Connect with us

Mandya

ಮನಸೋ ಇಚ್ಚೆಯಂತೆ ಥಳಿಸಿದ್ದವರಲ್ಲಿ ಎಸ್ಐ ಅಯ್ಯನಗೌಡ ಸಸ್ಪೆಂಡ್, ಉಳಿದ ಪೊಲೀಸರ ಅಮಾನತು ಯಾವಾಗ ?

Published

on

ಮಂಡ್ಯ: ರೈತ ಮಹಿಳೆಗೆ ಥಳಿಸಿ ಆಸ್ಪತ್ರೆ ಸೇರುವಂತೆ ಮಾಡಿದ್ದ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಅಯ್ಯನಗೌಡ ಸೇವೆಯಿಂದ ಅಮಾನತು ಮಾಡಲಾಗಿದ್ದು, ಉಳಿದ ಪುರುಷ ಪೊಲೀಸರು ಶೂ ಕಾಲಿನಿಂದ ಒದ್ದು, ಲಾಠಿಯಿಂದ ಮನಸೋ ಇಚ್ಚೆ ಥಳಿಸಿದ್ದವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಲಾಗಿದೆ.

ಮಂಡ್ಯದ ಅಶೋಕ್ ನಗರದ ರೂಪ ಮೇಲೆ ದೌರ್ಜನ್ಯ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಯ್ಯನಗೌಡ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಸೇವೆಯಿಂದ ಅಮಾನತು ಮಾಡಲಾಗಿದೆ. ಆದರೆ ಉಳಿದ ಪುರುಷ ಪೊಲೀಸರ ಅಮಾನತು ಯಾವಾಗ ಎಂದು ಸಾರ್ವಜನಿಕರು ಮತ್ತು ಪ್ರಗತಿಪರ ಹೋರಾಟಗಾರರು ಪ್ರಶ್ನಿಸುತ್ತಿದ್ದಾರೆ.

ಜನವರಿ 5 ರಂದು ವಿವೇಕಾನಂದ ರಸ್ತೆಯ ರವಿ ನರ್ಸಿಂಗ್ ಹೋಮ್ ಬಳಿ ಪೊಲೀಸ್ ಪೇದೆ ವನಜಾಕ್ಷಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಹಸು ಅಡ್ಡ ಬಂದಿದ್ದು,ಇದರಿಂದ ಮಹಿಳಾ ಪೇದೆ ಹಸು ಸಾಕಾಣಿಕೆದಾರರಿಗೆ ನಿಂದನೆ ಮಾಡಿ ಕಪಾಲ ಮೋಕ್ಷವನ್ನು ಮಾಡಿ ಭಯಹುಟ್ಟಿಸಿ, ಕೇಸು ಕೂಎ ದಾಖಲಿಸಿದ್ದರು.

ಇದೇ ವಿಚಾರವಾಗಿ ಪೂರ್ವ ಠಾಣೆಯ ಸಬ್ ಇನ್ ಸ್ಪೆಕ್ಟರ್ ಅಯ್ಯನಗೌಡ ಸ್ಥಳಕ್ಕೆ ತೆರಳಿ ಜೀಪ್ ಚಾಲಕನ ಜೊತೆ ಸೇರಿ ಮಹಿಳೆ ರೂಪರನ್ನು ಬಲವಂತವಾಗಿ ಜೀಪ್ ಗೆ ಹತ್ತಿಸಿಕೊಂಡು ಠಾಣೆಗೆ ಕರೆದುಕೊಂಡು ಬಂದು, ಆನಂತರ ಠಾಣೆಯ ಕೊಠಡಿಯಲ್ಲಿ ಕೂಡಿ ಹಾಕಿ ಅಯ್ಯನಗೌಡ ಮತ್ತು ಇತರೆ ಪೊಲೀಸರು ಮಹಿಳೆಯ ಮೇಲೆ ಮನಸೋ ಇಚ್ಚೆ ಥಳಿಸಿದ್ದಾರೆ.


ರೂಪಳ ತಾಯಿ ಗೌರಮ್ಮ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಎಸ್ ಐ ಅಯ್ಯನಗೌಡನನ್ನು ಸೇವೆಯಿಂದ ಅಮಾನತು ಮಾಡಿದ್ದು, ಉಳಿದವರನ್ನು ತಕ್ಷಣವೇ ಅಮಾನತು ಮಾಡದಿದ್ದರೆ ಕಮಿಷನರ್ ಅವರಿಗೆ ದೂರು ನೀಡುವುದಾಗಿ ಪ್ರಗತಿಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Mandya

ಸ್ಟಾರ್ ಚಂದ್ರು ರವರಿಗೆ ಮತ ನೀಡುವಂತೆ ಕ್ರಾಂತಿ ಸಿಂಹ ಮನವಿ

Published

on

ಮಂಡ್ಯ: ಏಪ್ರಿಲ್ 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ವೆಂಕಟರಮೇಗೌಡ ಅವರಿಗೆ ಮತ ನೀಡುವಂತೆ ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಿಎಂ ಕ್ರಾಂತಿ ಸಿಂಹ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ಮಂಡ್ಯ ಜನತೆಯ ಸ್ವಾಭಿಮಾನದ ಚುನಾವಣೆಯಾಗಿದೆ. ನಮ್ಮ ಜಿಲ್ಲೆಯ ನಾಯಕತ್ವ ಸಂಕಷ್ಟದಲ್ಲಿದ್ದು ಹಾಗಾಗಿ ಜಿಲ್ಲೆಯ ಮನೆಯ ಮಗ ಕಾಂಗ್ರೆಸ್ ಅಭ್ಯರ್ಥಿ ಕೆಎಚ್ ವೆಂಕಟರಮಣೆಗೌಡ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಬಿಜೆಪಿಯಲ್ಲಿ ಓರ್ವ ಬಲಗೈ ಸಮುದಾಯದ ಶಾಸಕನಿದ್ದು ಇಲ್ಲಿಯವರೆಗೂ ಸಚಿವ ಸ್ಥಾನ ನೀಡಿಲ್ಲ ಎಂದು ದೂರಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಆದ್ದರಿಂದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮದ್ದೂರು ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಟಿಎಂ ರಾಜಶೇಖರ್, ಮನು, ರವಿ, ರಮೇಶ್ ಬಾಬು, ಅನಿಲ್ ಕುಮಾರ್ ಉಪಸ್ಥಿತರಿದ್ದರು.

Continue Reading

Mandya

ಗ್ಯಾರಂಟಿ ಯೋಜನೆಗಳನ್ನು‌ ನಿಲ್ಲಿಸುವ ಪ್ರಶ್ನೆಯೇ ಇಲ್ಲ – ಸಚಿವ ಚಲುವರಾಯಸ್ವಾಮಿ

Published

on

ಮಂಡ್ಯ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಹಾಗಾಗಿ ವಿರೋಧ ಪಕ್ಷಗಳ ಮಾತಿಗೆ ಮತದಾರರು ಕಿವಿಗೊಡದೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ ಅವರನ್ನು ಬೆಂಬಲಿಸುವಂತೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,,ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದೇವೆ. ಆದರೆ ಕುಮಾರಸ್ವಾಮಿ ಅವರು ಕೆಆರ್ ನಗರದಲ್ಲಿ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದು, ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ರೈತರ ಪರ ಕೆಲಸ ಮಾಡಬೇಕಿದ್ದ ವಿಪಕ್ಷಗಳ ನಾಯಕರು ಇಂತಹ ಬಾಲಿಶ ತನದ ಹೇಳಿಕೆಯನ್ನು ನೀಡುತ್ತಿದ್ದು ಜನತೆ ಕಿವಿಗೊಡದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಕುಮಾರಸ್ವಾಮಿ ಅವರು ಗ್ಯಾರಂಟಿಯಿಂದ ಮಹಿಳೆಯರು ದಿಕ್ಕು ತಪ್ಪುತ್ತಿದ್ದಾರೆ ಎಂದು ಹೇಳಿದ್ದರು. ಅದನ್ನು ವಿರೋಧಿಸಿದ್ದರು. ಹಾಗಾಗಿ ಸಾರ್ವಜನಿಕರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ. ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1 ಲಕ್ಷ ರೂಪಾಯಿ,ದಲಿತರು ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆಗಳನ್ನು ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದೆ. ಆದ್ದರಿಂದ ಮೋದಿ ಸರ್ಕಾರವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ವಿನಂತಿಸಿದರು.

ಮೋದಿ ಅವರು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಭರವಸೆ ನೀಡಿದ್ದರು. ಕಪ್ಪು ಹಣವನ್ನು ತರುತ್ತೇನೆ ಎಂದಿದ್ದರು. ಆದರೆ ಈ ಕೆಲಸ ಇಂದಿಗೂ ಆಗಿಲ್ಲ.
ಆದ್ದರಿಂದ ತೆಲಂಗಾಣದಲ್ಲಿ ರೇವಂತ ರೆಡ್ಡಿ ಅವರನ್ನು ಆಶೀರ್ವದಿಸಿದಂತೆ ಎನ್ ಡಿ ಎ ಒಕ್ಕೂಟವನ್ನು ಸೋಲಿಸಿ ಯುಪಿಎ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಸಚಿವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕ ಗಣಿಗ ರವಿಕುಮಾರ್, ಎಂಎಸ್ ಚಿದಂಬರ್, ಯೋಗೇಶ್ ಅಂಜನಾಶ್ರೀಕಾಂತ್, ಸುರೇಶ್ ಸೇರಿದಂತೆ ಇತರರಿದ್ದರು.

Continue Reading

Mandya

ಜೆಡಿಎಸ್, ಬಿಜೆಪಿ ನಾಯಕರ ವಿರುದ್ದ ಶಾಸಕ‌‌ ನರೇಂದ್ರ ಸ್ವಾಮಿ‌ ಕಿಡಿ

Published

on

ಮಂಡ್ಯ : ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಮತ್ತು ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆಗೆ ಶಾಸಕ ನರೇಂದ್ರಸ್ವಾಮಿ ತಿರುಗೇಟು ನೀಡಿದ್ದಾರೆ.

ಅಂಬೇಡ್ಕರ್ ವಿಚಾರ ಮತ್ತು ಎಸ್ ಸಿ ಪಿ, ಟಿಎಸ್ಪಿ ಅನುದಾನ ಬಳಕೆಯ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ನೀಡಿರುವ ಮುಖಂಡರ ಹೇಳಿಕೆಯನ್ನು ಖಂಡಿಸಿರುವ ಅವರು, ವಿರೋಧ ಪಕ್ಷಗಳು ಸುಳ್ಳು ಹೇಳಿ ಅದನ್ನು ಸತ್ಯ ಮಾಡಲು ಹೊರಟಿದ್ದು ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಾಲೆಗಳ ಆಧುನಿಕರಣ ಕಾಮಗಾರಿಯನ್ನು ನಾವು ಮಂಜೂರು ಮಾಡಿದ್ದೇವೆ. ಯೋಜನೆ ಸಿದ್ಧವಾಗಬೇಕಾದರೆ ಬೋರ್ಡಿನಲ್ಲಿ ಆಗಬೇಕು. ನಂತರ ಟೆಂಡರ್ ಕರೆಯಬೇಕು. ಆದರೆ ಅವರ ಕಾಲದಲ್ಲಿ ಇದು ಆಗಿಲ್ಲ. ಈ ವಿಚಾರವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ ಮಂಡ್ಯದ ಬಗ್ಗೆ ಪರಿಜ್ಞಾನ ಇದ್ದಂತೆ ಕಾಣುತ್ತಿಲ್ಲ ಎಂದು ತಿಳಿಸಿದ ಅವರು ಅತಿ ಹೆಚ್ಚು ನೀರಿನ ಬಳಕೆ ಹಾಗೂ ರಸಗೊಬ್ಬರಗಳ ಬಳಕೆಯಿಂದ ಮಂಡ್ಯದ ಮಣ್ಣಿನ ಸತ್ವ ಕಳೆದು ಹೋಗಿದೆ. ಹಾಗಾಗಿ ಇದರ ಪುನರು ಜ್ಜೀವನಕ್ಕೆ ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ಸ್ಥಾಪಿಸುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಮೈ ಶುಗರ್ ಕಾರ್ಖಾನೆಯಲ್ಲಿ ಈಗಾಗಲೇ ಹಣ ದುರುಪಯೋಗ ಮಾಡಿಕೊಂಡಿರುವವರ ವಿರುದ್ಧ ತನಿಖೆ ನಡೆಯುತ್ತಿದೆ. ಈ ವಿಚಾರವನ್ನು ಅವರು ಮುಂದೆ ತರುವುದಿಲ್ಲ. ಆದರೆ ರೈತರ ಬದುಕು ಕೃಷಿಯ ಮೇಲೆ ನಿಂತಿದ್ದು, ಇದರ ಜವಾಬ್ದಾರಿ ಹೊರಬೇಕಿದ್ದವರು ಸುಳ್ಳು ಹೇಳುತ್ತಾ ಯಾವ ಪುರುಷಾರ್ಥಕ್ಕೆ ಚುನಾವಣೆಗೆ ನಿಂತಿದ್ದಾರೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Continue Reading

Trending

error: Content is protected !!