Connect with us

Chamarajanagar

ರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ರಸ್ತೆ ತಡೆ ಡೆಸಿ ಪ್ರತಿಭಟನೆ

Published

on

ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ರಸ್ತೆ ತಡೆ ಡೆಸಿ ಪ್ರತಿಭಟನೆ ನಡೆಸಿದರು ಪಟ್ಟಣದ ಎಸ್‌ಬಿಐ ಸರ್ಕಲ್ ಬಳಿ ರೈತ ಸಂಘದ ಕಾರ್ಯಕರ್ತರಿಂದ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೌಡಳ್ಳಿ ಸೋಮಣ್ಣ ಮಾತನಾಡಿ ಲೋಕನಹಳ್ಳಿ ಗ್ರಾಮದಲ್ಲಿ ಅನಿದಿಷ್ಟಾವಧಿ ಕಾಲ ಮುಷ್ಕರ ಹಮ್ಮಿಕೊಂಡಿದ್ದು ರೈತರ ಸಮಸ್ಯೆಯನ್ನು ಬಗೆಹರಿಸಲು ಅರಣ್ಯ ಇಲಾಖೆಯವರು ಪ್ರತಿಭಟನಾ ಸ್ಥಳಕ್ಕೆ ಬಾರದೆ ರೈತರಿಗೆ ಅನೇಕ ರೀತಿಯಲ್ಲಿ ತೊಂದರೆ ನೀಡುತ್ತಿದ್ದಾರೆ ಆದ್ದರಿಂದ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರಥಮ ಹಂತವಾಗಿ ರಸ್ತೆ ತಡೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯನ್ನು ಖಂಡಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರದ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿ ರಸ್ತೆ ತಡೆ ಪ್ರತಿಭಟನೆ ನಡೆಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ಅಂಬಳೆ ಶಿವಕುಮಾರ್, ಪುಟ್ಟ ಮಾದಪ್ಪ, ಸ್ವಾಮಿಗೌಡ ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಪಿಎಂ ಶ್ರಮ ಯೋಗಿ ಮಾನ್‌ಧನ್ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಅಮ್ಜದ್ ಪಾಷಾ

Published

on

ಯಳಂದೂರು: ಪ್ರಧಾನಮಂತ್ರಿ ಶ್ರಮ ಯೋಗಿ ಮನ್‌ಧನ್ ಯೋಜನೆಯ ಮೂಲಕ ಅಸಂಘಟಿತ ವಲಯ ಕಾರ್ಮಿಕರು 60 ವರ್ಷದ ನಂತರ ಮಾಸಿಕ ಪಿಂಚಣಿ ಮೂರು ಸಾವಿರ ರೂಪಾಯಿಗಳನ್ನು ಪಡೆಯಬಹುದು ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಅಭಿಯಾನ ವ್ಯವಸ್ಥಾಪಕ ಅಮ್ಜದ್ ಪಾಷಾ ತಿಳಿಸಿದರು.

ಅವರು ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಪಟ್ಟಣ ಪಂಚಾಯಿತಿ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಚಾಮರಾಜನಗರ ವತಿಯಿಂದ ಹಮ್ಮಿಕೊಂಡಿದ್ದ ಸ್ವ ನಿಧಿ ಸೇ ಸಮೃದ್ಧಿ ಯೋಜನೆ ಅಡಿ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಜೋಡಣೆ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ ಫಲಾನುಭವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂಪಾಯಿಗಳ ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಗೆ ಒಳಪಡುವ ಕಾರ್ಮಿಕರು ಆಸಂಘಟಿತ ವಲಯದ ಕಾರ್ಮಿಕರಾಗಿದ್ದು 18ರಿಂದ 40 ವರ್ಷದೊಳಗಿರಬೇಕು ಅವರ ಮಾಸಿಕ ಆದಾಯ 15,000 ಕ್ಕಿಂತ ಕಡಿಮೆ ಇರಬೇಕು, ಅವರು ಆದಾಯ ತೆರಿಗೆ, ಇ ಎಸ್ ಐ, ಪಿ ಎಫ್, ಎನ್ ಪಿ ಎಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು,ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು ಎಂದು ತಿಳಿಸಿದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ಡಾಕ್ಟರ್ ಪುಟ್ಟಸ್ವಾಮಿ, ಎಮ್ ಟಿ ಓ ಅನ್ಸಾರ್ ಖಾನ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್, ಪಟ್ಟಣ ಪಂಚಾಯಿತಿ ಸಮುದಾಯ ಸಂಘಟನಾಧಿಕಾರಿ ಪರಶಿವಮೂರ್ತಿ, ಕಾರ್ಮಿಕ ಇಲಾಖೆ ಸಿಬ್ಬಂದಿಗಳಾದ ಸುಚಿತ್ರ, ಪ್ರಸಾದ್, ಸಿ ಎಸ್ ಸಿ ಸೆಂಟರ್ ಸಿಬ್ಬಂದಿಗಳು, ಪಪಂ ಸಿಬ್ಬಂದಿಗಳಾದ ಗಣೇಶ್, ರಿಹಾನ, ಬೀದಿ ಬದಿ ವ್ಯಾಪಾರಿಗಳು ಹಾಜರಿದ್ದರು.

Continue Reading

Chamarajanagar

ಯಳಂದೂರು: ಪಟ್ಟಣ ಪಂಚಾಯಿತಿ ವತಿಯಿಂದ ವಿವಿಧ ಬಾಬ್ತುಗಳಿಗೆ ಬಹಿರಂಗ ಹರಾಜು

Published

on

ಯಳಂದೂರು: ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ವಿವಿಧ ಬಾಬ್ತುಗಳಿಗೆ ಬಹಿರಂಗ ಹರಾಜು ಮಾಡಲಾಯಿತು.

ಪಟ್ಟಣ ಪಂಚಾಯಿತಿ ವಾರದ ಸಂತೆ ಸುಂಕ ವಸೂಲಾತಿ ಹಕ್ಕು ರೂ. 1,57,000 ರೂಪಾಯಿಗಳಿಗೆ, ಪಟ್ಟಣ ಪಂಚಾಯಿತಿ ಬಸ್ ನಿಲ್ದಾಣದ ಸುಂಕ ವಸೂಲಾತಿ ಹಕ್ಕು 2,5,000 ರೂಪಾಯಿಗಳಿಗೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆಲ ಸುಂಕ ವಸೂಲಾತಿ ಹಕ್ಕು 3,87,000 ರೂಪಾಯಿಗಳಿಗೆ, ಎಲೆಕೇರಿ ಮಾಂಸದ ಅಂಗಡಿ 26 ಸಾವಿರ ರೂಪಾಯಿಗಳಿಗೆ, ಎಲೆಕೇರಿ ಮಾಂಸದ ಅಂಗಡಿ 2 ಹನ್ನೊಂದು ಸಾವಿರ ರೂಪಾಯಿಗಳಿಗೆ, ಎಲೆಕೇರಿ ಕೋಳಿ ಮಾಂಸದ ಅಂಗಡಿ 55,000 ರೂಪಾಯಿಗಳಿಗೆ,ಎಲೆಕೇರಿ ಕೋಳಿ ಮಾಂಸದ ಅಂಗಡಿ -2 25,000 ರೂಪಾಯಿಗಳಿಗೆ ಮಾರಾಟವಾಯಿತು.

ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್ ಮಾತನಾಡಿ ಹರಾಜಿನಲ್ಲಿ ಬಿಡ್ ಆದ ಟೆಂಡರ್ ಮೊತ್ತಕ್ಕೆ ಶೇಕಡಾ 18 ರಷ್ಟು ಶೇಕಡಾ 18ರಷ್ಟು ಜಿಎಸ್‌ಟಿ ತೆರಿಗೆಯನ್ನು ಪಾವತಿಸಬೇಕು, ಪಟ್ಟಣ ಪಂಚಾಯಿತಿಯಿಂದ ನೀಡುವ ನಿರ್ದೇಶನಗಳಿಗೆ ಬದ್ಧರಾಗಿರಬೇಕು, ಏಕ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಿ ಮಲ್ಲು, ಉಪಾಧ್ಯಕ್ಷ ಶಾಂತಮ್ಮ, ಸದಸ್ಯರಾದ ಮಹೇಶ್, ರಂಗನಾಥ್, ಪ್ರಭಾವತಿ ರಾಜಶೇಖರ್, ಸುಶೀಲ ಪ್ರಕಾಶ್, ಶ್ರೀಕಂಠ ಮೂರ್ತಿ, ಮುನಾವಾರ ಬೇಗ್, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಮಂಜು ಮಲ್ಲು,  ಲಕ್ಷ್ಮಿ , ಜಯಲಕ್ಷ್ಮಿ, ವಿಜಯ, ಮುಖಂಡರಾದ  ಮಲ್ಲು, ನಿಂಗರಾಜು, ಬಿಡ್ ದಾರರು, ಸಾರ್ವಜನಿಕರು ಹಾಜರಿದ್ದರು.

Continue Reading

Chamarajanagar

ಕೊಳ್ಳೇಗಾಲದಲ್ಲಿ ಭೀಕರ ಅಪಘಾ*ತ: ಇಬ್ಬರು ಮಹಿಳೆಯರ ಧಾರುಣ ಸಾ*ವು

Published

on

ಕೊಳ್ಳೇಗಾಲ ದ ಸಿದ್ದಯ್ಯನಪುರ ಗ್ರಾಮದ ಬಳಿ ಭೀಕರ ಅಪಘಾತ : ಇಬ್ಬರು ಮಹಿಳೆಯರು ಸಾವು,10 ಜನರಿಗೆ ಗಾಯ.

ವರದಿ :ಸುನೀಲ್ ಪ್ರಶಾಂತ್

ಕೊಳ್ಳೇಗಾಲ ಪಟ್ಟಣದ ಸಿದ್ದಯ್ಯನಪುರ ಗ್ರಾಮದ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಟಾಟಾ ಎಎಸ್ ಬೈಕ್ ನಡುವೆ ಮುಖ ಮುಖ ಡಿಕ್ಕಿ ಸ್ಥಳದಲ್ಲಿ ಇಬ್ಬರು ಮಹಿಳೆಯರ ಸಾವು.
ಕೊಳ್ಳೇಗಾಲ, ಶ್ರೀ ಮಲೆ ಮಹದೇಶ್ವರ ಬೆಟ್ಟ ದ ರಸ್ತೆ ಯಲ್ಲಿ ಬೆಳಿಗ್ಗೆ ಕೆಎಸ್ಆರ್ಟಿಸಿ ಹಾಗೂ ಟಾಟಾ ಎಎಸ್ ಬೈಕ್ ನಡುವೆ ಅಪಘಾತದಲ್ಲಿ ಹನೂರು ತಾಲ್ಲೂಕಿನ ಬಾಣಾವರ ಗ್ರಾಮದ 50 ವರ್ಷ ದ ಮಹಾದೇವಮ್ಮ,28 ವರ್ಷ ದ ಶೃತಿ ಮೃತ ಪಟ್ಟರೆ 10 ಕ್ಕೂ ಜನ ಗಾಯ ಗೊಂಡಿದಾರೆ.
ಗಾಯಳು ಗಳನ್ನು ಪಟ್ಟಣದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವರನ್ನು ಹೆಚ್ಚಿನ ಚಿಕಿತ್ಸೆ ಗೆ ಮೈಸೂರು, ಹಾಗೂ ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಗೆ ಕಳುಹಿಸಲಾಗಿದೆ

Continue Reading

Trending

error: Content is protected !!