ : ಹಿರೇಮಗಳೂರು ಪುಟ್ಟಸ್ವಾಮಿ

Published

on

ಚಿಕ್ಕಮಗಳೂರು: ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂದರ್ಭದಲ್ಲೂ ಮರಳುವುದಿಲ್ಲ. ಬಿಜೆಪಿ ಬಿಟ್ಟರೆ ರಾಜಕೀಯ ನಿವೃತ್ತಿ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಯೋಜಕರಾಗಿ ನೇಮಕಗೊಳ್ಳುವ ಮೂಲಕ ಕಾಂಗ್ರೆಸ್‌ಗೆ ವಾಪಸ್ ಬಂದಿರುವುದು ಒಳ್ಳೆಯದು ಎಂದು ಜಿಲ್ಲೆಯ ಕೊಪ್ಪ, ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶಗಳಿಂದ ಕಾಂಗ್ರೆಸ್‌ನ ಅನೇಕ ಮುಖಂಡರು ಫೋನಾಯಿಸಿ ಅಭಿನಂದಿಸಿ, ಸ್ವಾಗತಿಸುತ್ತಿರುವುದಾಗಿ ಹೇಳುತ್ತಿರುವುದು ನನಗೆ ತೀವ್ರ ಮುಜುಗರದ ಜೊತೆಗೆ ನೋವು ತಂದಿದೆ.


ಕಾಂಗ್ರೆಸ್‌ನ ಕೆಲ ಮುಖಂಡರು ಕಾಂಗ್ರೆಸ್‌ಗೆ ವಾಪಸ್ ಮರಳುವಂತೆ ಕೈ ಮುಖಂಡರು ವಿಶ್ವಾಸದಿಂದ ಕೇಳಿದ್ದಾರೆ. ಅವರುಗಳಿಗೆ ನನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ಆದರೆ, ಅಲ್ಲಲ್ಲಿ ಪುಟ್ಟಸ್ವಾಮಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅವೆಲ್ಲವೂ ವದಂತಿಗಳು ಎಂಬುದನ್ನು ತಿಳಿಸುತ್ತಿದ್ದೇನೆ.
ಭಾರತ ಸ್ವತಂತ್ರವಾದ ಸಂದರ್ಭದಲ್ಲಿ ಕಾಂಗ್ರೆಸ್ ಒಂದು ದೊಡ್ಡ ಮರವಾಗಿತ್ತು ನಿಜ. ಆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್ ನೆಹರು, ಗಾಂಧಿ ಕುಟುಂಬಕ್ಕೆ ಆದ್ಯತೆ ನೀಡಿದ್ದ ಪರಿಣಾಮ ಇಂದು ದೇಶದಲ್ಲಿ ಕಾಂಗ್ರೆಸ್ ಮರವಾಗಿ ಉಳಿಯದೇ ಒಂದು ಒಣಗಿದ ಬಳ್ಳಿಯಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.

Continue Reading

Chikmagalur

ಚಿಕ್ಕಮಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಿ.ಆರ್.ಪಿ.ಎಫ್ ಪೊಲೀಸರು ಪಥ ಸಂಚಲನ ನಡೆಸಿದರು.

Published

on

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಚುನಾವಣೆ ವೇಳೆ ಶಾಂತಿ, ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ದೇಶದ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸಬೇಕಾದರೆ ಸಾರ್ವಜನಿಕರ ಸಹಕಾರ ಎಷ್ಟು ಮುಖ್ಯ ಎನ್ನುವುದರ ಅರಿವು ಮೂಡಿಸಿದರು.
ತರೀಕೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪಥ ಸಂಚಲನವು ಸಾರ್ವಜನಿಕರಲ್ಲಿ ಆತ್ಮ ಸ್ಥೈರ್ಯವನ್ನು ಇಮ್ಮಡಿಗೊಳಿಸಿದೆ

Continue Reading

Chikmagalur

ಮೈತ್ರಿ ಗೆಳೆಯ ಜೆಡಿಎಸ್ ಭೋಜೇಗೌಡರಿಗೆ ಮಾತಿನಲ್ಲಿ ತಿವಿದ ಸಿ.ಟಿ.ರವಿ

Published

on

ವೇದಿಕೆ ಮೇಲಿದ್ದ ಜೆಡಿಎಸ್ ಎಂಎಲ್ಸಿ ಭೋಜೇಗೌಡರ ಕಾಲೆಳೆದ ಸಿ.ಟಿ. ರವಿ

4 ಬಾರಿ ಶಾಸಕನಾಗಿದ್ದಾಗ ಹೆಚ್ಚು ಕೆಲಸ ಮಾಡಿದ್ದು 2018-2023

ಆದರೆ, ಈ ಬಾರಿ ಹೆಚ್ಚು ಕೆಲಸ ಮಾಡಿದ್ರು ಸೋತೆ

ಚುನಾವಣೆ ಸಂದರ್ಭದಲ್ಲಿ ಕೆಲಸ ಚರ್ಚೆಯಾಗಲಿಲ್ಲ, ಅಪಪ್ರಚಾರ ಚರ್ಚೆಯಾಯಿತು

ನನ್ನ ಹಣೆಬರಹ ಕೆಟ್ಟಿತ್ತು, ಜೆಡಿಎಸ್ ಕೂಡ ನನ್ನ ವಿರೋಧವಾಗೇ ಕೆಲಸ ಮಾಡ್ತು

ನಮ್ಮ ನಾಯಕರ ಹೆಸರನ್ನೂ ಬಳಸಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ರು

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಸೋಲನ್ನ ನೆನೆದ ಸಿ.ಟಿ.ರವಿ

Continue Reading

Trending

error: Content is protected !!