Connect with us

Mysore

ಮಹಿಷ ದಸರಾ ಆಚರಣೆಗೆ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಷರತ್ತುಬದ್ಧ ಅನುಮತಿ ನೀಡಿದ್ದಾರೆ

Published

on

ಮೈಸೂರು: ಮಹಿಷ ದಸರಾಪರ-ವಿರೋಧ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದೆಡೆ ದಲಿತ ಸಮಿತಿಗಳು ಹಾಗೂ ಮಹಿಷ ದಸರಾ ಸಮಿತಿಯವರು ನಡೆಸಬೇಕು ಎಂದರೆ, ಇತ್ತ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಕರೆ ಕೊಟ್ಟಿದ್ದರು.
ಇನ್ನು ಮಹಿಷ ದಸರಾ ಆಚರಣೆಗೆ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಷರತ್ತುಬದ್ಧ ಅನುಮತಿ ನೀಡಿದ್ದಾರೆ.ಆದರೆ, ವೇದಿಕೆ ಕಾರ್ಯಕ್ರಮಕ್ಕಷ್ಟೇ ಅವಕಾಶ ನೀಡಲಾಗಿದೆ. ಮೈಸೂರಿನಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆಗೆ, ಸಂಭ್ರಮಾಚರಣೆ ನಿಷೇಧವಾಗಿದೆ. ಜೊತೆಗೆ ಧಾರ್ಮಿಕ ಭಾವನೆ ಕೆಣಕುವ, ಪ್ರಚೋದನೆ ಭಾಷಣ ಮಾಡಬಾರದು ಹೀಗೆ ಇನ್ನಿತರ ನಿಬಂಧನೆಗಳನ್ವಯ ಮಹಿಷ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದರು.

Continue Reading
Click to comment

Leave a Reply

Your email address will not be published. Required fields are marked *

Mysore

ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಶ್ರಾವಣ ಮಾಸದ ಹನ್ನೊಂದನೇ ವರ್ಷದ ವಾರ್ಷಿಕೋತ್ಸವ

Published

on

ಪಿರಿಯಾಪಟ್ಟಣ : ಪಟ್ಟಣದ ಅಬ್ಬೂರು ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಶ್ರಾವಣ ಮಾಸದ ಹನ್ನೊಂದನೇ ವರ್ಷದ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನೆರವೇರಿತು.
ವಾರ್ಷಿಕೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಮಹಾ ರುದ್ರಾಭಿಷೇಕ, ನವಗ್ರಹ ಆರಾಧನೆ,ಹೋಮ ಹವನ ನೆರವೇರಿತು. ಸ್ವಾಮಿಯ ವಿಗ್ರಹಕ್ಕೆ ಅಭಿಷೇಕ ಮಾಡಿ ವಿವಿಧ ಬಗೆಯ ಫಲ ಪುಷ್ಪಗಳಿಂದ ಅಲಂಕರಿಸಿ ಭಕ್ತಾಧಿಗಳಿಗೆ ಇಷ್ಟಾರ್ಥ ಸಿದ್ಧಿಗಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.
ಅಬ್ಬೂರು ಗ್ರಾಮ ಸೇರಿದಂತ್ತೆ ಇತರೆ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳೊಂದಿಗೆ ಉತ್ಸವ ಮೂರ್ತಿಯನ್ನು ಹೊತ್ತ ಭಕ್ತರು ಮೆರವಣಿಗೆ ಮಾಡಿದರು.


ಈ ಸಂದರ್ಭದಲ್ಲಿ ಪ್ರಧಾನ ಆರ್ಚಕರಾದ ಶ್ರೀ ರಾಜು ಸ್ವಾಮಿ ಮಾತನಾಡಿ ಪ್ರತಿ ವರ್ಷ ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ದೇವಸ್ಥಾನದಲ್ಲಿ ಸ್ವಾಮಿಯ ಉತ್ಸವ ನಡೆಯುತ್ತದೆ ಹಾಗೂ ಪ್ರತಿನಿತ್ಯ ಪೂಜೆ ನಡೆಯುತ್ತದೆ.ಅನೇಕ ಭಕ್ತರು ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ದೇವಸ್ಥಾನಕ್ಕೆ ಬರುತ್ತಾರೆ ಹಾಗೂ ಸ್ವಾಮಿಯ ಸೇವಾ ಕಾರ್ಯಕ್ಕೆ ಅನೇಕ ಭಕ್ತರು ಸಹಕಾರ ನೀಡಿದ್ದಾರೆ ಆದ್ದರಿಂದ ಸರ್ವರಿಗೂ ಭಗವಂತ ಒಳಿತನ್ನು ಮಾಡಲಿ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಪ್ರಸಾದ ವಿನಿಯೋಗ ಮಾಡಲಾಯಿತು ಮತ್ತು ಧಾರ್ಮಿಕ ಪೂಜಾ ಕಾರ್ಯಗಳನ್ನು ವೇದ ಮೂರ್ತಿ ಶ್ರೀ ತೊಟಪ್ಪಯ್ಯ ಶಾಸ್ತ್ರೀಗಳು ನೆರವೇರಿಸಿಕೊಟ್ಟರು.
ಪೂಜಾ ಕಾರ್ಯದಲ್ಲಿ ಸಹ ಅರ್ಚಕರಾದ ಪ್ರಸನ್ನ, ಅರುಣ್ ಕುಮಾರ್ ಸೇರಿದಂತ್ತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಾಗವಹಿಸಿದ್ದರು.

Continue Reading

Mysore

ವಿದ್ಯುತ್ ವ್ಯತ್ಯಯ

Published

on

ಮೈಸೂರು:- ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 220/666/11 ಕೆ.ವಿ ವಿದ್ಯಾ ವಿಕಾಸ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿರುವ ಹಿನ್ನೆಲೆ, ಆಗಸ್ಟ್ 26 ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ವಾಜಮಂಗಲ, ವರುಣಾ, ಪಿಲ್ಲಹಳ್ಳಿ, ಮೋಸಂಬಾಯನಹಳ್ಳಿ, ದಂಡಿಕೆರೆ, ಜಂತಗಳ್ಳಿ, ಸಜ್ಜೆಹುಂಡಿ, ನಿರ್ಮಾಣ್‌

ಪ್ರಮೋಟರ್ಸ್, ಮಹದೇಶ್ವರ ಬಡಾವಣೆ, ಕಲ್ಪತರು ಬಡಾವಣೆ. ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ. ಆದುದರಿಂದ ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ನ.ರಾ.ಮೊಹಲ್ಲಾ ವಿಭಾಗ, ಚಾ.ವಿ.ಸ.ನಿ.ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Mysore

ದಸರಾ 2024: ಗಜ ಪಡೆಯ ತೂಕದ ಪರೀಕ್ಷೆ

Published

on

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವ ವಿಖ್ಯಾತ ದಸರಾ 2024 ರ ಮಹೋತ್ಸವ ಹಿನ್ನೆಲೆ ಗಜ ಪಡೆಯು ನಿನ್ನೆ ಅರಮನೆಗೆ ಆಗಮಿಸಿದ್ದು, ಇಂದು ಗಜಪಡೆಯ ತೂಕ ಪರೀಕ್ಷೆ ನಡೆದಿದೆ.

ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಯಲಿದ್ದು, ಇಂದು ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಒಟ್ಟು 9 ಆನೆಗಳನ್ನು ನಗರದ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂಕ ಪರೀಕ್ಷೆ ನಡೆಯಿತು. ಇನ್ನು ಗಜಪಡೆಗಳ ತೂಕದ ವಿಚಾರವಾಗಿ ಅಭಿಮನ್ಯು ಅತಿ ಹೆಚ್ಚು ತೂಕವನ್ನು ಹೊಂದಿದೆ. 2ನೇ ಸ್ಥಾನದಲ್ಲಿ ಧನಂಜಯ್ ಆನೆ ಕಾಣಿಸಿಕೊಂಡಿದೆ.

ದಸರಾ 2024 ರ ಗಜ ಪಡೆಯ ತೂಕದ ವಿವರ

ಕ್ಯಾಪ್ಟನ್ ಅಭಿಮನ್ಯು 5,560 ಕೆಜಿ.

ಧನಂಜಯ 5,155 ಕೆಜಿ.

ಗೋಪಿ 4,970 ಕೆಜಿ.

ಭೀಮ 4,945 ಕೆಜಿ.

ಏಕಲವ್ಯ 4,730 ಕೆಜಿ.

ರೋಹಿತ್ 3625 ಕೆಜಿ.

ಕಂಜನ್ 4,515 ಕೆಜಿ,

ವರಲಕ್ಷ್ಮೀ 3,495 ಕೆಜಿ,

ಲಕ್ಷ್ಮೀ 2,480 ಕೆಜಿ ತೂಕ ಇವೆ.

Continue Reading

Trending

error: Content is protected !!