Connect with us

Mysore

ಮೈಸೂರು ಮತ್ತು ವಾಸ್ಕೋ-ಡ-ಗಾಮಾ ನಡುವೆ ವಾರಕ್ಕೊಮ್ಮೆ ವಿಶೇಷ ರೈಲು

Published

on

ನೈಋತ್ಯ ರೈಲ್ವೆ ಮೈಸೂರು ವಿಭಾಗ

ತಡೆರಹಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಮತ್ತು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ಹುಬ್ಬಳ್ಳಿ ಮುಖಾಂತರವಾಗಿ ಮೈಸೂರು ಮತ್ತು ವಾಸ್ಕೋ-ಡ-ಗಾಮಾ ನಡುವೆ ವಾರಕ್ಕೊಮ್ಮೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.

ರೈಲು ಗಾಡಿ ಸಂಖ್ಯೆ.06231 ಶುಕ್ರವಾರ – 22ನೇ ಡಿಸೆಂಬರ್ ಮತ್ತು 29ನೇ ಡಿಸೆಂಬರ್ – ರಾತ್ರಿ 19:10 ಗಂಟೆಗೆ ಮೈಸೂರಿನಿಂದ ಹೊರಟು ಮರುದಿನ ಮಧ್ಯಾಹ್ನ 13:50 ಗಂಟೆಗೆ ವಾಸ್ಕೋ-ಡ-ಗಾಮಾ ತಲುಪಲಿದೆ.

ರೈಲಿಗೆ ಮಾರ್ಗ ಮಧ್ಯದಲ್ಲಿ ಮಂಡ್ಯ, ರಾಮನಗರಂ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ತಿಪಟೂರು, ಅರಸಿಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕ್ಯೂಲಂ, ಸಾನ್ವೊರ್ಡಾಮ್ ಕರ್ಚೋರೆಮ್ ಮತ್ತು ಮಡಗಾಂವ್‌ನಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ ರೈಲು ಗಾಡಿ ಸಂಖ್ಯೆ.06232 ಸೋಮವಾರ – 25ನೇ ಡಿಸೆಂಬರ್ 2023 ಮತ್ತು 1ನೇ ಜನವರಿ 2024 ರಂದು 14:30 ಗಂಟೆಗೆ ವಾಸ್ಕೋ-ಡ-ಗಾಮಾದಿಂದ ನಿರ್ಗಮಿಸುತ್ತದೆ ಮತ್ತು ಮಾರ್ಗ ಮಧ್ಯದಲ್ಲಿ ಮೇಲಿನ ಪಟ್ಟಿಯಂತೆ ಅವೇ ವಾಣಿಜ್ಯ ನಿಲುಗಡೆಗಳ ನಂತರ ಮೈಸೂರು ತಲುಪುತ್ತದೆ.

ರೈಲು ಈ ಕೆಳಗಿನಂತೆ 22 ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ
• ಮೊದಲ ದರ್ಜೆ AC ಕೋಚ್ (FAC): 01
• ಎರಡನೇ ಶ್ರೇಣಿ AC (ACCW): 02
• ಮೂರನೇ ಶ್ರೇಣಿ AC (ACCN): 07
• ಸ್ಲೀಪರ್ ದರ್ಜೆ (GSCN): 08
• ಸಾಮಾನ್ಯ ದರ್ಜೆ ಕೂರುವ ಕೋಚ್ (GS): 02
• ಎರಡನೇ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್ (SLR): 02
ಗಮನಿಸಿ * ಎಸಿ ಕೋಚ್‌ಗಳಲ್ಲಿ ಲಿನೆನ್ ಅನ್ನು ಒದಗಿಸಲಾಗುವುದಿಲ್ಲ ಮತ್ತು ಪ್ರಯಾಣಿಕರು ತಮ್ಮ ಸ್ವಂತ ಬೆಡ್‌ರೋಲ್‌ಗಳನ್ನು ಒಯ್ಯಲು ವಿನಂತಿಸಲಾಗಿದೆ
ಪ್ರಯಾಣಿಸುವ ಸಾರ್ವಜನಿಕರು ಎರಡು ಜನಪ್ರಿಯ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಈ ವಿಶೇಷ ರೈಲಿನ ಸೇವೆಗಳನ್ನು ಆರಾಮದಾಯಕ ಪ್ರಯಾಣಕ್ಕಾಗಿ ಬಳಸಿಕೊಳ್ಳುವಂತೆ ಕೋರಲಾಗಿದೆ.

 

 

Mysore

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

Published

on

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

ಬಳಿಕ ಸಚಿವ ವೆಂಕಟೇಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಸಾಕುತ್ತಿದ್ದು ಅದರಲ್ಲೇ ಜೀವನ ಸಾಗಿಸುತ್ತಾರೆ ಈ ಗ್ರಾಮದಿಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸುಮಾರು 20 ಕಿ ಮೀ ದೂರ ಹೋಗಬೇಕಾದ ದೃಷ್ಟಿಯಿಂದ ಈ ಕ್ಷೇತ್ರದ ಶಾಸಕರು ಒತ್ತಾಡದ ಮೇರೆಗೆ ಈ ಗ್ರಾಮಕ್ಕೆ ಪಶು ಸಂಗೋಪನೆ ಆಸ್ಪತ್ರೆಗೆ ಅನುದಾನ ನೀಡಲಾಗಿದೆ ಪ್ರತಿಯೊಬ್ಬ ರೈತರು ಸದ್ದುಪಯೋಗ ಪಡೆದುಕೊಳ್ಳಿ ಎಂದರಲ್ಲದೆ ನಮ್ಮ ಸರ್ಕಾರದಿಂದ ಜಾನುವಾರುಗಳು ಸಾವನ್ನಾಪ್ಪಿದರೆ 10 ಸಾವಿರ ಪರಿಹಾರ ನೀಡಲಾಗುತ್ತಿದೆ ಕುರಿ ಸಾವನ್ನಾಪ್ಪಿದರೆ 5 ಸಾವಿರ ಪರಿಹಾರವನ್ನು ನಮ್ಮ ಸರ್ಕಾರ ನೀಡುತ್ತಿದೆ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಮತ್ತೊಂದು ಆಸ್ಪತ್ರೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ ಕಾಡಾಂಚಿನ ಗ್ರಾಮದಲ್ಲಿ ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ತುಂಭಾ ತೊಂದರೆಯಾಗಿರುವ ಬಗ್ಗೆ ನನಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಚಿವರ ಗಮನಕ್ಕೆ ತಂದು ಆಸ್ಪತ್ರೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಕ್ಷೇತ್ರದ ಅಭಿವೃದ್ಧಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್,
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅದ್ಯಕ್ಷರಾದ ಕೆ ಜಿ ಮಹೇಶ್, ಶ್ರೀಕಂಠನಾಯಕ,ಗ್ರಾ ಪಂ ಅದ್ಯಕ್ಷ ಹರೀಶ್ ಕುಮಾರ್, ಸದಸ್ಯ ಕೃಷ್ಣಮೂರ್ತಿ,ಮಹದೇವು,ನಿಂಗಮಣಿ,ಮುಖಂಡರುಗಳಾದ ದೊರೆಸ್ವಾಮಿ ನಾಯಕ,ಸೇರಿದಂತೆ ಪ್ರಮುಖರು ಹಾಜರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ಕಳ್ಳಿಮುದ್ದನಹಳ್ಳಿ ಸಣ್ಣ ಜವರಯ್ಯ ನಿಧನ 

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ತಾಲೂಕಿನ ಕಳ್ಳಿಮುದ್ದನಹಳ್ಳಿ ಗ್ರಾಮದ ಸಣ್ಣ ಜವರಯ್ಯ (74 ವರ್ಷ ) ನಿಧಾನರಾದರು.

ಮೃತರು, ಪತ್ನಿ, ದಲಿತ ಸಂಫರ್ಷ ಸಮಿತಿ (ಅಂಭೇಡ್ಕರ್ ವಾದ)  ಸಂಘಟನೆಯ ಜಿಲ್ಲಾ ಸಂಚಾಲಕ ಚಂದ್ರು, ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನೆರವೇರಿತು.

ಎಸ್ ಸಿ ಘಟಕದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್, ಪತ್ರಕರ್ತರಾದ ಎಸ್ ಬಿ ಹರೀಶ್,ಲಕ್ಕಿಕುಪ್ಪೆ ರಮೇಶ್, ರಾಂಪುರ ಲೋಕೇಶ್ ಸಂತಾಪ ಸೂಚಿಸಿದ್ದಾರೆ.

Continue Reading

Mysore

ಟ್ರ್ಯಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Published

on

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ : ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಚಾಲಕ  ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹಳೆ ಮಿರ್ಲೆ ಗ್ರಾಮದಲ್ಲಿ  ನಡೆದಿದೆ.


ಘಟನೆಯಲ್ಲಿ ಗ್ರಾಮದ ಕುಮಾರ್ ಎಂಬುವರ‌ ಪುತ್ರ ಮನೋಜ್ (23) ಎಂಬಾತನೇ ಮೃತಪಟ್ಟವನಾಗಿದ್ದಾನೆ.
ಮೃತ ಮನೋಜ್ ಜಮೀನು ಒಂದನ್ನು ಉಳುಮೆ ಮಾಡಲು ಚಾಮರಾಜ ನಾಲೆಯ ಏರಿಯ ಮೇಲೆ ಹೋಗುತ್ತಿದ್ದಾಗ ಆಕ್ಮಸಿಕವಾಗಿ ಟ್ಯಾಕ್ಟರ್ ಜಮೀನಿಗೆ ಉರುಳಿ, ಈ ಅವಘಡ ಸಂಭವಿಸಿದೆ.


ಘಟನೆ ನಡೆದ ತಕ್ಷಣವೇ ಮಗುಚಿ ಬಿದ್ದ ಟ್ಯಾಕ್ಟರ್ ನ ಅಡಿಯಲ್ಲಿ ಸಿಲುಕಿದ್ದ ಮನೋಜ್ ನನ್ನ ಮೇಲಕ್ಕೆ ಎತ್ತಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ನಗರ ಆಸ್ವತ್ರೆಗೆ ಕರೆತಂದರು ಯಾವುದೇ ಪ್ರಯೋಜನವಾಗಲಿಲ್ಲ.
ಘಟನೆಯ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!