Hassan
ಮುಳುಗಡೆಯ ಪರಿಹಾರದ ಹಣ ಕೊಡಿಸಿ ಎಂದು ಡಿಸಿ ಕಛೇರಿ ಮುಂದೆ ಕುಟುಂಬದವರ ಮನವಿ

ಹಾಸನ: ಎತ್ತಿನಹೊಳೆ ಯೋಜನೆಗೆ ಶಿವಯ್ಯನವರ ಮನೆ ಮುಳುಗಡೆಯಾಗಿದ್ದು, ಪರಿಹಾರದ ಹಣ ನಮಗೆ ನೀಡದೇ ಬೇರೆಯವರಿಗೆ ಹಾಕಲಾಗಿದ್ದು, ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ನಮಗೆ ಪರಿಹಾರ ಹಣ ನೀಡುವಂತೆ ಡಿಸಿ ಕಛೇರಿ ಮುಂದೆ ತಿರುಮಲನಹಳ್ಳಿ ಗ್ರಾಮದ ಟಿ.ಎಸ್. ರವೀಂದ್ರ ಮತ್ತು ಕುಟುಂಬದವರು ಪ್ರತಿಭಟನೆ ನಡೆಸಿದರು.
ಗ್ರಾಮದ ಎಸ್. ಅಂಬರೀಷ್ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿಯ ತಿರುಮಲನಹಳ್ಳಿ ಗ್ರಾಮದ ಸರ್ವೆ ನಂಬರ್-೩೫, ಖಾತೆದಾರರ ಹೆಸರು ರಂಗಮ್ಮ ಕೋಂ ಟಿ.ರಾಮಯ್ಯ, ಈ ಜಮೀನು ಅವಿಭಕ್ತ ಕುಟುಂಬದ ಆಸ್ತಿಯಾಗಿದ್ದು, ಈ ಜಮೀನಿನಲ್ಲಿ ಟಿ.ರಾಮಯ್ಯನ ತಮ್ಮಂದಿರಾದ ಶಿವಯ್ಯ ಬಿನ್ ರಾಮಯ್ಯ, ಚೆನ್ನಪ್ಪ ಬಿನ್ ರಾಮಯ್ಯ, ಚೆನ್ನಬಸವಯ್ಯ ಬಿನ್ ರಾಮಯ್ಯ, ಮೋಹನದಾಸ್ ಬಿನ್ ರಾಮಯ್ಯ ಅನುಭವದಲ್ಲಿದ್ದು, ಇದೇ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. ಮತ್ತು ಈ ಜಮೀನಿನ ತಕರಾರು ಅರ್ಜಿ ಹಾಸನದ ನ್ಯಾಯಾಲಯದಲ್ಲಿ ನೆಡೆಯುತ್ತಿರುತ್ತದೆ. ಇನ್ನು ಇತ್ಯರ್ಥವಾಗಿರುವುದಿಲ್ಲ. ಹಾಗೂ ಈ ನಡುವೆ ಎತ್ತಿನಹೊಳೆ ಕುಡಿಯುವ ನೀರಿನ ಕಾಮಗಾರಿಗಾಗಿ ೫ ಎಕರೆ ೨೪ ಗುಂಟೆಯನ್ನು ವಿಶೇಷ ಭೂ-ಸ್ವಾಧೀನ ಅಧಿಕಾರಿಗಳು ಎತ್ತಿನ ಹೊಳೆ ಯೋಜನೆಯವರು ಭೂ-ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಆದರೆ ಎತ್ತಿನಹೊಳೆ ಯೋಜನೆಯ ಕಾಲುವೆ ಶಿವಯ್ಯ, ಚೆನ್ನಬಸವಯ್ಯ, ಮೋಹನ್‌ದಾಸ್ ಮನೆಗಳಿರುವ ಜಾಗದ ಮನೆಯ ಸಮೀಪದಲ್ಲಿಯೇ ಹಾದು ಹೋಗಿದ್ದು, ಈ ಮೂರು ಮನೆಗಳ ಪೈಕಿ ಚೆನ್ನಬಸವಯ್ಯ, ಮೋಹನ್‌ದಾಸ್ ಮನೆಗೆ ಮಾತ್ರ ಪರಿಹಾರದ ಹಣವನ್ನು ಕೋರ್ಟಿಗೆ ಜಮಾ ಮಾಡಿರುತ್ತಾರೆ. ಆದರೇ ಶಿವಯ್ಯನ ಮನೆಗೆ ಪರಿಹಾರದ ಹಣವನ್ನು ಹಾಕದೇ ಕೆಲಸ ಮಾಡುತ್ತಿರುತ್ತಾರೆ ಎಂದು ದೂರಿದರು. ಈ ವಿಚಾರವಾಗಿ ವಿಶೇಷ ಭೂ-ಸ್ವಾಧೀನ ಅಧಿಕಾರಿ ಕಛೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನೀಯರ್ ಪಿ.ಡಬ್ಲೂ.ಪಿ ಮತ್ತು ಐ.ಡಬ್ಲೂ.ಟಿ.ಡಿ ಸಬ್
ಡಿವಿಸನ್, ಬೇಲೂರು ಮತ್ತು ಎತ್ತಿನಹೊಳೆ ಯೋಜನೆ ಇಂಜಿನಿಯರ್ ಎ.ಡಬ್ಲೂ.ಇ ಪ್ರಕಾಶ್ ಹಾಗೂ ಈರಯ್ಯರ ಉದ್ದೇಶಪೂರ್ವಿಕ ಕುತಂತ್ರದಿಂದಾಗಿ ಶಿವಯ್ಯನವರ ಮನೆಯ ಪರಿಹಾರದ ಹಣವನ್ನು ಚೆನ್ನಬಸಯ್ಯನವರ ಮನೆಗೆ ಹಾಕಿರುತ್ತಾರೆ. ಈ ವಿಷಯವನ್ನು ಎತ್ತಿನಹೊಳೆ ಎಂಜಿನಿಯರ್‌ಗಳಾದ ಮತ್ತು ಎ.ಡಬ್ಲೂ.ಇ ಪ್ರಕಾಶ್‌ರವರನ್ನು ವಿಚಾರಿಸಿದಾಗ ಈ ವಿಷಯವನ್ನು ಇಲ್ಲಿಯೇ ಬಿಟ್ಟು ಬಿಡಿ. ಇಲಾಖೆಯನ್ನು ಎದುರು ಹಾಕಿಕೊಂಡರೇ ನೀವು ಇರುವ ಮನೆಯೂ
ಉಳಿಯುವುದಿಲ್ಲ. ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.
ಶಿವಯ್ಯನವರ ಮನೆಯ ಪರಿಹಾರದ ಹಣವನ್ನು ಬೇರೆಯವರ ಮನೆಗೆ ಹಾಕಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿ ಮತ್ತು ಶಿವಯ್ಯನವರ ಮನೆಗೆ ರಿ-ಎಸ್ಟಿಮೆಂಟ್ ಮಾಡಿಸಿ ಪರಿಹಾರದ ಹಣವನ್ನು ಕೋರ್ಟಿಗೆ ಜಮಾ ಮಾಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಿರುಮಲನಹಳ್ಳಿ ಗ್ರಾಮದ ಟಿ.ಎಸ್. ರವೀಂದ್ರ, ಹೇಮಾಲತಾ, ನಂದಿನಿ ಇತರರು ಉಪಸ್ಥಿತರಿದ್ದರು.
Hassan
ಜನರ ಮೇಲಿ ಕಾಳಜಿಯಿಂದ ಶಾಸಕರು ಅರಣ್ಯ ಅಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ

ಹಾಸನ: ಜನಸಾಮಾನ್ಯರ ಮೇಲಿನ ಕಾಳಜಿಯಿಂದಾಗಿ ಕಾಡಾನೆ ಸಮಸ್ಯೆ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಇದನ್ನು ಬೇರ ಸ್ವರೂಪಕ್ಜೆ ಕೊಂಡೂಯ್ಯುವುದು ಬೇಡ ಎಂದು ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್ ಮತ್ತು ಸುರೇಂದ್ರ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಳೆದ ೧೦-೧೫ ವರ್ಷಗಳಿಂದ ಕಾಡಾನೆ ಮತ್ತು ಕಾಡು ಪ್ರಾಣಿಗಳ ಹಾವಳಿ ನಿರಂತರವಾಗಿ ನಡೆಯುತ್ತಿದ್ದು, ಮಾನವ-ಆನೆ ಸಂಘರ್ಷಕ್ಕೆ ಹಲವು ವರ್ಷಗಳಿಂದ ನೂರಾರು ಬಲಿಯಾಗಿವೆ. ಕಾಫಿ ತೋಟಗಳನ್ನೇ ಆವಾಸ ಸ್ಥಾನವಾಗಿ ಮಾಡಿಕೊಂಡಿರುವ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಬೆಳೆಹಾನಿ, ಜೀವಹಾನಿ ಮಾಡುತ್ತಿವೆ ಎಂದರು.
ಆನೆಗಳ ಸಂತತಿಯು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಮಲೆನಾಡಿನಲ್ಲಿ ಆತಂಕದ ಛಾಯೆ ಮನೆಮಾಡಿದೆ. ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕಾಫಿ ಬೆಳೆಗಾರ ಸಂಘಟನೆಗಳು ನಿರಂತರವಾಗಿ ಹೋರಾಟ ನೆಡೆಸುತ್ತಿವೆ. ಆದರೂ ಸಹ ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವಲ್ಲಿ ವಿಫಲವಾಗಿವೆ ಎಂದು ದೂರಿದರು.
ಫೆಬ್ರವರಿ ೧೩ ರಂದು ಬೇಲೂರು ತಾಲ್ಲೂಕು ಆರೇಹಳ್ಳಿ ಹೋಬಳಿ, ಬೆಳ್ಳಾವರ ಗ್ರಾಮದಲ್ಲಿ ವೃದ್ಧ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ತೆತ್ತಿದ್ದಾರೆ. ಈ ವಿಚಾರವಾಗಿ ಶಾಸಕರು ಈ ಭಾಗದ ಜನಸಾಮಾನ್ಯರ ಮೇಲೆ ಹೊಂದಿರುವ ಕಾಳಜಿ ಹಾಗೂ ಕಾಡಾನೆ ಸಮಸ್ಯೆಯ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಏರುಧ್ವನಿಯಲ್ಲಿ ಮಾತನಾಡಿರುವುದು ಅತಿಶಯೋಕ್ತಿಯಲ್ಲ. ಒಬ್ಬ ಜನಪ್ರತಿನಿಧಿಗೆ ತನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ನಾಗರೀಕ ಸಮುದಾಯದಿಂದ ಹೆಚ್ಚಿನ ಒತ್ತಡ ಇರುವುದರಿಂದ ಹಾಗೂ ಜನತೆಯಿಂದ ಆಯ್ಕೆಯಾದ ಪ್ರತಿನಿಧಿ, ಜನರ ಪರವಾಗಿ ಧ್ವನಿಯೆತ್ತಬೇಕಾಗುತ್ತದೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಮನವಿ ಸಲ್ಲಿಸಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳು ಒಟೊಟ್ಟಾಗಿ ಸಮಾನ ಮನಸ್ಥಿತಿಯಿಂದ ಸಾಗಿದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಅಭಿವೃದ್ಧಿ ಪತದತ್ತ ಸಾಗಲು ಸಾಧ್ಯ. ಹಾಗಾಗಿ ಕಾಡಾನೆ ಸಮಸ್ಯೆಯ ವಿಚಾರವಾಗಿ ಶಾಸಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಗೆ ಗಂಭೀರ ಸ್ವರೂಪ ನೀಡದೆ ಜನಸಾಮಾನ್ಯರಿಗೆ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಹೆಚ್ಚು ಆಧ್ಯತೆ ನೀಡಿ ಮುಂದುವರೆಯಬೇಕಾಗಿದೆ. ಕೆಲವೊಮ್ಮೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಾಗ ಜನಪ್ರತಿನಿಧಗಳು, ಮಾಧ್ಯಮಗಳು ಕಠಿಣ ನಿಲುವು ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿರುವುದರಿಂದ ಈ ಘಟನೆಯ ಬಗ್ಗೆ ಬೇರೆ ಬೇರೆ ಸ್ವರೂಪಕ್ಕೆ ಕೊಂಡೊಯ್ಯುವ ಅವಶ್ಯಕತೆಯಿಲ್ಲವೆಂಬುದು ಸಂಘಟನೆಯ ನಿಲುವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜು, ಸಂಜಯ್, ಸುರೇಂದ್ರ, ಮಂಜುನಾಥ್ ಶೆಟ್ಟಿ ಇತರರು ಉಪಸ್ಥಿತರಿದ್ದರು.
Hassan
ಈ ನಾಡಿನ ಜನ ನನಗೆ ಪೂರ್ಣಾವಧಿ ಸಿಎಂ ಆಗಲು ಅವಕಾಶ ಕೊಡಲಿಲ್ಲ: ಹೆಚ್.ಡಿ. ಕುಮಾರಸ್ವಾಮಿ

ಹಾಸನ: ತಮ್ಮ ಜೀವವನ್ನು ಲೆಕ್ಕಿಸದೇ ಶ್ರಮವಹಿಸಿ ದೇಶ ಸೇವೆ ಮಾಡುವವರನ್ನು ಮರೆಯಬಾರದು. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಸಹಕಾರದಲ್ಲಿ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವರೊಂದಿಗೆ ಗಮನಸೆಳೆದು ಸ್ಪಂದಿಸುವ ಕೆಲಸ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.
ನಗರದ ಹೊರವಲಯ ಕೆಂಚಟ್ಟಹಳ್ಳಿಯಲ್ಲಿ ನಿರ್ಮಿಸಿರುವ ನಿವೃತ್ತ ಅರೆಸೇನಾ ಪಡೆ ಯೋಧರ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಅರೆಸೇನಾ ಯೋಧರು, ದೇಶ ಸೇನೆಯ ಮೂರು ವಿಭಾಗಗಳ ಯೋಧರು ಮಾಡುವ ಕೆಲಸವನ್ನು ಮಾಡುತ್ತಾರೆ. ಅರೆಸೇನಾ ಪಡೆಯ ಕಾರ್ಯವನ್ನು, ಜೀವ ಲೆಕ್ಕಿಸದೆ ಶ್ರಮವಹಿಸಿ ಮಾಡುವ ಕೆಲಸವನ್ನೂ ಸರ್ಕಾರ ಮರೆಯಬಾರದು. ನಾನು ಅರೆಸೇನಾ ಪಡೆಯ ಕುಟುಂಬದ ನೋವು ಅರಿತುಕೊಂಡಿದ್ದೇನೆ. ಸೈನಿಕರ ಆರೋಗ್ಯ ಶಿಬಿರಕ್ಕೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು. ಉಳಿದ ನಿಮ್ಮ ಬೇಡಿಕೆ ಈಡೇರಿಕೆಗೆ ಸ್ವಲ್ಪ ಸಮಯ ಕೊಡಿ, ದೇವೇಗೌಡರ ಸಹಕಾರದಿಂದ ಕೇಂದ್ರ ಸರ್ಕಾರದ ಗಮನ ಸೆಳೆದು ಸ್ಪಂದಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ದೇಶದ ಒಳಗಿರುವ ರಾಜಕಾರಣಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ನೀವೆಲ್ಲ ಗಮನಿಸುತ್ತಿದ್ದೀರಿ. ನಾನು ಎರಡು ಬಾರಿ ಸಿಎಂ ಆದರೂ ಹೆಚ್ಚು ಸಮಯ ಸಿಗಲಿಲ್ಲ. ಪೂರ್ಣಾವಧಿ ಸಿಕ್ಕಿದ್ದರೆ ಮಾದರಿ ಸರ್ಕಾರ ನಡೆಸುತ್ತಿದ್ದೆ. ಅದು ನನ್ನ ದುರಾದೃಷ್ಟ ಎಂದು ಭಾವಿಸುವುದಿಲ್ಲ ಎಂದರು.
ನನಗೆ ಸಿಎಂ ಆಗಿ ಅದಿಕಾರ ನಡೆಸಲು ಎರಡು ಬಾರಿ ಅವಕಾಶ ಸಿಕ್ಕಿದ್ದು, ಬಹಳ ಕಡಿಮೆ ಸಮಯ ಈ ನಾಡಿನ ಜನ ನನಗೆ ಪೂರ್ಣ ಅವದಿ ಕೊಡಲಿಲ್ಲ. ಕೊಟ್ಟಿದ್ದರೆ. ಪೂರ್ಣವಧಿಯಾಗಿ ಈ ರಾಜ್ಯವನ್ನು ಮಾದರಿ ರಾಜ್ಯವಾಗಿ ಮಾಡಿ ತೋರಿಸುತ್ತಿದ್ದೆ. ನಮ್ಮ ಪಕ್ಷ ಮುಗಿದೆ ಹೋಯ್ತು ಅಂದ್ರು. ಈಗ ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದಾನೆ. ಆಂಧ್ರದಲ್ಲಿ ಮುಚ್ಚೇ ಹೋಗಿದ್ದ ಒಂದು ಫ್ಯಾಕ್ಟರಿ ಮರು ಆರಂಭ ಮಾಡಿದೆನೆ. ಅಲ್ಲಿ ಜನ ನನ್ನ ಫೋಟೊಗೆ ಹಾಲಿನ ಅಭಿಷೇಕ ಮಾಡ್ತಾರೆ. ರಾಜ್ಯದಲ್ಲಿ ವಿಶ್ವೇಶ್ವರಯ್ಯ ಫ್ಯಾಕ್ಟರಿ ಉಳಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.
ಈ ರಾಜ್ಯ ಸರ್ಕಾರ ೨.೧೦ ಲಕ್ಷ ಕೋಟಿ ಸಾಲ ಮಾಡಿಯಾಗಿದ್ದು, ಕೇವಲ ೧೮ ತಿಂಗಳಲ್ಲಿ ಇಷ್ಟು ಸಾಲ ಆಗಿದೆ. ರಾಜ್ಯದಲ್ಲಿ ಒಟ್ಟು ಸಾಲ ೭ ಲಕ್ಷ ಕೋಟಿ ದಾಟಿದೆ. ತಿಂಗಳಿಗೆ ಎರಡು ಸಾವಿರ ಹಣವನ್ನು ಮಹಿಳೆಯರಿಗೆ ಕೊಡ್ತಾರೆ. ಇದರಿಂದ ಕುಟುಂಬ ನಡೆಸೋಕೆ ಸಾದ್ಯವೇ? ಈಗಲೂ ಕೂಡ ಹಲವು ಹೆಣ್ಣು ಮಕ್ಕಳು ನೆರವಿಗಾಗಿ ನಮ್ಮ ಮನೆ ಹತ್ರ ಬರ್ತಾರೆ. ಎರಡು ಸಾವಿರದಲ್ಲಿ ಜೀವನ ನಡೆಯಿದಾಗಿದ್ರೆ ಅವರು ಯಾಕೆ ಬರ್ತಾರೆ! ಸರ್ಕಾರ ೭ ಲಕ್ಷ ಕೋಟಿ ಸಾಲ ಮಾಡಿ ಅರಾಮಾಗಿ ಓಡಾಡ್ತಾರೆ. ನೀವು ಒಂದೊ ಎರಡು ಲಕ್ಷ ಸಾಲ ಮಾಡಿ ಯಾಕೆ ಹೆದರ್ ತೀರಾ ಧೈರ್ಯದಿಂದ ಓಡಾಡಿ ಈ ಮೈಕ್ರೋ ಫೈನಾನ್ಸ್ ಕಿರುಕುಳ ಅಂತ ಹೆದರಬೇಡಿ. ಸಾಲ ಮಾಡಿ ಮನೆ ಕಟ್ಟಿ, ಮಕ್ಕಳನ್ನು ಓದಿಸಿದರೆ ಆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ, ರಾಜ್ಯ ಸರ್ಕಾರದ ಒಟ್ಟು ಸಾಲ ೭ ಲಕ್ಷ ಕೋಟಿ ದಾಟಿದೆ. ಅವರೇ ನಾಚಿಕೊಳ್ಳುತ್ತಿಲ್ಲ. ನೀವು ಯಾಕೆ ಆತ್ಮಹತ್ಯೆ ಮಾಡುಕೊಳ್ಳುತ್ತೀರಾ ಎಂದು ಸಾಲಗಾರರಿಗೆ ಧೈರ್ಯದ ಮಾತನ್ನು ತಿಳಿಸಿದರು.
ತಪ್ಪುಗಳು ಆಗುತ್ತವೆ, ಆ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿ, ನಮಗೆ ಸಿಕ್ಕಿರುವ ಈ ಅವಕಾಶವನ್ನು ಜನರಿಗೆ ಧಾರೆ ಎರೆಯುತ್ತೇನೆ, ದುರುಪಯೋಗ ಪಡಿಸಿ ಕೊಳ್ಳುವುದಿಲ್ಲ. ನನ್ನನ್ನು ಮನೆಯ ಮಗ, ಕುಟುಂಬದ ಸದಸ್ಯ ಎಂದು ಸ್ವೀಕಾರ ಮಾಡುತ್ತೀರೋ ಅದು ನಿಮಗೆ ಬಿಟ್ಟಿದ್ದು. ದೇವೇಗೌಡರು ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ನದಿ ಜೋಡಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ನೇರಳೆ, ಹುಣಸೆ, ಹಲಸು ಬೆಳೆಯುವ ರೈತರಿಗಾಗಿ ನಿಗಮ ಮಾಡುವಂತೆ ರಾಜ್ಯ ಸಭೆಯಲ್ಲಿ ದೇವೇಗೌಡರು ಮನವಿ ಮಾಡಿದ್ದಾರೆ. ನಮ್ಮ ತಂದೆ ಬದುಕಿರುವ ಒಳಗೆ ಈ ದೇಶ, ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನುಡಿದರು.
ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣರ ಆಶಿರ್ವಾದದಿಂದ ಇಂದು ಸೈನಿಕರ ಭವನ ಉದ್ಘಾಟನೆಗೊಂಡಿದೆ. ಜಿಲ್ಲೆಯಲ್ಲಿ ಇಂಜಿನಿಯರಿಂಗ್, ೧೧ಕ್ಕೂ ಹೆಚ್ಚು ಡಿಪ್ಲೊಮಾ ಕಾಲೇಜುಗಳಿವೆ. ಬೇರೆ ಬೇರೆ ದೇಶಗಳಿಗೆ ಹಾಗೂ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಬೇಕಾಗಿದೆ. ಮುಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಿ, ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಮನವಿ ಪತ್ರವನ್ನು ಕುಮಾರಸ್ವಾಮಿ ಅವರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಎ.ಮಂಜು, ಹೆಚ್.ಕೆ. ಕುಮಾರಸ್ವಾಮಿ, ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಜಿಪಂ ಮಾಜಿ ಅಧ್ಯಕ್ಷ, ಸ್ವಾಮಿಗೌಡ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಮಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ದಿನೇಶ್, ಬಿದರಿ ಕೆರೆ ಜಯರಾಂ, ಜೆಡಿಎಸ್. ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಅರೆ ಸೇನಾಪಡೆ ಜಿಲ್ಲಾಧ್ಯಕ್ಷ ಪಿ.ವಿ. ನಾಗೇಶ್, ದೆಹಲಿಯ ಸಿ.ಎ.ಪಿ.ಎಫ್. ಜನರಲ್ ಸೆಕ್ರಟ್ರಿ ರಣಬೀರ್ ಸಿಂಗ್, ಹೆಚ್.ಆರ್. ಸಿಂಗ್, ಎಂಪಿಎಲ್. ರೆಡ್ಡಿ, ರಾಮೇಗೌಡ, ಉಪಾಧ್ಯಕ್ಷ ಎಂ.ಜಿ. ರಮೇಶ್ ಅರೆಸೇನಾ ಪಡೆಯ ಸಂಘದ ಗೌರವಾಧ್ಯಕ್ಷ ನವಾಬ್ ಖಾನ್, ಉಪಾಧ್ಯಕ್ಷ ಎಂ.ಜಿ. ರಮೇಶ್, ನಾಗಪ್ಪ, ಯು. ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.
Hassan
ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಲೋಪ: ಪ್ರವೀಣ್ ಗೌಡ ಆರೋಪ

ಹಾಸನ: ಆನ್ಲೈನ್ ನಲ್ಲಿ ನಡೆದ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಲೋಪ ನಡೆದಿದ್ದು, ಇದಕ್ಕೆ ಕಾನೂನಾತ್ಮಕವಾಗಿ ಹೋರಾಟ ಮಾಡಿ ನಡೆದಿರುವ ಫಲಿತಾಂಶ ತಡೆ ಹಿಡಿಯುವುದಾಗಿ ಕಾಂಗ್ರೆಸ್ ಮುಖಂಡ ಪ್ರವೀಣ್ ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಾವು ಐದು ಜನ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆವು. ನಮ್ಮಗಳಿಗೆ ಬಂದಂತಹ ಒಟ್ಟು ವೋಟುಗಳು ೧೪,೦೦೦ ಸಾವಿರಕ್ಕೂ ಅಧಿಕ. ಆದರೆ ನಾವುಗಳು ಓಟ್ಟು 32 ಜನ ಜಿಲ್ಲಾಧ್ಯಕ್ಷ ಅಭ್ಯರ್ಥಿ ರಂಗಸ್ವಾಮಿ ಅವರಿಗೆ ಮತ ಹಾಕಿದೀವಿ. ಆದರೆ ಎಲ್ಲೋ ಒಂದು ಕಡೆ ರಂಗಸ್ವಾಮಿ ಅವರಿಗೆ ಬಂದ ಮತ ಎಣಿಕೆ ನಮಗೆ ಸಂಶಯ ಮೂಡುತ್ತಿದೆ ಎಂದು ದೂರಿದರು.
ಇದರಲ್ಲಿ ಎಲ್ಲೋ ಒಂದು ಕಡೆ ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಒಬ್ಬರ ಪರವಾಗಿ ಮಾಡಬೇಕು ಅನ್ನೋದು ಮೇಲ್ನೋಟಕ್ಕೆ ಕಾಣುತ್ತಿದೆ. ಇದೇ ತರ ಚಿಕ್ಕಮಗಳೂರಲ್ಲೂ ಸಹ ಒಬ್ಬರು ಪರವಾಗಿ ಚುನಾವಣೆ ಮಾಡಲು ಹೋಗಿ ಅಲ್ಲಿನ ಫಲಿತಾಂಶವನ್ನು ತಡೆ ಹಿಡಿದಿದ್ದಾರೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಯುವ ಕಾಂಗ್ರೇಸ್ ಚುನಾವಣೆಯ ಫಲಿತಾಂಶದಲ್ಲಿ ಅವ್ಯವಹಾರ ಆಗಿದೆ ಎಂದು ಯುವ ಕಾಂಗ್ರೆಸ್ ಮುಖಂಡರು ಆಯಾ ಜಿಲ್ಲೆಗಳಲ್ಲಿ ಪತ್ರಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಪಕ್ಷಪಾತವಾಗಿ ಫಲಿತಾಂಶ ಪ್ರಕಟಿಸಿ ಎಂದು ಮನವಿ ಮಾಡಿದ್ದಾರೆ ಎಂದರು.
ಯಾರೋ ಜಿಲ್ಲಾ ಪ್ರಭಾವಿ ಯುವ ಮುಖಂಡನ ಮಾತು ಕೇಳಿ ಕೇಂದ್ರ ಯುವ ಕಾಂಗ್ರೆಸ್ ಚುನಾವಣಾ ಸಮಿತಿ ಫಲಿತಾಂಶ ಪ್ರಕಟಿಸಿರುವುದು ಕಂಡಬಂದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಈ ಕೂಡಲೇ ಪಾರದರ್ಶಕ ಫಲಿತಾಂಶ ಪ್ರಕಟಿಸಬೇಕು. ಚುನಾವಣೆ ಸ್ಪರ್ಧೆ ಮಾಡಿದ ಎಲ್ಲಾ ಅಭ್ಯರ್ಥಿಗಳ ಮುಂದೆ ಮತಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದರ್ಶನ್, ಕಾಂತರಾಜು, ಅನಂತಕುಮಾರ್, ಮನು ಇತರರು ಉಪಸ್ಥಿತರಿದ್ದರು.
-
Kodagu12 hours ago
ಯುವ ಕಾಂಗ್ರೆಸ್ಗೆ ನೀಡಿದ್ದ ರಾಜೀನಾಮೆ ಹಿಂಪಡೆದ ಅನೂಪ್ ಕುಮಾರ್
-
Mysore9 hours ago
ಲೋಕಾಯುಕ್ತ ಬಲೆಗೆ ಬಿದ್ದ ಬೆಟ್ಟದಪುರ ಸಬ್ ಇನ್ಸ್ಪೆಕ್ಟರ್ ಶಿವಶಂಕರ್
-
Kodagu10 hours ago
ಸುಗ್ರಿವಾಜ್ಞೆ ಅನುಷ್ಠಾನಕ್ಕೂ ಮೊದಲು ಬಡವರ ಸಾಲಮನ್ನಾ ಮಾಡಲಿ: ಯುವ ಜೆಡಿಎಸ್ ಆಗ್ರಹ
-
Mandya9 hours ago
ಮತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವತಿಯರು ಸಾ**ವು
-
Mandya11 hours ago
ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನದೊಳಗಾಗಿ ಹಣ ಪಾವತಿ ಮಾಡಿ: ಡಾ.ಕುಮಾರ
-
Mysore9 hours ago
ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಕೆ ಮಾಡಬೇಕು: ಪುರುಷೋತ್ತಮ ಬಿಳಿಮಲೆ
-
Kodagu10 hours ago
ಮೃ*ತರ ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ ಮಂತರ್ ಗೌಡ
-
Hassan13 hours ago
ರಾಜ್ಯದಲ್ಲಿ ಕ್ಷುಲ್ಲಕ ರಾಜಕಾರಣಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದಾರೆ: ಎಚ್ಡಿಕೆ