Mysore
ಮೈಸೂರು ಜಿಲ್ಲಾ ಪಂಚಾಯಿತಿ ಮತ್ತು ಎಚ್.ಡಿ.ಕೋಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ನಹೀಮಾಸುಲ್ತಾನ್ (58) ಹೃದಯಾಘಾತದಿಂದ ಗುರುವಾರ ಮೃತ ಪಟ್ಟಿದ್ದಾರೆ.

ಎಚ್.ಡಿ.ಕೋಟೆ: ಪಟ್ಟಣದ ಶಿವಾಜಿ ರಸ್ತೆಯ ನಿವಾಸಿ, ಮೈಸೂರು ಜಿಲ್ಲಾ ಪಂಚಾಯಿತಿ ಮತ್ತು ಎಚ್.ಡಿ.ಕೋಟೆ ಪಟ್ಟಣ ಪಂಚಾಯಿತಿಮಾಜಿ ಅಧ್ಯಕ್ಷೆ ನಹೀಮಾಸುಲ್ತಾನ್ (58) ಹೃದಯಾಘಾತದಿಂದ ಗುರುವಾರ ಮೃತ ಪಟ್ಟಿದ್ದಾರೆ.
ಪತಿ ನಜೀರ್ ಅಹ್ಮದ್ ಮತ್ತು 4 ಜನ ಗಂಡು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
ಅನಾರೋಗ್ಯದಿಂದ ಮೈಸೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಿನ್ನೆಯಷ್ಟೆ ವಾಪಸ್ಸಾಗಿದ್ದರು. ಇಂದು ಬೆಳಿಗ್ಗೆ 9 ರ ಸಮಯದಲ್ಲಿ ಹೃದಯಾಘಾತವಾಗಿದೆ.
ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ರವಿ, ಎಚ್.ಸಿ. ಮಂಜುನಾಥ್, ವೆಂಕಟಸ್ವಾಮಿ, ಚಿಕ್ಕವೀರನಾಯಕ, ಜಯಪ್ರಕಾಶ್ ಚಿಕ್ಕಣ್ಣ, ನಂದೀಶ್, ಚಂದ್ರಕಲಾ ಸುರೇಶ್ಮ ಬೀರಿಹುಂಡಿ ಬಸವಣ್ಣ, ಕಡಕೊಳ ನಾಗರಾಜು, ಪುರಸಭೆ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ವಕೀಲ ಚಂದ್ರಶೇಖರ್, ಸಿ, ವಿ, ನಾಗರಾಜ್, ಎಂಪಿ ನಾಗರಾಜ್, ಹಾಗೂ ಇತರ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.
Mysore
ಕುಂಭಮೇಳ ಮನಸ್ಸು ಮತ್ತು ಕಲ್ಪನೆಯ ಮೇಲೆ ಅದ್ಭುತ ಪ್ರಭಾವ ಬೀರಿದೆ

ತಿ.ನರಸೀಪುರ: ಜಾತಿ, ಮತ, ಪ್ರದೇಶದ ಎಲ್ಲಾ ಲೌಕಿಕ ಅಡೆತಡೆಗಳನ್ನು ಲೆಕ್ಕಿಸದೆ ಕುಂಭಮೇಳವು ಸಾಮಾನ್ಯ ಭಾರತೀಯರ ಮನಸ್ಸು ಮತ್ತು ಕಲ್ಪನೆಯ ಮೇಲೆ ಅದ್ಭುತ ಪ್ರಭಾವ ಬೀರಿದೆ ಎಂದು ಮಂಗಳವಾರ (ಫೆ.11) ಕೈಲಾಸ ಆಶ್ರಮದ ಶ್ರೀ ಜಯೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ತ್ರಿವೇಣಿ ಸಂಗಮದಲ್ಲಿ ಸೋಮವಾರದಿಂದ ಆರಂಭವಾಗಿರುವ 13 ನೇ ಕುಂಭಮೇಳದ ಎರಡನೇ ದಿನವಾದ ಮಂಗಳವಾರ ಯಾಗಶಾಲೆ ಪ್ರವೇಶ ಕಾರ್ಯಕ್ರಮದ ಪೂಜಾ ಕೈಂಕರ್ಯ ನೆರವೇರಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಕುಂಭಮೇಳ ಎಂಬ ಧಾರ್ಮಿಕ ಕಾರ್ಯಕ್ರಮವು ಹಿಂದೂಗಳಿಗೆ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಪ್ರತಿ ಕುಂಭಮೇಳ ಸಂದರ್ಭದಲ್ಲೂ ಲಕ್ಷಾಂತರ ಹಿಂದೂಗಳು ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಕುಂಭಮೇಳವು ವಿಶ್ವದಲ್ಲೇ ಅತಿ ಹೆಚ್ಚು ಧಾರ್ಮಿಕ ಸಭೆಗಳು ನಡೆಯುವ ಸ್ಥಳ. ಹಿಂದೂ ಪುರಾಣಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಪಾಪಗಳನ್ನು ಬಿಡಿಸಿ ಜನನ ಮತ್ತು ಪುನರ್ಜನ್ಮದ ವಿಷ ಚಕ್ರದಿಂದ ನಿರ್ವಾಣ ಸಾಧಿಸಲು ಜಗತ್ತಿನ ಏಕೈಕ ಸಮಯ ಮತ್ತು ಸ್ಥಳ ಇದು. ವ್ಯಕ್ತಿಯ ಎಲ್ಲಾ ಪಾಪಗಳನ್ನು ತೊಳೆಯುತ್ತದೆ ಎಂದು ಹೇಳಲಾಗುವ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ. ದೀಪ ಬೆಳಗಿಸಿ ಮತ್ತು ಆಸೆಯನ್ನು ಸಲ್ಲಿಸಿದರೆ ಅವು ನಿಜವಾಗುತ್ತವೆ. ಪವಿತ್ರ ನೀರಿನಲ್ಲಿ ಪವಿತ್ರ ಸ್ನಾನ ಮಾಡಲು ಮತ್ತು ಹಿಂದೆ ಮಾಡಿದ ಎಲ್ಲಾ ಪಾಪ ತೊಳೆಯಲು ಅವರಿಗೆ ಅವಕಾಶ ಕೊಡುತ್ತದೆ ಹಾಗೂ ತ್ರಿವೇಣಿ ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ ಎಂದು ತಿಳಿಸಿದರು.
ಕುಂಭಮೇಳವು ಒಂದು ಐತಿಹಾಸಿಕ ಹಿಂದೂ ಧಾರ್ಮಿಕ ಉತ್ಸವ ಮತ್ತು ತೀರ್ಥಯಾತ್ರೆಯಾಗಿದ್ದು, ಇದನ್ನು ವಿಶ್ವದ ಅತಿದೊಡ್ಡ ಶಾಂತಿಯುತ ಸಭೆ ಎಂದು ಪರಿಗಣಿಸಲಾಗಿದೆ. ಭಾರತದ ನಾಲ್ಕು ಪರ್ಯಾಯ ಸ್ಥಳಗಳಾದ ಹರಿದ್ವಾರ, ಪ್ರಯಾಗ್‌ರಾಜ್ (ಅಲಹಾಬಾದ್), ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವು ಪವಿತ್ರ ನದಿಗಳಲ್ಲಿ ಪವಿತ್ರ ಸ್ನಾನ ಮಾಡಲು ಪ್ರಪಂಚದಾದ್ಯಂತದ ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುತ್ತದೆ,
ಪಾಪಗಳನ್ನು ಶುದ್ಧೀಕರಿಸಿ, ಮೋಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗುವ ಈ ಧಾರ್ಮಿಕ ಸ್ನಾನವು ಹಬ್ಬದ ಆಧ್ಯಾತ್ಮಿಕ ಅರ್ಥಕ್ಕೆ ಅತ್ಯಗತ್ಯ. ಕುಂಭಮೇಳದ ಮೂಲವನ್ನು ಪ್ರಾಚೀನ ಪುರಾಣಗಳಿಂದ, ನಿರ್ದಿಷ್ಟವಾಗಿ ಸಮುದ್ರ ಮಂಥನದ ಕಥೆಯಿಂದ ಹೇಳಬಹುದಾಗಿದೆ, ಇದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಶಾಶ್ವತ ಹೋರಾಟವನ್ನು ಪ್ರತಿನಿಧಿಸುತ್ತದೆ. ಪ್ರಾರ್ಥನೆಗಳು, ಸಾಂಸ್ಕೃತಿಕ ಉತ್ಸವಗಳು ಮತ್ತು ತಪಸ್ವಿಗಳು ಮತ್ತು ಯಾತ್ರಿಕರ ವೈವಿಧ್ಯಮಯ ಸಭೆಗಳ ಕ್ರಿಯಾತ್ಮಕ ಮಿಶ್ರಣದೊಂದಿಗೆ ಕುಂಭಮೇಳವು ಭಾರತದ ಶ್ರೀಮಂತ ಆಧ್ಯಾತ್ಮಿಕ ಸಂಪ್ರದಾಯ ಮತ್ತು ನಂಬಿಕೆಯನ್ನು ಅನುಸರಿಸುವ ಪ್ರಬಲ ಸಂಕೇತವಾಗಿದೆ ಎಂದು ತಿಳಿಸಿದರು.
ಕುಂಭಮೇಳವು ಪ್ರಾಚೀನ ಹಿಂದೂ ಸಾಹಿತ್ಯದಲ್ಲಿ, ವಿಶೇಷವಾಗಿ ಪುರಾಣಗಳಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಈ ಹಬ್ಬದ ಮೂಲವು ಸಮುದ್ರ ಮಂಥನ ಅಥವಾ ಕ್ಷೀರ ಸಾಗರದ ಮಂಥನದ ಐತಿಹಾಸಿಕ ಕಥೆಗೆ ಸೇರಿದೆ. ಸಂಪ್ರದಾಯದ ಪ್ರಕಾರ, ದೇವರುಗಳು ಮತ್ತು ರಾಕ್ಷಸರು ಅಮರತ್ವದ ಅಮೃತವನ್ನು ಪಡೆಯಲು ಸಮುದ್ರ ಮಂಥನ ಮಾಡಿದರು. ಈ ಆಕಾಶ ಘಟನೆಯ ಸಮಯದಲ್ಲಿ, ಒಂದು ಉಗ್ರ ಯುದ್ಧ ಪ್ರಾರಂಭವಾಯಿತು ಮತ್ತು ಅಮೂಲ್ಯವಾದ ಅಮೃತದ ಹನಿಗಳು ಭೂಮಿಯ ಮೇಲಿನ ನಾಲ್ಕು ಸ್ಥಳಗಳಲ್ಲಿ ಬೀಳುತ್ತಿದ್ದವು, ಹರಿದ್ವಾರ, ಪ್ರಯಾಗರಾಜ್ , ನಾಸಿಕ್ ಮತ್ತು ಉಜ್ಜಯಿನಿ ಹಬ್ಬದ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಆತ್ಮದ ಅಶುದ್ಧತೆಯನ್ನು ಶುದ್ಧೀಕರಿಸುತ್ತದೆ ಎಂಬ ನಂಬಿಕೆಯೊಂದಿಗೆ ಈ ಸ್ಥಳಗಳು ಕುಂಭಮೇಳಕ್ಕೆ ಪವಿತ್ರ ಸ್ಥಳಗಳಾಗಿವೆ.ಅಂತೆಯೇ ದಕ್ಷಿಣದ ಪ್ರಯಾಗ್ ರಾಜ್ ಎಂದೇ ಕರೆಯಲಾಗುವ ತಿರುಮಕೂಡಲು ಸಹ ತನ್ನದೇ ಆದ ವೈಶಿಷ್ಟ್ಯಗಳಿಂದ ಕುಂಭಮೇಳ ಆಚರಣೆಗೆ ಯೋಗ್ಯವಾಗಿದೆ.ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಬೇರಾವುದೇ ಸ್ತಳಗಳಲ್ಲಿ ಸ್ನಾನಮಾಡಿದ್ದಕ್ಕಿಂತ ಗುಲಗಂಜಿ ಗಾತ್ರದ ಪುಣ್ಯ ಹೆಚ್ಚು ಪ್ರಾಪ್ತಿಯಾಗಲಿದೆ ಎಂದು ವಿವರಿಸಿದರು.
ಶ್ರೀ ಕ್ಷೇತ್ರ ತೈಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಪೂರ್ಣಾನಂದ ಪುರಿ ಸ್ವಾಮಿ ಸ್ವಾಮೀಜಿ ಮಾತನಾಡಿ ಕುಂಭಮೇಳವು ಭಾರತದ ವೈವಿಧ್ಯಮಯ ಸಂಪ್ರದಾಯಗಳು, ಆಚರಣೆಗಳು ಮತ್ತು ಆಧ್ಯಾತ್ಮಿಕ ಆಚರಣೆಗಳನ್ನು ಆಚರಿಸುವ ಒಂದು ರೋಮಾಂಚಕಾರಿ ಸಾಂಸ್ಕೃತಿಕ ಉತ್ಸವವಾಗಿದೆ. ಇದು ವಿವಿಧ ಜನಸಂಖ್ಯೆಗಳ ನಡುವೆ ಧಾರ್ಮಿಕ ಭಾಷಣ, ಸಾಂಸ್ಕೃತಿಕ ವಿನಿಮಯ ಮತ್ತು ಸಾಮಾಜಿಕ ಸಂಪರ್ಕವನ್ನು ಸುಗಮಗೊಳಿಸುತ್ತದೆ. ಉತ್ಸವದ ಬೃಹತ್ ವ್ಯಾಪ್ತಿ ಮತ್ತು ಅದು ಪ್ರೇರೇಪಿಸುವ ಭಕ್ತಿಯು ಭಾಗವಹಿಸುವವರ ನಿರಂತರ ನಂಬಿಕೆ ಮತ್ತು ಒಗ್ಗಟ್ಟನ್ನು ಎತ್ತಿ ತೋರಿಸುತ್ತದೆ, ಇದು ಕುಂಭಮೇಳವನ್ನು ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ಒಂದು ವಿಶಿಷ್ಟ ಮತ್ತು ಮಹತ್ವದ ಘಟನೆಯನ್ನಾಗಿ ಮಾಡುತ್ತದೆ ಎಂದರು.
ಆದಿಚುಂಚನ ಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಯವರನ್ನು ಪೂರ್ಣ ಕುಂಭ ಸ್ವಾಗತ ಕೋರಿ ಯಾಗ ಮಂಟಪಕ್ಕೆ ಕರೆತರಲಾಯಿತು.
ಮೈಸೂರು ಶಾಖಾ ಮಠದ ಸೋಮನಾಥೇಶ್ವರಸ್ವಾಮೀಜಿ, ಪುರಸಭೆ ಮಾಜಿ ಅಧ್ಯಕ್ಷ ಟಿ .ಎಂ ನಂಜುಂಡಸ್ವಾಮಿ, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಅಂಗಡಿ ಶೇಖರ್, ಫ್ಯಾನ್ಸಿ ಮೋಹನ್, ಲಕ್ಷ್ಮಣ,ಪಿ. ಸ್ವಾಮಿನಾಥ್ ಗೌಡ, ಮರಿದೇವ ಗೌಡ, ಆಲಗೂಡು ವೆಂಕಟರಮಶೆಟ್ಟಿ, ಟಿ ಸಿ ಫಣೀಶ್ ಕುಮಾರ್, ಸೋಮಣ್ಣ, ಚೇತನ್ ಬಸವರಾಜು ಮತ್ತಿತರಿದ್ದರು.
Mysore
ಉದಯಗಿರಿ ಪ್ರಕರಣ ಸಿಸಿಬಿಗೆ ಹಸ್ತಾಂತರ

ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಸಾವಿರಾರು ಯುವಕರ ಗುಂಪಿನಿಂದ ದಾಳಿ ಪ್ರಕರಣದ ತನಿಖೆಯನ್ನು ಪೊಲೀಸರು ಸಿಸಿಬಿಗೆ ವಹಿಸಿದ್ದಾರೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕುತ್ತಿರುವ ಪೊಲೀಸರು. ಸಿಸಿಬಿ, ಟೆಕ್ನಿಕಲ್ ಟೀಂ, ಸೆನ್ ವಿಭಾಗ ಸೇರಿದಂತೆ ಹಲವು ವಿಭಾಗಗಳ ಮೂಲಕ ತನಿಖೆ ಆರಂಭಿಸಿದ್ದಾರೆ.
ಆರಂಭದಲ್ಲಿ ಪೋಟೋಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚುತ್ತಿರುವ ಪೊಲೀಸರು, ಮುಂದಿನ ನಡೆ ಬಗ್ಗೆ ತೀವ್ರ ಕುತೂಹಲ ಹುಟ್ಟುಹಾಕಿದೆ.
Mysore
ವೈವಾಹಿಕ ಜೀವನವೂ ಮೈಸೂರಿನಿಂದಲೆ ಆರಂಭವಾಗಲಿ ಎಂಬ ಆಸೆ: ಡಾಲಿ ಧನಂಜಯ್

ಮೈಸೂರು: ನನ್ನ ಬದುಕಿನ ಎಲ್ಲ ಸಾಧನೆಯು ಮೈಸೂರಿನಿಂದಲೇ ಶುರುವಾಗಿದ್ದರಿಂದ ವೈವಾಹಿಕ ಜೀವನವೂ ಮೈಸೂರಿನಿಂದಲೆ ಆರಂಭವಾಗಲಿ ಎಂಬ ಆಸೆಯಿಂದ ಇಲ್ಲೇ ಮದುವೆಯಾಗುತ್ತಿದ್ದೇನೆ ಎಂದು ನಟ ಡಾಲಿ ಧನಂಜಯ್ ಅವರು ಹೇಳಿದರು.
ವಸ್ತುಪ್ರದರ್ಶನ ಆವರಣದಲ್ಲಿ ಫೆ.15ಮತ್ತು 16 ರಂದು ನಗರದ ನಡೆಯುವ ತಮ್ಮ ಮದುವೆಯ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಶಿಕ್ಷಣ, ಬದುಕು, ಚಿತ್ರರಂಗ ಪ್ರವೇಶ ಎಲ್ಲವೂ ಆಗಿದ್ದು ಮೈಸೂರಿನಲ್ಲೆ. ಹೀಗಾಗಿ ನಾನು ಮೈಸೂರಿನೊಂದಿಗೆ ತುಂಬಾ ಕನೆಕ್ಟ್ ಆಗಿದ್ದೇನೆ ಎಂದರು.
ಚಾಮುಂಡೇಶ್ವರಿ ಅಮ್ಮನ ಆಶೀರ್ವಾದ ನಮ್ಮ ಮೇಲೆ ಇರಲಿ ಎಂಬ ಕಾರಣಕ್ಕೆ ಚಾಮುಂಡೇಶ್ವರಿ ದೇವಸ್ಥಾನದ ಮಾದರಿಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ದೇವಸ್ಥಾನದ ಗೋಪುರ, ದ್ವಾರ ವೇದಿಕೆಯ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದರು.
ಮಂತ್ರಮಾಗಲ್ಯ, ರಿಜಿಸ್ಟರ್ ಮ್ಯಾರೇಜ್ ಮೂಲಕ ಸರಳ ವಿವಾಹವಾಗಬೇಕೆಂಬ ಆಸೆಯಿತ್ತು. ಸಂಬಂಧಿಕರು, ಸ್ನೇಹಿಕರು, ಚಿತ್ರರಂಗದವರು, ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಊಟ ಹಾಕಿಸುವುದು ಕಷ್ಟ ಸಾಧ್ಯ. ಹೀಗಾಗಿ ಅಭಿಮಾನಿಗಳು, ಸಂಬಂಧಿಕರ ಖುಷಿಗೆ, ಎಲ್ಲರಿಗೂ ಒಂದೇ ಕಡೆ ಊಟ ಹಾಕಿಸಲು ಇಲ್ಲಿ ಮದುವೆ ಆಗುತ್ತಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಿ ಎಂದು ಹೇಳಿದರು.
ಪ್ರತ್ಯೇಕ ವ್ಯವಸ್ಥೆ: ಮದುವೆಗೆ ಸಿನಿಮಾ ರಂಗದವರು, ರಾಜಕಾರಣಗಳು ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಅಭಿಮಾನಿಗಳಿಗೂ ಮುಕ್ತ ಅವಕಾಶ ಇದೆ. ವಿಐಪಿಗಳು, ಗಣ್ಯರು, ಅಭಿಮಾನಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಗೆ ವಿದ್ಯಾಪತಿ ದ್ವಾರ ನಿರ್ಮಿಸಲಾಗಿದ್ದು, ನೇರವಾಗಿ ಸ್ಟೇಜ್ ಬಳಿ ಬಂದು ನೋಡಿಕೊಂಡು ಹೋಗಬಹುದು. ಸುಮಾರು ೨೫-೩೦ ಸಾವಿರ ಜನ ಆಗಮಿಸುವ ನಿರೀಕ್ಷೆ ಇದ್ದು, ಯಾವುದೇ ನೂಕುನುಗ್ಗಲು, ಗೊಂದಲ ಆಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಊಟಕ್ಕೆ ಕೌಂಟರ್: ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇರಲಿದ್ದು, ಅಭಿಮಾನಿಗಳು, ವಿಐಪಿ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ವಿತರಣೆಗೆ 45 ಕೌಂಟರ್ ತೆರೆಯಸಲಾಗುವುದು. ಬಾಳೆ ಎಲೆಯ ಊಟವೂ ಇರಲಿದೆ ಎಂದು ಮಾಹಿತಿ ನೀಡಿದರು.
ಕೋಟ್))
ನಟ ದರ್ಶನ್ ಅವರನ್ನೂ ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ದರ್ಶನ್ ಅವರು ಸಿಗುತ್ತಿಲ್ಲ. ನನ್ನ ಮದುವೆಗೆ ಅವರು ಬಂದರೆ ಸಂತೋಷ. ಈಗಿನ ಪರಿಸ್ಥಿಯಲ್ಲಿ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ.
-ಡಾಲಿ ಧನಂಜಯ, ನಟ
-
Kodagu13 hours ago
ಮಡಿಕೇರಿಯಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
Kodagu13 hours ago
ಸ್ಪ್ರಿಂಕ್ಲರ್ ಪೈಪಿಗೆ ಕೃಷಿ ಇಲಾಖೆಯಿಂದ ಸಹಾಯಧನ
-
Kodagu16 hours ago
ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ: ಕಾರಣವೇನು?
-
Hassan21 hours ago
HASSAN: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ಪಲ್ಟಿ
-
Mysore22 hours ago
ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್ : ಆರೋಪಿ ಬಂಧನಕ್ಕೆ ರಸ್ತೆ ತಡೆದು ಪ್ರತಿಭಟನೆ
-
Hassan17 hours ago
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ: ಮರು ಚುನಾವಣೆಗೆ ಒತ್ತಾಯ
-
State14 hours ago
ನಮ್ಮ ಮೆಟ್ರೋ ದರ ಏರಿಕೆ: ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಪ್ರಕಟಣೆ
-
Hassan21 hours ago
ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವ: ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಪ್ರತ್ಯೇಕವಾಗಿ ಆರ್ಕೆಸ್ಟ್ರಾ ಆಯೋಜನೆ