Connect with us

Mandya

ಮಾ.25 ರಂದು ನೇರಲಕೆರೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಬೌದ್ಧ ಸಮ್ಮೇಳನ

Published

on

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಹೋಬಳಿಯ ನೇರಲಕೆರೆ ಗ್ರಾಮದಲ್ಲಿ ಬುದ್ಧ ಭಾರತ ಪೌಂಢೇಷನ್ ಸಹಯೋಗದಲ್ಲಿ ಮಾ.25 ಸಂಜೆ 6 ಗಂಟೆಗೆ ಬುದ್ಧ ಬೆಳದಿಂಗಳು ಮತ್ತು ಜಿಲ್ಲಾ ಮಟ್ಟದ ಪ್ರಥಮ ಬೌದ್ಧ ಸಮ್ಮೇಳನ ನಡೆಯಲಿದೆ ಎಂದು ಪೌಂಡೇಷನ್‌ ಅಧ್ಯಕ್ಷ ಜೆ.ರಾಮಯ್ಯ ಹೇಳಿದರು.

ಗೌತಮ ಬುದ್ಧರು 2567 ವರ್ಷಗಳ ಹಿಂದೆ ಜನ್ಮ ತಾಳಿ ಮಾನವ ಕುಲಕ್ಕೆ ಶಾಂತಿ, ಸಹನೆ, ಸಹಬಾಳ್ವೆ, ಪ್ರೀತಿ, ಮಮತೆ ತುಂಬಿದ ಬದುಕು ನಡೆಸುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟಿರುತ್ತಾರೆ. ಈ ಸಂಬಂಧ ನಮ್ಮ ಬುದ್ಧ ಭಾರತ ಫೌಂಡೇಷನ್ ಕಳೆದ 10 ವರ್ಷಗಳಿಂದ ಬುದ್ಧ ಮತ್ತು ಆತನ ಧಮ್ಮದ ಕುರಿತು ಹಲವಾರು ವಿಚಾರ ಸಂಕಿರಣಗಳು, ಜಾಗೃತಿ ಕಾರ್ಯಕ್ರಮ ಇತ್ಯಾದಿಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ನೇರಲಕೆರೆಯಲ್ಲಿ ಈಗಾಗಲೇ ಡಾ.ಬಿ.ಆರ್.ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ವಿಶ್ವಮಾನವ ಅಧ್ಯಯನ ಕೇಂದ್ರ ದಾರ್ಶನಿಕರ ಹೆಸರಿನಲ್ಲಿ ಸತ್ಯ ಶೋಧಕ ಭವನ ಹಾಗೂ ಆಸ್ಪತ್ರೆ, ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ, ಸಾರ್ವಜನಿಕ ಜನಸೇವಾ ಕೇಂದ್ರ, ಇತ್ಯಾದಿಗಳನ್ನು ಕಟ್ಟಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ಪ್ರಥಮ ಬುದ್ಧ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮಾ.10 ರಂದು ಜಿಲ್ಲಾಡಳಿತ ವತಿಯಿಂದ ಪಂಚಶೀಲ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.25 ಸಂಜೆ 6 ಗಂಟೆಗೆ ನಾಡಿನ ಹೆಸರಾಂತ ಗಾಯಕ ಸ್ವಾಮಿ ಗಾಮನಹಳ್ಳಿ ಹಾಗೂ ತಂಡದವರಿಂದ ಸುಗಮ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಇರುತ್ತದೆ. ರಾತ್ರಿ ತಂಗಲು ಸುಮಾರು 500 ಜನರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಸುಮಾರು 10 ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.

ಪೌಂಢೇಷನ್‌ನ ಗಾಮನಹಳ್ಳಿ ಸ್ವಾಮಿ, ಆಶಾ, ಅಭಿಗೌಡ, ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ, ಕುಮಾರ್ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಶ್ರೀರಂಗಪಟ್ಟಣದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ

Published

on

ಶ್ರೀರಂಗಪಟ್ಟಣ : ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಜಾಗರೂಕರಾಗಬೇಕು ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದರೆ ತಕ್ಷಣವೇ ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ, ಸಲಹೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎಂ ಸವಿತಾ ಸಲಹೆ ನೀಡಿದರು.

ಪಟ್ಟಣದ ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮಹಿಳೆಯರ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ತನ ಕ್ಯಾನ್ಸರ್, ಗರ್ಭಕೋಶದ, ಗರ್ಭ ಕಂಠದ ಕ್ಯಾನ್ಸರ್, ರಕ್ತದೊತ್ತಡ, ಹೃದಯಿ ಸಂಬಂಧಿ ಕಾಯಿಲೆ, ಮಧುಮೇಹ, ರಕ್ತ ಹೀನತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇವುಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಲು ಆರೋಗ್ಯ ತಪಾಸಣೆ ಅಗತ್ಯ ಎಂದರು. ಆಧುನಿಕ ಜೀವನ ಶೈಲಿಯಿಂದಾಗಿ ಕ್ಯಾನ್ಸರ್ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ. ಹಾಗಾಗಿ ಮಹಿಳೆಯರು ಕೊಂಚ ಮುಂಜಾಗ್ರತೆ ವಹಿಸಿದರೆ ಮರಣಾಂತಿಕ ಕ್ಯಾನ್ಸರ್ ನಂತಹ ಕಾಯಿಲೆಯಿಂದ ಪಾರಾಗಬಹುದಾಗಿದೆ.


ಇವುಗಳನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಸೇವನೆ, ಜಂಕ್ ಫುಡ್ ತ್ಯಜಿಸುವುದು, ಸದಾ ದೈಹಿಕ ಚಟುವಟಿಕೆಯಿಂದ ಇರುವುದು. ದಿನ ನಿತ್ಯ ವ್ಯಾಯಾಮ, ಯೋಗ, ಧ್ಯಾನ ಮುಂತಾದ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರು ಮಾತನಾಡಿ, ಎಚ್ಐವಿ, ಏಡ್ಸ್ ಕಾಯಿಲೆ ಕುರಿತು ಸಮಗ್ರ ಮಾಹಿತಿ ನೀಡಿದರು. ಇದೆ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. 5 ವರ್ಷದ ವರೆಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ಸಹಕಾರ ನೀಡಬೇಕೆಂದು ಕೋರಿದರು.

ಕಾರ್ಯಕ್ರಮದಲ್ಲಿ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ಕಮಲ, ಕಾಮಧೇನು ಶ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಉಪಾಧ್ಯಕ್ಷೆ ಸರಸ್ವತಿ ಎನ್, ಪ್ರಮುಖರಾದ ನಳಿನಿ, ಗಾಯತ್ರಿ ಸೇರಿದಂತೆ ರಂಗನಾಯಕಿ ಸಮಾಜದ ಸದಸ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

Continue Reading

Mandya

ಎಳ್ಳಿನ ಅಮಾವಾಸ್ಯೆ ಅಂಗವಾಗಿ ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ

Published

on

ಮದ್ದೂರು: ಎಳ್ಳಿನ ಅಮಾವಾಸ್ಯೆ ಅಂಗವಾಗಿ ನಗರ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದ ಸಂಜೆವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ನಗರದ ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀ ಮದ್ದೂರಮ್ಮ, ಶ್ರೀ ಉಗ್ರ ನರಸಿಂಹ ಸ್ವಾಮಿ, ಶ್ರೀ ಹೊಳೆ ಆಂಜನೇಯ ಸ್ವಾಮಿ, ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ಹಾಗೂ ತಾಲೂಕಿನ ಚಿಕ್ಕ ಅಂಕನಹಳ್ಳಿಯ ಶ್ರೀ ನಂದಿ ಬಸವೇಶ್ವರ ಸ್ವಾಮಿ, ವೈದ್ಯನಾಥಪುರ ಗ್ರಾಮದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ಭಕ್ತಾದಿಗಳು ಮುಂಜಾನೆಯಿಂದಲೇ ದೇಗುಲಕ್ಕೆ ಆಗಮಿಸಿ ದೇವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಗವಂತನ ಕೃಪೆಗೆ ಪಾತ್ರರಾದರು.

Continue Reading

Mandya

ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಸುವಂತೆ ಒತ್ತಾಯಿಸಿದ ವಿ.ಸಿ.ಉಮಾಶಂಕರ

Published

on

ಮದ್ದೂರು:  ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಗಳನ್ನು ಮಾತೃಭಾಷೆ ಕನ್ನಡದಲ್ಲಿ ಬರೆಸುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಒತ್ತಾಯಿಸಿದರು.

ರೈಲ್ವೆ ಇಲಾಖೆಯ ಪದನ್ನೋತಿ ಪರಿಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯುವಂತೆ ನೈರುತ್ಯ ರೈಲ್ವೆ ಇಲಾಖೆ ಅಧಿಸೂಚನೆ ಹೊರಡಿಸಿರುವುದು ಖಂಡನೀಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದಲ್ಲಿ ತ್ರಿಭಾಷೆಯಲ್ಲಿ ಪರೀಕ್ಷೆ ಬರೆಯುವಂತೆ ಅಧಿಸೂಚನೆ ಹೊರಡಿಸಿರುವ ರೈಲ್ವೆ ಇಲಾಖೆ, ಬೆಂಗಳೂರಿನಲ್ಲಿ ಮಾತ್ರ ದ್ವಿಭಾಷೆಯಲ್ಲಿ ಪರೀಕ್ಷೆ ಬರೆಯುವಂತೆ ಅಧಿಸೂಚನೆ ಹೊರಡಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ ಎಂದರು.

ಈ ಹಿಂದೆ ಲಾಲೂ ಪ್ರಸಾದ್ ಯಾದವ್ ರೈಲ್ವೆ ಕೇಂದ್ರ ಸಚಿವರಾಗಿದ್ದಾಗ ದ್ವೀ ಬಾಷ ಭಾಷೆಯಲ್ಲಿ ಪರೀಕ್ಷೆ ಬರೆಯುವಂತೆ ಆದೇಶ ಹೊರಡಿಸಿದಾಗ ಕನ್ನಡ ಪರ ಸಂಘಟನೆಗಳ ಬೃಹತ್ ಪ್ರತಿಭಟನೆ ಮತ್ತು ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ತ್ರಿಬಾಷೆ ಯಲ್ಲಿ ಪರೀಕ್ಷೆಯಂತೆ ಅಧಿಸೂಚನೆ ಹೊರಡಿಸಿದಾಗ 4700 ರೈಲ್ವೆ ಇಲಾಖೆಯ ಉದ್ಯೋಗದಲ್ಲಿ ಕನ್ನಡಿಗರ ಪಾಲಿಗೆ 3800 ಲಭಿಸುವಲ್ಲಿ ಯಶಸ್ವಿಯಾಯಿತು. ಆದರೆ ಇದೀಗ ಅನ್ಯ ಭಾಷೆಯ ರೈಲ್ವೆ ಇಲಾಖೆಯ ಮುಖ್ಯ ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಯುವ ನೈರುತ್ಯ ರೈಲ್ವೆ ಇಲಾಖೆಯ ಅಧಿಸೂಚನೆಯಲ್ಲಿ ಉತ್ತರ ಭಾರತದ ಅಭ್ಯರ್ಥಿಗಳಿಗೆ  ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿ ಉದ್ಯೋಗಾವಕಾಶ ಕೊಡಲು ಹುನ್ನಾರ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.

ಆದ್ದರಿಂದ ಈ ಕೂಡಲೇ ಕೇಂದ್ರ ರೈಲ್ವೆ ಸಚಿವರು ಮತ್ತು ರಾಜ್ಯ ರೈಲ್ವೆ ಸಚಿ ವಿ.ಸೋಮಣ್ಣ ಅನ್ಯಭಾಷಿಕ ಮುಖ್ಯ ರೈಲ್ವೆ ಅಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವಂತೆ ಅನುಕೂಲ ಕಲ್ಪಿಸುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಒತ್ತಾಯಿಸುತ್ತದೆ ಎಂದು ತಿಳಿಸಿದರು.

 

ವೇದಿಕೆ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಉಮೇಶ್, ಯುವ ಘಟಕದ ಅಧ್ಯಕ್ಷ ವಳಗೆರೆಹಳ್ಳಿ ವಿಶ್ವಾಸ್, ಸಂಘಟನಾ ಕಾರ್ಯದರ್ಶಿ ವಿ.ಆರ್.ಸತೀಶ್, ರೈತ ಮುಖಂಡ ಸೊ.ಸಿ.ಪ್ರಕಾಶ್, ಮುಖಂಡರಾದ ಬ್ಯಾಂಕ್ ಚಿಕ್ಕಣ್ಣ, ವಿ.ಎಚ್.ಶಿವಲಿಂಗಯ್ಯ, ಪ್ರಭಾಕರ್ ಇದ್ದರು.

Continue Reading

Trending

error: Content is protected !!