Crime
ಮದುವೆ ಆಗುವುದಾಗಿ ನಂಬಿಸಿ, ಯುವತಿಯ ಬೆತ್ತಲೆ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಅತ್ಯಾಚಾರ
ಮೈಸೂರು: ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ, ಯುವತಿಯ ಬೆತ್ತಲೆ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಬೆಂಗಳೂರು ರಸ್ತೆಯ ರಿಂಗ್ ರಸ್ತೆ ಬಳಿ ಇರುವ ಏಟ್ರಿಯಂ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಹೋಟೆಲ್ ಮ್ಯಾನೇಜ್ಮೆಂಟ್ ನಡೆಸುವ ಪ್ರೀತಂ ಪುರಾಣಿಕ್ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಪ್ರೀತಂ ಪುರಾಣಿಕ್ ಹಾಗೂ ಆತನ ತಂದೆ ಕೃಷ್ಣದಾಸ್ ಪುರಾಣಿಕ್ ಎಂಬುವರ ವಿರುದ್ಧ ನೊಂದ ಯುವತಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೆಲವು ವರ್ಷಗಳಿಂದ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಸಲುಗೆ ಬೆಳೆಸಿದ ಪ್ರೀತಂ ಪುರಾಣಿಕ್ ಮದುವೆ ಆಗುವುದಾಗಿ ನಂಬಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ನಂತರ ಹೋಟೆಲ್ ನಲ್ಲೇ ಇದ್ದ ಸ್ಪಾ ಒಂದರಲ್ಲಿ ಮದುವೆ ಆದ ಪ್ರೀತಂ ಪುರಾಣಿಕ್ ಯುವತಿಯ ಇಚ್ಛೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿದ. ಇದರ ಪರಿಣಾಮ ಯುವತಿ ಗರ್ಭವತಿಯಾಗಿದ್ದಳು. ಮದುವೆ ಆಗುವಂತೆ ಒತ್ತಾಯಿಸಿದಾಗ ಬಲವಂತವಾಗಿ ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ನಂತರ ಮತ್ತೆ ಮದುವೆ ಆಗುವ ನಾಟಕವಾಡಿ ಯುವತಿಯ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ದೈಹಿಕ ಸಂಪರ್ಕ ಬೆಳೆಸಿದ. ಯುವತಿ ಮತ್ತೆ ಗರ್ಭವತಿಯಾಗಿದ್ದಾಳೆ. ಇದೀಗ ಮದುವೆ ಆಗುವಂತೆ ಒತ್ತಾಯಿಸಿದ ವೇಳೆ ಪ್ರೀತಂ ಪುರಾಣಿಕ್ ಹಾಗೂ ತಂದೆ ಕೃಷ್ಣದಾಸ್ ಪುರಾಣಿಕ್ ಅವರು ಯುವತಿಗೆ ಜಾತಿ ನಿಂದನೆ ಮಾಡಿ ಹೋಟೆಲ್ ನಿಂದ ಹೊರಗೆ ತಳ್ಳಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾಳೆ.

ಸಧ್ಯ ಗರ್ಭವತಿಯಾಗಿರುವ ಯುವತಿ ತನ್ನನ್ನು ವಂಚಿಸಿದ ಪ್ರೀತಂ ಪುರಾಣಿಕ್ ಹಾಗೂ ಬೆಂಬಲ ನೀಡಿದ ತಂದೆ ಕೃಷ್ಣದಾಸ್ ಪುರಾಣಿಕ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಅತ್ಯಾಚಾರ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Crime
ನನ್ನನ್ನೇ ಲವ್ ಮಾಡು ಚಿನ್ನ, ಇಲ್ಲಾಂದ್ರೆ ಇಡ್ತೀನಿ ಗುನ್ನ – ಇನ್ಸ್ಪೆಕ್ಟರ್ ಗೆ ಕಾಂಗ್ರೆಸ್ ಕಾರ್ಯಕರ್ತೆಯ ಚಿತ್ರಹಿಂಸೆ!
ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತೆಯೊಬ್ಬಳು ಇನ್ಸ್‌ಪೆಕ್ಟರ್ ಒಬ್ಬರ ಹಿಂದೆ ಬಿದ್ದು
ತನ್ನನ್ನೇ ಪ್ರೀತಿಸುವಂತೆ ಚಿತ್ರಹಿಂಸೆ ನೀಡಿ, ಆತ್ಮಹತ್ಯೆ ಬೆದರಿಕೆಯನ್ನೂ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ, ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ್ ಸತೀಶ್ ಕಿರುಕುಳಕೊಳಗಾದ ನೊಂದ ಪುರುಷರಾಗಿದ್ದು, ಅವರಿಗೆ ಚಿತ್ರ ಹಿಂಸೆ ನೀಡಿದ ಆರೋಪದ ಮೇಲೆ ಸಂಜನಾ ಅಲಿಯಾಸ್ ವನಜಾ ವಿರುದ್ಧ ದೂರು ದಾಖಲಾಗಿದೆ. ನನ್ನ ಲವ್ ಮಾಡಬೇಕು ಇಲ್ಲ, ಅಂದರೆ ಆತ್ಮಹತ್ಯೆ ಮಾಡ್ಕೊತಿನಿ ಅಂತ ಕಿರುಕುಳ ನೀಡುತ್ತಿದ ಸಂಜನಾ ಪ್ರತಿದಿನ ವಿವಿಧ ಫೋನ್ ನಂಬರ್ ಗಳಿಂದ ಇನ್ಸ್ ಪೆಕ್ಟರ್ ಗೆ ಮಸೇಜ್
ಮಾಡುತ್ತಿದ್ದಳು, ಈಕೆಯ ಮೆಸೇಜ್ ನಿಂದ ಬೇಸತ್ತಿದ್ದ ಇನ್ಸ್‌ಕ್ಷ್ಯರ್ ಸತೀಶ್, ಸಂಜನಾ ಕರೆ ಮಾಡಲು ಬಳಸಿದ್ದ ಸುಮಾರು 11 ಫೋನ್ ನಂಬರ್ ಬಾಕ್ ಮಾಡಿದ್ದರು, ಮೊಬೈಲ್ ನಂಬರ್ ಬ್ಲ್ಯಾಕ್ ಮಾಡಿದ್ದರೆ, ಠಾಣೆಗೆ ಬಂದಿದ್ದ ವನಜಾ ಲವ್ ಲೆಟರ್ ನೀಡಿ, ಪ್ರೀತಿಸದಿದ್ರೆ ಆತ್ಮಹತ್ಯೆ ಮಾಡ್ಕೊಂಡು ಸಾಯ್ತಿನಿ ಎಂದು ಬೆದರಿಕೆಯನೊಡಿದ್ದಳು,
ನಾನು ಕಾಂಗ್ರೆಸ್ ಕಾರ್ಯಕರ್ತನನಗೆ ಸಿಎಂ ಡಿಸಿಎಂ ಗೊತ್ತು ಎಂದು ಧಮಿ ಹಾಕಿದ ವನಜಾ, ಅಷ್ಟೂ ಸಾಲದೆಂಬಂತೆ ಮೋಟಮ್ಮ, ಲಕ್ಷ್ಮಿ ಹೆಬ್ಬಾರ್ ಜೊತೆಗಿನ ಫೋಟೊ ಕಳಿಸಿ
ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಳು, ಈಕೆಯ ಪ್ರಭಾವದಿಂದ ಗೃಹ ಸಚಿವರ
ಕಚೇರಿಯಿಂದಲೂ ಮಹಿಳೆ ದೂರು ತೆಗೆದುಕೊಳ್ಳುವಂತೆ ಕರೆ ಬಂದಿತ್ತು. ಆದರೆ ಅವರು
ಯಾವುದೇ ದೂರು ಕೊಟ್ಟಿಲ್ಲ ಎಂದು ಸತೀಶ್ ಉತ್ತರಿಸಿದ್ದರು.
ಇನ್ಸ್‌ಕ ಇಲ್ಲದಾಗ ಕಜ್ಜಾಯದ ಡಬ್ಬಿ ಬೊಕ್ಕೆ ತಂದು ಠಾಣೆಯಲ್ಲಿಟ್ಟಿದ, ವನಜಾ, ಲವ್ ಲೆಟರ್ ನೊಂದಿಗೆ Nexito plus ಎಂಬ ಮಾತ್ರೆಯನ್ನು ಸಹ ಇಟ್ಟಿದ್ದಳು, ನನ್ನ ಪ್ರೀತಿಯನ್ನು ನೀವು ಒಪ್ಪಲ ನಿಮಗೆ ತೊಂದರೆ ಕೊಡಲು ಇಷ್ಟ ಇಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ,ನನ್ನ ಸಾವಿಗೆ ನೀವೆ ಕಾರಣ ಎಂದು ಬರೆದು ಜೊತೆಗೆ ಹಾರ್ಟ್ ಚಿತ್ರ
ಬರೆದು Chinni love u,u love me ಎಂದು ರಕ್ತದಲ್ಲಿ, ಪತ್ರ ಬರೆದಿದ್ದಳು,
ಈಕೆಯ ಕಾಟ ತಡೆಯಲಾರದೆ ಕೊನೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ , ಸ್ವತಃ ಪೊಲೀಸ್
ಠಾಣೆಯಲ್ಲಿ, ದೂರು ದಾಖಲಿಸಿದ್ದರು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಮತ್ತು ಕರ್ತವ್ಯ ಅಡ್ಡಿ ಮಾಡಿದ ಆರೋಪದ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Crime
ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಯುವಕರು ಸ್ಥಳದಲ್ಲಿ ಸಾ**ವು
ಅರಕಲಗೂಡು :ತಾಲ್ಲೂಕಿನ ಕೊಣನೂರು ಗ್ರಾಮದಲ್ಲಿ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣ ಹೊಂದಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೆರೆಕೋಡಿ ಗ್ರಾಮದ ಅನಿಲ್ (28) ಹಾಗೂ ಹೊನ್ನೇಗೌಡ (30) ಎಂಬವರು ಮೃತ ದುರ್ದೈವಿಗಳು. ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ KA-13-F-2164 ನಂ.ದ ಸರ್ಕಾರಿ ಸಾರಿಗೆ ಬಸ್ ಮತ್ತು KA-13-HE-4883 ನೋಂದಣಿ ಸಂಖ್ಯೆಯ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.

ಡಿಕ್ಕಿಯ ರಭಸಕ್ಕೆ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡ ಹೊನ್ನೇಗೌಡ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಪ್ರಾಣಬಿಟ್ಟಿದ್ದಾರೆ. ರವಾನಿಸಲಾಯಿತಾದರೂ, ಅಷ್ಟರಲ್ಲೇ
ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Crime
ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಎಲ್‌ಎಲ್‌ಬಿ ವಿದ್ಯಾರ್ಥಿ ಸ್ಥಳದಲ್ಲೇ ಸಾ**ವು
ಹಾಸನ : ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ
ಎಲ್‌ಎಲ್‌ಬಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಮತ್ತೋರ್ವ ಯುವಕನಿಗೆ ಗಂಭೀರ ಗಾಯ
ಚಂದನ್ (22) ಮೃತ ಎಲ್‌ಎಲ್‌ಬಿ ವಿದ್ಯಾರ್ಥಿ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಿರಿಅಸಡೆ ಗ್ರಾಮದ ಬಳಿ ಘಟನೆ
ಪಕ್ಕದ ಮನೆಯ ಭರತ್ ಎಂಬುವವನ ಜೊತೆ KA-46-J-4594 ನಂಬರ್‌ನ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಚಂದನ್
ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದ KA-13-M-2664 ನಂಬರ್‌ನ ಜೀಪ್ ನಡುವೆ ಸಂಭವಿಸಿದ ಅಪಘಾತ
ಸ್ಥಳದಲ್ಲೇ ಬೈಕ್‌ನಲ್ಲಿದ್ದ ಚಂದನ್ ಸಾವು
ಗಾಯಾಳು ಭರತ್ ಆಸ್ಪತ್ರೆಗೆ ರವಾನೆ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
-
Mandya23 hours agoಕಡ್ಡಾಯವಾಗಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಕೊಡಿಸಿ: ಶಾಸಕ ಪಿ. ರವಿಕುಮಾರ್
-
Mandya19 hours agoಮನ್ ಮುಲ್ ಮಾಜಿ ನಿರ್ದೇಶಕ ಕೆ.ಎಲ್. ಯೋಗಿಶ್ ನಿಧನ
-
Special40 minutes agoNHIDCL ನಲ್ಲಿ ಉದ್ಯೋಗಾವಕಾಶ
-
Hassan17 hours agoಕಾಂಗ್ರೆಸ್ ಶಾಸಕರಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್ಡಿಕೆ
-
Kodagu13 hours agoಮಹಿಳೆಯರು ಜಾಗೃತರಾದರೆ ಸ್ವಸ್ಥ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ -ಜಿ.ವಿ. ಶ್ರೀನಾಥ್
-
Mysore23 hours agoಪೋಲಿಯೋ ಲಸಿಕೆ ಹಾಕಿಸಿ ದೇಶದಿಂದ ರೋಗವನ್ನು ನಿರ್ಮೂಲನೆ ಮಾಡಿ: ರವಿಚಂದ್ರ
-
Hassan19 hours agoಇಳಿ ವಯಸ್ಸಿನಲ್ಲಿ ಎರಡನೇ ವಿವಾಹ : ಪೊಲೀಸ್ ಠಾಣೆ ಮೆಟ್ಟಿಲೇರಿದ ಮಕ್ಕಳು
-
Hassan18 hours agoಕಾಫಿ ಬೀಜ ಕಳ್ಳತನ: ಕಳ್ಳನನ್ನು ಮಾಲಿನ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
