Connect with us

Chikmagalur

ಮಹಿಳೆ ಅನುಮಾನಾಸ್ಪದ ಸಾವು, ಕುಡಿದ ಮತ್ತಿನಲ್ಲಿ ಗಂಡನೇ ಕೊಂದಿರುವ ಶಂಕೆ

Published

on

 

ಚಿಕ್ಕಮಗಳೂರು : ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಆಕೆಯ ಪತಿಯೆ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ಪರಿಶಿಷ್ಟ ಜಾತಿಯ ಪದ್ಮಾಕ್ಷಿ (43) ಮೃತ ದುರ್ದೈವಿ. ಪದ್ಮಾಕ್ಷಿ ತನ್ನ ಮನೆಯ ಮುಂಭಾಗದಲ್ಲಿ ಬಿದ್ದಿದ್ದು, ಶನಿವಾರ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಇದನ್ನು ಗಮನಿಸಿ ಪರಿಶೀಲಿಸಿದಾಗ ಆಕೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಪದ್ಮಾಕ್ಷಿಯ ಪತಿ ಚಂದ್ರು ಮನೆಯೊಳಗೆ ಮಲಗಿರುವುದು ಕಂಡು ಬಂದಿತ್ತು. ಇನ್ನೂ ಪತಿ ಚಂದ್ರು ಕುಡಿದ ಮತ್ತಿನಲ್ಲಿ ತನ್ನ ಪತ್ನಿಯನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿ, ಅಂಗಳಕ್ಕೆ ನೂಕಿರಬಹುದು ಎಂದು ಶಂಕಿಸಲಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಗೋಣಿಬೀಡು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಚಂದ್ರುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಮುಳ್ಳಯ್ಯನ ಗಿರಿ ರಸ್ತೆಯಲ್ಲಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್,

Published

on

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯ ನಡುವೆಯೂ ಸಾವಿರಾರು ಪ್ರವಾಸಿಗರ ದಂಡು ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರವಾಸಿ ತಾಣಗಳಿಗೆ ಹರಿದು ಬಂದಿದೆ.

ಕಾರು-ಬೈಕ್‌-ಟಿಟಿ ಸೇರಿದಂತೆ  ಇಂದು 1850 ವಾಹನಗಳು ಗಿರಿಭಾಗಕ್ಕೆ ಭೇಟಿ ನೀಡಿವೆ. ಇದರ ನಡುವೆ ಚಾಲಕನ ನಿಯಂತ್ರಣ ತಪ್ಪಿ ಕಾರು-ಜೀಪ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು-ಜೀಪಿನ ಮುಂಭಾಗ ಜಖಂಗೊಂಡಿದೆ. ಕಾರು ಮುಳ್ಳಯ್ಯನಗಿರಿಯಿಂದ ವಾಪಸ್ ಆಗುವಾಗ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ, ಅಪಘಾತ ಸಂಭವಿಸಿದ ಪರಿಣಾಮ ಗಿರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ನಿಯಂತ್ರಿಸಲು ಪೊಲೀಸರು ಹಾಗೂ ಪ್ರವಾಸಿ ಮಿತ್ರರು ಹರಸಾಹಸ ಪಡುವಂತಾಯಿತು.

ಟ್ರಾಫಿಕ್ ಕಂಟ್ರೋಲ್ ಮಾಡಲಾಗದೆ 2 ಗಂಟೆಗಳ ಕಾಲ ವಾಹನಗಳನ್ನ ಕೈಮರ ಚಕ್ ಪೋಸ್ಟ್ ನಲ್ಲಿ ನಿಲ್ಲಿಸಲಾಗಿತ್ತು. ಗಿರಿ ಪ್ರದೇಶದಲ್ಲಿ ವಾಹನಗಳು ಕಡಿಮೆಯಾದ ಬಳಿಕ ಮತ್ತೆ ವಾಹನಗಳನ್ನ ಬಿಡಲಾಯಿತು.

Continue Reading

Chikmagalur

ಭಿಕ್ಷೆ ಬೇಡಿ ಕುರ್ಚಿ ದಾನ ಕೊಟ್ಟ ದಲಿತ ಸಂಘಟನೆಗಳು

Published

on

ಚಿಕ್ಕಮಗಳೂರು : ತಾಲೂಕು ಕಚೇರಿಯಲ್ಲಿ ಕೂರಲು ಚೇರ್ ಇಲ್ಲ ಎಂದು ಭಿಕ್ಷೆ ಎತ್ತಿ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ವಿಲಕ್ಷಣ ಘಟನೆ ನಡೆದಿದೆ.

ಅಜ್ಜಂಪುರ ತಾಲೂಕಿನ ತಾಲೂಕು ಕಚೇರಿಗೆ 3500ರೂ. ಭಿಕ್ಷೆ ಎತ್ತಿ ಅದರಲ್ಲಿ 2500 ರೂ. ಕೊಟ್ಟು ದಲಿತ ಸಂಘಟನೆ ಕಾರ್ಯಕರ್ತರು ಕುರ್ಚಿ ತಂದಿದ್ದಾರೆ ಉಳಿದ ಹಣವನ್ನು ಸರ್ಕಾರಕ್ಕೆ ನೀಡಿವೆ .

ಅಜ್ಜಂಪುರ ಪಟ್ಟಣದ ಬಸ್ ಸ್ಟ್ಯಾಂಡ್, ಬಿ.ಎಚ್.ರಸ್ತೆ, ಹೋಟೆಲ್, ಅಂಗಡಿಗಳಲ್ಲಿ ಭಿಕ್ಷೆ ಎತ್ತಿದ ಹಣದಲ್ಲಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆಂದೇ 8 ಚೇರ್ ನೀಡಿದ್ದಾರೆ.

ಮಳೆ ಸುರಿಯುತ್ತಿದ್ದರೂ ರಸ್ತೆ-ರಸ್ತೆಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಭಿಕ್ಷೆ ಎತ್ತಲಾಯಿತು.

Continue Reading

Chikmagalur

ದತ್ತು ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯ, ಮೈ ಸುಟ್ಟುಕೊಂಡು ನರಳುತ್ತಿರುವ ಕಂದಮ್ಮ

Published

on

ಚಿಕ್ಕಮಗಳೂರು : ನಗರದ ದತ್ತು ಸಂಸ್ಥೆಯಲ್ಲಿ ಹೆಣ್ಣು ಮಗುವಿನ ಮೇಲೆ ಆರೈಕಾ ಸಿಬ್ಬಂದಿ ಕುದಿಯುವ ನೀರು ಸುರಿದ ಘಟನೆ ನಡೆದಿದೆ. ಮಗುವಿನ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ಘಟನೆ ಸಂಭವಿಸಿದೆ.

ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿ ಯಡವಟ್ಟಿನಿಂದ ಕುದಿಯುವ ಬಿಸಿ ನೀರು ಸುರಿದ ಪರಿಣಾಮ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ದುರ್ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ನಗರದ ಗಾಂಧಿನಾಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಬರಲಿದೆ. ಅನಾಥ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮಗು ನರಳಾಡುವಂತಾಗಿದೆ. ಜುಲೈ 09 ರಂದು ಘಟನೆ ನಡೆದಿದ್ದು, ಇಡೀ ಪ್ರಕರಣ ಮೇಲಧಿಕಾರಿಗಳಿಗೆ ತಿಳಿಯದಂತೆ ಸಿಬ್ಬಂದಿ ಮುಚ್ಚಿಟ್ಟಿದ್ದಾರೆ.

ಸದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಮಕ್ಕಳ‌ ರಕ್ಷಣಾ ಘಟಕದ ದತ್ತು ಸಂಸ್ಥೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Continue Reading

Trending

error: Content is protected !!