Kodagu
ಮಡಿಕೇರಿ ದಸರಾದಲ್ಲಿ ಕಂಗೊಳಿಸಲಿದೆ ಮರಳಿನ ವನದೈವ ಕಲಾಕೃತಿ
ಗಾಂಧಿ ಮೈದಾನಕ್ಕೆ ಬನ್ನಿ.. ಫೋಟೋ ಪಾಯಿಂಟ್‌ನಲ್ಲಿ ಫೋಟೋ ತೆಗೆಯಿರಿ
ಜನಮಿತ್ರ ಮಡಿಕೇರಿ : ಮರಳನ್ನೇ ಮೂಲವಾಗಿರಿಸಿಕೊಂಡು ಅದ್ಬುತ ದೃಶ್ಯಕಾವ್ಯ ಸೃಷ್ಟಿಸುವ ಕರ್ನಾಟಕದ ಹೆಸರಾಂತ ಮರಳು ಕಲಾವಿದೆ ಎಂ.ಎನ್. ಗೌರಿ ಈ ಬಾರಿ ಮಡಿಕೇರಿ ದಸರಾದ ವಿಶೇಷ ಆಕರ್ಷಣೆಯಾಗಿ ಮರಳಿನಲ್ಲಿ ವನದೈವದ ಕಲಾಕೃತಿ ರೂಪಿಸಲಿದ್ದಾರೆ. ಅಂತೆಯೇ ಮಡಿಕೇರಿ ದಸರಾ ಫೋಟೋ ಗ್ಯಾಲರಿ ಕೂಡ ಈ ಬಾರಿಯ ಮಡಿಕೇರಿ ದಸರಾ ಆಕರ್ಷಣೆಗಳಲ್ಲೊಂದಾಗಲಿದೆ.
ಮೈಸೂರಿನ ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಕಳೆದ 5 ವರ್ಷಗಳಿಂದ ತನ್ನದೇ ಆದ ಮರಳು ಕಲಾ ಪ್ರದರ್ಶನ ಗ್ಯಾಲರಿ ಮೂಲಕ ಕರ್ನಾಟಕದ ಏಕೈಕ ಮರಳು ಕಲಾಗ್ಯಾಲರಿ ಹೊಂದಿರುವ ಎಂ.ಎನ್. ಗೌರಿ, ಈ ಸಂಗ್ರಹಾಲಯದಲ್ಲಿ ನೂರಾರು ಮರಳು ಕಲಾಕೃತಿಗಳನ್ನು ದಿನನಿತ್ಯ ಸಾವಿರಾರು ವೀಕ್ಷಕರ ನೋಟಕ್ಕೆ ಅವಕಾಶ ಕಲ್ಪಿಸಿದ್ದಾರೆ.
2013 ರಲ್ಲಿ ಒರಿಸ್ಸಾದಲ್ಲಿ ಆಯೋಜಿತವಾಗಿದ್ದ ಅಂತರರಾಷ್ಟ್ರೀಯ ಮರಳು ಕಲಾಕೃತಿ ಸ್ಪರ್ಧೆಯಲ್ಲಿ ವಿಶ್ವದ ಹಲವೆಡೆಗಳಿಂದ ಪಾಲ್ಗೊಂಡಿದ್ದ 27 ಕಲಾವಿದರಲ್ಲಿ ಭಾರತದ ಗೌರಿ ಏಕೈಕ ಮಹಿಳಾ ಕಲಾವಿದೆಯಾಗಿದ್ದರು. ಫೈನ್ ಆರ್ಟ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಗೌರಿ, ಮರಳು ಕಲೆಯತ್ತ ಒಲವು ತೋರಿದ್ದು ಈವರೆಗೂ ರಾಜ್ಯವ್ಯಾಪಿ ನೂರಾರು ಕಲಾಕೃತಿಗಳನ್ನು ಮರಳಿನಲ್ಲಿಯೇ ರೂಪಿಸಿದ್ದಾರೆ.
ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀ, ಡಾ.ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಈಶ್ವರ, ಸೇರಿದಂತೆ ಹಲವಾರು ವಿಭಿನ್ನ ಮರಳು ಕಲಾಕೃತಿಯನ್ನು ರಚಿಸಿರುವ ಗೌರಿ ಈ ಬಾರಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಆಹ್ವಾನದ ಮೇರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿನ ಗ್ಯಾಲರಿಯಲ್ಲಿ ವನ ವೈವ ಕುರಿತಂತೆ ಮರಳು ಕಲಾಕೃತಿ ರೂಪಿಸಲಿದ್ದಾರೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಈ ಮರಳು ಕಲಾಕೃತಿಯನ್ನು ಅ. 16 ರಂದು ಸಂಜೆ 6 ಗಂಟೆಗೆ ಜಿಲ್ಲಾಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಮತ್ತು ಶಾಸಕ ಡಾ.ಮಂಥರ್ ಗೌಡ ಉದ್ಘಾಟಿಸಲಿದ್ದಾರೆ.
ಮರಳು ಕಲಾಕೃತಿಯನ್ನು ಅ.16 ರಿಂದ 25 ರವರೆಗೆ ಪ್ರತಿ ನಿತ್ಯ ಬೆಳಗ್ಗೆ 10 ಗಂಟೆಯಿAದ ರಾತ್ರಿ 10 ಗಂಟೆಯವರೆಗೆ ವೀಕ್ಷಿಸಬಹುದಾಗಿದೆ.
ಫೋಟೋ ಗ್ಯಾಲರಿ ಆಕರ್ಷಣೆ : ಈ ವರ್ಷ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ನಗರದ ಗಾಂಧಿ ಮೈದಾನಕ್ಕೆ ಬರುವವರಿಗೆ ಮತ್ತೊಂದು ಆಕರ್ಷಣೆಯೂ ಸಜ್ಜಾಗಿದೆ. ಮಡಿಕೇರಿ ದಸರಾ 2023 ಎಂಬ ಫೋಟೋ ಪಾಯಿಂಟ್‌ನ್ನು ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ರೂಪಿಸಲಾಗಿದ್ದು, ಹಿನ್ನಲೆಯಲ್ಲಿ ಕೊಡಗಿನ ನಿಸರ್ಗ ವೈಭವದ ಆಕರ್ಷಕ ಚಿತ್ರ ಕಂಗೊಳಿಸಲಿದೆ. ಈ ಪೋಟೋ ಗ್ಯಾಲರಿಯಲ್ಲಿ ನಿಂತು ಕಲಾಪ್ರೇಮಿಗಳು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಮಡಿಕೇರಿ ದಸರಾದ ನೆನಪನ್ನು ಸ್ಮರಣೀಯವಾಗಿಸಲು ಅವಕಾಶ ನೀಡಲಾಗಿದೆ. ಫೋಟೋ ಗ್ಯಾಲರಿಯು ಅ.16 ರಂದು ಸಂಜೆ 6 ಗಂಟೆಗೆ ಉದ್ಘಾಟನೆಯಾಗಲಿದೆ. ಈ ರೀತಿ ತಾವು ತೆಗೆದ ಫೋಟೋಗಳನ್ನು #MadikeriDasara ಇಲ್ಲಿ ಫೇಸ್ ಬುಕ್, ಇನ್ಸ್ ಟ್ರಾಗ್ರಾಂ ಮೂಲಕ ಪೋಸ್ಟ್ ಮಾಡಬಹುದು.
Kodagu
ರಬೀವುಲ್ ಅವ್ವಲ್ ತಿಂಗಳ ಚಂದ್ರದರ್ಶನ -ಸೆ.16ಕ್ಕೆ ಈದ್ ಮಿಲಾದ್ ಆಚರಣೆ
ನಾಪೋಕ್ಲು :ಇಂದು 4-09-2024 ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ರಬೀವುಲ್ ಅವ್ವಲ್ ತಿಂಗಳ ಚಂದ್ರ ದರ್ಶನವಾಗಿದ್ದು, ಸೆಪ್ಟೆಂಬರ್ 16 ಸೋಮವಾರದಂದು ಈದ್ ಮಿಲಾದ್ ಆಚರಿಸಲಾಗುತ್ತದೆ ಎಂದು ಕೊಡಗು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಗಳಾದ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ಝಕರಿಯ ನಾಪೋಕ್ಲು
Kodagu
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಕೊಡಗು ವಿಶ್ವವಿದ್ಯಾಲಯದ ನೂತನ ಕುಲ ಸಚಿವ ಪ್ರೊ. ಸುರೇಶ ಭೇಟಿ
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾಲೇಜಿಗೆ ಭೇಟಿ ನೀಡಿ ಎಲ್ಲಾ ಕೊಠಡಿಗಳು ಮತ್ತು ಮೌಲ್ಯಮಾಪನ ಕೇಂದ್ರ, ಗ್ರಂಥಾಲಯ, ವಿಜ್ಞಾನ ಲ್ಯಾಬ್ ಮತ್ತು ಕಂಪ್ಯೂಟರ್ ಲ್ಯಾಬ್ ಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ನೋಡಿ ಕೊಠಡಿಗಳಲ್ಲಿ ನೀರು ಸುರಿಯುತ್ತಿದ್ದು ತಕ್ಷಣ ಕೊಠಡಿಗಳ ನವೀಕರಣ ಆಗಬೇಕು ನಾನು ಮತ್ತು ಕುಲಪತಿ ಗಳ ಜೊತೆ ಗೂಡಿ ಸ್ಥಳೀಯ ಶಾಸಕರಾದ ಮಂಥರ್ ಗೌಡ ಹಾಗೂ ಮುಖ್ಯ ಮಂತ್ರಿಗಳು ಕಾನೂನು ಸಲಹೆ ಗಾರರು ಮತ್ತು ವಿರಾಜಪೇಟೆ ಶಾಸಕರಾದ ಪೊನ್ನಣ್ಣ ಮತ್ತು ವಿಧಾನ ಪರಿಷತ್ ಸದಸ್ಯರ ಹಾಗೂ ಮೈಸೂರು ಮತ್ತು ಕೊಡಗು ಲೋಕಸಭಾ ಸದಸ್ಯರರಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪರಿಸ್ಥಿತಿಯನ್ನ ತಿಳಿಸಿ ಸರ್ಕಾರದಿಂದ ನೆರವನ್ನ ಕಲ್ಪಿಸುತ್ತೇವೆ.
ಈ ಕಾಲೇಜಿಗೆ ತುಂಬಾ ಚರಿತ್ರೆ ಇರುವುದರಿಂದ 75ನೇ ಸುವರ್ಣ ಮಹೋತ್ಸವ ಆಚರಿಸುವ ಸನಿಹ ಹತ್ತಿರ ಆಗುತ್ತಿದ್ದು. ಅದರಿಂದ ಸರ್ಕಾರಕ್ಕೆ ಗಮನ ತಂದು ಸರಿಪಡಿಸುತ್ತೇನೆ ಕೊಡಗಿನ ಜಿಲ್ಲೆ ಹಾಗೂ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಶಿಕ್ಷಣ ಕೊಡುವಲ್ಲಿ ಕೊಡಗು ವಿಶ್ವವಿದ್ಯಾಲಯ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತದೆ.
ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಸರ್ಕಾರದಿಂದ ಯಾವ ಸೌಲಭ್ಯಗಳು ಇರುತ್ತದೆ ಅಂತಹ ಸೌಲಭ್ಯಗಳನ್ನ ಸರ್ಕಾರ ಮಟ್ಟದಲ್ಲಿ ಗಮನ ಸೆಳೆದು ಕಲ್ಪಿಸಲಾಗುವುದು. ಹಾಗೂ ಪರೀಕ್ಷೆಗಳನ್ನ ಕಟ್ಟುನಿಟ್ಟಾಗಿ ನಡೆಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೇಗಬೇಗನೆ ಮೌಲ್ಯಮಾಪನ ಮಾಡಿಸಿ ಪರೀಕ್ಷೆಯ ಫಲಿತಾಂಶವನ್ನು ಬಿಡುತ್ತೇನೆ ಎಂದು ನೂತನ ಕುಲ ಸಚಿವ (ಮೌಲ್ಯಮಾಪನ ) ಪ್ರೊಫೆಸರ್ ಸುರೇಶ ಹೇಳಿದರು,
ನೂತನ ಕುಲ ಸಚಿವರಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಪ್ರಥಮವಾಗಿ ಭೇಟಿ ನೀಡಿದ್ದರಿಂದ ಪ್ರಾಂಶುಪಾಲರಾದ ಮೇಜರ್ ಡಾ.ರಾಘವಾ.ಬಿ ಮತ್ತು ಪ್ರಾಧ್ಯಾಪಕರ ನೇತೃತ್ವದಲ್ಲಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಸಂಯೋಜಕರಾದ ಡಾ. ರವಿಶಂಕರ್ ಡಾ. ತಿಪ್ಪೇ ಸ್ವಾಮಿ, ಡಾ ನಾಗರಾಜ್ ಕೆ.ಟಿ, ಡಾ. ಎಂ ಪಿ ಕೃಷ್ಣ, ಡಾ. ಮಂಜುನಾಥ್. ಡಾ ಅರುಣ್ ಕುಮಾರ್ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
Kodagu
ಅಖಿಲ ಭಾರತ ತಲ ಸೈನಿಕ ಕ್ಯಾಂಪ್ ಗೆ ಸಾರ್ಜೆಂಟ್ ಜ್ಯೋತಿರಾದಿತ್ಯ ಆಯ್ಕೆ
ಮಡಿಕೇರಿ : ನಗರದ ಕೊಡಗು ವಿದ್ಯಾಲಯದಲ್ಲಿ 9ನೇ ತರಗತಿ ಓದುತ್ತಿರುವ ಎನ್‌ಸಿಸಿ ಕೆಡೆಟ್ ಸಾರ್ಜೆಂಟ್ ಜ್ಯೋತಿರಾದಿತ್ಯ ಬಿ ವೈ ಕರ್ನಾಟಕ ಗೋವಾ ಡೈರೆಕ್ಟರೇಟ್ ನ ಜೂನಿಯರ್ ವಿಭಾಗದ ಗ್ರೂಪಿಂಗ್ ಫೈಯರಿಂಗ್ ನಲ್ಲಿ ಆಯ್ಕೆ
ಆಗಿರುವ ಮೂರು ಕೆಡೆಟ್ ಗಳ ಪೈಕಿ ಮೊದಲನೇ ಸ್ಥಾನೀಯಾಗಿ ದೆಹಲಿಯಲ್ಲಿ ಮೂರರಿಂದ 13 ರವರೆಗೆ ನಡೆಯಲಿರುವ ಅಖಿಲ ಭಾರತ ತಳ ಸೈನಿಕ ಕ್ಯಾಂಪ್ ಗೆ ಆಯ್ಕೆಯಾಗಿರುತ್ತಾರೆ
ಇವನು 19ನೇ ಕರ್ನಾಟಕ ಬೆಟಾಲಿಯನ್ ಕೆಡೆಟ್ ಆಗಿದ್ದು ಮರಗೋಡಿನ ಕೃಷಿಕ ಬಾಳೆಕಜೆ ಯೋಗೇಂದ್ರ ಮತ್ತು ಸಂಧ್ಯಾ ದಂಪತಿ ಪುತ್ರ.
-
Mysore4 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State7 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State7 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health7 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized3 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized9 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State7 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.