Cultural
ರಂಜಿಸಲಿದೆ ಡೊಳ್ಳು ಕುಣಿತ, ಪೂಜಾ ಕುಣಿತ, ವಸ್ತು ಪ್ರದರ್ಶನ

ಅ. 19 ಜಾನಪದ ದಸರಾ ವೈವಿಧ್ಯಕ್ಕೆ ಪೂರ್ಣ ತಯಾರಿ
ಜನಮಿತ್ರ ಮಡಿಕೇರಿ : ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕವು ಅದ್ಧೂರಿಯ ಜಾನಪದ ದಸರಾ ಮೆರವಣಿಗೆ ಮತ್ತು ಕಾರ್ಯಕ್ರಮವನ್ನು ರೂಪಿಸಿದ್ದು, ಮಡಿಕೇರಿ ನಗರ ದಸರಾ ಸಮಿತಿಯ ಸಹಕಾರದೊಂದಿಗೆ ಅ. 19 ರಂದು ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ರಸ್ತೆಯ ವಿಶ್ರಾಂತಿ ಗೃಹ ಆವರಣದಿಂದ ವರ್ಣರಂಜಿತ ಮೆರವಣಿಗೆ ಆರಂಭಗೊಳ್ಳಲಿದೆ. ರಾಮನಗರದ ಪ್ರತಿಷ್ಠಿತ ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ತಮಟೆ, ಕೊಡಗಿನ ಮುತ್ತಪ್ಪ ಚಂಡೆ ವಾದ್ಯ ಇತ್ಯಾದಿ ಕಲಾ ತಂಡಗಳು ಭಾಗವಹಿಸಲಿವೆ.
ಶಾಸಕ ಡಾ. ಮಂತರ್‌ಗೌಡ, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್‌ಆಚಾರ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಜಿಲ್ಲಾಧಿಕಾರಿ ವೆಂಕಟ್‌ರಾಜ ಹಾಗೂ ಇತರರು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಜಾನಪದ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಈ ಸಂದರ್ಭ ಜಾನಪದ ಪರಿಷತ್ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನೂ ವಿತರಿಸಲಾಗುವುದು.
ಪರಿಷತ್ ಏರ್ಪಡಿಸಿದ್ದ ಕೊಡಗಿನ ಕಲೆ, ಸಂಸ್ಕೃತಿ ಆಧಾರಿತ ಜಾನಪದ ಕಥೆ ಹೇಳುವ ಆನ್‌ಲೈನ್ ಸ್ಪರ್ಧೆಯಲ್ಲಿ ಕವಯತ್ರಿ ಭಾಗೀರಥಿ ಹುಲಿತಾಳ ಪ್ರಥಮ ಬಹುಮಾನ ಗಳಿಸಿದ್ದಾರೆ. ಸೋಮವಾರಪೇಟೆಯ ಬರಹಗಾರ್ತಿ ಶರ್ಮಿಳಾ ರಮೇಶ್ ದ್ವಿತೀಯ ಹಾಗೂ ಕಾನ್ವೆಂಟ್ ವಿದ್ಯಾರ್ಥಿನಿ ಅನಗ ತೃತೀಯ ಬಹುಮಾನ ಗಳಿಸಿದ್ದಾರೆ.
ಮೆರವಣಿಗೆ ಆಹ್ವಾನ: ಜಿಲ್ಲೆಯ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಸ್ವಸÀಹಾಯ ಸಂಘಗಳ ಸದಸ್ಯರುಗಳು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸುವಂತೆ ಜಾನಪದ ಪರಿಷತ್ ಮನವಿ ಮಾಡಿದೆ.
ಬೊಂಬೆ ಮನೆಗೆ ಬಹುಮಾನ: ದಸರಾ ಪ್ರಯುಕ್ತ ಹಲವು ಮನೆಗಳಲ್ಲಿ ಬೊಂಬೆ ಪ್ರದರ್ಶನ ನಡೆಸುವ ಪದ್ಧತಿ ಇದ್ದು, ಈ ಸಾಲಿನಿಂದ ಉತ್ತಮ ಪ್ರದರ್ಶನ ಏರ್ಪಡಿಸುವವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲು ಜಿಲ್ಲಾ ಜಾನಪದ ಪರಿಷತ್ ತೀರ್ಮಾನಿಸಿದೆ.
ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಎಲ್ಲೆಡೆಯಿರುವ ಜಾನಪದ ಪರಿಷತ್ ಘಟಕಗಳ ವತಿಯಿಂದ ವೈವಿಧ್ಯ ಮಯ, ಜಾನಪದ ನೃತ್ಯ, ಸಂಗೀತ, ಹಾಡು ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಸಂಜೆ ಆರು ಗಂಟೆಗೆ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲೂ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
Cultural
ಶ್ರೀರಾಮನ ಚರಿತ್ರೆ ವಿಶ್ವಕ್ಕೆ ಸಾರಿದ ಶ್ರೀಮಹರ್ಷಿ ವಾಲ್ಮೀಕಿ — ಶಾಸಕ ದರ್ಶನ್ ಧ್ರುವನಾರಾಯಣ್

ನಂಜನಗೂಡು ನ.15
ಶ್ರೀ ರಾಮನ ಚರಿತ್ರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ನಾಯಕ ಶ್ರೀ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಗುಣಗಳು ಪ್ರಜಾಪ್ರಭುತ್ವಕ್ಕೆ ಬಹು ಮುಖ್ಯವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.ಅವುಗಳನ್ನು ಪ್ರತಿಯೊಬ್ಬರು ಸದ್ಬಳಕೆ ಪಡೆದುಕೊಳ್ಳುವ ಮೂಲಕ ಆರ್ಥಿಕ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಸಮಾಜದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ಎಲ್ಲಾ ರೀತಿಯ ಸಹಕಾರ ನೀಡುತ್ತೆನೆ ಎಂದರು.
ಸರ್ಕಾರಿ ಸೌಲಭ್ಯ ಪಡೆಯಲು ಯಾವುದೇ ಜಾತಿಭೇದ ಮಾಡಬೇಡಿ ಸಮಾಜಕ್ಕೆ ನಾವೆಲ್ಲರೂ ಒಂದೇ ಎಂಬ ಸಂದೇಶ ವಾಲ್ಮೀಕಿ ಸಮುದಾಯ ಸಾರಬೇಕು.ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಗ್ರಾಮದ ಎಲ್ಲ ನಾಯಕ ಸಮಾಜದವರನ್ನು ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ಇರಬೇಕು.ಶ್ರೀ ಮಹರ್ಷಿ ವಾಲ್ಮೀಕಿ ಅವರ ರಾಮಾಯಣದಲ್ಲಿ ಹೆಚ್ಚು ರೂಪಕ ಅಲಂಕಾರ ಬಳಕೆಯಾಗಿರುವುದ್ದರಿಂದ ಕಾಳಿದಾಸ ಕವಿ ಮಹರ್ಷಿ ವಾಲ್ಮೀಕಿ ಅವರನ್ನು ಕವಿಕುಲ ಚಕ್ರವರ್ತಿ ಎಂಬುದಾಗಿಯೋ ವರ್ಣಿಸಿದ್ದಾರೆ ಅಲ್ಲದೇ ಜಗತ್ತಿನ ಶ್ರೇಷ್ಠ ವಿಮಾರ್ಶಕ ಥಾಮಸ್ ಪ್ರಕಾರ ವಾಲ್ಮೀಕಿ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯ ಸಂಪತ್ತು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕುಂಬ್ರಳ್ಳಿ ಸುಬ್ಬಣ್ಣ, ಶ್ರೀ ಕಂಠನಾಯಕ,ತಾ ಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್,ನಾಯಕ ಸಂಘದ ತಾಲ್ಲೂಕು ಅದ್ಯಕ್ಷ ಬಂಗಾರನಾಯಕ, ಕಾಂಗ್ರೆಸ್ ಯುವ ಘಟಕದ ಅದ್ಯಕ್ಷ ದೇಬೂರು ಆಶೋಕ್,ಗ್ರಾ ಪಂ ಅದ್ಯಕ್ಷೆ ತಾಯಮ್ಮ,
ದೊರೆಸ್ವಾಮಿನಾಯಕ,ಅಭಿನಂದನ್ ಪಾಟೀಲ್,ಗ್ರಾ ಪಂ ಸದಸ್ಯದೇವನಾಯಕ,ನಾಗನಾಯ್ಕ,ಶ್ರೀಕಂಠಸ್ವಾಮಿ,ಶಿವರಾಜು,ಪ್ರಕಾಶ್,ನಂಜುಂಡಸ್ವಾಮಿ, ಸಿದ್ದು,ಮಹೇಶ್, ಮಹೇಂದ್ರ, ಹಾಗೂ ಕಿಚ್ಚಿನ ಅಭಿಮಾನಿ ಬಳಗದವರು ಹಾಜರಿದ್ದರು.
ನಂಜನಗೂಡು ಮಹದೇವಸ್ವಾಮಿ ಪಟೇಲ್.
Cultural
ಪುರಾತನ ಕಾಲದ ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ

ಆಲೂರು : ನೂರಾರು ವರ್ಷಗಳ ಪುರಾತನ ಕಾಲದ ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ತಾಲ್ಲೂಕಿನ ಕಸಬಾ ಹೋಬಳಿ ಸೊಂಪುರ ಗ್ರಾಮದ ಸಮೀಪದಲ್ಲಿರುವ ನಂಜದೇವರ ಕಾವಲಿನಲ್ಲಿ ಸುಕ್ಷೇತ್ರ ನಂಜುಂಡೇಶ್ವರ ದೇವಾಲಯದಲ್ಲಿ 52ನೇ ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಬೆಳಗಿನ ಜಾವದಿಂದಲೇ ದೇವಾಲಯ ಶುಚಿಗೊಳಿಸಿ ವಿವಿಧ ಹೂಗಳಿಂದ ಅಲಂಕರಿಸಿ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗಿ ವಿವಿಧ ಅಭಿಷೇಕ ಸೇರಿದಂತೆ ಅಲಂಕಾರ ಮಹಾ ಮಂಗಳಾರತಿ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು.
ಆಲೂರು ತಾಲೂಕು ಸೇರಿದಂತೆ ಹಲವೆಡೆಗಳಿಂದ ನೂರಾರು ಭಕ್ತರ ದಂಡು ಅಗಮಿಸಿ ಪೂಜಾ ಕಾರ‍್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.ವಿಶೇಷ ಎಂದರೆ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಕೋರಿಕೆಗಾಗಿ ಹರಕೆ ಹೊರುತ್ತಿದ್ದು. ಕೋರಿಕೆಗಳು ಈಡೇರಿದ ನಂತರ ಭಕ್ತರು ಪ್ರತಿ ಸೋಮವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆಯ ದಿನಗಳಂದು ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಾಧಿಗಳೇ ಸ್ವಯಂ ಪ್ರೇರಿತರಾಗಿ ಹಮ್ಮಿಕೊಳ್ಳುತ್ತ ಬಂದಿದ್ದಾರೆ ಎಂದು ದೇಗುಲ ಟ್ರಸ್ಟ್ ಅಧ್ಯಕ್ಷ ಈರಣ್ಣಯ್ಯ ತಿಳಿಸಿದ್ದಾರೆ.
Cultural
ಬ್ರಹ್ಮ ಕುಮಾರೀಸ್ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಪತ್ರಕರ್ತರ ಸಂಘದಲ್ಲಿ ರಕ್ಷಾಬಂಧನ

ಮಂಡ್ಯ: ನಗರದ ಬನ್ನೂರು ರಸ್ತೆಯಲ್ಲಿರುವ ಬ್ರಹ್ಮ ಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಪತ್ರಕರ್ತರ ಸಂಘದಲ್ಲಿ ಸೋಮವಾರ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು .ಪತ್ರಕರ್ತರಿಗೆ ರಾಕಿ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಬಿ.ಕೆ.ಶ್ವೇತ ಚಾಲನೆ ನೀಡಿದರು.ನಂತರ ಬಿ.ಕೆ.ಶಾರದಾ ಅವರು ಮಾತನಾಡಿ, ನನ್ನ ಕರ್ಮ ನನ್ನನ್ನು ರಕ್ಷಣೆ ಮಾಡುತ್ತದೆ. ಪರಮಾತ್ಮನು ರಕ್ಷಿಸುತ್ತಾನೆ ಎಂದರು.ಸಮಾಜದಲ್ಲಿ ಕಾಮ, ಕ್ರೋಧ, ಮದ, ಮತ್ಸರಗಳು ಅತಿಯಾಗಿದೆ. ಹಾಗಾಗಿ ಪಂಚಕರ್ಮಗಳಿಂದ ನಮಗೆ ರಕ್ಷಣೆ ಬೇಕಿದೆ ಎಂದು ತಿಳಿಸಿದರು.
ಎಲ್ಲಾ ಆತ್ಮಗಳು ಒಳ್ಳೆಯ ಆತ್ಮಗಳಾಗಿದೆ. ಆದರೆ ಆತ್ಮದಲ್ಲಿನ ನಕರಾತ್ಮಕ ಭಾವನೆ ಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದರು. ವಿದ್ಯಾದೇವತೆ ಸರಸ್ವತಿಗೆ ಪರಮಾತ್ಮನ ಜ್ಞಾನವಿದೆ. ಹಾಗಾಗಿ ಆಕೆಯನ್ನು ವಿದ್ಯಾದೇವಿ ಎಂದು ಪೂಜಿಸುತ್ತೇವೆ ಎಂದು ತಿಳಿಸಿದ ಅವರು, ಆಧ್ಯಾತ್ಮಿಕ ಜ್ಞಾನವಿಲ್ಲದೆ ನಾವು ಏನನ್ನು ಸಾಧಿಸಲು ಆಗುವುದಿಲ್ಲ. ಈ ಜ್ಞಾನವಿದ್ದಲ್ಲಿ ವಿಕಾರಗಳಿಂದ ಮುಕ್ತಿ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬಿಕೆ ಗೀತಾಂಜಲಿ, ಬಿಕೆ ಯಶೋಧ, ಬಿ.ಕೆ.ಪ್ರಶಾಂತ್ ಉಪಸ್ಥಿತರಿದ್ದರು.
-
State24 hours ago
ಅಕ್ರಮ ಮರ ಕಡಿತಲೆಗೆ ಶಿಕ್ಷೆ ಪ್ರಮಾಣ ಹೆಚ್ಚಳ: ಈಶ್ವರ ಖಂಡ್ರೆ ಖಡಕ್ ಸೂಚನೆ
-
Special11 hours ago
ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ
-
State7 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan7 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
State8 hours ago
ಪತ್ರಿಕೋದ್ಯಮ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಅವರಿಗೆ ಡಿ.ಲಿಟ್ ಪದವಿ
-
State6 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?
-
Kodagu4 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ
-
Hassan5 hours ago
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು