Connect with us

Hassan

ಯಶಸ್ವಿಯಾಗಿ ನಡೆದ ಮನ್ ಕಿ ಬಾತ್ ವೀಕ್ಷಣೆ

Published

on

ಹಾಸನ: ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಕಿ ಬಾತ್ ಕಾರ್ಯಕ್ರಮವನ್ನು ಪ್ರೊಜೆಕ್ಟರ್ ಮೂಲಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಮತ್ತು ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹಾಗೂ ಕಾರ್ಯಕರ್ತರು ವೀಕ್ಷಣೆ ಮಾಡಿದರು.

ನಂತರ ಪ್ರೀತಂ ಜೆ. ಗೌಡ ಅವರು ಮಾಧ್ಯಮದೊಂದಿಗೆ ಮಾತನಾಡಿ, ನರೇಂದ್ರ ಮೋದಿಗಳು ಪ್ರಧಾನಿಯಾದ ನಂತರ ಕಳೆದ ೧೦ ವರ್ಷಗಳಲ್ಲಿ ೧೦೯ ಬಾರಿ ಮನ್ ಕೀ ಭಾತ್ ಕಾರ್ಯಕ್ರಮವನ್ನು ದೇಶದ ಮೂಲೆ ಮೂಲೆಯಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಅವರ ಭಾವನೆಯನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡು ಪ್ರೇರಣೆ ಕೊಡುವ ಕೆಲಸವನ್ನು ಮಾಡಿದ್ದು, ಎಲ್ಲಾರೂ ಕೂಡ ವಿಚಾರ ತಿಳಿಸಿದ್ದು, ಸೋಷಿಯಲ್ ಮಾಧ್ಯಮದ ವೇಳೆಯೂ ಕೂಡ ಈ ಮನ್ ಕಿ ಭಾತ್ ಕಾರ್ಯಕ್ರಮವು ಶಕ್ತಿ ಕೊಟ್ಟಿದೆ ಎಂದರು. ರಾಜಕೀಯ ಮಾಡುವುದಕ್ಕೆ ಮಾತ್ರ ರಾಜಕೀಯ ಪಕ್ಷಗಳಿಲ್ಲ. ಸಾಮಾಜಿಕ ಕಳಾಕಳಿ ಕೂಡ ಇದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ತೋರಿಸಿಕೊಟ್ಟಿದ್ದಾರೆ. ಅಧಿಕಾರ ಸ್ವೀಕರಾ ಮಾಡಿದ ನಂತರ ಅಭಿವೃದ್ಧಿ ಏನೆಂಬುದನ್ನು ತೋರಿಸಿಕೊಟ್ಟಿದ್ದು, ಅವರು ನಡೆಯುವ ದಾರಿಯಲ್ಲಿ ನಾವು ಹೋಗುವುದಾಗಿ ಹೇಳಿದರು.

ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಪ್ರಧಾನಿಯವರಾದ ನರೇಂದ್ರ ಮೋದಿಗಳು ೧೦೯ನೇ ಮನೆ ಕಿ ಬಾತ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ಕಾರ್ಯಕ್ರವನ್ನು ದೇಶದೆಲ್ಲೆಡೆ ವೀಕ್ಷಣೆ ಮಾಡಿದ್ದಾರೆ. ಕಟ್ಟಕಡೆಯ ವ್ಯಕ್ತಿಯು ಕೂಡ ವಿಚಾರದಾರೆ ತಿಳಿಯಬೇಕು. ಹತ್ತು ಹಲವಾರು ವಿಚಾರಗಳನ್ನು ಮೋದಿ ಮಾತನಾಡಿದ್ದು, ದೇಶದಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅವಕಾಶ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು. ಆನೆಗಳ ಸಂಘರ್ಷದ ಬಗ್ಗೆಯೂ ಕೂಡ ತಿಳಿಸಿದ್ದಾರೆ. ರಾಜ್ಯಕ್ಕೆ ಬೇಕಾದ ಹಲವಾರು ವಿಷಯಗಳ ಮಾತನಾಡಿದ್ದಾರೆ. ಪ್ರತಿ ತಿಂಗಳು ಕಡೆಯ ಭಾನುವಾರದಂದು ಬೆಳಿಗ್ಗೆ ೧೧ ಗಂಟೆಗೆ ಪ್ರಾರಂಭವಾಗಿ ೧೧:೩೦ಕ್ಕೆ ಕೊನೆಯಗಾಗುತ್ತದೆ. ಅರ್ಧ ಗಂಟೆಗಳ ಕಾಲ ವೀಕ್ಷಣೆ ಮಾಡಬಹುದಾಗಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರಗಳ ಬಗ್ಗೆ ತಿಳಿಯಬಹುದು. ಇನ್ನು ಪರೀಕ್ಷಾ ವಿದ್ಯಾರ್ಥಿಗಳಿಗೆ ಆ ಸಮಯದಲ್ಲಿ ವಿಚಾರ ತಿಳಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಹುಡಾ ಮಾಜಿ ಅಧ್ಯಕ್ಷ ಲಲಾಟ್ ಮೂರ್ತಿ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಕಿರಣ್, ಜಿ. ದೇವರಾಜೇಗೌಡ, ಯುವ ಮೋರ್ಚಾದ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮೀತ್ ಶೆಟ್ಟಿ, ಮಾದ್ಯಮ ಸಂಚಾಲಕ ಪ್ರೀತಿವರ್ಧನ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಯಶಸ್ವಿಗೆ ಸಹಕರಿಸಿದವರಿಗೆ ಸಾಯಿಬಾಬ ಮಂದಿರದಲ್ಲಿ ವಿಶೇಷ ಪೂಜೆ ಮೂಲಕ ಕೃತಜ್ಞತೆ

Published

on

ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಶ್ರೀ ಗುರುಪೂರ್ಣಿಮ ಅಂಗವಾಗಿ ಕಳೆದ ೮ ದಿನಗಳಿಂದ ನಡೆದ ವಿವಿಧ ಪೂಜಾಕಾರ್ಯಗಳು ಯಶಸ್ವಿಯಾಗಿ ನಡೆದಿದ್ದು, ಇದಕ್ಕೆ ಸಹಕರಿಸಿದ ಎಲ್ಲಾರಿಗೂ ವಿಶೇಷ ಪೂಜೆ ಸಲ್ಲಿಸಿ ಇದೆ ವೇಳೆ ಅಭಿನಂದನೆ ತಿಳಿಸಿ ಪ್ರಸಾದ ವಿತರಿಸಿದರು.

ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಸಾಯಿ ಪ್ರಸಾದ್ ಮಾತನಾಡಿ, ಯಾವುದೇ ಒಂದು ಸಂಸ್ಥೆಗಳು ನಡೆಯಬೇಕಾದರೇ ಎಲ್ಲಾ ಅಂಗಗಳಲ್ಲೂ ಸಹಕಾರ ಇದ್ದರೆ ಯಶಸ್ಸು ಕಾಣಲು ಸಾಧ್ಯ. ಮೊದಲ ಬಾರಿಗೆ ಬಾಬ ಮಂದಿರದ ಕಲ್ಪನೆ ಬೆಳೆದಾಗ ಈ ಮಂದಿರ ನಿರ್ಮಾಣ ಮಾಡುವ ವೇಳೆ ಬಹಳಷ್ಟು ರೀತಿಯಲ್ಲಿ ತೊಡಕುಗಳಿತ್ತು. ಬಾಬ ಅವರ ಮಂದಿರಕ್ಕೆ ಸಣ್ಣ ಜಾಗಕ್ಕಾಗಿ

ಹುಡುಕಾಟ ನಡೆದಿತ್ತು. ಆದರೇ ದೈವ ಸಂಕಲ್ಪದಲ್ಲಿ ಬಾಬ ಅವರ ಕೃಫೆಯಿಂದ ಇಂತಹ ಒಂದು ಪುಣ್ಯ ಕ್ಷೇತ್ರವಾಗುವ ಸ್ಥಳವನ್ನು ಹಾಸನದ ಹೃದಯ ಭಾಗದಲ್ಲಿರುವಂತಹ ಸ್ಥಳವನ್ನು ಕೊಟ್ಟಂತಹ ಮಹಾದಾನಿ ಪ್ರಭಾವತಿ ವಿನಾಯಕ ಮತ್ತು ಅವರ ಕುಟುಂಬದವರಾದ ರವಿ ಮತ್ತು ಶಿಶಿ ವಿನಾಯಕ್ ಇವರನ್ನು ಪ್ರಪ್ರಥಮ ಬಾರಿಗೆ ನೆನಪಿಸಿಕೊಳ್ಳಬೇಕಾಗಿರುವುದು ನಮ್ಮ ಆಧ್ಯಾ ಕರ್ತವ್ಯ. ಈ ಜಾಗ ಇಂದು ಪುಣ್ಯ ಕ್ಷೇತ್ರವಾಗಿದೆ. ಯಾವುದೇ ಲಾಭಕ್ಕಾಗಿ ಈ ಮಂದಿರ ನಿರ್ಮಾಣ ಮಾಡಿರುವುದಿಲ್ಲ. ಸೇವೆಯ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿದೆ. ಕೇವಲ ಇ-ಮೈಲ್ ಮೂಲಕ ಮನವಿ ಮಾಡಿದಕ್ಕೆ ಇಂದು ಸಹಕಾರ ಸಿಕ್ಕಿದ್ದು, ಜಾಗವನ್ನು ದಾನವಾಗಿ ಕೊಟ್ಟವರು ಈಗ ಇವರು ಅಮೇರಿಕಾದಲ್ಲಿದ್ದು, ಈಗ ಅವರ ಸಂಬಂಧಿಕರಾದ ಚಂದ್ರಶೇಖರ್ ಅವರು ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್

ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು. ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ ಮೂಲಕ ಅತೀ ಬಡವ ಹಾಗೂ ಕಿವುಡ, ಮೂಗ ಮಕ್ಕಳ ಶಿಕ್ಷಣಕ್ಕಾಗಿ ಅಂತವರಿಗೆ ಸಹಾಯಸ್ತ ಮಾಡಲಾಗುತ್ತಿದೆ. ಇನ್ನುಳಿದಂತೆ ಖರ್ಚು ವೆಚ್ಚದ ಒಂದೊಂದು ರೂಗಳು ಎಲ್ಲಿಯೂ ಕೂಡ ಪೋಲು ಆಗಬಾರದೆಂದು ಬಾಬಾ ಅವರಿಗೆ ಲೆಕ್ಕ ಕೊಡಲಾಗುತ್ತದೆ. ದೇವರ ಹೆಸರಿನಲ್ಲಿ ಹಣ ಕೊಡುವ ದಾನಿಗಳದು ಸಂಪೂರ್ಣವಾಗಿ ಸದುಪಯೋಗವಾಗುತ್ತದೆ. ಬಾಬರವರ ಬಳಿ ಯಾರು ಆಶ್ರಯ ಕೇಳಿ ಬರುತ್ತಾರೆ, ಅಂತವರ ಬಳಿ ಹಣ ಕೇಳದೆ ಸಂಪೂರ್ಣವಾಗಿ ಉಚಿತವಾಗಿ ವಸತಿ ಮಾಡಬೇಕು ಎನ್ನುವ ಉದ್ದಶ ಹೊಂದಿದ್ದು, ಈಗಾಗಲೇ ಅದಕ್ಕಾಗಿ ಸಾಕಷ್ಟು ಓಮರ್ಕ್ ಕೂಡ ನಡೆಯುತ್ತಿದೆ. ಇವೆಲ್ಲಾ ಸಮಾಜ ಸೇವಾ ಚಟುವಟಕೆ ನಡೆಯಲು ಮಹಾದಾನಿಗಳು, ಮಹಾವ್ಯಕ್ತಿಗಳು ಕೊಡುವ ಪುಣ್ಯದ ಸೇವೆಯಿಂದ ನಡೆಯುತ್ತದೆ ಎಂದರು.

Continue Reading

Hassan

ಜುಲೈ 31 ಜಮೀನಿಗೆ ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ : ಆಲೂರು ತಾಲೂಕು ತಹಸೀಲ್ದಾರ್ ನಂದಕುಮಾರ್

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯೂ ಜುಲೈ 31ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಹಸೀಲ್ದಾರ್ ಸಿ.ಪಿ ನಂದಕುಮಾರ್ ತಿಳಿಸಿದ್ದಾರೆ.

ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಪ್ರಸ್ತುತ ದಿನಗಳಲ್ಲಿ ಕೃಷಿ ಅಕ್ರಮ ಪ್ರಕರಣಗಳು, ನೋಂದಣಿಗಳು ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರವು ರೈತರಿಗೆ ತಮ್ಮ ಪಹಣಿಗೆ ಆಧಾ‌ರ್ ಲಿಂಕ್ ಮಾಡಿಸಲು ಅವಕಾಶ ಕಲ್ಪಿಸಿತ್ತು ಇದರಿಂದ ಆಸ್ತಿ ಇತರರ ಪಾಲಾಗುವುದನ್ನು ತಪ್ಪಿಸಬಹುದು ಜೊತೆಗೆ ಸರ್ಕಾರಿ ಸೌಲಭ್ಯಗಳು, ಬ್ಯಾಂಕ್

ಸೌಲಭ್ಯಗಳು, ಕೃಷಿ ಇಲಾಖೆ ಸೌಲಭ್ಯಗಳು ಮತ್ತು ಬೆಳೆ ಪರಿಹಾರಗಳನ್ನು ಪಡೆಯಲು ಅನುಕೂಲವಾಗುತ್ತದೆ ಅದುದರಿಂದ ಪ್ರತಿಯೊಬ್ಬ ರೈತರು ಇದೇ ತಿಂಗಳ ಜುಲೈ 31ರ ಒಳಗೆ ರೈತರು ತಮ್ಮ ಜಮೀನಿಗಳ ಎಲ್ಲಾ ಸರ್ವೆ ನಂಬರಿನ ಎಲ್ಲಾ ಪಹಣಿ (RTC), ಆಧಾರ್ ಕಾರ್ಡ್ ಪ್ರತಿ ಮತ್ತು ಆಧಾರ್‌ಗೆ ಲಿಂಕ್‌ ಇರುವ ಮೊಬೈಲ್ ಪೋನ್‌ನೊಂದಿಗೆ ನಿಮ್ಮಗ್ರಾಮ ಲೆಕ್ಕಾಧಿಕಾರಿ (VA) ಅಥವ ನಾಡಕಚೇರಿಗೆ ಭೇಟಿ ಮಾಡಿ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಿ ಎಂದು ತಿಳಿಸಿದರು.

ಪೋಟೋ ಕ್ಯಾಪ್ಶನ್: ಆಲೂರು ತಾಲೂಕು ತಹಸೀಲ್ದಾರ್ ಸಿ.ಪಿ ನಂದಕುಮಾರ್

Continue Reading

Hassan

ಶಿರಾಡಿಘಾಟ್ ರಸ್ತೆಯ ತಿರುವಿನಲ್ಲಿ ಉರುಳಿಬಿದ್ದ ಕಂಟೇನರ್

Published

on

ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆಯ ಅಬ್ಬರ

ಬಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಣ್ಣು ಕುಸಿತ

ರಸ್ತೆಗೆ ಮಣ್ಣು ಕುಸಿದು ಹದಗೆಟ್ಟ ರಸ್ತೆ

ಶಿರಾಡಿಘಾಟ್ ರಸ್ತೆಯ ತಿರುವಿನಲ್ಲಿ ಉರುಳಿಬಿದ್ದ ಕಂಟೇನರ್

ಸಕಲೇಶಪುರ ತಾಲ್ಲೂಕಿನ, ಕೆಸಗಾನಹಳ್ಳಿ ಬಳಿ ಘಟನೆ

ಬಾರಿ ಮಳೆಗೆ ಶಿರಾಡಿಘಾಟ್ ರಸ್ತೆಯಲ್ಲಿ ಕುಸಿಯುತ್ತಲೆ ಇರುವ ಮಣ್ಣು

ಕಂಟೇನರ್ ಚಾಲಕನಿಗೆ ಸಣ್ಣಪುಟ್ಟ ಗಾಯ

ಕೂದಲೆಳೆ ಅಂತರದಲ್ಲಿ ಪ್ರಪಾತಕ್ಕೆ ಕಂಟೇನರ್ ಬೀಳುವುದು ಮಿಸ್

ಕಂಟೇನರ್ ಮುಂಭಾಗ ಸಂಪೂರ್ಣ ಜಖಂ

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ KA-19-AC 6199 ನಂಬರ್‌ನ ಕಂಟೇನರ್

Continue Reading

Trending

error: Content is protected !!