Connect with us

Hassan

ಯಶಸ್ವಿಯಾಗಿ ನಡೆದ ಶ್ರೀ ಜವೇನಹಳ್ಳಿ ವಿರಕ್ತ ಮಠದ ತ್ರಿಮೂರ್ತಿ ಗುರುಗಳ ಪುಣ್ಯಾರಾಧನೆ ಮಹೋತ್ಸವ

Published

on

ಹಾಸನ : ನಗರದ ಧ್ಯಾನ ಧಾಮವೆನ್ನಿಸಿದ ಶ್ರೀ ಜವೇನಹಳ್ಳಿ ವಿರಕ್ತ ಮಠದ ತ್ರಿಮೂರ್ತಿ ಗುರುಗಳ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ಶರಣರ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಮತ್ತು ಇಸ್ರೋ ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್ ರವರು ವಹಿಸಿದ್ದರು. ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಶ್ರೀಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ರವರು ವಹಿಸಿದ್ದರು.

ತ್ರಿಮೂರ್ತಿ ಗುರುಗಳಾದ ಶ್ರೀ ದೊಡ್ಡ ಶಾಂತವೀರ ಶಿವಯೋಗಿಗಳ ೧೦೮ನೇ, ಶ್ರೀಚಿಕ್ಕ ಶಾಂತವೀರ ಮಹಾಸ್ವಾಮಿಗಳ ೮೮ನೇ ಹಾಗೂ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳ ೩೮ನೇ ಪುಣ್ಯಾರಾಧನೆ ಮಹೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ರೇವಣ್ಣ ಸಿದ್ದೇಶ್ವರ ಸ್ವಾಮಿಗಳು, ರಾಯನಾಳ ಹುಬ್ಬಳ್ಳಿ, ಶ್ರೀ ಗಂಗಾಧರ ಸ್ವಾಮೀಜಿ ಬೈಲಾವಂಗಲ, ಶ್ರೀ ಅಭಿನವ ಪ್ರಭು ಸ್ವಾಮೀಜಿಗಳು ಕಲ್ಲಮಠ ಕಂಪ್ಲಿ. ಶ್ರೀ ನಂದೀಶ್ವರ ಸ್ವಾಮೀಜಿ ಸೀಗೆ ಗುಡ್ಡ ಹಾಸನ. ಶ್ರೀ ಜಯದೇವ ಸ್ವಾಮೀಜಿ ಚಿಲುಮೆ ಮಠ ಅರಕಲಗೂಡು. ಶ್ರೀ ಅಡವಿ ಸ್ವಾಮಿಗಳು ಮಡಿವಾಳೇಶ್ವರ ಸ್ವಾಮಿ ಮಠ ಮೈಸೂರು. ಹಾಸನ ಹಿಮ್ಸ್ ನಿರ್ದೇಶಕರಾದ ಸಂತೋಷ. ಜವೇನಹಳ್ಳಿ ಮಠದ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾದ ಉಮೇಶ್.ಇದ್ದರು ಕಾರ್ಯಕ್ರಮದ ಸ್ವಾಗತವನ್ನು ಜವನಹಳ್ಳಿ ಮಠದ ಹಿತರಕ್ಷಣಾ ಸಮಿತಿಯ ಸಹ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ನೆರವೇರಿಸಿದರು. ವಂದನಾರ್ಪಣೆಯನ್ನು ಜವನಹಳ್ಳಿ ಮಠದ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪರಮೇಶ್ ನೆರವೇರಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಮಠದ ಭಕ್ತರಾದ ಕೈಲಾಸ ಶಂಕರ್ ನಡೆಸಿಕೊಟ್ಟರು. ಬಂದ ಭಕ್ತರಿಗೆಲ್ಲಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್. ಕಿರಣ್ ಕುಮಾರ್ ರವರು ಮಾತನಾಡಿ, ನಮ್ಮನ್ನು ನಾವು ಅರಿಯಬೇಕು. ಚಂದ್ರ ಗ್ರಹಣಕ್ಕೆ ಉಪಗ್ರಹ ಉಡಾವಣೆ ಯಶಸ್ವಿಯಾಗಿ ನಡೆಯಿತು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಮಂಡನೆ ಮಾಡಿದ್ದೇವೆ. ಮನುಷ್ಯ ತನ್ನ ಜೀವನದಲ್ಲಿ ಪ್ರಾಣಿ ಪಕ್ಷಿಗಳೊಂದಿಗೆ ಹೋರಾಟ ನಡೆಸಿ ಕೊಂಡು ಬದುಕುತ್ತಿದ್ದಾರೆ. ಹೊಸ ಸಾಧನೆ ಸಿಕ್ಕರೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸುತ್ತದೆ ಎಂದರು.

ಶ್ರೀ ಮಠದಲ್ಲಿ ಅಭಿವೃದ್ದಿಗೆ ಸಹಕಾರಿ ಯಾಗಬೇಕು. ಜವನಹಳ್ಳಿ ಮಠದ ಹಿತರಕ್ಷಣಾ ಸಮಿತಿಯ ಅಭಿವೃದ್ಧಿಗೆ ೧೦ ಲಕ್ಷ ರೂಪಾಯಿ ಕೊಡುವುದಾಗಿ ಹಾಗೂ ಮಠದ ಕೆಲಸಕ್ಕೆ ಎಲ್ಲರೂ ಸಹಕಾರಿ ಯಾಗಬೇಕೆಂದು ಮನವಿ ಮಾಡಿದರು. ಮನುಷ್ಯ ಬಾಹ್ಯಾಕಾಶದಿಂದ ಹೋಗಿ ಸೌರಮಂಡಲಕ್ಕೂ ಕಾಲಿಡುತ್ತಿದ್ದಾನೆ. ಜೀವನದ ಮಟ್ಟ ಇದರಿಂದ ಉತ್ತಮ ಆಗುತ್ತಿದೆ. ಬಾಹ್ಯಕಾಶದಿಂದ ಉಪಗ್ರಹಗಳ ಉಪಯೋಗ ಪಡೆಯಲಾಗುತ್ತದೆ. ಇದರಿಂದ ಉಪಯೋಗ ಮತ್ತು ದುರುಪಯೋಗ ಕೂಡ ಇದೆ. ಮನುಷ್ಯ ಜೀವನಕ್ಕೆ ತನ್ನನ್ನು ತೊಡಗಿಸಿಕೊಂಡು ಸುತ್ತಮುತ್ತ ಕಡೆಯೂ ಕೂಡ ಗಮನ ಕೊಡಬೇಕು. ಮುಂದಿನ ಪೀಳಿಗೆಗೆ ಒಳ್ಳೆ ವಾತವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಇದೆ ವೇಳೆ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಬೆಳಗಿನಿಂದ ಶ್ರದ್ಧ ಭಕ್ತಿಯಲ್ಲಿ ಶ್ರೀ ತ್ರಿಮೂರ್ತಿ ಗುರುಗಳ ಪೂಜಾಕಾರ್ಯಗಳು ನಡೆದಿದೆ. ಇಲ್ಲಿಯವರೆಗೂ ಜ್ಞಾನ ವಿಜ್ಞಾನಗಳ ಕಾರ್ಯಕ್ರಮ ನಡೆಯುತ್ತಿದೆ. ನೋಡುವ ಕಣ್ಣುಗಳು ಒಳ್ಳೆಯದ ಬಿಟ್ಟು ಕೆಟ್ಟದನ್ನು ಬಿಂಭಿಸುವ ಕಡೆ ದೃಷ್ಠಿ ಬಿಡಲಾಗುತ್ತಿರುವುದು ಒಳ್ಳೆಯ ವಾತವರಣವಲ್ಲ. ಕತ್ತಲಿಂದ ಬೆಳಕಿನತ್ತ ಸಾಗಬೇಕು, ಧರ್ಮದ ಮಾರ್ಗದ ಕಡೆ ಸಾಗಿದರೇ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದರು. ಕಿರಣ್ ಅಂತಹ ವಿಜ್ಞಾನಿಗಳಿಂದಲೇ ನಮ್ಮ ಭಾರತ ದೇಶ ಮುಂದುವರೆದಿದೆ. ಮಠ ನಿರ್ಮಾಣ ಮಾಡಿದ ರೂವಾರಿಗಳು ಕಿರಣ್ ಕುಟುಂಬದವರು. ಶ್ರೀ ಜವೇನಹಳ್ಳಿ ಮಠದ ಸ್ಥಾಪನೆಯ ವಂಶಸ್ಥರು ವಿಜ್ಞಾನಿಗಳು ಆಗಿದ್ದಾರೆ ಎಂದರೇ ನಮಗೆಲ್ಲಾ ಸಂತೋಷ ಆಗಿತ್ತು ಎಂದು ಶ್ಲಾಘನೆವ್ಯಕ್ತಪಡಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ: ಮೈತ್ರಿ ಪಕ್ಷಕ್ಕೆ ಟಾಂಗ್‌ ಕೊಟ್ಟ ಡಿಸಿಎಂ

Published

on

ಹಾಸನ: ಅನೇಕ ಟೀಕೆಗಳ ಮಾಡಿದರೂ ಈಗ ಟೀಕೆಯೆಲ್ಲ ಸತ್ತೋಗಿ ನಮ್ಮ ಮತದಾರರು ಮೂರು ಚುನಾವಣೆಗಳಲ್ಲಿ ಯಾವ ತೀರ್ಪು ಕೊಡಬೇಕು ಕೊಟ್ಟಿದ್ದಾರೆ. ಮತದಾರರೇ ನಮಗೆ ದೇವರುಗಳು. ಅವರು ಕೊಟ್ಟ ತೀರ್ಪಿಗೆ ನಾವು ತಲೆ ಬಾಗಲೆಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದ ಹೊರವಲಯ ಅರಸೀಕೆರೆ ರಸ್ತೆಯ ಬಳಿ ಇರುವ ಎಸ್.ಎಂ. ಕೃಷ್ಣ ನಗರದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿ ನಂತರ ಮಾತನಾಡಿದ ಅವರು, ಡಿಸೆಂಬರ್ 5 ರಂದು ನಡೆಯುವ ಸ್ವಾಭಿಮಾನ ಸಮಾವೇಶದ ಹಿನ್ನೆಲೆಯಲ್ಲಿ ಸಿದ್ಧತೆ ಬಗ್ಗೆ ಪರಿಶೀಲಿಸಲು ಸೋಮವಾರ ಆಗಮಿಸಿದ ವೇಳೆ ಅವರು ಮಾತನಾಡಿದರು.

ಬಿಜೆಪಿ-ಜೆಡಿಎಸ್ ಸ್ನೇಹಿತರು ಆಗಿದ್ದು, ಟೀಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ನಾನು ಅವರಿಗೆ ಉತ್ತರಿಸಿದ್ದೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಈಗ ಟೀಕೆಯೆಲ್ಲ ಸತ್ತೋಗಿ ನಮ್ಮ ಮತದಾರರು ಮೂರು ಎಲೆಕ್ಷನ್‌ಗಳಲ್ಲೂ ಏನೂ ತೀರ್ಪು ಕೊಡಬೇಕು ಕೊಟ್ಟಿದ್ದಾರೆ. ಮತದಾರರೇ ದೇವರುಗಳು. ಅವರು ಕೊಟ್ಟ ತೀರ್ಪಿಗೆ ತಲೆಗೆ ಬಾಗುತ್ತೇವೆ. ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಮುಖಂಡತ್ವದಲ್ಲಿ ಈ ಸಮಾವೇಶ ನಡೆಯುತ್ತಿದೆ.
ನಮ್ಮ ಹಿತೈಷಿಗಳು ಸ್ವಾಭಿಮಾನಿಗಳ ಒಕ್ಕೂಟಗಳು ಸಿಎಂ ಕೆಲಸ ಮೆಚ್ಚಿ ಸಿಎಂ ಜೊತೆ ಇದ್ದೇವೆ ಎಂದು ಗುರುತಿಸಿಕೊಂಡು ಬೆಂಬಲ ನೀಡಿದ್ದಾರೆ. ಒಬ್ಬ ಇರಲಿ ಒಂದು ಲಕ್ಷ ಜನ ಇರಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು

ಇದು ಜನಕಲ್ಯಾಣ ಸಮಾವೇಶವಾಗಿದ್ದು, ಜನತೆಗೋಸ್ಕರ, ಜನರ ಕಲ್ಯಾಣಕ್ಕಾಗಿ ಸಮಾವೇಶ ಮಾಡುತ್ತಿದ್ದೇವೆ. ಇಪ್ಪತ್ತೈದು ವರ್ಷಗಳಿಂದ ಹಾಸನದಲ್ಲಿ ಕಾಂಗ್ರೆಸ್ ಸಂಸದ ಇರಲಿಲ್ಲ. ಈಗ ಲೋಕಸಭಾ ಸದಸ್ಯರನ್ನು ಕೊಟ್ಟಿದ್ದಾರೆ. ಮುಂದೆ ಲೋಕಲ್ ಬಾಡಿ ಎಲೆಕ್ಷನ್ ಬರುತ್ತದೆ. 2028 ಕ್ಕೆ ವಿಧಾನ ಸಭೆ ಚುನಾವಣೆ ಬರುತ್ತಿದೆ. ಲೋಕಸಭಾ ಚುನಾವಣೆ ವೇಳೆ ಹಾಸನದ ಬಹಳ ಕುಟುಂಬಗಳ ನೋವು ಕಂಡಿದ್ದಾರೆ. ಇಡೀ ದೇಶದಾದ್ಯಂತ ಚರ್ಚೆ ನಡೆದಿದೆ.

ಅವರಿಗೆ ಧೈರ್ಯ ಹೇಳಲು ಸಮಾವೇಶ ಹಮ್ಮಿಕೊಂಡಿದ್ದೇವೆ. ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಯಾವ ಉದ್ದೇಶಕ್ಕೆ ಸಮಾವೇಶ ಎಂದು ಪಾಪ ಅಶೋಕ್ ಪ್ರಶ್ನೆ ಮಾಡ್ತಾರೆ. ನೀವು ಭಾವನೆ ಮೇಲೆ ರಾಜಕಾರಣ ಮಾಡ್ತಿರಾ!
ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ನೀವ್ಯಾಕೆ ಪ್ರಧಾನ ಮಂತ್ರಿ ಕರೆಯಿಸಿ ಸಮಾರಂಭ ಮಾಡಿದ್ದೀರಾ! ನೀವು ಚುನಾವಣೆ ಮುಂಚೆ ಬೇಕಾದಷ್ಟು ಕಾರ್ಯಕ್ರಮ ಮಾಡಿದ್ದೀರಾ ಎಂದು ಟಾಂಗ್ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಸಭೆಯಲ್ಲಿ ಉದ್ದೇಶಿಸಿ ಮಾತನಾಡಿ, ಮೊದಲು ಸಮಾವೇಶದ ಬಗ್ಗೆ ಅಲ್ಪ ಸ್ವಲ್ಪ ಪಕ್ಷದಲ್ಲಿ ಗೊಂದಲವಿತ್ತು. ಅದನ್ನು ಈಗ ನಿವಾರಣೆ ಮಾಡಿಕೊಳ್ಳಲು ಸೋಮವಾರ ಇಂದು ಅಧ್ಯಕ್ಷರನ್ನು ಕರೆಸಿಕೊಂಡಿದ್ದೇವೆ. ಇದು ಮೊದಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದೆ. ಉತ್ತಮ ರೀತಿ ಕಾರ್ಯಕ್ರಮ ನಡೆಸಿಕೊಡುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕೆಪಿಸಿಸಿ ಹಾಗೂ ಸ್ವಾಭಿಮಾನಿ ಘಟಕಗಳ ಸಂಯುಕ್ತಾಶ್ರಯಲ್ಲಿ ಸಮಾವೇಶ ಜರುಗಲಿದೆ. ಡಿ.ಕೆ.ಶಿವಕುಮಾರ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್ಲಾ ಗೊಂದಲಗಳಿಗೂ ಸಮಾವೇಶದಲ್ಲಿ ಅಂತಿಮ ತೆರೆ ಎಳೆಯಲೆಂದೆ ಅಧ್ಯಕ್ಷರು ಹಾಸನಕ್ಕೆ ಬಂದಿದ್ದಾರೆ ಎಂದು ಟೀಕೆ ಮಾಡುವವರಿಗೆ ಉತ್ತರ ನೀಡಿದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಂ, ಮಾಜಿ ಶಾಸಕ ಪುಟ್ಟೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಹೆಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ತಾರಾಚಂದನ್ ಇತರರು ಉಪಸ್ಥಿತರಿದ್ದರು.

Continue Reading

Hassan

ಬಿಜೆಪಿ-ಜೆಡಿಎಸ್ ಸ್ನೇಹಿತರು ಟೀಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

Published

on

HASSAN-BREAKING

ಹಾಸನ : ಹಾಸನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಬಿಜೆಪಿ-ಜೆಡಿಎಸ್ ಸ್ನೇಹಿತರು ಟೀಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ

ನಾನು ಅವರಿಗೆ ಉತ್ತರಿಸಿದೆ

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ

ಈಗ ಟೀಕೆಯೆಲ್ಲ ಸತ್ತೋಗಿ ನಮ್ಮ ಮತದಾರರು ಮೂರು ಎಲೆಕ್ಷನ್‌ಗಳಲ್ಲೂ ಏನೂ ತೀರ್ಪು ಕೊಡಬೇಕು ಕೊಟ್ಟಿದ್ದಾರೆ

ಮತದಾರರೇ ದೇವರುಗಳು ಅವರ ಕೊಟ್ಟ ತೀರ್ಪಿಗೆ ತಲೆಗೆ ಬಾಗುತ್ತೇವೆ

ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಮುಖಂಡತ್ವದಲ್ಲಿ ಈ ಸಮಾವೇಶ ನಡೆಯುತ್ತಿದೆ

ನಮ್ಮ ಹಿತೈಷಿಗಳು ಸ್ವಾಭಿಮಾನಿಗಳ ಒಕ್ಕೂಗಳು ಸಿಎಂ ಕೆಲಸ ಮೆಚ್ಚಿ ಸಿಎಂ ಜೊತೆ ಇದ್ದೇವೆ ಎಂದು ಗುರುತಿಸಿಕೊಂಡಿದ್ದಾರೆ, ಬೆಂಬಲ ನೀಡಿದ್ದಾರೆ

ಒಬ್ಬ ಇರಲಿ ಒಂದು ಲಕ್ಷ ಜನ ಇರಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ

ಇದು ಜನಕಲ್ಯಾಣ ಸಮಾವೇಶ, ಜನತೆಗೋಸ್ಕರ, ಜನರ ಕಲ್ಯಾಣಕ್ಕಾಗಿ ಸಮಾವೇಶ ಮಾಡುತ್ತಿದ್ದೇವೆ

ಇಪ್ಪತ್ತೈದು ವರ್ಷಗಳಿಂದ ಹಾಸನದಲ್ಲಿ ಕಾಂಗ್ರೆಸ್ ಸಂಸದ ಇರಲಿಲ್ಲ

ಈಗ ಲೋಕಸಭಾ ಸದಸ್ಯರನ್ನು ಕೊಟ್ಟಿದ್ದಾರೆ

ಮುಂದೆ ಲೋಕಲ್ ಬಾಡಿ ಎಲೆಕ್ಷನ್ ಬರ್ತಿದೆ

2028 ಕ್ಕೆ ವಿಧಾನ ಸಭೆ ಚುನಾವಣೆ ಬರುತ್ತೆ

ಲೋಕಸಭಾ ಚುನಾವಣೆ ವೇಳೆ ಹಾಸನದ ಬಹಳ ಕುಟುಂಬಗಳ ನೋವು ಕಂಡಿದ್ದಾರೆ

ಇಡೀ ದೇಶದಾದ್ಯಂತ ಚರ್ಚೆ ನಡೆದಿದೆ

ಅವರಿಗೆ ಧೈರ್ಯ ಹೇಳಲು ಸಮಾವೇಶ ಹಮ್ಮಿಕೊಂಡಿದ್ದೇನೆ

ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ

ಯಾವ ಉದ್ದೇಶಕ್ಕೆ ಸಮಾವೇಶ ಎಂದು ಪಾಪ ಅಶೋಕ್ ಪ್ರಶ್ನೆ ಮಾಡ್ತಾರೆ

ನೀವು ಭಾವನೆ ಮೇಲೆ ರಾಜಕಾರಣ ಮಾಡ್ತಿರಾ

ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡ್ತೇವೆ

ನೀವ್ಯಾಕೆ ಪ್ರಧಾನಮಂತ್ರಿ ಕರೆಸಿ ಸಮಾರಂಭ ಮಾಡಿದ್ರಿ

ನೀವು ಚುನಾವಣೆ ಮುಂಚೆ ಬೇಕಾದಷ್ಟು ಕಾರ್ಯಕ್ರಮ ಮಾಡಿದ್ರಿ

Continue Reading

Hassan

ಕೆಪಿಸಿಸಿ ಹಾಗೂ ಸ್ವಾಭಿಮಾನಿ ಘಟಕಗಳ ಸಂಯುಕ್ತಾಶ್ರಯಲ್ಲಿ ಸಮಾವೇಶ ಜರುಗುತ್ತದೆ: ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ

Published

on

HASSAN-BREAKING

ಹಾಸನ : ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ

ಸಮಾವೇಶದ ಬಗ್ಗೆ ಅಲ್ಪ ಸ್ವಲ್ಪ ಗೊಂದಲವಿತ್ತು

ಅದನ್ನು ನಿವಾರಣೆ ಮಾಡಿಕೊಳ್ಳಲು ಇಂದು ಅಧ್ಯಕ್ಷರನ್ನು ಕರೆಸಿಕೊಂಡಿದ್ದೇವೆ

ಇದು ಪ್ರಪ್ರಥಮವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ

ಅದೇ ರೀತಿ ಕಾರ್ಯಕ್ರಮ ನಡೆಸಿಕೊಡುತ್ತೇವೆ

ಕೆಪಿಸಿಸಿ ಹಾಗೂ ಸ್ವಾಭಿಮಾನಿ ಘಟಕಗಳ ಸಂಯುಕ್ತಾಶ್ರಯಲ್ಲಿ ಸಮಾವೇಶ ಜರುಗುತ್ತೆ

ಡಿ.ಕೆ.ಶಿವಕುಮಾರ್ ಅವರು ಅದರ ಅಧ್ಯಕ್ಷತೆ ವಹಿಸುತ್ತಾರೆ

ಇಲ್ಲಾ ಗೊಂದಲಗಳಿಗೂ ಅಂತಿಮ ತೆರೆ ಎಳೆಯಲು ಇಂದು ಅಧ್ಯಕ್ಷರು ಬಂದಿದ್ದಾರೆ

Continue Reading

Trending

error: Content is protected !!