Connect with us

Mysore

ಮಕ್ಕಳ ರಕ್ಷಣೆಗೆ ಪ್ರಬಲ ಆಧ್ಯತೆ ನೀಡಬೇಕು- ಪ್ರೊ. ಶರಣಪ್ಪ ವಿ. ಹಲ್ಸೆ

Published

on

ಮೈಸೂರು ಜ.30:- ನಮ್ಮ ದೇಶವನ್ನು, ರಾಜ್ಯವನ್ನು ರಕ್ಷಣೆ ಮಾಡಲು ಸಮಾಜವನ್ನು ಸದೃಢವಾಗಿ ಬೇಳೆಸಬೇಕಾದರೆ ಮಕ್ಕಳನ್ನು ರಕ್ಷಣೆ ಮಾಡಬೇಕು. ಮಕ್ಕಳ ರಕ್ಷಣೆಯನ್ನು ಮಾಡಿದಾಗ ನಾವು ಮುಂದಿನ ಭವಿಷ್ಯವನ್ನು ವಿಚಾರ ಮಾಡಲು ಸಾಧ್ಯ. ಹೀಗಾಗಿ ಮಕ್ಕಳ ರಕ್ಷಣೆಗೆ ಪ್ರಬಲ ಪ್ರಥಮ ಆಧ್ಯತೆಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶರಣಪ್ಪ ವಿ. ಹಲ್ಸೆ ರವರು ಹೇಳಿದರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ “ಮಕ್ಕಳಿಗೆ ಸಂಬoಧಿಸಿದ ಕಾನೂನುಗಳು” ಕುರಿತು ಒಂದು ದಿನದ ತರಬೇತಿ ಹಾಗೂ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಏಳಿಗೆ ಕುರಿತು ನಾವು ಜವಾಬ್ದಾರಿಯುತವಾಗಿ ಮಕ್ಕಳ ರಕ್ಷಣೆ ಮತ್ತು ನಿರ್ವಹಣೆ ಮಾಡಬೇಕು. ಅರಿವೇ ಗುರು ಎನ್ನುತ್ತಾ ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕತೆ, ಆಚಾರ ವಿಚಾರಗಳು , ಸಂಪ್ರದಾಯದ ಬಗ್ಗೆ ತಿಳಿಸಿದರೆ ದೇಶವನ್ನು ಮುನ್ನಡೆಸಲು ಸಹಕಾರಿಯಾಗುತ್ತದೆ. ಮಕ್ಕಳನ್ನು ಬೆಳೆಸುವಲ್ಲಿ ನಮ್ಮ ನಮ್ಮ ಜವಾಬ್ದಾರಿಗಳನ್ನೂ ಸಹ ನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ ರವರು ಮಾತನಾಡಿ, ಮಕ್ಕಳ ಹಕ್ಕುಗಳು, ಬಾಲ್ಯವಿವಾಹ, ಮಕ್ಕಳ ಶಿಕ್ಷಣದ ಕುರಿತು ಪೋಷಕರಿಗೆ ಹಾಗೂ ಅಧಿಕಾರಿಗಳಿಗೆಅರಿವು ಮೂಡಿಸಬೇಕು. ಮೈಸೂರು ಇತ್ತೀಚಿಗೆ ಅತಿ ವೇಗದಲ್ಲಿ ನಗರೀಕರಣಕ್ಕೆ ಒಳಗಾಗುತ್ತಿದೆ, ಆದರೆ ಇನ್ನೂ ಸಹ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹ ನಡೆಯುತ್ತಿದೆ. ಮಕ್ಕಳ ರಕ್ಷಣೆಯಲ್ಲಿ ಮಕ್ಕಳ ಪಾಲನಾ ಪೋಷಣೆ ಮಾಡಬೇಕಾದ ಮಕ್ಕಳ ಹಕ್ಕುಗಳು ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳಿಗೆ ಗುಡ್ ಟಚ್, ಬ್ಯಾಡ್
ಟಚ್ ಗಳ ಬಗ್ಗೆ ಅರಿವು ಮೂಡಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಗಂಡು ಹೆಣ್ಣು ಎಂಬ ತಾರತಮ್ಯ ಮಾಡಬಾರದು. ಪ್ರತಿಯೊಬ್ಬರಲ್ಲಿಯೂ ಮಾನವೀಯತೆ, ಸಂವೇದನಾ ಶೀಲತೆ ಇರಬೇಕು , ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಹೊತ್ತು ತಂದಾಗ ಅದನ್ನು ಕಡೆಗಣಿಸಬಾರದು . ಸಮಸ್ಯೆ ಚಿಕ್ಕಾದಾಗಿದ್ದಗಲೆ ಅದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲಾ ವಿಭಾಗದ ಅಧಿಕಾರಿಗಳು ಸಹ ಇದರ ಬಗ್ಗೆ ಗಮನ ಹರಿಸಬೇಕು. ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು .ಮಕ್ಕಳ ಬಗೆಗೆ ಯಾವುದೇ ರೀತಿಯ ತೊಂದರೆಗಳು ಕಂಡು ಬಂದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್ ಬಿ.ಜಿ ರವರು ಮಾತನಾಡಿ, ಈ ಕಾರ್ಯಕ್ರಮ ಅವಶ್ಯಕತೆ ಮತ್ತು ಅನಿವಾರ್ಯ ಕಾರ್ಯಗಾರ ಇದು. ಇಂಡಿಯನ್ ಮೆಜಾರಿಟಿ ಕಾಯಿದೆ ಮತ್ತು ಫೋಕ್ಸೋ ಕಾಯಿದೆ ಪ್ರಕಾರ 18 ವರ್ಷದೊಳಗಿನ ಎಲ್ಲರೂ ಸಹ ಮಕ್ಕಳೇ ಎಂದು ಪರಿಗಣಿಸಲಾಗುತ್ತದೆ. ಸಂವಿಧಾನದ 14 ನೆ ವಿಧಿಯು ಸಮಾನತೆಯ ಹಕ್ಕು, 15 ನೆಯ ವಿಧಿಯು ರೈಟ್ಸ್ ಆಗೈನೆಸ್ಟ್ ದಿಸ್ಕ್ರಿಮಿನೇಷನ್, ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರವನ್ನೂ ಪಡೆಯುವ ಹಕ್ಕು, 6ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾದುದ್ದು, ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ಆಸ್ತಿ ಎಂಬುದಾಗಿ ತಿಳಿಸಿದರು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡಿದೆ ಅದರ ಅನುಷ್ಠಾನದ ಜವಾಬ್ದಾರಿ ಎಲ್ಲಾ ಇಲಾಖೆಗಳ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಛಾಯಾದೇವಿ ಶಾಲಾ ಮಕ್ಕಳಿಂದ ಬಾಲ್ಯ ವಿವಾಹದ ನಿಷೇಧ ಕುರಿತಂತೆ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಸ್. ಮಂಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಹೆಚ್. ಆರ್. ಸುರೇಶ್, ಜಿಲ್ಲಾ ಮಕ್ಕಳಾ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಯೋಗೇಶ್ ಎನ್. ಟಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಿ.ಅನಿತ, ಪೋಲಿಸ್ ಮಹಾ ನಿರ್ದೇಶಕರ ತರಬೇತಿ ಕಚೇರಿಯ ಪೋಲಿಸ್ ತರಬೇತುದಾರರಾದ ರೋಹಿತ್ ಸಿ.ಜೆ, ಶಿಕ್ಷಣ ಇಲಾಖೆಯ ಪಾಂಡು ಮತ್ತಿತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಮಚ್ಚಿನಿಂದ ಒಡೆದು ಓರ್ವ ವ್ಯಕ್ತಿಯ ಬರ್ಬರ ಹ*ತ್ಯೆ

Published

on

ತಿ.ನರಸೀಪುರ:  ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಒಡೆದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದ ಸಮೀಪದ ಹಳೇ ತಿರುಮಕೂಡಲಿನ ಚೌಡಯ್ಯ ವೃತ್ತದ ಬಳಿ ಕಳೆದ ರಾತ್ರಿ ಸಂಭವಿಸಿದೆ.

ಹೊಸ ತಿರುಮಕೂಡಲು ರಾಮಚಂದ್ರ ಎಂಬುವರ ಮಗ ವಿನೋದ್ ಕುಮಾರ್ (ಪಚ್ಚರ್) (35) ಕೊಲೆಯಾದ ವ್ಯಕ್ತಿ.

ಮೃತರಿಗೆ ಪತ್ನಿ ಹಾಗೂ 7 ವರ್ಷದ ಗಂಡು ಮಗವಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ತಿರುಮಕೂಡಲು ಚೌಡಯ್ಯ ವೃತ್ತದ ಸೇತುವೆ ಬಳಿ ಕಳೆದ ರಾತ್ರಿ ವಿನೋದ ಕುಮಾರ್ (ಪಚ್ಚರ್)ನನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಳಿಗ್ಗೆಯವರೆಗೂ ರಕ್ತದ ಮಡುವಿನಲ್ಲಿ ಬಿದ್ದು ಜೀವಂತವಾಗಿ ಒದ್ದಾಡುತ್ತಿದ್ದ ವಿನೋದಕುಮಾರ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದರಾದರೂ ಆಸ್ವತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರ ಸುರೇಂದ್ರ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಳಲಾಗಿದೆ.

ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಧನಂಜಯ್, ಸಬ್ ಇನ್ಸ್ಪೆಕ್ಟರ್ ಜಗದೀಶ್ ಧೂಳ್ ಶೆಟ್ಟಿ, ಭೇಟಿ ನೀಡಿ ಪರಿಶೀಲನೆ ನಡೆಸಿ ಪೋಲೀಸರು ಕೊಲೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Continue Reading

Mysore

ಡಿ.16 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಬ್ರಹ್ಮೋತ್ಸವ : ನಂಜನಗೂಡಿನಲ್ಲಿ ಸಿದ್ದತೆ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು : ನಗರದ ಕಪಿಲಾ ನದಿ ತೀರದಲ್ಲಿರುವ ಶ್ರೀ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ 28 ನೇ ವರ್ಷದ ಬ್ರಹ್ಮೋತ್ಸವದ ಅಂಗವಾಗಿ ಡಿ. 16 ರಿಂದ 26 ರವರೆಗೆ ಒಟ್ಟು 11 ದಿನಗಳ ಕಾಲ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಲಿದೆ ಎಂದು ದೇವಾಲಯದ ಗುರುಸ್ವಾಮಿ ಗಳು ಪಿ.ದೇವರಾಜಸ್ವಾಮಿ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ರಹ್ಮೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಶಬರಿ ಮಲೈ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಕಂಠ ರಾಜೀವರು ತಂತ್ರಗಳ ಮಾರ್ಗದರ್ಶನದಲ್ಲಿ ಡಿ. 16ರ ಬೆಳಗ್ಗೆ 9.30ರಿಂದ 10.15ರ ಸಮಯದಲ್ಲಿ ಧ್ವಜಾರೋಹಣ ನೆರವೇರಲಿದ್ದು ಡಿ.20ರ ವರೆಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೇವತಾ ಕಾರ್ಯಗಳು ನೆರವೇರಲಿದೆ.

ಡಿ. 17ರ ಸಂಜೆ 6 ಕ್ಕೆ ವಿಶೇಷ ಪಡಿ ಪೂಜೆ ಹಾಗೂ 20.ರಂದು ಬೆಳಗ್ಗೆ 7ಕ್ಕೆ ಉತ್ಸವ ಮೂರ್ತಿಗೆ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಇದೇ ದಿನ ಬೆಳಗ್ಗೆ 11ಕ್ಕೆ ಅನ್ನ ಸಂತರ್ಪಣೆ ಹಾಗೂ ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜರುಗಲಿದೆ. ರಾತ್ರಿ 7 ಗಂಟೆ ದೇವಾಲಯದ ಆವರಣದ ಕಪಿಲಾ ನದಿ ತೀರದಲ್ಲಿ ಅರಾಟ್ಟು ಹಾಗೂ ತೆಪ್ಪೋತ್ಸವ ಜರುಗಲಿದೆ. ರಾತ್ರಿ 8 ಗಂಟೆಯಿಂದ ಮಾರುತಿ ಸಾಂಸ್ಕೃತಿಕ ಕಲಾಸಂಘ ಇವರಿಂದ ಕುರುಕ್ಷೇತ್ರ ನಾಟಕ ನಡೆಯಲಿದೆ.

ಪಾದಯಾತ್ರೆ ಮೂಲಕ ಆಗಮಿಸಿ 18 ಮೆಟ್ಟಿಲುಗಳನ್ನು ಹತ್ತುವ ಭಕ್ತಾಧಿಗಳಿಗಾಗಿ 24ರಂದು ದೇವಾಲಯದ ಆವರಣದಲ್ಲಿ ಇರುಮುಡಿ ಕಟ್ಟಲಾಗುವುದು. ನಂತರ ಅಯ್ಯಪ್ಪ ಯಾತ್ರಿಗಳು 25ರ ಸೋಮವಾರ ಬೆಳಗ್ಗೆ 5.ಗಂಟೆ ಮೈಸೂರಿನ ಶ್ರೀ ದತ್ತ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಪಾದಯಾತ್ರೆ ಮೂಲಕ ನಂಜನಗೂಡಿಗೆ ತಲುಪಿ ದೇವರ ದರ್ಶನ ಪಡೆದುಕೊಳ್ಳಲಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ‍್ಯಕ್ರಮಗಳು: ಬ್ರಹ್ಮೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರತಿ ದಿನ ಸಂಜೆ ದೇವಾಲಯದ ಆವರಣದಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗಲಿವೆ. ಡಿ. 16ರ ಸಂಜೆ 6ಕ್ಕೆ ನಂಜನಗೂಡಿನ ನೂಪುರ ನೃತ್ಯ ಶಾಲೆಯ ಮಕ್ಕಳಿಂದ ನೃತ್ಯ ರೂಪಕ ಜರುಗಲಿದ್ದು ಜೊತೆಗೆ ಡಿ. 26ರವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ನಾಟಕ ಪ್ರದರ್ಶನ ಜರುಗಲಿದೆ.

ಸುದ್ದಿಗೋಷ್ಠಿಯಲ್ಲಿ ಗುರು‌ಸ್ವಾಮಿಗಳು ಪಿ.ದೇವರಾಜಸ್ವಾಮಿ, ದೇವಾಲಯದ ಸಮಿತಿಯ ಅಧ್ಯಕ್ಷ ನಾರಾಯಣ್, ಎನ್.ಎಂ.ಮಂಜುನಾಧ್, ಭಕ್ತ ವತ್ಸಲ, ನಾರಾಯಣ್ ರಾವ್, ಸೇರಿದಂತೆ ಉಪಸ್ಥಿತರಿದ್ದರು.

Continue Reading

Mysore

ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ ಮತ ಚೋರಿ: ಶಾಸಕ ಜಿ.ಡಿ.ಹರೀಶ್‌ಗೌಡ ಆರೋಪ

Published

on

ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎAಸಿಡಿಸಿಸಿ) ಚುನಾವಣೆಯಲ್ಲಿ ಮತಪತ್ರವನ್ನೇ ಬದಲಾವಣೆ ಮಾಡಲಾಗಿದೆ. ಇದು ಕಾಂಗ್ರೆಸ್ ಪಕ್ಷ ಮಾಡಿದ ನಿಜವಾದ ಮತ ಚೋರಿ ಎಂದು ಬ್ಯಾಂಕ್ ಮಾಜಿ ಅಧ್ಯಕ್ಷರೂ ಆದ ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಆರೋಪಿಸಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಬೂತ್‌ನಲ್ಲೇ ಮತಪತ್ರ ಬದಲಾಯಿಸಿದ್ದಾರೆಂದು ಹೇಳುತ್ತಿದ್ದಾರೆ. ಮತ ಚಲಾವಣೆ ಮಾಡಿರುವ ಮತದಾರರು ಈ ಬಗ್ಗೆ ಹೇಳಿದ್ದಾರೆ. ಇವೆಲ್ಲವನ್ನು ನೋಡಿದರೆ ಯಾವುದನ್ನೂ ನಂಬಲು ಆಗುತ್ತಿಲ್ಲ. ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.


ರಾಹುಲ್ ಗಾಂಧಿ ಅವರು ಹೋದಲ್ಲಿ ಬಂದಲ್ಲಿ ಮತಗಳ್ಳತನದ ಬಗ್ಗೆ ಎಂದು ಹೇಳುತ್ತಿದ್ದಾರೆ. ಆದರೆ, ಮೈಸೂರಿನ ಎಂಸಿಡಿಸಿಸಿ ಚುನಾವಣೆಯಲ್ಲಿ ಮತಪತ್ರ ಬದಲಾಯಿಸಿದ್ದಾರೆ. ಯಾವುದೇ ಸರ್ಕಾರದ ಅವಧಿಯಲ್ಲೂ ಈ ರೀತಿ ಆಗಿರಲಿಲ್ಲ. ಇಷ್ಟೊಂದು ದ್ವೇಷ, ಅಸೂಯೆ ಇರುವ ಸರ್ಕಾರವನ್ನೂ ಯಾವಾಗಲೂ ನೋಡಿರಲಿಲ್ಲ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಸಹಕಾರಿ ಸಂಘಗಳ ಚುನಾವಣೆಯಲ್ಲಿ 5 ಮತಗಳನ್ನು ಹೆಚ್ಚುವರಿಯಾಗಿ ಸೇರಿಸಿ ಗೆಲುವು ಸಾಧಿಸಿದ್ದೇವೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದರು. ಅದರ ಮುಂದಿನ ಭಾಗ ಇದು. ನ್ಯಾಯಾಲಯ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿತ್ತು. ಆದರೂ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಫಲಿತಾಂಶ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.


ಸಿಎಂ ಕುರ್ಚಿಗಾಗಿ ಕಚ್ಚಾಟ: ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ. ಪರಿಣಾಮ ಬೆಳಗಾವಿ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬಹುತೇಕ ಸಚಿವರು ಸದನಕ್ಕೆ ಗೈರು ಹಾಜರಾಗುತ್ತಿದ್ದಾರೆ. ಯಾವುದಾದರೂ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ಸಚಿವರೇ ಇರುವುದಿಲ್ಲ. ಆಡಳಿತ ಪಕ್ಷದ ನಾಯಕರು ಪರಸ್ಪರ ಕಚ್ಚಾಟದಲ್ಲೇ ದಿನ ದೂಡುತ್ತಿದ್ದಾರೆ. ಸಿಎಂ, ಡಿಸಿಎಂ ಅಕ್ಕಪಕ್ಕದಲ್ಲಿ ಕುಳಿತಾಗಲೂ ಒಬ್ಬರ ಮುಖ ಮತ್ತೊಬ್ಬರು ನೋಡಲಾಗದ ಪರಿಸ್ಥಿತಿ ಇದೆ. ಎಲ್ಲವನ್ನೂ ಜನರ ತೀರ್ಮಾನಕ್ಕೆ ಬಿಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Continue Reading

Trending

error: Content is protected !!