Chamarajanagar
ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾನೂನು ಅರಿವು ಶಿಬಿರ
ಶಾಲೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ರವರು ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಾತುನಾಡಿದ ಅವರು ತಾಲೂಕಿನ ವಕೀಲರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು,
ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾದ ರಾಜಣ್ಣ ರವರು ವಿದ್ಯಾರ್ಥಿಗಳಿಗೆ 14 ರಿಂದ 32ನೇ ವಿಧಿಗಳ ವರೆಗಿನ ಮಾಹಿತಿ

ಮೂಲಭೂತ ಹಕ್ಕುಗಳು, ಮೋಟಾರ್ ವಾಹನ ಕಾಯಿದೆಯ ಬಗ್ಗೆ ಮಾಹಿತಿ, ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ಇರುವುದರ ಬಗ್ಗೆ ಶಿಕ್ಷಣದ ಹಕ್ಕು ಇತರ ವಿಚಾರಗಳ ಬಗ್ಗೆ ತಿಳಿಸಿದರು,
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಾಂತರಾಜು, ಕಾಯ೯ದಶಿ೯ ಕುಮಾರಸ್ವಾಮಿ, ಹಾಗೂ ಶಾಲೆಯ ಹಿರಿಯ ಶಿಕ್ಷಕರಾದ ತ್ರಿವೇಣಿ, ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಾಗಿದ್ದರು,

Chamarajanagar
ಅಪರಾಧ ತಡೆಯುವ ನಿಟ್ಟಿನಲ್ಲಿ ಜಾಗೃತರಾಗಿ: ಪಿಎಸ್ಐ ತಾಜುದ್ದೀನ್
ಚಾಮರಾಜನಗರ: ವಿದ್ಯಾರ್ಥಿಗಳು ಸಮಾಜದ ಶಕ್ತಿಯಾಗಿ ಹೊರಹೊಮ್ಮುವುದರಿಂದ ಸುತ್ತಮುತ್ತನಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕೆಂದು ಸಂತೇಮರಹಳ್ಳಿ ಸಬ್ ಇನ್ಸ್ ಪೆಕ್ಟರ್ ತಾಜುದ್ದೀನ್ ತಿಳಿಸಿದರು.
ತಾಲೂಕಿನ ಸಂತೇಮರಹಳ್ಳಿ ಜೆ ಎಸ್ ಎಸ್ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯು ಕಾನೂನಿನ ಕಾಯ್ದೆಗಳನ್ನು ತಿಳಿದುಕೊಳ್ಳುವ ಮೂಲಕ ಅಪರಾಧಗಳಿಗೆ ಕಡಿವಾಣ ಆಕಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆಗಳ್ಳತನ, ಸರ ಕಳ್ಳತನ ಸೇರಿದಂತೆ ಅನೇಕ ಅಪರಾಧ ಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ.ಇಂತಹ ಕೃತ್ಯಗಳ ಬಗ್ಗೆ ಹಳ್ಳಿಗಳಲ್ಲಿ ಕುಟುಂಬಸ್ಥರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಬಾಲ್ಯವಿವಾಹ ಕುರಿತು ಜಾಗೃತರಾಗಬೇಕು ಮತ್ತು ತಂದೆ ತಾಯಿಗಳು ಕೂಡ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ತಿಳುವಳಿಕೆ ಕಾನೂನು ಅರಿವು ತಿಳಿಸಬೇಕಾಗಿದೆ.
ಅತಿಯಾಗಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಕೆಲವು ಮಾದಕ ವಸ್ತುಗಳ ದುಷ್ಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿ ಜೀವನ ಹಾಳಾಗುತ್ತದೆ.

ತಂದೆ ತಾಯಿಗಳು ಮಕ್ಕಳ ಏಳಿಗೆಗೆ ಸಾಕಷ್ಟು ಶ್ರಮವಿಸಿ ದುಡಿಮೆ ಮಾಡುತ್ತಾರೆ. ಆದರೆ ಇಂತಹ ಚಟಗಳಿಗೆ ಬಲಿಯಾಗಬೇಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮರಿಸ್ವಾಮಿ, ಪೊಲೀಸ್ ಸಿಬ್ಬಂದಿಗಳಾದ ರಮೇಶ್, ರಾಜೇಶ್ವರಿ ಹಾಗೂ ಶಾಲಾ ಸಿಬ್ಬಂದಿಗಳು ಹಾಜರಿದ್ದರು.
Chamarajanagar
ಚಿರತೆ ದಾಳಿ ಕರು ಬಲಿ
ಗುಂಡ್ಲುಪೇಟೆ: ತಾಲ್ಲೂಕಿನ ಕರಕಲಮಾದಹಳ್ಳಿ ಗ್ರಾಮದಲ್ಲಿ ಹುಳಿ ದಾಳಿಯಿಂದ ಕರು ಬಲಿ.
ಗ್ರಾಮದ ಸೋಮೇಶ್ ಎಂಬುವವರ ಜಮೀನಿನಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ ಕರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ತ್ವರಿತಗತಿಯಲ್ಲಿ ಕೋಮಿಂಗ್ ಕಾರ್ಯಾಚರಣೆ ಮತ್ತು ಬೋನ್ ಇಡಲು ಮನವಿ ಮಾಡಿದರು.
ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ಹುಲಿ ಸಂಚಾರ ಜಾಸ್ತಿ ಆಗಿದ್ದು, ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮ ವಹಿಸುವಂತೆ ಮನವಿ ಮಾಡಿದರು.
Chamarajanagar
ಗ್ರಾ.ಪಂ.15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಗೆ ಗುರುಪ್ರಸಾದ್ ಒತ್ತಾಯ
ಚಾಮರಾಜನಗರ: ಗ್ರಾಮ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಅನುದಾನವನ್ನು ಬಿಡುಗಡೆ ಮಾಡುವಂತೆ ಸಾಗಡೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಆರ್.ಗುರುಪ್ರಸಾದ್ ಒತ್ತಾಯಿಸಿದರು.
ನಗರದಲ್ಲಿ ಪತ್ರಿಕಾ ಹೇಳಿಕೆ ಮೂಲಕ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳಿಗೆ ನೀಡಬೇಕಾದ 2025 -26 ನೇ ಸಾಲಿನ 15ನೇ ಹಣಕಾಸಿನ ಆಯೋಗದ ಅನುದಾನವನ್ನು ಈ ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು.

ಪಕ್ಕದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶಕ್ಕೆ ಈ ಅನುದಾನ ಬಿಡುಗಡೆಯಾಗಿದೆ ಅದರಂತೆ ನಮ್ಮ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಬೇಕು.
ಉದ್ಯೋಗ ಖಾತ್ರಿ ಯೋಜನೆಯ ಸಾಮಾಗ್ರಿ ಹಾಗೂ ನರೇಗಾ ಯೋಜನೆಯ ಕಾಮಗಾರಿಗಳ ಸಾಮಾಗ್ರಿಯ ವೆಚ್ಚ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಇದರ ಜೊತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಹಾಗೂ ಕೂಸಿನ ಮನೆ ಕಾರ್ಯಕರ್ತೆಯರ ಮಾಸಿಕ ವೇತನವನ್ನು ಸರ್ಕಾರವೇ ಭರಿಸಬೇಕು ಎಂದು ಗುರುಪ್ರಸಾದ್ ಒತ್ತಾಯಿಸಿದ್ದಾರೆ.
-
Special2 hours agoಕರ್ನಾಟಕ ಕುಕ್ಕುಟ ಸಂಜೀವಿನಿ ಯೋಜನೆ: ಮಹಿಳೆಯರಿಗೆ ಉಚಿತ ಕೋಳಿ ಮರಿ, ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ
-
Hassan20 hours agoಒಳ್ಳೆಯ ಕೆಲಸ ಬ್ಯಾಂಕ್ ಠೇವಣಿಯಂತೆ; ಸಮಯ ಬಂದಾಗ ಫಲ ನೀಡುತ್ತದೆ: ರವಿಕುಮಾರ್ ಬಲ್ಲೇನಹಳ್ಳಿ
-
Mandya18 hours agoವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
-
Hassan18 hours agoರೋಟರಿ ಬೆಂಗಳೂರು ದಕ್ಷಿಣದಿಂದ MCE ಕಾಲೇಜಿನ 51 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
-
Kodagu19 hours agoಅನಧಿಕೃತ ಹೋಸ್ಟೇಗಳಿಗೆ ಕಡಿವಾಣ ನಿಟ್ಟಿನಲ್ಲಿ ವಾರ್ಡ್ವಾರ್ ಸಮಿತಿ ರಚನೆ: 15 ದಿನಗಳೊಳಗೆ ಪೊಲೀಸರಿಂದ ದಲ್ಲಾಳಿಗಳ ವಿರುದ್ದ ಕ್ರಮ
-
State15 hours agoರಾಹುಲ್, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ
-
State20 hours agoಡಾ.ಜಿ.ಪರಮೇಶ್ವರ್ ಈ ರಾಜ್ಯದ ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ: ವಿ.ಸೋಮಣ್ಣ
-
Mysore17 hours agoಡಿ.16 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಬ್ರಹ್ಮೋತ್ಸವ : ನಂಜನಗೂಡಿನಲ್ಲಿ ಸಿದ್ದತೆ
