Mandya
ಮಿಮ್ಸ್ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಡ್ಯ: ಮಿಮ್ಸ್‌ನ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಎದುರು ಕರುನಾಡ ಸೇವಕರು ಸಂಘಟನೆ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಅಪಘಾತ ಹಾಗೂ ತುರ್ತುಚಿಕಿತ್ಸಾ ಘಟಕ ಸೇರಿದಂತೆ ಎಲ್ಲ ವಿಭಾಗದಲ್ಲೂ ಕರ್ತವ್ಯ ನಿರತ ವೈದ್ಯರು ಸದಾ ಹಾಜರಿರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡದೆ ಸರಕಾರಿ ಆಸ್ಪತ್ರೆಯನ್ನು ತಮ್ಮ ಖಾಸಗಿ ನರ್ಸಿಂಗ್ ಹೋಂಗಳ ಸಂದರ್ಶಕ ಕೇಂದ್ರವಾಗಿಸಿಕೊಂಡಿರುವ ವೈದ್ಯರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವೆಂಟಿಲೇಟರ್ ಇದ್ದಾಗಿಯೂ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸಾಗಹಾಕುವ. ಎಲ್ಲದಕ್ಕು ಆಸ್ಪತ್ರೆ ಹೊರಗಡೆ ಮೆಡಿಕಲ್ ಹಾಗೂ ಡಯಾಗ್ನೋಷ್ಟಿಕ್ ಕೇಂದ್ರಗಳಿಗೆ ಅಟ್ಟುವ ಪ್ರವೃತ್ತಿ ನಿಲ್ಲಬೇಕು. ಪ್ರತಿ ವಿಭಾಗದಲ್ಲೂ ಹೆಲ್ಪ್ ಡೆಸ್ಕ್ ಸ್ಥಾಪಿಸಬೇಕು. ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಔಷಧ ಮಳಿಗೆಯಲ್ಲಿ ಎಲ್ಲ ಔಷಧಗಳು ಸಿಗುವಂತೆ ಮಾಡಬೇಕು. ಖಾಸಗಿ ಮೆಡಿಕಲ್ ಗಳೊಂದಿಗಿನ ಅಕ್ರಮ ಮೈತ್ರಿ ತುಂಡರಿಸಬೇಕು ಎಂದು ಒತ್ತಾಯಿಸಿದರು.

ಕ್ಯಾನ್ಸರ್ ಘಟಕ ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಎಬಿಆರ್‌ಕೆ ಅಡಿಯಲ್ಲಿ ಸರ್ಕಾರಿ ಹಣ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿರುವುದನ್ನು ತಪ್ಪಿಸಲು ಪೂರ್ಣಪ್ರಮಾಣದ ರೇಡಿಯೋ ಥೆರಪಿಸ್ಟ್ ನೇಮಕವಾಗಬೇಕು. ರೋಗ ಪತ್ತೆ ನಿರ್ವಹಣೆ ಹಾಗೂ ರೋಗಪತ್ತೆಗಾಗಿ ಬಳಸುವ ರಾಸಯನಿಕಗಳ ಪೂರೈಕೆ ಹಾಗೂ ಪ್ರಯೋಗಾಲಯದ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಿದ್ದು ಇದರಿಂದ ಆಸ್ಪತ್ರೆಗೆ ಪ್ರತೀ ವರ್ಷ ಐದು ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದ್ದು ಈ ಹೊರೆಯನ್ನು ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಹೊರಿಸಲಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ರೋಗಪತ್ತೆ ಪ್ರಯೋಗಾಲಯದ ನಿರ್ವಹಣೆಯನ್ನು ನೇರವಾಗಿ ಆಸ್ಪತ್ರೆಯ ವತಿಯಿಂದ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ನಕಲಿ ಭೋದನಾ ಪ್ರಮಾಣಪತ್ರ ನೀಡಿದ ವೈದ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಪ್ರಯತ್ನಕ್ಕೆ ತಡೆಹಾಕಿ.ನಕಲಿ ಭೋದನಾ ಪ್ರಮಾಣಪತ್ರದ ಕುರಿತು ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಬೇಕು. ಡಿ.17 ರಂದು ತುರ್ತುಚಿಕಿತ್ಸಾ ಘಟಕದಲ್ಲಿ ಕರ್ತವ್ಯದಲ್ಲಿ ಹಾಜರಿರದೆ ಹೃದಯಾಘಾತಕೀಡಾಗಿದ್ದ ರೋಗಿಯ ಜೀವದೊಂದಿಗೆ ಚೆಲ್ಲಾಟವಾಡಿದ ವೈದ್ಯರನ್ನು ಅಮಾನತ್ತುಪಡಿಸಿ ಅಗತ್ಯ ತನಿಖೆಗೆ ಆದೇಶಿಸಬೇಕು. ನಿಯಮ ಮೀರಿ ತಮ್ಮ ಹೆಸರಿನಲ್ಲಿ ಕ್ಲಿನಿಕ್ ನರ್ಸಿಂಗ್ ಹೋಂ ನಡೆಸುತ್ತಿರುವ ಮಿಮ್ಸ್ ವೈದ್ಯರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕರ್ನಾಟಕ ರಾಷ್ಟ್ರ ಸಮಿತಿಯ ಅರುಣ್ ಮಲ್ಲೇಗೌಡ, ಕೀಲಾರ ಚಂದ್ರು, ಕೂಳಗೆರೆ ಮಹೇಶ್, ರಮೇಶ್‌ಗೌಡ, ಚಂದ್ರು, ಚಂದ್ರು, ಮಾಕವಳ್ಳಿ ಕುಮಾರಸ್ವಾಮಿ, ಶೇಖರ, ಮಲ್ಲೇಶ್ ಹೆಬ್ಬಕವಾಡಿ ಭಾಗವಹಿಸಿದ್ದರು.
Mandya
ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರತಿಯೊಬ್ಬರು ಟೊಂಕಕಟ್ಟಿ ನಿಲ್ಲಬೇಕು: ಕೆ.ಎನ್.ನಂಜುಂಡಯ್ಯ
ಮದ್ದೂರು: ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರತಿಯೊಬ್ಬರು ಟೊಂಕಕಟ್ಟಿ ನಿಲ್ಲಬೇಕು ಎಂದು ಶ್ರೀ ನಂಜುಂಡೇಶ್ವರ ಸೇವಾಭಿವೃದ್ಧಿ ಟ್ರಸ್ಟ್ ಧರ್ಮದರ್ಶಿ ಕೆ.ಎನ್.ನಂಜುಂಡಯ್ಯ ಮನವಿ ಮಾಡಿದರು.
ತಾಲೂಕಿನ ಕೀಳಘಟ್ಟ ಗ್ರಾಮದಲ್ಲಿ ಸೋಮವಾರ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯ, ಶ್ರೀ ನಂಜುಂಡೇಶ್ವರಸ್ವಾಮಿ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀ ನಂಜುಂಡೇಶ್ವರ ಸ್ವಾಮಿ ಶೈಕ್ಷಣಿಕ ದತ್ತಿನಿಧಿ ವತಿಯಿಂದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಪ್ರಧಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ಬೇಸರ ತಂದಿದೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ದಾಖಲಾತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವ್ಯಕ್ತಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಿಗಿರುವ ಕೀಳಿರಮೆ ದೂರವಾಗಬೇಕು. ಸರ್ಕಾರಿ ಶಾಲೆಗಳು ಉಳಿಯ ಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿಬೇಕು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಶ್ರೀ ನಂಜುಂಡೇಶ್ವರ ಸ್ವಾಮಿ ಶೈಕ್ಷಣಿಕ ದತ್ತಿನಿಧಿ ವತಿಯಿಂದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದರು.

ನಗದು ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಪ್ರಪಂಚದಲ್ಲಿ ವಿದ್ಯೆಗೆ ಅಪಾರವಾದ ಗೌರವವಿದೆ ಹಾಗೂ ಶಕ್ತಿಯಿದೆ. ವಿದ್ಯೆಯನ್ನು ಯಾರು ಕದಿಯಲು ಸಾಧ್ಯವಿಲ್ಲ ಇದನ್ನರಿತು ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಉದ್ದೇಶದಿಂದ ಶ್ರೀ ನಂಜುಂಡೇಶ್ವರ ಸ್ವಾಮಿ ಶೈಕ್ಷಣಿಕ ದತ್ತಿನಿಧಿ ವತಿಯಿಂದ ವಿದ್ಯಾಥರ್ಿಗಳಿಗೆ ನಗದು ಪ್ರದಾನ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿರುವುದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹೆಚ್ಚು ಅಂಕಗಳಿಸಿದ ಕೊಕ್ಕರೆ ಬೆಳ್ಳೂರು, ಬೆಸಗರಹಳ್ಳಿ, ಚಿಕ್ಕಂಕನಹಳ್ಳಿ ಮದ್ದೂರು ಹಾಗೂ ಕೊಪ್ಪ ಸರ್ಕಾರಿ ಶಾಲಾ, ಕಾಲೇಜು ಗಣ್ಯರು ಅಭಿನಂದಿಸಿ ನಗದು ಪುರಸ್ಕಾರ ನೀಡಿದರು.
ವಿಶೇಷ ಪೂಜೆ: ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೈದ್ಯನಾಥಪುರ ಗ್ರಾಮದ ಶ್ರೀ ಶಾಂತೇಶ್ವರ ಕದಂಬ ಜಂಗಮ ಮಠದ ಶ್ರೀ ರೇಣುಕಾ ಶಿವಚಾಯ ಸ್ವಾಮಿಜಿ ವಹಿಸಿ ಮಾತನಾಡಿದರು.
ಬೇವೂರು ಮಠದ ಶ್ರೀ ಮಲ್ಲಿಕಾರ್ಜುನ ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಜಿ, ಸಹ ಪ್ರಾಧ್ಯಾಪಕ ಎಂ.ಮಾದೇಗೌಡ, ಶ್ರೀ ನಂದಿ ಬಸವೇಶ್ವರ ದೇಗುಲದ ಪ್ರಧಾನ ಅರ್ಚಕ ಕಲ್ಲೇಶ್ ಕುಮಾರ್, ಶ್ರೀ ನಂಜುಂಡೇಶ್ವರಸ್ವಾಮಿ ಸೇವಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳಾದ ಎಸ್. ಎಂ.ಗಿರೀಶ್, ಅಣ್ಣೆದೊಡ್ಡಿ ನಂದೀಶ್, ಎ.ಎನ್.ರವಿ, ಮುಖಂಡ ಎಸ್.ಎಂ.ಸಂತೋಷ್, ಕೀಳಘಟ್ಟ ಗ್ರಾಮಸ್ಥರು ಹಾಜರಿದ್ದರು.
Mandya
ದೌರ್ಜನ್ಯ ಪ್ರಕರಣಗಳು, ಅಸ್ಪೃಶ್ಯತೆ ಯನ್ನು ಜಿಲ್ಲೆಯಿಂದ ಮುಕ್ತ ಗೊಳಿಸಿ.: ಡಾ.ಎಲ್. ಮೂರ್ತಿ
ಮಂಡ್ಯ : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರಕರಣಗಳ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು. ದೌರ್ಜನ್ಯ ಪ್ರಕರಣಗಳು ಮತ್ತು ಅಸ್ಪೃಶ್ಯತೆ ಆಚರಣೆಯ ಸಾಮಾಜಿಕ ಧೋರಣೆಯನ್ನು ತೊಲಗಿಸಬೇಕು ಎಂದು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷರಾದ ಡಾ. ಮೂರ್ತಿ .ಎಲ್ ರವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಸಭೆಯಲ್ಲಿ ಮಾತನಾಡಿ ಅವರು, ಜಿಲ್ಲೆಯಲ್ಲಿ 46 ರಿಂದ 47 ದೌರ್ಜನ್ಯ ಪ್ರಕರಣಗಳು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ದಾಖಲಾಗಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಾನೂನಾತ್ಮಕ ದೌರ್ಜನ್ಯ ಪ್ರಕರಣಗಳ ಗಂಭೀರ ತೊಡಕುಗಳನ್ನು ಬಗೆಹರಿಸಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳು ಮತ್ತು ನಗರಸಭೆಯ ಗಂಭೀರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಪರಿಶೀಲಿಸಬೇಕು. ಎಂದು ಹೇಳಿದರು.
ರಾಜ್ಯದಲ್ಲಿ 10 ಜಿಲ್ಲೆಗಳ ಪ್ರವಾಸ ಮಾಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾದ ಕ್ರಮವಹಿಸುವಂತೆ ಸೂಚಿಸಿದ್ದಾರೆ.

ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದನೆ ಬಹಳ ಮುಖ್ಯ.ಜಿಲ್ಲೆಯು ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಶ್ರದ್ದೆ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಅರಣ್ಯ ಪ್ರದೇಶದಲ್ಲಿ ವಾಸಿಸಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಪರಿಹರಿಸಬೇಕು
ಜಿಲ್ಲೆಯಲ್ಲಿ ಜಮೀನು ವಿಚಾರವಾಗಿ ದಾರಿ,ಸ್ಮಶಾನ, ಸರ್ವೆ ದುರಸ್ತಿ,ಪ್ರಕರಣಗಳನ್ನು ಶೀಘ್ರವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ಮಾರ್ಚ್ 7 ರಂದು* ಜಿಲ್ಲಾಡಳಿತ ವತಿಯಿಂದ “ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಮತ್ತು ಅಸ್ಪೃಶ್ಯತಾ ನಿವಾರಣಾ ಕಾಯ್ದೆ ” ಯ ಅರಿವು ಕಾರ್ಯಾಗಾರವನ್ನು ನಗರದ ಡಾ.ಬಿಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಸಮಾಜದ ಎಲ್ಲಾ ವರ್ಗದವರು ಮತ್ತು ಮುಖಂಡರುಗಳು ಕಾರ್ಯಗಾರವನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಸ್ಪೃಶ್ಯತೆ ಆಚರಣೆಯು ಸಮಾಜಕ್ಕೆ ಕಳಂಕವಾಗಿದೆ. ಎಲ್ಲಾ ಮುಖಂಡರುಗಳು ಮತ್ತು ಸಾರ್ವಜನಿಕರು ಅಸ್ಪೃಶ್ಯತೆ ನಿವಾರಣಾ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಲ್ಲರೂ ಕಾರ್ಯಕ್ರಮದ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಹವಾಲು ಸ್ವೀಕಾರ
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಸಭೆಯಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಘಟನೆಗಳ ಅಹವಾಲು ಸ್ವೀಕರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಕಾವ್ಯ, ಪೊಲೀಸ್ ಅಧಿಕ್ಷಕರು ಗಂಗಾಧರ್ ಸ್ವಾಮಿ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಉಪಾಧ್ಯಕ್ಷರು ವಿಜಯಲಕ್ಷ್ಮಿ, ಮೂಡ ಅಧ್ಯಕ್ಷರು ಬಿ.ಪಿ.ಪ್ರಕಾಶ್ ರವರು ಉಪಸ್ಥಿತರಿದ್ದರು.
Mandya
ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ : ಪರಿಶೀಲನೆ
ಮಂಡ್ಯ: ನಗರದ ನ್ಯಾಯಾಲಯಕ್ಕೆ ಸೋಮವಾರ ಬೆಳಿಗ್ಗೆ 11.30ಗಂಟೆಯ ವೇಳೆಗೆ ಬಾಂಬ್ ಬೆದರಿಕೆಯೊಂದು ಬಂದ ಹಿನ್ನೆಲೆಯಲ್ಲಿ ವಕೀಲರು ಹಾಗೂ ಕಕ್ಷಿದಾರರು ಕೆಲ ಕಾಲ ನ್ಯಾಯಾಲಯದ ಹೊರಗೆ ಬಂದು ಕಲಾಪದಿಂದ ದೂರ ಉಳಿದು ಆತಂಕಗೊಂಡ ಘಟನೆ ನಡೆದಿದೆ.
ಬಾಂಬ್ ಬೆದರಿಕೆಯಿಂದ ಸ್ಥಳದಲ್ಲಿದ್ದ ನೂರಾರು ವಕೀಲರು ಹಾಗೂ ಕಕ್ಷೀದಾರರದಲ್ಲಿ ಆತಂಕ ಮನೆ ಮಾಡಿತ್ತಲ್ಲದೆ, ಜೀವ ಭಯದಲ್ಲಿ ಓಡ ತೊಡಗುವಂತಾಯಿತು.

ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಇಮೇಲ್ ಸಂದೇಶ ಬಂದಿದ್ದು, ತಕ್ಷಣ ಮಾಹಿತಿ ತಿಳಿದ ಎಸ್ಪಿ ಶೋಭಾರಾಣಿ, ಸ್ಥಳೀಯ ಶ್ವಾನದಳ, ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಭಾವಿಸಿ ಪರಿಶೀಲನೆ ನಡೆಸಿದ್ದಾರೆ.
-
Kodagu17 hours agoಫೆ.28 ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ| ಸುಗಮ, ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ: ಎಸ್.ಜೆ.ಸೋಮಶೇಖರ್
-
Hassan18 hours agoಹಾಸನದಲ್ಲಿ ಜೊಮ್ಯಾಟೋ ರೈಡರ್ಗಳ ಮುಷ್ಕರ ಎಂಟನೇ ದಿನಕ್ಕೆ; ಬೇಡಿಕೆಗಳಿಗೆ ಸ್ಪಂದನೆ ಇಲ್ಲದೆ ಸೇವೆ ವ್ಯತ್ಯಯ
-
Kodagu22 hours agoಮಾ. 2 ರಂದು ಪಾಡಿಯಲ್ಲಿ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ
-
Hassan14 hours agoಸ್ಕೂಟಿ-ಬೈಕ್ ಮುಖಾಮುಖಿ ಡಿಕ್ಕಿ : ಇಬ್ಬರು ಯುವಕರು ಸಾ*ವು
-
Hassan21 hours agoಖಾಸಗಿ ಶಾಲಾ ಬಸ್ ಒಂದು ಕೆರೆಯ ಏರಿಯ ಮೇಲೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ : ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ
-
Kodagu16 hours agoಹಿಂದುಳಿದ ಮೋರ್ಚಾದ ಅಧ್ಯಕ್ಷರಾಗಿ ಕೋಲೆಯಂಡ ಗಿರೀಶ್ ಆಯ್ಕೆ
-
Manglore15 hours agoಎಸ್ಸಿಡಿಸಿಸಿ ಬ್ಯಾಂಕ್ನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಯುಪಿಐ & ಐಎಂಪಿಎಸ್ ಆರಂಭ
-
Mysore14 hours agoವಿದ್ಯುತ್ ಇಲ್ಲದೆ ಒಣಗಿದ ಬೆಳೆ: ರೈತನ ಪ್ರಶ್ನೆಗೆ ಸೆಸ್ಕ್ ಅಧಿಕಾರಿಗಳು ಕಕ್ಕಾಬಿಕ್ಕಿ
