National - International
ಮಸೀದಿಯೊಳಗೆ ಪ್ರತಿದಿನ 5 ಬಾರಿ ಹಿಂದೂ ದೇವರ ಪೂಜೆ!!!

ವಾರಣಾಸಿ: ಐತಿಹಾಸಿಕವಾಗಿ 31 ವರ್ಷಗಳ ತರುವಾಯ ಜ್ಞಾನವ್ಯಾಪಿ ಮಸೀದಿಯ ಒಳಗಡೆ ಇರುವ ಹಿಂದೂ ದೇವರ ಮೂರ್ತಿಗೆ ಪೂಜೆ ಸಲ್ಲಿಸಲು ನ್ಯಾಯಾಲಯವು ಅವಕಾಶವನ್ನು ಕಲ್ಪಿಸಿದೆ ಕೊಟ್ಟಿದೆ. ಪೂಜೆಯು ನಡೆದಿದ್ದು ದಿನಕ್ಕೆ 5 ಬಾರಿ ಪೂಜೆ ನಡೆಯುವುದು ವಿಶೇಷವಾದುದು. ಆರತಿ ಬೆಳಗಿ, ಗಂಟೆ ಶಬ್ದ, ಶಂಖನಾದದ ಮೂಲಕ ಪೂಜೆ ನೆರವೇರಿಸಲಾಗುತ್ತದೆ. ಹಾಗಾದರೆ ಪ್ರತಿ ದಿನ ಯಾವ ಯಾವ ಸಮಯದಲ್ಲಿ ಪೂಜೆಯನ್ನು ನಡೆಸಲಾಗುತ್ತದೆ ಎಂದು ತಿಳಿಯುತ್ತ ಹೋಗೋಣ.
ಕಾಶಿ ವಿಶ್ವನಾಥನ ಪಕ್ಕದಲ್ಲಿರುವ ಜ್ಞಾನವ್ಯಾಪಿ ಮಸೀದಿಯಲ್ಲಿ ದೇವರ ಪೂಜಾ ಕಾರ್ಯಕ್ರಮ ಆರಂಭವಾಗಿದೆ. ಮೂರು ದಶಕಗಳ ನಂತರ ಮಸೀದಿಯ ನೆಲಮಹಡಿಯಲ್ಲಿರುವ ‘ವ್ಯಾಸ್ ಕೆ ಠಿಖಾನಾ’ದಲ್ಲಿನ ಶೃಂಗಾರ ಗೌರಿ ವಿಗ್ರಹಗಳಿಗೆ ಪೂಜೆಯನ್ನು ಮಾಡುಲಾಗುತ್ತಿದೆ . ಇಂದು ಕಾಶಿ ವಿಶ್ವನಾಥ ಟ್ರಸ್ಟ್ ಹಾಗೂ ಇದರ ಜೊತೆಗೆ ಕೆಳ ಕುಟುಂಬಗಳು ಇಂದು ಪೂಜೆಯನ್ನು ಸಲ್ಲಿಸಿದರು. ಮುಖ್ಯ ಆಕರ್ಷಣೆ ಎಂದರೇ ಪ್ರತಿ ದಿನ 5 ಬಾರಿ ಪೂಜೆ ನಡೆಸಲಾಗುತ್ತದೆ.
ಈ ಬಗ್ಗೆ ಹಿಂದೂ ಪರ ವಕೀಲ ವಿಷ್ಣುಶಂಕರ್ ಜೈನ್ ಕೆಲ ಆಸಕ್ತಿಕರವಾದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಜ್ಞಾನ ವ್ಯಾಪಿ ಮಸೀದಿಯಲ್ಲಿ ಹಿಂದುಗಳು ಪೂಜೆ ಮಾಡುವಂತೆ ನ್ಯಾಯಾಲಯ ಅನುಮತಿ ನೀಡಿದೆ. ಶಸ್ತ್ರೋಪ್ತವಾಗಿ ದಿನಕ್ಕೆ ಇದು ಬಾರಿ ಪೂಜೆ ನಡೆಯುತ್ತಿದ್ದು, ಮುಂಜಾನೆ 3.30 ಕ್ಕೆ ಮಂಗಳಾರತಿ, ಮಧ್ಯಾಹ್ನ 12 ಗಂಟೆಗೆ ಭೋಗ ಆರತಿ,ಸಂಜೆ 4 ಗಂಟೆಗೆ ಅಪರಾಹ್ನ ಆರತಿ, ಸಂಜೆ 7 ಗಂಟೆಗೆ ಸಾಂಯಕಾಲ ಆರತಿ ಹಾಗೂ ರಾತ್ರಿ 10.30ಕ್ಕೆ ಶಯನ ಆರತಿ ಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಹಿಂದೂ ಪೂಜಾ ಪದ್ಧತಿಯಲ್ಲಿ ಗಂಟೆ ತುಂಬ ಮುಖ್ಯ.. ಈ ಅದು ಜ್ಞಾನ ವ್ಯಾಪಿ ಮಸೀದಿಯಲ್ಲಿ ಮೊಳಗುತ್ತದೆ . ಅಲ್ಲಿನ ದೇವರುಗಳಿಗೆ ಪೂಜೆಸಲ್ಲಿಸುತ್ತಿರುವ ವ್ಯಾಸ ಕುಟಂಬದ ಅರ್ಚಕ ಜಿತೇಂದ್ರ ನಾಥ ವ್ಯಾಸ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ ನೀಡಿದ ಅನುಮತಿಯಿಂದ ಮಹದೇವನನ್ನು ಪೂಜಿಸುವ ಅವಕಾಶ ದೊರೆತಿದೆ ಎಂದು ದೇವಸ್ತಾನದ ಅರ್ಚಕ ಜಿತೇಂದ್ರ ನಾಥ ವ್ಯಾಸ ಹೇಳುತ್ತಾರೆ.
ವಾರಣಾಸಿಯ ನ್ಯಾಯಾಲಯ ಪೂಜೆಯ ಅನುಮತಿ ಕೊಟ್ಟಿದ್ದರಿಂದ ಮಸೀದಿಯ ಅಂಜುಮ್ ಇನ್ತೆಜಾಮಿಯಾ ಮಸೀದಿ ಸಮಿತಿಯ ಕೆರಳಿ ಕೆಂಡವಾಗಿತ್ತು. ಕೂಡಲೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಿ ಹಿಂದುಗಳು ಪೂಜೆ ಸಲ್ಲಿಸುವುದನ್ನು ನಿಲ್ಲಿಸಬೇಕು. ಈ ಇಂದೆ ಇದಂತೆ ಇರಬೇಕು ಎಂದು ಅರ್ಜಿ ಸಲ್ಲಿಸಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿ ಹೈ ಕೋರ್ಟ್ ಗೆ ಹೋಗುವಂತೆ ಹೇಳಿದೆ.
National - International
ಪಾಕ್‌ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್ ಲಿಬರೇಶನ್ ಆರ್ಮಿ

ಇಸ್ಲಾಮಾಬಾದ್: ಪಾಕಿಸ್ತಾನದ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ.
ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ಸೈನಿಕರಿದ್ದ ಬಸ್ಸಿಗೆ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆದಿದೆ.
ವಿಶೇಷವೆಂದರೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಸೈನಿಕರನ್ನು ಉಗ್ರರು ಹೇಗೆ ಗುರಿ ಮಾಡಿ ಕೃತ್ಯ ಎಸಗಿದ್ದರೋ ಅದೇ ರೀತಿಯಾಗಿ ಇಂದು ಪಾಕಿಸ್ತಾನದಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ.
ಬಸ್ಸಿಗೆ ಡಿಕ್ಕಿಯಾದ ಬೆನ್ನಲ್ಲೇ ಕಾರು ತೀವ್ರವಾಗಿ ಸ್ಫೋಟಗೊಂಡಿದೆ. ಸ್ಫೋಟಗೊಳ್ಳುತ್ತಿದ್ದಂತೆ ಛಿದ್ರಗೊಂಡಿರುವ ಬಸ್ಸಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಘಟನೆಯಲ್ಲಿ 90 ಮಂದಿ ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದ್ದು, ಇದನ್ನು ಪಾಕ್ ಸೇನೆ ನಿರಾಕರಿಸಿದೆ. ಘಟನೆಯಲ್ಲಿ ಕೇವಲ 12 ಮಂದಿ ಸೈನಿಕರು ಮೃತರಾಗಿದ್ದಾರೆ ಎಂದು ಪಾಕ್ ಸೇನೆ ಹೇಳಿಕೊಂಡಿದೆ.
National - International
ಮಧ್ಯ ಅಮೇರಿಕಾದಲ್ಲಿ ಭಾರೀ ಚಂಡಮಾರುತ: ಕನಿಷ್ಠ 32 ಸಾವು

ವಾಷಿಂಗ್ಟನ್: ಭೀಕರ ಸುಂಟರಗಾಳಿಗತೆ ತತ್ತರಿಸಿದ ಮಧ್ಯ ಅಮೇರಿಕಾದಲ್ಲಿ ಕನಿಷ್ಠ 32 ಮಂದಿ ಮೃತರಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಭೀಕರ ಸುಂಟರಗಾಳಿಗೆ ಮನೆ ಛಾವಣಿಗಳು ಹರಿದು ಹೋಗಿದ್ದು, ಬೃಹತ್ ಟ್ರಕ್‌ಗಳು ಉರುಳಿ ಬಿದ್ದಿವೆ ಎಂದು ವರದಿಯಾಗಿದೆ.
ಭಾರಿ ಗಾಳಿಯಿಂದ ಎದ್ದ ಧೂಳಿನಿಂದ ಕಾನ್ಸಾಸ್‌ನಲ್ಲಿ 50ಕ್ಕೂ ಹೆಚ್ಚು ವಾಹನಗಳು ಸಂಪರ್ಕ ಕಡಿತಗೊಂಡು ಸರಣಿ ಅಪಘಾತ ಸಂಭವಿಸಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂಡಮಾರುತದಿಂದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಿಸೌರಿ ರಾಜ್ಯದ ಹೆದ್ದಾರಿ ಗಸ್ತು ಪೊಲೀಸರು ದೃಢಪಡಿಸಿದ್ದಾರೆ. ಮರಗಳು ಮತ್ತು ವಿದ್ಯುತ್ ತಂತಿಗಳು ಉರುಳಿ ಬಿದ್ದಿದೆ. ಗಾಳಿಯ ರಭಸಕ್ಕೆ ಮರೀನಾ ಬಂದರಲ್ಲಿ ಒಂದೆಡೆ ರಾಶಿ ಬಿದ್ದಿರುವ ದೋಣಿಗಳ ಚಿತ್ರವನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಇದು ನಾನು ಅನುಭವಿಸಿದ ಅತ್ಯಂತ ಭಯಾನಕ ವಿಷಯ. ಚಂಡಮಾರತುದ ವೇಗ ಅತ್ಯಂತ ಭೀಕರವಾಗಿತ್ತು. ಅದರ ವೇಗಕ್ಕೆ ನಮ್ಮ ಕಿವಿಗಳು ಸಿಡಿಯುತ್ತಿದ್ದವು ಎಂದು ಮಿಸೌರಿಯ ನಿವಾಸಿ ಅಲಿಸಿಯಾ ವಿಲ್ಸನ್ ಚಂಡಮಾರುತದ ಭೀಕರತೆಯನ್ನು ತೆರೆದಿಟ್ಟರು.
ಮಿಸೌರಿಯ ವೇಯ್ನ್ ಕೌಂಟ್‌ನಲ್ಲಿ 6, ಒಝಾರ್ಕ್ ಕೌಂಟಿಯಲ್ಲಿ 3 ಹಾಗೂ ಲೂಯಿಸ್ ಕೌಂಟಿಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟೆಕ್ಸಾಸ್‌ನ ದಕ್ಷಿಣ ಭಾಗದಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್ ಭಾಗದಲ್ಲಿ ಮೂವರು ಮೃತಪಟ್ಟು 29 ಮಂದಿ ಗಾಯಗೊಂಡಿದ್ದಾರೆ. ಮಧ್ಯ ಅಮೇರಿಕಾದ ಕನಿಷ್ಠ 2 ಲಕ್ಷ ಮನೆ ಹಾಗೂ ಕಚೇರಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
National - International
ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ಸ್ವೀಕಾರ

ಒಟ್ಟಾವಾ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಇದಕ್ಕೂ ಮೊದಲು ಮಾರ್ಕ್ ಕಾರ್ನಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಕೆನಡಾದ ಅಧ್ಯಕ್ಷರಾಗಿದ್ದರು.
ಕಳೆದ ಜನವರಿಯಲ್ಲಿ ಜಸ್ಟಿನ್ ಟ್ರುಡೊ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ನಿ ಅವರು ಲಿಬರಲ್ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಕೆನಡಾದ 24ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ಬಗ್ಗೆ ಮಾತನಾಡಿದ ಕಾರ್ನಿ ಅವರು, ನಮ್ಮ ಸರ್ಕಾರ ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಕೆನಡಿಯನ್ನರ ನಿರೀಕ್ಷೆ ಪೂರ್ಣಗೊಳಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಕೆನಡಾದ ಭವಿಷ್ಯವನ್ನು ರಕ್ಷಿಸುವ ಅನುಭವಿ ಸಚಿವ ಸಂಪುಟ ನಮ್ಮದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
-
Chamarajanagar21 hours ago
ಕಾಂಗ್ರೆಸ್ ಗೆ ಭರ್ಜರಿ ಗೆಲುವು
-
Uncategorized20 hours ago
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್
-
Chamarajanagar22 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ
-
Chikmagalur23 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
National - International13 hours ago
ಪಾಕ್‌ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್ ಲಿಬರೇಶನ್ ಆರ್ಮಿ
-
Chamarajanagar16 hours ago
ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ
-
Kodagu15 hours ago
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ
-
Mandya18 hours ago
ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್ಡಿಕೆ ಕಳವಳ