Hassan
ಮಹಾಭಾರತ ಧರ್ಮಕಾವ್ಯವಾಗಿದೆ – ಜಿಲ್ಲಾಧ್ಯಕ್ಷೆ ಚೈತ್ರ ನಾಯಕರಹಳ್ಳಿ
ಹಾಸನ: ಪುರಾತನ ಘಟನೆಯನ್ನು ನೆನಪಿಸುವ ಮಹಾಭಾರತವು ಧರ್ಮಕಾವ್ಯವಾಗಿದೆ ಎಂದು ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ತಿಳಿಸಿದರು.
ಶಾಂತಿನಗರದ ಹಲ್ಮಿಡಿ ಶಾಸನ ವೃತ್ತದ ಕವಿರಾಜಮಾರ್ಗ ರಸ್ತೆಯ ಚಾಣಕ್ಯ ಸಭಾಂಗಣದಲ್ಲಿ ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕುಮಾರವ್ಯಾಸ ಭಾರತ ಕಥಾಮಂಜರಿ ಕಾವ್ಯ ವಾಚನ ಮತ್ತು ವ್ಯಾಖ್ಯಾನ ಸಂಚಿಕೆಯ ೬೯ನೇ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಜಯಂತಿ ಆಚರಿಸಲಾಯಿತು. ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಹಾಭಾರತ ಏಕೆ ಧರ್ಮಕಾವ್ಯವಾಗಿದೆ? ಇದರ ವಿಶಿಷ್ಠತೆ ಏನು ಎಂದು ಪ್ರಶ್ನಿಸುವವರಿಗೆ, ಜ್ಞಾನಿಗಳಿಗೆ ತತ್ವಶಾಸ್ತ್ರವಾಗಿ, ಆಧ್ಯಾತ್ಮಿಕರಿಗೆ ವೇದ ಗ್ರಂಥವಾಗಿ, ಪರಮ ಭಕ್ತರಿಗೆ ಪಾರಾಯಣ ಗ್ರಂಥವಾಗಿ, ನೀತಿಕೋವಿದರಿಗೆ, ನೀತಿಶಾಸ್ತ್ರವಾಗಿ, ಚರಿತ್ರಕಾರರಿಗೆ ಇತಿಹಾಸ ಗ್ರಂಥವಾಗಿ, ನಾಸ್ತಿಕರಿಗೆ ಕಾದಂಬರಿಯಾಗಿ ಅವರವರಿಗೆ ಅವರಂತೆಯೇ ಕಾಣುತ್ತದೆ ಎಂದರು.
ಈ ಕಾರ್ಯಕ್ರಮ ಕರ್ನಾಟಕ ಗಮಕ ಕಲಾ ಪರಿಷತ್ತು ಸಹಯೋಗ ನಂತರ ವಿಶೇಷ ಉಪನ್ಯಾಸ ನೀಡಿದ ಶ್ರೀ ಚೇತನ ಗೂರೂಜಿ ಆರೋಗ್ಯವೇ ಭಾಗ್ಯ, ಆರೋಗ್ಯವಂತ ವ್ಯಕ್ತಿ ಆರೋಗ್ಯವಂತ ಸಮಾಜವನ್ನು ಸೃಷ್ಟಿ ಮಾಡಬಲ್ಲ ಇದನರಿಯದ ನಾಗರೀಕ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿಯ ಇಲ್ಲದೆ ಅಕಾಲ ಮರಣವನ್ನಪ್ಪವ ಹಾಗಾಗಿದೆ ಕಾರಣ ಜಾಗೃತಿ ವಹಿಸ ಬೇಕೆಂಬ ಎಚ್ಚರಿಕೆ ನೀಡಿದರು.
ನಂತರ ಕುಮಾರವ್ಯಾಸ ಜಯಂತಿ ಕುರಿತು ಮಾತನಾಡಿದ ಪ್ರೊ.ಜಿ.ಎನ್. ಅನಸೂಯ, ಕಲಿತವರಿಗೆ ಅದಿಕವಿಪಂಪ ಕಲ್ಪವೃಕ್ಷವಾದರೆ ಕಲಿಯದವರಿಗೆ ಕಾಮಧೇನುವಾಗಿ ಗದುಗಿನ ನಾರಾಣಪ್ಪನ ಭಕ್ತಿ, ಪ್ರತಿಭೆ, ಸ್ವೋಪ್ರಜ್ಜತೆ ವಿಶೇಷ ವಾದಂತಹುದು .ಕೃಷ್ಣ ಚರಿತೆಯ ಸಾರ ವೇದ, ಉಪನಿಷತ್ತುಗಳ ಸಾರವೇ ಪಂಚಮವೇದ ಎಂಬುದು ಕವಿಯ ವಿಶೇಷತೆ, ರೂಪಕ ಸಾಮ್ರಾಜ್ಯ ಚಕ್ರವರ್ತಿಯಾದ ಕುಮಾರವ್ಯಾಸ ಎಂಬ ಹೆಸರು ವ್ಯಾಸರ ಅನುಗ್ರಹಕ್ಕೆ ಪಾತ್ರವಾದ ಕಾರಣ ಬಂದಿದ್ದಾಗಿದೆ ಎಂದು ಹೇಳಿದರು.
ನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ.ನಾಯಕರಹಳ್ಳಿ ಮಂಜೇಗೌಡ ಮಾತನಾಡುತ್ತಾ, ಈ ಸಂದರ್ಭದಲ್ಲಿ ಕುವೆಂಪು ರವರ ಕವಿವಾಣಿಯಾದ ಕುಮಾರವ್ಯಾಸ ಹಾಡಿದನೆಂದರೆ, ಕಲಿಯುಗ ದ್ವಾಪರವಾಗುವುದು. ಭಾರತ ಕಣ್ಣಲಿ ಕುಣಿಯುವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು! ಎಂಬ ಮಾತನು ನೆನಪಿಸಿಕೊಂಡರು ನಂತರ ಕುಮಾರವ್ಯಾಸ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದ ಕಾವ್ಯಭಾಗವನ್ನು ವಿದುಷಿ ರುಕ್ಮಿಣಿ ನಾಗೇಂದ್ರ ಗಮಕ ಗಾಯನ ಮಾಡಿದರು. ವ್ಯಾಖ್ಯಾನವನ್ನು ಮೈಸೂರಿನ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ಡಾ.ಎನ್.ಕೆ ರಾಮಶೇಷನ್ ವ್ಯಾಖ್ಯಾನ ಮಾಡುತ್ತಾ. ಮಯ ನಿರ್ಮಿತವಾದ ಸಭೆ,ನವರತ್ನ ಖಚಿತವಾದ ಸುಂದರ ಸಭೆಯನ್ನು ಧರ್ಮರಾಯನು ಗೃಹ ಪ್ರವೇಶ ಮಾಡಿದನೆಂದರೆ,ರಾಜ-ಮಹಾರಾಜರು,ಯಕ್ಷ ಗಂಧರ್ವರು, ಕಿನ್ನರ-ಕಿಂಪುರುಷರು, ಋಷಿಗಳೆಲ್ಲರೂ ಧರ್ಮರಾಯನ ಷಡ್ರಸ್ಥಾನ ಭೂರಿಭೋಜನ ನೀಡಿದ ಭೂ- ವಸ್ತ್ರದಾನ,ಯಾಗ-ಯಜ್ಞಗಳನ್ನು ಕಂಡು ಆನಂದಾತಿರೇಕಗಳಿಂದ ಆನಂದಿಸಿ ಹರಸುವಾಗ ಗಗನ ಮಾರ್ಗದಿಂದ ಧರೆಗಿಳಿದು ಬರುತ್ತಿದ್ದ ನಾರದರನ್ನು ಆನರಾತ್ಯಿಥ್ಯದಿಂದ ಬರಮಾಡಿಕೊಂಡು ಅರ್ಘ್ಯಪಾದಾದಿಯನ್ನಿತ್ತು ಉಪಚರಿಸಿ ಸಾಷ್ಟಾಂಗವೆರಗಿದ್ದನ್ನು ಕಂಡ ನಾರದ ಮಹರ್ಷಿಗಳು ಧರ್ಮರಾಯನನ್ನು ಮೆಚ್ಚಿಕೊಂಡಾಡಿ,ಧರ್ಮ-ಆರ್ಥ-ಕಾಮಗಳ ವಿಚಾರವಾಗಿ ಪ್ರಶ್ನಿಸಿ ರಾಜನೀತಿಯನ್ನು ಉಪದೇಶಿಸಿದ ಸಂದರ್ಭವನ್ನು ಅತ್ಯಂತ ಸ್ವಾರಸ್ಯಕರವಾಗಿ*
ವ್ಯಾಖ್ಯಾನದಲ್ಲಿ ವ್ಯಾಖ್ಯಾನಿಸಲ್ಪಟಿತು ನಂತರ ಜಿಲ್ಲಾ ಗಮಕ ಕಲಾ ಪರಿಷತ್ತು ಅಧ್ಯಕ್ಷರಾದ ಗಣೇಶ ಉಡುಪ ನಾಲ್ಕು ಷಟ್ಪದಿಗಳನ್ನು ಗಾಯನ ಮಾಡಿದರು*
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಪರಿಷತ್ತು ನಿಕಟಪೂರ್ವ ಗೌರವಾಧ್ಯಕ್ಷರಾದ ರವಿನಾಕಲಗೂಡು, ಗೌರವ ಕಾರ್ಯದರ್ಶಿಗಳಾದ ಕಲ್ಲಹಳ್ಳಿ ಹರೀಶ್, ಕತ್ತಿಮಲ್ಲೇನಹಳ್ಳಿ ಪರಮೇಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಜಿ.ಒ. ಮಹಾಂತಪ್ಪ, ರುದ್ರಪ್ಪಾಜಿರಾವ್, ಬನವಾಸೆ ನಾರಾಯಣಗೌಡ, ಅಗಿಲೆ ಚಲುವೇಗೌಡ ರಾಜೇಂದ್ರ, ವೀರಾಪುರ ನಾಗರಾಜು, ಲಕ್ಷ್ಮೀ ದಾಸಪ್ಪ, ಸಾಹಿತಿ ಚಂದ್ರಕಾಂತ ಪಡೆಸೂರು, ತಮ್ಮಯಣ್ಣ, ಅಡಗೂರು ಕೇಶವಮೂರ್ತಿ, ಕಟ್ಟಾಯ ಅಣ್ಣೇಗೌಡ, ಕಾಂಚನ ಮಾಲಾ, ಸೇವಾದಳದ .ವಿ.ಎಸ್, ರಾಣಿ ಮುಂತಾದವರು ಉಪಸ್ಥಿತರಿದ್ದರು.
Hassan
ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ: ಗೃಹೋಪಯೋಗಿ ವಸ್ತುಗಳು ನಾಶ
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು : ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆಕಸ್ಮಿಕ ನಡೆದು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ನಾಶವಾದ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಭರತವಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಖಯಬ್ ಸಾಬ್ ಕೋಂ ಮಿರ್ಜಾ ಎಂಬುವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದೆ ಬುಧವಾರ ತಡರಾತ್ರಿ ಘಟನೆ ನಡೆದಿದ್ದು ಮನೆಯಲ್ಲಿದ್ದ ಟಿವಿ, ಪ್ರಿಡ್ಜ್,ಧರಿಸುವ ಬಟ್ಟೆ ಸೇರಿದಂತೆ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟುಕರಕಲಗಿವೆ ಬೆಂಕಿ ಬಿದ್ದ ಸಂದರ್ಭದಲ್ಲಿ ಮನೆ ಯಜಮಾನ ಖಯಬ್ ಸಾಬ್ ಹಾಗೂ ಪತ್ನಿ ಮನೆಯಲ್ಲಿದ್ದರೆಂದು ತಿಳಿದು ಬಂದಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಪ್ರತ್ಯಕ್ಷ ದರ್ಶಿಗಳು ಹಾಸನದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ ಹಾಸನ ದಿಂದ ಸ್ಥಳಕ್ಕೆ ಅಗ್ನಿಶಾಮಕ ವಾಹನ ಬರುವಷ್ಟರೊಳಗೆ ಗ್ರಾಮಸ್ಥರು ಮನೆಯಲ್ಲಿದ್ದ ಸಿಕ್ಕ ಸಿಕ್ಕ ಪಾತ್ರೆಯಲ್ಲಿ ನೀರು ತಂದು ಬೆಂಕಿ ನಂದಿಸಿದ್ದಾರೆ.
ಮಾಹಿತಿ ತಿಳಿದ ತಹಸೀಲ್ದಾರ್ ಸಿ.ಪಿ.ನಂದಕುಮಾರ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಭರತವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
Hassan
ಕಾನೂನು ಬದ್ಧವಾಗಿ ದತ್ತು ಪಡೆಯಲು ಕಾಂತರಾಜು ಸಲಹೆ
ಹಾಸನ: ಯಾರಾದರೂ ಅನಾಧಿಕೃತವಾಗಿ ಮಗುವನ್ನು ಕೊಂಡುಕೊಂಡರೇ ಬಾಲ ನ್ಯಾಯಾಲಯದ ಪ್ರಕಾರ ಕಾನೂನು ಬಾಹಿರವಾಗಿದ್ದು, ಅನಾಧಿಕೃತ ಮಕ್ಕಳ ಮಾರಾಟ ಎಂದು ಪರಿಗಣಿಸಿ ಅಂತವರಿಗೆ ೫ ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ ದಂಢ ವಿಧಿಸಲಾಗುವುದು ಎಂದು ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಾಂತರಾಜು ತಿಳಿಸಿದರು.
ನಗರದ ಹೊರವಲಯ ಗವೇನಹಳ್ಳಿಯ ಬಳಿ ಇರುವ ಕಾಮಧೇನು ವೃದ್ಧಾಶ್ರಮದಲ್ಲಿ ಗುರುವಾರದಂದು ಮದ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ೫೦ ವರ್ಷ ಒಳಗೆ ಇರುವವರಿಗೆ ನಾವು ೨ ವರ್ಷ ಮೇಲ್ಪಟ್ಟ ಮಕ್ಕಳನ್ನು ದತ್ತು ಕೊಡಲಾಗುವುದು. ಪುರುಷ ಪೋಷಕರಿಗೆ ಹೆಣ್ಣು ಮಕ್ಕಳಿಗೆ ದತ್ತು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಪುರುಷ ಆಗಿರುವ ಏಕ ಪೋಷಕರಿಗೆ ಹೆಣ್ಣು ಮಕ್ಕಳನ್ನು ಯಾವ ಕಾರಣಕ್ಕೂ ದತ್ತು ಕೊಡುವುದಿಲ್ಲ. ಗಂಡು ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು ಬಗ್ಗೆ ಮಾನದಂಡದಲ್ಲಿ ಗಮನಿಸಬೇಕಾಗುತ್ತದೆ. ರಿಜಿಸ್ಟರ್ ಮಾಡಿದ ಮೇಲೆ ಓಂ ತನಿಖೆಗಾಗಿ ಸ್ಥಳಕ್ಕೆ ಬಂದು ಹೆಚ್.ಎಸ್.ಆರ್. ಮಾಡಲಾಗುವುದು. ಓಂ ತನಿಖೆಯಲ್ಲಿ ಇವರಿಗೆ ಮಗುವನ್ನು ಕೊಡಬಹುದು
ಎಂದು ನಮ್ಮ ಸೋಶಿಯಲ್ ವರ್ಕರ್ ನಿರ್ಧರಿಸಿದ ಮೇಲೆ ಆ ರೀಪೊರ್ಟ್‌ನ್ನು ಆನ್ಲೈನಲ್ಲಿ ದಾಖಲು ಮಾಡಿದ ನಂತರ ಸಿನಿಯಾರಿಟಿ ಆರಂಭವಾಗುತ್ತದೆ ಎಂದರು. ನಮಗೆ ಮಕ್ಕಳೆ ಸಿಕ್ಕಿಲ್ಲ ಎಂದು ಕಾಲಾಹರಣ ಮಾಡಿದರೇ ಮಕ್ಕಳೆ ಸಿಗುವುದಿಲ್ಲ. ಕಾನೂನು ಪ್ರಕಾರ ಏನಿದೆ ನಿಯಮ ಪಾಲಿಸಲೇಬೇಕು. ಎಲ್ಲಾ ತನಿಖೆ ನಂತರ ಇವರು ಸಂಭಾವನಿಯ ದತ್ತು ಪೋಷಕರೆಂದು ಡಿಕ್ಲೇರ್ ಮಾಡಬೇಕು. ಇತ್ತಿಚಿನ ಅಂಕಿ ಅಂಶದ ಪ್ರಕಾರ ದತ್ತು ಪ್ರಮಾಣದಲ್ಲಿ ಹೆಣ್ಣು ಮಕ್ಕಳೆ ಹೆಚ್ಚು ಇರುವುದು ಸಂತೋಷದ ವಿಷಯ ಎಂದು ಕಿವಿಮಾತು ಹೇಳಿದರು. ಕಾಮಧೇನು ಮತ್ತು ತವರು ಚಾರಿಟಬಲ್ ಟ್ರಸ್ಟ್ ಎರಡು ಸಂಸ್ಥೆಯಿಂದ ಸುಮಾರು ೨೧ ಮಕ್ಕಳನ್ನು ದತ್ತು ಮಕ್ಕಳು ದತ್ತು ಹೋಗಿದ್ದಾರೆ. ಉತ್ತಮವಾದ ದತ್ತು ಯೋಜನೆಯು ನಮ್ಮ ಜಿಲ್ಲೆಯಲ್ಲಿ ಅನುಷ್ಠಾನ ಆಗುತ್ತಿದೆ. ಯಾರಾದರೂ ಅನಾಧಿಕೃತ
ಮಗುವನ್ನು ಸಾಕೋಣ ಎನ್ನುವ ಯೋಚನೆ ಇದ್ದರೇ ಅದು ಬಾಲ ನ್ಯಾಯ ಪ್ರಕಾರ ಕಾನೂನು ಬಾಹಿರವಾಗಿರುತ್ತದೆ. ಇದು ಅನಾಧಿಕೃತ ಮಕ್ಕಳ ಮಾರಾಟ ಎಂದು ಪರಿಗಣಿಸಲಾಗುತ್ತದೆ ಜೊತೆಗೆವ ಇದಕ್ಕೆ ೫ ವರ್ಷ ಜೈಲು ಶಿಕ್ಷೆ ಮತ್ತು ೧ ಲಕ್ಷ ದಂಢವನ್ನು ವಿಧಿಸಲಾಗುತ್ತದೆ. ಇದರಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಏನಾದರೂ ಬಾಗಿಯಾದರೇ ಅಂತ ಸಿಬ್ಬಂದಿಗಳಿಗೆ ೭ ವರ್ಷ ಜೈಲು ಶಿಕ್ಷೆ ಕೊಡಲಾಗುತ್ತದೆ ಇವರಿಗೂ ಕೂಡ ೧ ಲಕ್ಷ ದಂಡ ಎಂದು ಎಚ್ಚರಿಸಿದರು. ಯಾವುದೇ ಕಾರಣಕ್ಕೂ ಅನಾಧಿಕೃತವಾಗಿ ಆಸೆ ಆಮಿಷಗಳಿಗೆ ಒಳಗಾಗಿ ಮಗು ಕೊಂಡುಕೊಳ್ಳುವುದು ಮಾರಾಟ ಮಾಡುವುದು ಕಾನೂನು ಬಾಹಿರ ಆಗುತ್ತದೆ. ಕಾನೂನು ಬದ್ಧವಾಗಿ ಮಗುವನ್ನು ದತ್ತು ತೆಗೆದುಕೊಂಡರೇ ಮಗುವಿಗೆ ಉತ್ತಮ ಭವಿಷ್ಯ ರೂಪಿಸಬಹುದು ಎಂದು ಸಲಹೆ ನೀಡಿದರು.
ಇದೆ ವೇಳೆ ಕಾಮಧೇನು ವೃದ್ಧಾಶ್ರಮದ ಎಂ. ಮಾಧವ ಶಣ್ಯೆ, ಸಂಪನ್ಮೂಲವ್ಯಕ್ತಿ ಅನುಪಮ, ಗೌರವಾಧ್ಯಕ್ಷರಾದ ಮುತ್ತತ್ತಿ ರಾಜಣ್ಣ, ನಿರ್ದೇಶಕರಾದ ಎನ್.ಎಸ್. ಕೃಷ್ಣ ಅಯ್ಯಂಗಾರ್, ಶಬ್ಬೀರ್ ಅಹಮದ್, ಆನಂದ್ ಬಾಗಡೆ ಸೇರಿದಂತೆ ಇತರರು ಭಾಗವಹಿಸಿದ್ದರು.
Hassan
ಹಾಸನ: ಡಿ.1 ರಿಂದ 13ರ ವರೆಗೂ ಉಚಿತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ಶಿಬಿರ
ಹಾಸನ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿ.ಜಿ. ನಗರದಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಡಿಸೆಂಬರ್ ೧ ರಿಂದ ೧೩ರ ವರೆಗೆ ಸೀಳು ತುಟಿ, ಸೀಳು ಅಂಗಳ ಹಾಗೂ ಸುಟ್ಟ ಗಾಯಗಳಿಂದ ಉಂಟಾದ ವಿರೂಪಗಳಿಗೆ ಉಚಿತ ಪ್ಲಾಸ್ಟಿಕ್ ಶಾಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯ ಅಧೀಕ್ಷಕರು ಡಾ. ಕೆ.ಎಸ್. ರವಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತಾಡಿದ ಅವರು, ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಕ್ಷರಾದ ಶ್ರೀ ಡಾ. ನಿರ್ಮಲನಂದನಾಥ ಮಹಾಸ್ವಾಮೀಜಿ, ದಿವ್ಯಸಾನಿಧ್ಯದಲ್ಲಿ ಉಚಿತ ಶಿಬಿರ ನಡೆಯಲಿದೆ. ಮುಖ್ಯು ಅತಿಥಿಯಾಗಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಮೆಡಿಕಲ್ ನಿರ್ದೇಶಕ ಬ್ರಾಡ್ಲಿ ಕೂಟ್ಸ್, ಟೆಡ್ ಅಲೆಕ್ಸ್, ಮಾಹಿ ನಿರ್ದೇಶಕ ವಿ. ಶ್ರೀನಿವಾಸ್ ಮೂರ್ತಿ, ಬೆಂಗಳೂರು ನಾರ್ಥ ರೋಟರಿ ಅಧ್ಯಕ್ಷ ಗಿರೀಶ್ಯುವಗಳ್, ಪ್ರೊಜೆಕ್ಟ್ ಛೇರ‍್ಮನ್ ಬಿ.ಎಸ್. ವಿನೋದ್ ಕುಮಾರ್, ಆದಿಚುಂಚನಗಿರಿ ವೈಸ್ ಕೌನ್ಸಲರ್ ಡಾ. ಎಂ.ಎ. ಶೇಖರ್, ರಿಜಿಸ್ಟರ್ ಡಾ. ಸಿ.ಕೆ. ಸುಬ್ಬರಾಯ್, ಎಂ.ಜಿ. ಶಿವರಾಂ, ಡಾ. ಕೆ.ಎಂ. ಶಿವಕುಮಾರ್ ಭಾಗವಹಿಸುವುದಾಗಿ ಹೇಳಿದರು.
ಕಳೆದ ೧೦ ವರ್ಷದಿಂದ ಈ ರೀತಿಯ ಉಚಿತ ಶಿಬಿರಗಳನ್ನು ಆಯೋಜಿಸುತ್ತಿದ್ದು, ೧೬೦೦ಕ್ಕೂ ಅಧಿಕ ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಬಿಜಿ ನಗರದ ರೋಟರಿ ಹಾಗೂ ಅಮೇರಿಕಾದ ರೊಟೊಪ್ಲಾಸ್ಟ್ ಇಂಟರ್ನ್ಯಾಶನಲ್ ವತಿಯಿಂದ ನುರಿತ ೩೦ ತಜ್ಞ ವೈದ್ಯರ ತಂಡವು ಈ ಶಿಬಿರದಲ್ಲಿ ಭಾಗವಹಿಸಿ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ. ಸೀಳು ತುಟಿ, ಹಾಗೂ ಸೀಳು ಆಂಗುಳದ ಸಮಸ್ಯೆ ಇದ್ದವರು ಮಾತನಾಡಲು, ಹಾಲು ಕುಡಿಯಲು ಹಾಗೂ ಸೌಂದರ್ಯಕ್ಕೂ ತೊಂದರೆ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಅಂತವರ ಸಂಖ್ಯೆ ಕಡಿಮೆ ಮಾಡಲು ಆದಿಚುಂಚನಗಿರಿ ಮಹಾಸ್ವಾಮಿಗಳ ಸಹಕಾರದೊಂದಿಗೆ ಕಳೆದ ಹತ್ತು ವರ್ಷದಿಂದ ಕೆಲಸ ಮಾಡುತ್ತಿದೆ ಎಂದರು. ೩ ತಿಗಳಿನಿಂದ ೧೨ ವರ್ಷದವರೆಗೆ ಇರುವ ಮಕ್ಕಳಿಗೆ ಸೀಳು ತುಟಿ, ಸೀಳು
ಆಂಗುಳ ಹಾಗೂ ಸುಟ್ಟ ಗಾಯಗಳಿಂದ ಉಂಟಾದ ವಿರೂಪಗಳ ನಿವಾರಣೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ. ಈಗಾಗಲೇ ನೋಂದಣಿ ಆರಂಭಾವಾಗಿದ್ದು, ಚಿಕಿತ್ಸೆ ಅಗತ್ಯ ಇದ್ದವರು ಕೂಡಲೇ ನೋಂದಾವಣಿ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಸೀಳು ತುಟಿ, ಹಾಗೂ ಸುಟ್ಟ ಗಾಯಗಳಿಂದ ಆಗಿರುವ ವಿರೂಪಗಳಿಂದ ಬಳಲುತ್ತಿರುವ ಫಲಾನುಭವಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ ಇದನ್ನು ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರದಲ್ಲಿ ರೋಗಿಗಳು ಹಾಗೂ ಅವರ ಕುಟುಂಬದವರಿಗೂ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ನೊಂದಾವಣೆ ಮಾಡಿಕೊಳ್ಳಲು ಮೊ.೯೯೪೫೫೫೮೫೭೯, ೯೯೦೦೭೫೮೯೪೬ ಹಾಗೂ ೭೯೭೫೧೦೨೯೮೨ ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳುವಂತೆ ಇದೆ ವೇಳೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ವೈ.ಎಸ್. ಶಿವಕುಮಾರ್ ಇತರರು ಉಪಸ್ಥಿತರಿದ್ದರು.
-
Mysore7 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State10 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State10 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health10 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan7 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized6 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized12 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State10 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.