Connect with us

Mysore

ಮುಖ್ಯ ಶಿಕ್ಷಕ ಮತ್ತು ಡಿ ದರ್ಜೆ ನೌಕರ, ಶಾಲಾ ಪ್ರವಾಸದ ಸಂದರ್ಭ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ – ಆರೋಪ

Published

on

ಎಚ್.ಡಿ.ಕೋಟೆ: ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗಣ್ಣ ಮತ್ತು ಡಿ ದರ್ಜೆ ನೌಕರ ಎನ್.ರಮೇಶ್ ಶಾಲಾ ಪ್ರವಾಸದ ಸಂದರ್ಭ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇಬ್ಬರಿಗೂ ಧರ್ಮದೇಟು ನೀಡಿದ್ದ ಹಿನ್ನೆಲೆಯಲ್ಲಿ ಶಿಸ್ತುಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಶುಕ್ರವಾರ ವರದಿ ನೀಡಿದ್ದಾರೆ.

ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಪ್ರೌಢಶಾಲೆಯಿಂದ 8, 9 ಮತ್ತು 10ನೇ ತರಗತಿಗಳ 50 ಮಕ್ಕಳು 5 ದಿನ ಪ್ರವಾಸ ಹೋಗಿದ್ದರು. ಅವರಲ್ಲಿ 20 ಬಾಲಕರು ಮತ್ತು 30 ಬಾಲಕಿಯರು, ಇವರೊಂದಿಗೆ ಮೂವರು ಪುರುಷ ಶಿಕ್ಷಕರು ಮತ್ತು ಇಬ್ಬರು ಮಹಿಳಾ ಶಿಕ್ಷಕಿಯರು ತೆರಳಿದ್ದರು.
ದಕ್ಷಿಣ ಕನ್ನಡ, ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಇತರ ಸ್ಥಳಗಳಿಗೆ ನ. 20ರಂದು ತೆರಳಿ, 24ರ ತಡರಾತ್ರಿ ಗ್ರಾಮಕ್ಕೆ ವಾಪಸಾಗಿದ್ದಾರೆ. ಇದರ ಮಧ್ಯೆ ಪ್ರವಾಸಕ್ಕೆ ತೆರಳಿದ್ದಾಗ ಬಸ್ ನಲ್ಲಿ ನೃತ್ಯ ಮಾಡುವ ನೆಪದಲ್ಲಿ ಹಾಗೂ ಬೀಚ್‌ನಲ್ಲಿ ಅನುಚಿತವಾಗಿ ಈ ಇಬ್ಬರು ವರ್ತಿಸಿದ್ದಾರೆ ಎಂದು ಸುಮಾರು 8 ವಿದ್ಯಾರ್ಥಿನಿಯರು ಪೋಷಕರಲ್ಲಿ ತಿಳಿಸಿದ್ದಾರೆ.
ಕೂಡಲೇ ಪೋಷಕರು ಶಾಲೆಗೆ ತೆರಳಿ, ಶಿಕ್ಷಕ ನಾಗಣ್ಣ ಮತ್ತು ಡಿ ದರ್ಜೆ ನೌಕರ ಎನ್.ರಮೇಶ್ ಅವರೊಂದಿಗೆ ವಾಗ್ವಾದ ನಡೆಸಿ ಮೇಲೆ ಹಲ್ಲೆ ನಡೆಸಿದ್ದಾರೆ.
ಪ್ರಕರಣದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಶಾಲೆಗೆ ಭೇಟಿ ನೀಡಿ, ಮುಖ್ಯ ಶಿಕ್ಷಕ, ಪ್ರವಾಸಕ್ಕೆ ತೆರಳಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರೊಂದಿಗೆ ಚರ್ಚೆ ನಡೆಸಿದ್ದು, ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಮುಖ್ಯ ಶಿಕ್ಷಕ ಹಾಗೂ ಡಿ ಗ್ರೂಪ್ ನೌಕರ ಅನುಚಿತವಾಗಿ ನಡೆದುಕೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರವಾಸ ಮುಗಿಸಿ ಬಂದ 4 ದಿನದ ನಂತರ ಪ್ರಕರಣ ಪೋಷಕರಿಗೆ ಮಾಹಿತಿ ತಿಳಿದಿದೆ.

ಪ್ರವಾಸಕ್ಕೆ ತೆರಳಿದ್ದ ಶಿಕ್ಷಕಿಯೊಬ್ಬರು ಎಲ್ಲಾ ವಿವರವನ್ನು ಬರೆದುಕೊಟ್ಟಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ವರದಿ ನೀಡಲಾಗುವುದು.
– ಮಾರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಡಿ.ಕೋಟೆ

ಘಟನೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಳಿ ಮಾಹಿತಿ ಪಡೆದುಕೊಂಡಿದ್ದೇನೆ. ನಿಯಮಾವಳಿ ಪ್ರಕಾರ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲಾಗಿತ್ತೆ ಎಂಬುದನ್ನು ಪರಿಶೀಲಿಸಲು ತಿಳಿಸಿದ್ದೇನೆ. ಕೂಡಲೇ ಮಕ್ಕಳು ಹಾಗೂ ಶಿಕ್ಷಕರ ಬಳಿ ಮಾತನಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
+ ಎಚ್.ಕೆ.ಪಾಂಡು ಡಿಡಿಪಿಐ, ಮೈಸೂರು.

ಮುಖ್ಯ ಶಿಕ್ಷಕ ನಾಗಣ್ಣ ಮತ್ತು ಡಿ ದರ್ಜೆ ನೌಕರ ಎನ್.ರಮೇಶ್ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ದಾಖಲಿಸಿ ಬಂಧಿಸ ಬೇಕಾಗಿತ್ತು ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಅವರಿಗೆ ತರಟಗೆ ತೆಗೆದುಕೊಂಡ ಘಟನೆ ನಡೆಯಿತು.

ತಪ್ಪಿತಸ್ಥ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಶಾಲೆಯನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಲಾಗುವುದು

-ಬಿಚನಹಳ್ಳಿ ಚಿಕ್ಕಣ್ಣ, ಮಾಜಿ ಶಾಸಕರು, ಎಚ್.ಡಿ.ಕೋಟೆ

ಪೋಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಡಿ ಗ್ರೂಪ್ ನೌಕರ ಎನ್.ರಮೇಶ್ ನಿದ್ರೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

Continue Reading
Click to comment

Leave a Reply

Your email address will not be published. Required fields are marked *

Mysore

ಅಂಬೇಡ್ಕರ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆ

Published

on

ನಗರದಲ್ಲಿ ಜುಲೈ 13 ಅಥವಾ 14ರಂದು ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗಿದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಳಿ ತಾರೀಕನ್ನು ನಿಗದಿ ಪಡಿಸುತ್ತೇನೆ
ಎಂದು ಕ್ಷೇತ್ರದ ಶಾಸಕ ದರ್ಶನ್ ದ್ರುವ ನಾರಾಯಣ್ ತಿಳಿಸಿದ್ದಾರೆ.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಮುಖಂಡರ ಅಭಿಪ್ರಾಯಗಳನ್ನು ತಿಳಿದುಕೊಂಡು ಅಂಬೇಡ್ಕರ್ ಜಯಂತಿಯನ್ನು ಸಾಮರಸ್ಯದಿಂದ ಆಚರಿಸೋಣ ಎಂದು ತೀರ್ಮಾನಿಸಿದರು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಚಾಮರಾಜನಗರ ಸಂಸದರಾದ ಸುನಿಲ್ ಬೋಸ್, ಎಂಎಲ್ಸಿ ಯತೀಂದ್ರ ಸಿದ್ರರಾಮಯ್ಯ,
ಶಾಸಕರುಗಳಾದ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಭಾಗವಹಿಸಲಿದ್ದಾರೆ.

ಅಂಬೇಡ್ಕರ್ ಜಯಂತಿಯ ಮೊದಲಿಗೆ 9 ಗಂಟೆಗೆ ಮೆರವಣಿಗೆಯನ್ನು ಪ್ರಾರಂಭಿಸಬೇಕು. 12 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಬೇಕು ಎಂದು ಸಲಹೆ ಸೂಚಿಸಿದರು.

ನಗರದ ಪ್ರಮುಖ ಬೀದಿಯಲ್ಲಿ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಮತ್ತು ಬುದ್ಧ ಹಾಗೂ ಸಂವಿಧಾನ ಪೀಠಿಕೆಯ ಸ್ತಬ್ದ ಚಿತ್ರಗಳೊಂದಿಗೆ ಜಾನಪದ ಕಲಾತಂಡಗಳ ಮೂಲಕ ವಿಚಾರ ಸಂಕೀರಣ ನಡೆಯಲಿದೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಬ್ಲಾಕ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ನಾಗೇಶ್ ರಾಜ್, ಶಂಕರಪುರ ಸುರೇಶ್, ನಗಲೆ೯ ವಿಜಯ್ ಕುಮಾರ್, ಮಲ್ಲಹಳ್ಳಿ ನಾರಾಯಣ್, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ದೇಬೂರು ಅಶೋಕ್, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ರಪ್ತು ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವನ್ನು ಹೆಚ್ಚಿಸುತ್ತದೆ – ಟಿ ದಿನೇಶ್

Published

on

ಮೈಸೂರು, ಜೂ.24: ರಪ್ತು ಮಾಡುವುದರಿಂದ ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ.ದಿನೇಶ್ ಅವರು ತಿಳಿಸಿದರು.

ನಗರದ ಹೋಟೆಲ್ ಪ್ರೆಸಿಡೆಂಟ್ ನಲ್ಲಿ ಇಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ರಪ್ತು ಹಮ್ಮಿಕೊಂಡಿದ್ದ ರಪ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಉದ್ದಿಮೆದಾರರಿಗೆ ನಾನು ಪ್ರತಿದಿನ ಹೊಸತನ್ನು ಕಲಿಯಬೇಕು ಎನ್ನುವ ಹಂಬಲ ಇರಬೇಕು. ದೇಶದಲ್ಲಿ 778 ಮಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ರಪ್ತು ಮಾಡಿದ್ದು, 860 ಮಿಲಿಯನ್ ಡಾಲರ್ ಮೊತ್ತದ ಸರಕನ್ನು ಆಮದನ್ನು ಮಾಡಿಕೊಂಡಿದ್ದೇವೆ. ಕರ್ನಾಟಕವು ರಪ್ತು ಮಾಡುವುದರಲ್ಲಿ 4 ನೇ ಸ್ಥಾನದಲ್ಲಿ ಇದೆ. ನಮ್ಮ ರಾಜ್ಯವು ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರಬೇಕು ಎಂದರು.

ಭಾರತ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ರಫ್ತು ಉತ್ತೇಜನ ಕೇಂದ್ರವನ್ನು ಸ್ಥಾಪಿಸಿದೆ. ಮೈಸೂರು ಜಿಲ್ಲೆಯಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ಪ್ರತಿ ವರ್ಷ ಶೇಕಡಾ 5% ರಫ್ತನ್ನು ಹೆಚ್ಚಳ ಮಾಡಬೇಕು ಎಂದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕರಾದ ಸಿ.ಎಸ್.ಬಾಬು ನಾಗೇಶ್ ಅವರು ಮಾತನಾಡಿ, ತಾವೆಲ್ಲರೂ ಯುವ ಉದ್ಯಮಿಗಳು ಇದ್ದೀರಾ. 6 ದಿನಗಳ ಕಾಲ ಹಮ್ಮಿಕೊಂಡಿರುವ ರಪ್ತು ನಿರ್ವಹಣಾ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ. ರಪ್ತು ಕೈಗಾರಿಕೆಗಳ ಆರ್ಥಿಕ ಆದಾಯವನ್ನು ಹೆಚ್ಚಿಸುತ್ತದೆ. ಇದರಿಂದ ಹೆಚ್ಚಿನ ಉತ್ಪಾದನೆ ಮಾಡಿ ಕೈಗಾರಿಕೆಯು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಗಳಾದ ಸುರೇಶ್ ಕುಮಾರ್ ಜೈನ್ ಅವರು ಮಾತನಾಡಿ, ಮೈಸೂರಿನಲ್ಲಿ ರಪ್ತು ಕೇಂದ್ರ ಸ್ಥಾಪನೆ ಆಗುತ್ತಿದೆ. ಕಟ್ಟಡ ಈಗಾಗಲೇ ಪ್ರಾರಂಭವಾಗಿದೆ. ರಫ್ತಿನಲ್ಲಿ ಪ್ಯಾಕಿಂಗ್ ಉತ್ತಮ. ನಮ್ಮ ವಸ್ತುಗಳು ತಲುಪಬೇಕಾದ ಸ್ಥಳವನ್ನು ಕೆಡದಂತೆ ಸಕಾಲದಲ್ಲಿ ತಲುಪಬೇಕು. ರಪ್ತು ದೇಶದ ಆದಾಯವನ್ನು ಹೆಚ್ಚಿಸುತ್ತದೆ. ರಫ್ತಿನಲ್ಲಿ ಸಣ್ಣ ಕೈಗಾರಿಕೆಗಳ ಪಾಲು ಶೇಕಡಾ 45 ರಷ್ಟು ಇದೆ. ನೋಟು ಮುದ್ರಣವನ್ನು ಸಹ ಮೈಸೂರಿನಲ್ಲಿ ಮಾಡುತ್ತೇವೆ. ಮೈಸೂರು ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದೆ. ಸೆಮಿ ಕಂಡಕ್ಟರ್ ಗಳ ಉತ್ಪಾದನಾ ಕೇಂದ್ರ ಸ್ಥಾಪನೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ.ಲಿಂಗರಾಜು ಅವರು ಮಾತನಾಡಿ, ಯಾವುದೇ ಪದಾರ್ಥವನ್ನು ನಾವು ರಪ್ತು ಮಾಡಲು ರಾಸಾಯನಿಕ ಮುಕ್ತವಾಗಿ ಇರಬೇಕು. ನಾವು ರಪ್ತು ಮಾಡುವ ಉತ್ಪಾದನೆ ಗುಣಮಟ್ಟದಿಂದ ಕೂಡಿರಬೇಕು. ಮೈಸೂರಿನಲ್ಲಿ ಈಗಾಗಲೇ ಸುಮಾರು 165 ಜನ ರಪ್ತು ಮಾಡುತ್ತಾ ಇದ್ದಾರೆ. ಇನ್ನು ಹೆಚ್ಚಿನ ಜನರು ದೇಶ ವಿದೇಶಕ್ಕೆ ರಪ್ತು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ರಪ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕರಾದ ಮೇಘಲಾ ಸೇರಿದಂತೆ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

Continue Reading

Mysore

ಮಡೆ ಹಬ್ಬದ ಪ್ರಯುಕ್ತ ಗಮನ ಸೆಳೆದ ಬಡವ- ರೈತರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ- ಕೊಡವ್ವ”ಘೋಷಣೆ 

Published

on

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ತಾಲೂಕಿನ    ಚಿಕ್ಕಕ್ಕೊಪ್ಪಲು ಗ್ರಾಮದಲ್ಲಿ ಮಡೆ ಹಬ್ಬದ ಪ್ರಯುಕ್ತ ನಡೆದ ತಂಬಿಟ್ಟಿನ ಮೆರವಣಿಗೆ ಮತ್ತು ಗುಡ್ಡದ ತಂಡದ ಹಾಡು ನೃತ್ಯ ಇನ್ನೊಂದೆಡೆ ಜೈಕಾರದ ಪಟಾಕಿಗಳ ಆರ್ಭಟದ ನಡುವೆ ಯುವಕರು ಬಡವರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ…ರೈತರ ಮಕ್ಕಳಿಗೆ ಹೆಣ್ಣು ಕೊಡವ್ವ ಆರ್ಶಿವಾದ ಮಾಡವ್ವ ಮುತ್ತುತಾಳಮ್ಮ‌ ಎಂಬ ಘೋಷಣೆ ಹಬ್ಬದಲ್ಲಿ‌ ವಿಶೇಷವಾಗಿ ಗಮನ ಸೆಳೆಯಿತು.

 

ಗ್ರಾಮದಲ್ಲಿ ಮಡೆ ಹಬ್ಬವು ತಂಬಿಟ್ಟಿನ ಅರತಿಯೊಂದಿಗೆ ಸಾವಿರಾರು ಮಂದಿಯ ಸಮ್ಮುಖದಲ್ಲಿ ಬಾರಿ ಸಂಭ್ರಮ ಮತ್ತು ಪಟಾಕಿಗಳ ಆರ್ಭಟದೊಂದಿಗೆ ವೈಭವಯುತವಾಗಿ ನಡೆಯಿತು.
ಗ್ರಾಮದ ಹೊರವಲಯದಲ್ಲಿರುವ ಮಲ್ಲಮ್ಮನ ಕೊಳದ ಬಳಿ ಗ್ರಾಮದ ಮಹಿಳೆಯರು ಗಂಗೆ ಪೂಜೆ ಮಾಡಿ, ಕಿಚಡಿ ಅನ್ನದ ಪ್ರಸಾದವನ್ನು ತಯಾರಿಸಿ, ತಂಬಿಟ್ಟು ಮಾಡಿ,ಅಲ್ಲಿಯೇ ಪ್ರತಿಷ್ಠಾಪಿಸಲಾಗಿದ್ದ ಆದಿ ಶಕ್ತಿ ಮುತ್ತು ತಾಳಮ್ಮ‌ ದೇವರಿಗೆ ಮಹಿಳೆಯರು ಮತ್ತು ಗ್ರಾಮಸ್ಥರು ಪೂಜೆ ಸಲ್ಲಿಸಿದರು. ನಂತರ ಹಬ್ಬಕ್ಕಾಗಿ ಕರೆಸಲಾಗಿದ್ದ ಕೆ.ಆರ್.ನಗರದ ಮಧುವನಹಳ್ಳಿಯ ಗುಡ್ದೆದೇವರುಗಳ ತಂಡದವರು ನಡೆಸಿ ಕೊಟ್ಟ ದೇವರ ವಿವಿಧ ಭಕ್ತಿಯ ಹಾಡಿನ ಮೂಲಕ ಮನೆಸೂರೆಗೊಳ್ಳುವ ನೃತ್ಯದ ನಂತರ ಗ್ರಾಮದ ಕನ್ನಂಬಾಡಮ್ಮ,

ಮುತ್ತುತಾಳಮ್ಮ,ಬಂದಂತೆಯಮ್ಮ, ಹಳಿಯೂರು ದೊಡಮ್ಮ ದೇವತೆಗಳನ್ನು ಬರಮಾಡಿ ಕೊಂಡರು.
ಬಳಿಕ ಮಡೆ ಹಬ್ಬಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಹಾಜರಿದ್ದ ಸಾವಿರಾರು ಗ್ರಾಮಸ್ಥರು ಮತ್ತು ಮಹಿಳೆಯರು ಉತ್ತಮ ಮಳೆ, ಬೆಳೆ ಅಗಲಿ, ಗ್ರಾಮಕ್ಕೆ ಒಳಿತಾಗಲಿ, ಮತ್ತು ತಮ್ಮ‌ ಹತ್ತಾರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಆದಿಶಕ್ತಿ ಮುತ್ತುತ್ತಾಳಮ್ಮ ದೇವರಲ್ಲಿ ಪ್ರಾರ್ಥಿಸಿ ಕೊಂಡು‌ಭಕ್ತಿ ಪರವಶವಾದರು.

ಬಳಿಕ ತಂಬಿಟ್ಟಿನ ಆರತಿ ಹೊತ್ತ ಮಹಿಳೆಯರು ಮತ್ತು ಕಳಸ ಹೊತ್ತ ಬಾಲಕಿಯರು ಗ್ರಾಮದ ದೇವರಹಟ್ಟಿ ಮಾರ್ಗವಾಗಿ ಗ್ರಾಮದ ಚೌಡಿ ಬೀದಿಯ ವರಗೆ ಮೆರವಣಿಗೆ ನಡೆಸುವ ವೇಳೆ ಗ್ರಾಮಸ್ಥರು ಆಡು,ಕುರಿಗಳನ್ನು ಬಲಿ ಕೊಟ್ಟು ಮುತ್ತುತಾಳಮ್ಮ ದೇವರಿಗೆ ಆರ್ಶಿವಾದ ಕೋರಿದ ಬಳಿಕ‌ ಚೌಡಿ ಬೀದಿಯಲ್ಲಿ ಗುಡ್ಡೆ ದೇವರ ತಂಡದವರ ನೃತ್ಯದೊಂದಿಗೆ ಮಡೆ ಹಬ್ಬ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ 13 ಕೋಮಿನ ಯಜಮಾನರಲ್ಲಿ‌ ಒಬ್ಬರಾದ ಟಿ.ಪುರುಷೋತ್ತಮ್ ಕಳೆದ 11 ವರ್ಷದ ಹಿಂದೆ ನಡೆದಿದ್ದ ಈ ಹಬ್ಬ ಮುತ್ತುತ್ತಾಳಮ್ಮ ತಾಯಿ ಅನುಗ್ರಹ ದಿಂದ ಈ ಬಾರಿ ಈ ಬಂಡಿ ಮತ್ತು ಮಡೆ ಹಬ್ಬ ಯಶಸ್ವಿಯಾಗಿದ್ದು, ಇದಕ್ಕೆ ಸಹಕಾರ ನೀಡಿದ ಗ್ರಾಮಸ್ಥರಿಗೆ ಎಲ್ಲಾ ಕೋಮಿನ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು,ಸಾವಿರಾರು ಮಂದಿ ಭಕ್ತರು  ಹಾಜರಿದ್ದರು.

Continue Reading

Trending

error: Content is protected !!