Connect with us

Hassan

ಮಾ.೧ ರಂದು ಹಾಸನಕ್ಕೆ ಸಿಎಂ ಸಿದ್ದರಾಮಯ್ಯ, ಸಜ್ಜಾಗಿರುವ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ: ಡಿಸಿ ಸತ್ಯಭಾಮ

Published

on

ಹಾಸನ: ನಗರಕ್ಕೆ ಮಾರ್ಚ್ ೧ ರಂದು ಶುಕ್ರವಾರದಂದು ಬೆಳಿಗ್ಗೆ ೧೧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವರಣಕ್ಕೆ ಆಗಮಿಸುತ್ತಿದ್ದು, ಜಿಲ್ಲೆಯಲ್ಲಿ ಉದ್ಘಾಟನೆಗೆ ಸಜ್ಜು ಆಗಿರುವ ೧೦೧ ಕೋಟಿ ೬೩ ಲಕ್ಷ ವೆಚ್ಚದ ಕಾಮಗಾರಿಯನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಇದೆ ಶುಕ್ರವಾರದಂದು ನಡೆಯುವ ಫಲಾನುಭವಿಗಳ ಸಮಾವೇಶದಲ್ಲಿ ೧೨೪೩ ಕೋಟಿ ೩೫ ಲಕ್ಷ ಮೊತ್ತದ ಶಂಕು ಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಜೊತೆಯಲ್ಲಿ ಫಲಾನುಭವಿಗಳ ಸಮಾವೇಶ ನಡೆಯಲಿದ್ದು, ೫ ಗ್ಯಾರಂಟಿ ಸಾರ್ವಜನಿಕರ ಕುರಿತು ಉದ್ದೇಶಿಸಿ ಸಭೆ ನಡೆಸಲಿದ್ದಾರೆ. ಸರಕಾರದಿಂದ ಬಂದಿರುವ ಯೋಜನೆಗಳನ್ನು ವಿತರಣೆ ಮಾಡಲಿದ್ದಾರೆ ಎಂದರು. ಈ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರುಗಳು ಪಾಲ್ಗೊಳಲ್ಲಿದ್ದಾರೆ. ಜಿಲ್ಲಾಯಾಧ್ಯಂತ ಜನರನ್ನು ಕರೆದುಕೊಂಡು ಬರಲು ೭೦೦ ಬಸ್ ಗಳ ವ್ಯವಸ್ಥೆಯನ್ನು ಸರಕಾರದವತಿಯಿಂದಲೇ ಮಾಡಲಾಗಿದೆ. ೮ ತಾಲೂಕುಗಳಿಂದ ಸುಮಾರು ೪೦- ೫೦ ಸಾವಿರ ಜನರು ಸಮಾವೇಶದಲ್ಲಿ ಫಲಾನುಭವಿಗಳು ಭಾಗವಹಿಸುವುದಾಗಿ ತಿಳಿದು ಬಂದಿದೆ. ಉದ್ಘಾಟನೆ ಆಗಿರುವ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಮರ್ಪಣೆ ಮಾಡಲಾಗುತ್ತದೆ. ತಹಶೀಲ್ದಾರರು ಮತ್ತು ತಾಪಂ ಇಒ ಗಳಿಗೆ ಸಾರ್ವಜನಿಕರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದರು. ಇನ್ನು ಭಾಗವಹಿಸುವ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಇದೆ ವೇಳೆ ಜಿಲ್ಲಾ ಪಂಚಾಯತ್ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಶಾಂತಲಾ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಸತ್ಯಮಂಗಲದಲ್ಲಿ ಸಸಿ ನೆಡುವ ಮೂಲಕ ಜಾಗೃತಿ

Published

on

ಹಾಸನ : ನಗರದ ಸತ್ಯಮಂಗಲ ೬೦ ಅಡಿ ರಸ್ತೆಯ ಬದಿಯಲ್ಲಿ ನೂರಾರು ಸಸಿ ನೆಡುವ ಮೂಲಕ ಪರಿಸರ ಜಾಗ್ರತಿ ಕಾರ್ಯವನ್ನು ಹಲವು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಭಾನುವಾರದಂದು ಬೆಳಿಗ್ಗೆ ಯಶಸ್ವಿಯಾಗಿ ನಡೆಸಲಾಯಿತು.

ಸತ್ಯಮಂಗಲ ಬಡಾವಣೆಯ ಸನ್ ರೈಸ್ ಏಕೋ ಕ್ಲಬ್ ಸಂಸ್ಥೆ, ಕೆಂಪೇಗೌಡ ನಗರ ಕ್ಷೇಮಾಭಿರುದ್ದಿ ಸಂಘ, ಶ್ರೀ ಲಕ್ಷ್ಮಿ ನಾರಾಯಣ ಕ್ಷೇಮಾಭಿರುದ್ದಿ ಸಂಘದ ಆಶ್ರಯದಲ್ಲಿ ಸ್ಥಳೀಯ ನಾಗರಿಕರು, ಸಂಘ ಸಂಸ್ಥೆಯ ಸದಸ್ಯರ ಒಳಗೊಂಡ ತಂಡವು ಬೆಳಿಗ್ಗೆ ೨೫೦ ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮಿ ಕಾರ್ಯವನ್ನು ಮಾಡಿದರು.

 

ಈ ಕುರಿತು ಸನ್ ರೈಸ್ ಏಕೋ ಕ್ಲಬ್ ನ ಅಧ್ಯಕ್ಷರಾದ ಇಂದ್ರಕುಮಾರ್ ಮಾತನಾಡಿ, ಪರಿಸರ ಸಮರಕ್ಷಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಕೊಡುಗೆಯಾಗಿ ನೀಡಿದ್ದ ೨೫೦ ಕ್ಕೂ ಹೆಚ್ಚು ಸಸಿಗಳನ್ನು ಹಾಸನ ಪಬ್ಲಿಕ್ ಶಾಲೆಯಿಂದ ಸತ್ಯ ಮಂಗಲ ಮುಖ್ಯ ರಸ್ತೆಯ ಕೊನೆಯವರೆಗೂ ನಡೆಲಾಗಿದೆ ಜೊತೆಗೆ ಹಾಸನ್ ಪಬ್ಲಿಕ್ ಶಾಲೆಯ ಪಕ್ಕದಲ್ಲಿ ಉದ್ಯಾನವನ ನಿರ್ಮಾಣ ಮಾಡುತ್ತಿದ್ದು ಅಲ್ಲಿ ಪಕ್ಷಿಗಳಿಗೆ ಅನುಕೂಲವಾಗಲಿ ಎಂದು ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ ಎಂದರು.

ಇದೆ ವೇಳೆ ಕೆಂಪೇಗೌಡ ನಗರ ಕ್ಷೇಮಾಭಿರುದ್ದಿ ಸಂಘದ ಅಧ್ಯಕ್ಷ ಸುಧೀರ್ ಕೃಷ್ಣ ಹಾಗೂ ಶ್ರೀ ಲಕ್ಷ್ಮಿ ನಾರಾಯಣ ಕ್ಷೇಮಾಭಿರುದ್ದಿ ಸಂಘದ ಅಧ್ಯಕ್ಷ ವಿಶ್ವನಾಥ್ ಇತರರು ಉಪಸ್ಥಿತರಿದ್ದರು.

Continue Reading

Hassan

ಕ್ರೀಡಾಕೂಟದಿಂದ ಆರೋಗ್ಯ ವೃದ್ಧಿ, ಮಾನಸಿಕ ನೆಮ್ಮದಿ ಸಿಗುತ್ತದೆ ಎಸ್ಪಿ ಮಹಮ್ಮದ್ ಸುಜೀತಾ

Published

on

ಹಾಸನ: ಯಾವಾಗಲು ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಇಂತಹ ಕ್ರೀಡಾಕೂಟದಿಂದ ಆರೋಗ್ಯವನ್ನು ಸಮತೋಲನದಲ್ಲಿ ಇಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ ತಿಳಿಸಿದರು.

ನಗರದ ಸರಕರಿ ಕಲಾ ಕಾಲೇಜು ಮೈದಾನದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ಕೆ.ಹೆಚ್. ವೇಣುಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನು ಕ್ರಿಕೆಟ್ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,ಇಲ್ಲಿನ ಪತ್ರಕರ್ತರಲ್ಲಿ ಒಗ್ಗಟ್ಟಿದ್ದು, ಇಷ್ಟೊಂದು ಜನ ಪತ್ರಕರ್ತರು ಕ್ರೀಡಾಕೂಟಕ್ಕೆ ಆಗಮಿಸಿರುವುದು ನಾನು ಯಾವ ಜಿಲ್ಲೆಯಲ್ಲೂ ನೋಡಿರುವುದಿಲ್ಲ. ಇದೆ ರೀತಿ ಕ್ರೀಡಾಕೂಟ ಆಗಾಗ್ಗೆ ಹಮ್ಮಿಕೊಳ್ಳುವ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದು. ಒಂದು ಕಾರ್ಯಕ್ರಮ ನಡೆಸುವುದು ಸುಲಭದ ಕೆಲಸವಲ್ಲ ಯಾವಾಗಲು ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ವರ್ಷಕ್ಕೊಮ್ಮೆಯಾದರೂ ಎಲ್ಲಾರೂ ಒಟ್ಟಾಗಿ ಸೇರಿರುವುದು ನಮಗೆ ಸಂತೋಷ ತಂದಿದೆ. ನಿಮ್ಮ ಈ ಕ್ರೀಡಾಕೂಠ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಪೂರ್ಣಿಮಾ ಅವರು ಮಾತನಾಡಿ, ಪತ್ರಕರ್ತರು, ದೃಶ್ಯಮಾಧ್ಯಮ ಇರಬಹುದು ಸಮಾಜದಲ್ಲಿ ಕಂಡು ಬರುವ ತಪ್ಪುಗಳನ್ನು ಬರವಣಿಗೆ ಮೂಲಕ ತಿದ್ದಿ ನಮ್ಮ ಸರಕಾರ, ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಇದರಿಂದಲೇ ನಾವುಗಳು ಕೂಡ ನಮ್ಮ ತಾಲೂಕು ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಿಸಲಾಗುತ್ತಿದೆ ಎಂದರು. ನಾನು ಗಮನಿಸಿದಂತೆ ಈ ಮೂರು ತಿಂಗಳ ಕಾಲ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇದ್ದು, ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ನಮಗಿಂತ ಮೊದಲೇ ಮಾಧ್ಯಮದ ಮೂಲಕ ನಮ್ಮ ಗಮನಕ್ಕೆ ಬರುತ್ತದೆ. ೧೧೦ ಗ್ರಾಂಗಳಲ್ಲಿ ನೀರಿನ ಸಮಸ್ಯೆಯನ್ನು ಯಾವುದೇ ತೊಂದರೆ ಇಲ್ಲದೇ ನೀವು ಕೂಡ ಎಚ್ಚರಿಸಿ ಕೆಲಸ ಮಾಡಿಸಿದ್ದೀರಿ ಎಂದು ಶ್ಲಾಘನೆವ್ಯಕ್ತಪಡಿಸಿದರು. ಈ ಕ್ರೀಡೆ ವರ್ಷಕ್ಕೊಮ್ಮೆ ಆಗದೇ ದಿನದ ಕೆಲ ಸಮಯವನ್ನು ಮೀಸಲಿಡಬೇಕು. ಮೈಸೂರಿನ ಆರ.ಟಿ. ನಗರದಲ್ಲಿ ಪತ್ರಕರ್ತರ ಸಂಘದಿಂದ ಪತ್ರಕರ್ತರಾಗಿ ಎಸ್.ಎಂ. ಕರಷ್ಣ ಕಾಲದಲ್ಲಿ ನಿವೇಶನ ಮಾಡಲಾಗಿದೆ. ಸರಕಾರದವತಿಯಿಂದ ದೊಡ್ಡದಾರ ಲೇಔಟ್ ಆಗುತ್ತಿದ್ದು, ನೀವು ಕೂಡ ಮನವಿ ಕೊಟ್ಟು ಇದರ ಸದುಪಯೋಗ ಇಲ್ಲಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಪತ್ರಕರ್ತರು ಕೆಲಸದ ಜೊತೆಯಲ್ಲಿ ಆರೋಗ್ಯದ ಕಡೆಯೂ ಕೂಡ ಗಮನ ನೀಡುವಂತೆ ತಿಳಿಸಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಅಂದು ಶ್ರವಣಬೆಳಗೊಳದಲ್ಲಿ ಇದ್ದಂತಹ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೊಟ್ಟಂತಹ ಸಲಹೆ ಇವತ್ತು ಕೂಡ ಮುಂದುವರೆದುಕೊಂಡು ಹೋಗುತ್ತಿದೆ. ಜಿಲ್ಲಾ ಸಮ್ಮೇಳದಲ್ಲಿ ಇಡೀ ಕುಟುಂಬ ಒಂದೆಡೆ ಸೇರಿ ಆಚರಿಸಿರುವುದು ಮುಂದುವರೆದಿದೆ. ಇಡೀ ರಾಜ್ಯದಲ್ಲಿ ಮಾಧರಿಯಾಗಿ ಶುರುವಾಗಿದ್ದು ಹಾಸನದಲ್ಲಿ. ಈ ಕ್ರೀಡಾಕೂಟದ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಅನುಕೂಲಕರವಾಗಿದೆ ಎಂದು ಅವರು ಈ ಕ್ರೀಡಾಕೂಟಕ್ಕೆ ಶುಭ ಕೋರಿದರು.

ರಾಜ್ಯ ಪತ್ರಕರ್ತರ ಸಂಘದ ಕಾರ‍್ಯಕಾರಣಿ ಸದಸ್ಯರಾದ ಹೆಚ್.ಬಿ. ಮದನ್ ಗೌಡ ಮಾತನಾಡಿ, ಈ ಹಿಂದೆ ಪತ್ರಿಕಾ ಕ್ರೀಡಾಕೂಟ ಆದ ಕೂಡಲೇ ಪತ್ರಕರ್ತರ ದಿನಾಚರಣೆಯಲ್ಲಿ ಮಾಧ್ಯಮದವರ ಕುಟುಂಬವನ್ನು ಒಂದೆಡೆ ಸೇರಿಸುವ ಕಾರ್ಯಕ್ರಮವನ್ನು ಶಿವಾನಂದ ತಗಡೂರು ಅವರು ಅಂದು ಜಿಲ್ಲೆಯಲ್ಲಿ ಪ್ರಾರಂಭಿಸಿ ಇಂದು ಕೂಡ ಅಧ್ಯಕ್ಷರಾದ ವೇಣುಕುಮಾರ್ ನೇತೃತ್ವದಲ್ಲಿ ಮುಂದುವರೆಸಿಕೊಂಡು ಬರಲಾಗಿದೆ. ಈಲ್ಲೆಯ ಎಲ್ಲಾ ಪತ್ರಕರ್ತರಿಗೆ ಕ್ರೀಡಾಕೂಟದ ಶುಭಾಶಯ ಕೋರುವುದಾಗಿ ಹೇಳಿದರು. ಇಡೀ ರಾಜ್ಯದಲ್ಲಿ ನಮ್ಮ ಪತ್ರಕರ್ತರ ಸಂಘದ ಒಂದೆ ಇದೆ ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ ಎಂದರು.

ರಾಜ್ಯ ಪತ್ರಕರ್ತರ ಸಂಘದ ಕಾರ‍್ಯಕಾರಣಿ ಸದಸ್ಯ ರವಿನಾಕಲಗೂಡು ಮಾತನಾಡಿ, ಪತ್ರಕರ್ತರು ವ್ಯಕ್ತಿಯ ವಿಕಾಸನಕ್ಕೆ ಪೂರಕವಾದ ಕೆಲಸವನ್ನು ಮಾಡುತ್ತಿದ್ದಾರೆ. ಯಾವಾಗಲು ಸುದ್ದಿಯಲ್ಲೆ ಮುಳಗಿರುವ ಪತ್ರಕರ್ತರಿಗೆ ಇಂತಹ ಕ್ರೀಡೆಗಳು ಮಾನಸಿಕ ಸ್ಥೈರ್ಯ ತುಂಬಲಿ ಸಹಕಾರಿಯಾಗಲಿದ್ದು, ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾಂಗ್ರೆಸ್ ಮುಖಂಡರಾದ ಗೌಡಗೆರೆ ಪ್ರಕಾಶ್ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಕ್ಕೆ ನನ್ನನ್ನು ಕರೆಯಿಸಿ ಭಾಗವಹಿಸಿದ್ದೇನೆ. ಈ ಕ್ರೀಡಾಕೂಠ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸರಕಾರಿ ಕಲಾ ಕಾಲೇಜು ಪ್ರಾಂಶುಪಾಲ ಇರ್ಷಾದ್ ಮಾತನಾಡಿ, ನೀವು ನಡೆಸುವ ಪ್ರತಿ ಕ್ರೀಡಾಕೂಟಕ್ಕೆ ನಮಮ್ ಕಾಲೇಜು ಜಾಗ ಕೊಡಲಾಗುವುದು. ನೀವು ಎಲ್ಲಾರು ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತಿದ್ದು, ಎಲ್ಲಾ ಪತ್ರಕರ್ತರು ಮಧುರ ಬಾಂಧವ್ಯದಲ್ಲಿ ಸೇರಿದ್ದು, ನಿಮ್ಮ ಕ್ರೀಡಾಕೂಟಕ್ಕೆ ಶುಭ ಹಾರೈಸುವುದಾಗಿ ಹೇಳಿದರು.

ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ತಮ್ಮ ಅಧ್ಯಕ್ಷತೆ ನುಡಿಯಲ್ಲಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ತುಂಬು ಹೃದಯದಿಂದ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗಾಗಿ ಓಟದ ಸ್ಪರ್ದೆ, ಗುಂಡು ಎಸೆತ, ಕ್ರಿಕೆಟ್ ಪಂದ್ಯಾವಳಿ ಇತರೆ ಆಟೋಟವನ್ನು ಏರ್ಪಡಿಸಲಾಗಿತ್ತು. ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರು ಕ್ರೀಡೆಯಲ್ಲಿ ಪಾಲ್ಗೊಂಡಿದ್ರು.

ಇದೆ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ, ಹಿಮ್ಸ್ ಜಿಲ್ಲಾ ಸರ್ಜನ್ ಲೋಕೇಶ್, ಸರಕಾರಿ ಕಲಾ ಕಾಲೇಜಿನ ಸತ್ಯಮೂರ್ತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ನಿಕಟಪೂರ್ವ ಅಧ್ಯಕ್ಷ ಬಾಳ್ಳುಗೋಪಾಲ್, ಉಪಾಧ್ಯಕ್ಷ ಕೆ.ಎಂ. ಹರೀಶ್, ಪ್ರಧಾನ ಕಾರ್ಯದರ್ಶಿ ಬಿ.ಶಿ. ಶಶಿಧರ್, ನಟರಾಜು, ಕುಮಾರ್, ನಾಗರಾಜ್ ಹೆತ್ತೂರು, ಜಿ. ಪ್ರಕಾಶ್, ಮಂಜುನಾಥ್, ಬೊಮ್ಮೇಗೌಡ, ರಾಷ್ಟ್ರೀಯ ಮಂಡಳಿ ಸದಸ್ಯ ಸುರೇಶ್ ಕುಮಾರ್, ನಿವೃತ್ತ ಪತ್ರಕರ್ತರಾದ ಸೋಮಣ್ಣ ಇತರರು ಉಪಸ್ಥಿತರಿದ್ದರು.

Continue Reading

Hassan

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಎರಿಕೆ ಖಂಡಿಸಿ ಬಿಜೆಪಿಯಿಂದ ಜೂನ್ 17 ರಂದು ಉಗ್ರ ಹೋರಾಟ ಬಿ.ವೈ. ವಿಜಯೇಂದ್ರ ಹೇಳಿಕೆ

Published

on

ಹಾಸನ : ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಎರಿಕೆ ಜೊತೆಗೆ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಮೇಲೆ ಬರೆ ಎಳೆಯಲು ಹೊರಟಿರುವ ರಾಜ್ಯ ಸರಕಾರದ ವಿರುದ್ಧ ನಾವು ಸೋಮವಾರದಿಂದಲೇ ಜಿಲ್ಲಾ ಮಟ್ಟದಲ್ಲಿ ಉಗ್ರವಾದ ಹೋರಾಟ ನಡೆಸಿ ನಂತರ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ಸಭೆ ಮಾಡಿ ನಿರ್ಧರಿಸಲಾಗುವುದು ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ನಗರದ ರಿಂಗ್ ರಸ್ತೆ ಬಳಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷ ಹತಾಷವಾಗಿ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ನೆನ್ನೆ ಯಾರೂ ಕೂಡ ಊಹಿಸದ ರೀತಿಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಬರೆ ಎಳೆಯೊ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಜನರು ಶಾಪಹಾಕುತ್ತಿದ್ದಾರೆ. ಬರಗಾಲದ ಬೇಗೆಯಿಂದ ಇನ್ನೂ ಹೊರ ಬರಲು ಸಾದ್ಯವಾಗಿಲ್ಲ. ಈಗ ಪೆಟ್ರೋಲ್ ಡೀಸೆಲ್ ದರ ಹೆಚ್ಚು ಮಾಡಿದಾರೆ. ಇದರಿಂದ ಸಾಗಣೆ ವೆಚ್ಚ ಜಾಸ್ತಿ ಆಗುತ್ತೆ, ತರಕಾರಿ ಬೆಲೆ ಜಾಸ್ತಿ ಆಗುತ್ತದೆ. ರೈತರಿಗೂ ಅನಾನುಕೂಲ ಆಗಲಿದೆ. ರೈತರ ಪಂಪ್ ಸೆಟ್ ಟ್ರ್ಯಾಕ್ಟರ್ ಬಳಸೋರಿಗೆ ಹೊರೆಯಾಗಲಿದೆ. ಬೆಲೆ ಏರಿಕೆಯಿಂದ ಪ್ರತಿಯೊಬ್ಬರಿಗು ಹೊರೆ ಆಗುತ್ತೆ ಎಂದು ಆಕ್ರೋಶವ್ಯಕ್ತಪಡಿಸಿದರು. ಈ ರೀತಿಯಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊರ್ಳಳುತಿರುವುದರಿಂದ ಈ ಬಗ್ಗೆ ಖಂಡಿಸಲು ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಜೂನ್ ೧೭ ರಂದು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುತ್ತೇವೆ. ಮತ್ತೆ ಏನು ಮಾಡಬೇಕೆಂದು ನಾಳೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ.

ನಿಮ್ಮ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸಾದ್ಯವಾಗದೆ ಇಂತಹ ತೀರ್ಮಾನ ಮಾಡಿದ್ರೆ ಎಲ್ಲ ವರ್ಗದ ಜನರಿಗೆ ಅನಾನುಕೂಲ ಆಗಲಿದೆ. ಈಗಲು ಕಾಲ ಮಿಂಚಿಲ್ಲ. ಪೆಟ್ರೋಲ್ ಮೇಲೆ ೩ ರೂ ಡೀಸಲ್ ಮೇಲೆ ೩.೫ ರೂ ಜಾಸ್ತಿ ಮಾಡಿದಿರಿ ಕೂಡಲೆ ಇದನ್ನ ಹಿಂಪಡೆಯಿರಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡುತ್ತೇವೆ. ಇಷ್ಟೆಲ್ಲಾ ಬೆಲೆ ಏರಿಕೆ ಮಾಡಿದರೂ ಸಿಎಂ ಅವರು ತಮ್ಮ ಕೈಯನ್ನು ಕಟ್ಟಾಕಿಕೊಂಡಿದಾರೆ.

ಕಳೆದ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಆಗಿರುವುದಿಲ್ಲ. ಯಾವುದೆ ಹೊಸ ಯೋಜನೆ ಕೊಡಲು ಸಾಧ್ಯವಾಗಿಲ್ಲ. ಗ್ಯಾರಂಟಿ ಗ್ಯಾರಂಟಿ ಎಂದು ಹೇಳಿಕೊಂಡು ಹಣ ಹೊಂದಿಸಲು ಆಗುತ್ತಿಲ್ಲ. ಒಂದು ಕಡೆ ಯಥೇಚ್ಛವಾಗಿ ಸಾಲ ೭೦ ರಿಂದ ೮೦ ಸಾವಿರ ಕೋಟಿ ಸಾಲ ಮಾಡಿ ರಾಜ್ಯದ ಜನರಿಗೆ ಹೊರೆ ಹಾಕುತ್ತಿದ್ದಾರೆ ಎಂದು ದೂರಿದರು. ಇನ್ನೊಂದು ಕಡೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿ ಬರೆ ಎಳೆದಿದ್ದಾರೆ. ಇದೆಲ್ಲವನ್ನು ನಾವು ಬೇರೆ ಬೇರೆ ಸಂಘಟನೆ ಮಾತಾಡಿ ಮುಂದಿನ ಹೋರಾಟ ತೀರ್ಮಾನ ಮಾಡುವುದಾಗಿ ಎಚ್ಚರಿಸಿದರು. ತೆರಿಗೆ ಮೂಲಕ ಬಂದ ಹಣ ಅಭಿವೃದ್ಧಿಗೆ ಬಳಕೆ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಳೆದ ಒಂದು ವರ್ಷದಲ್ಲಿ ಯಾವ ಅಭಿವೃದ್ಧಿ ಆಗಿದೆ? ಒಂದು ವರ್ಷದಲ್ಲಿ ಸಿಎಂ ಸೇರಿ ಯಾವುದೇ ಶಂಕುಸ್ಥಾಪನೆ ಮಾಡಿಲ್ಲ ಮತ್ತು ಅಭಿವೃದ್ಧಿ ಅಗಿರುವುದಿಲ್ಲ. ಹೊಸ ಯೋಜನೆಯನ್ನು ಇನ್ನು ಘೋಷಣೆ ಮಾಡಿರುವುದಿಲ್ಲ. ಯಾಕೆ ಮಾಡೋಕೆ ಸಾದ್ಯವಾಗಿಲ್ಲ ಎಂದು ಪ್ರಶ್ನೆ ಮಾಡಿದರು. ರಾಜ್ಯದ ಜನರು ನಿಮ್ಮ ಮೇಲೆ ಎಷ್ಟೊಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೊಸ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಆಗುತ್ತೆ ಎಂದು ಕನಸು ಕಾಣ್ತಾ ಇದಾರೆ. ಯಾವುದೇ ಶಾಸಕರ ಕ್ಷೇತ್ರದಲ್ಲಿ ಒಂದೇ ಒಂದು ಶಾಲಾ ಕೊಠಡಿ ಕಟ್ಟೋಕೆ ಸಾದ್ಯವಾಗಿಲ್ಲ. ಆಸ್ಪತ್ರೆ ರಸ್ತೆ ಮಾಡೋಕೆ ಸಾದ್ಯವಾಗ್ತಾ ಇಲ್ಲ. ಯಾವುದೇ ಪಕ್ಷದ ಶಾಸಕರು ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡಲು ಆಗದ ಪರಿಸ್ಥಿತಿ ಈ ಸರ್ಕಾರ ಬಂದ ನಂತರ ಆಗಿದೆ. ಇನ್ನು ಇವರು ಗ್ಯಾರಂಟಿ ಗ್ಯಾರಂಟಿ ಎಂದು ಜನರ ಮೇಲೆ ಬರೆ ಎಳೆಯಲು ಹೊರಟಿದಾರೆ ಎಂದು ಬೇಸರವ್ಯಕ್ತಪಡಿಸಿದ ಅವರು, ಇದಕ್ಕೆ ನಾವು ಉಗ್ರ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಕಾಂಗ್ರೆಸ್ ಸರ್ಕಾರ ಬಂದ ಎಲ್ಲಾ ಹಣವನ್ನು ಗ್ಯಾರಂಟಿಗೆ ಬಳಸುತ್ತಿದೆ. ಹಿಂದೆ ಎಸ್ಸಿಪಿ ಟಿಎಸ್ಪಿ ಹಣವನ್ನು ಸಂಪೂರ್ಣವಾಗಿ ಗ್ಯಾರಂಟಿಗೆ ವರ್ಗಾವಣೆ ಮಾಡಿದ್ರು. ಈಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಣ ಕೂಡ ಅದಕ್ಕೆ ಹೋಗುತ್ತದೆ. ಅದರಿಂದಲೂ ಇವರು ಅಭಿವೃದ್ಧಿ ಮಾಡಲು ಹೊರಟಿಲ್ಲ. ಇವರ ಆಡಳಿತ ವೈಖರಿ ಹೇಗಿದೆ ಎಂದರೆ ಅಭಿವೃದ್ಧಿ ಶೂನ್ಯವಾಗಿದೆ. ಅಭಿವೃದ್ಧಿ ಶೂನ್ಯ ರಾಜ್ಯ ಸರ್ಕಾರ ಜನರ ಮೇಲೆ ಬರೆ ಎಳೆಯಲು ಹೊರಟಿದೆ. ತಮ್ಮ ಗ್ಯಾರಂಟಿ ಗಾಗಿ ಪ್ರಾಪರ್ಟಿ ತೆರಿಗೆ ಹೆಚ್ಚಳ,ಎಲ್ಲವೂ ಈ ಸರ್ಕಾರ ಬಂದ ಮೇಲೆ ದುಬಾರಿ ಆಗಿದೆ. ಗ್ಯಾರಂಟಿ ಉಳಿಸಿಕೊಳ್ಳೋದು ನಂತರದ ಮಾತು ಆದರೆ ಅಭಿವೃದ್ಧಿ ಎಲ್ಲಿದೆ?

ಯಾವುದೇ ಶಾಸಕರು ಏನೂ ಮಾಡಲು ಆಗುತ್ತಿಲ್ಲ ಎಂದರು. ಹೊಸ ಸರ್ಕಾರ ಬಂದಮೇಲೆ ಒಂದೇ ಒಂದು ಹೊಸ ಯೋಜನೆ ಜಾರಿ ಮಾಡೋಕೆ ಆಗಿಲ್ಲ? ಎಂದು ಗುಡುಗಿದರು.

ಕೊಲೆ ಕೇಸ್ ನಲ್ಲಿ ನಟ ದರ್ಶನ್ ಬಂಧನ ವಿಚಾರವಾಗಿ ಮಾತನಾಡಿ, ಇಂತಹ ಹೇಯ ಕೃತ್ಯ ಮಾಡಿದವರು ಯಾರೇ ಆದರೂ ತಕ್ಕ ಶಿಕ್ಷೆ ಆಗಬೇಕು. ನಮ್ಮ ರಾಜ್ಯದಲ್ಲಿ ನಡೆಯುತ್ತಿರೊ ಘಟನೆ ನೋಡಿದರೆ ಯಾರೂ ತಲೆ ಎತ್ತಿ ಓಡಾಡಲು ಆಗದಂತಾಗಿದೆ. ಯಾರೇ ಪ್ರಭಾವಿ ಶಕ್ತಿ ಶಾಲಿ ಇದ್ದರೂ ಕೂಡ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಇದೆ ವೇಳೆ ಶಾಸಕ ಹೆಚ್.ಕೆ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ಹೆಚ್.ಎನ್. ನಾಗೇಶ್,ಇನ್ನಿತರು ಇದ್ದರು.

Continue Reading

Trending

error: Content is protected !!