Hassan
ಮಂಡ್ಯದ ಕೆರೆಗೋಡು ಪ್ರಕರಣ ಜನಗಳ ನಡುವೆ ಗಲಭೆ ಸೃಷ್ಠಿಸುತ್ತಿರುವ ಬಿಜೆಪಿ-ಜೆಡಿಎಸ್
ಹಾಸನ: ಮಂಡ್ಯದ ಕೆರಗೋಡು ಗ್ರಾಮದ ಪ್ರಕರಣವನ್ನಿಟ್ಟುಕೊಂಡು ಜನಗಳ ನಡುವೆ ಗಲಭೆಯನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಾ ಬಂದಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಚಿಕ್ಕ ಘಟನೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿ ಯವರು ದೊಡ್ಡದು ಮಾಡುತ್ತಿದ್ದಾರೆ. ಗ್ರಾಮದಲ್ಲಿ ಧ್ವಜಾರೋಹಣೆಗೆ ಅನುಮತಿ ಪಡೆದಿದ್ದೇ ಬೇರೆ ಆದರೆ ಧ್ವಜಾ ರೋಹಣೆ ಮಾಡಿದ್ದೇ ಬೇರೆ. ಷರತ್ತು ಉಲ್ಲಂಘನೆ ಮಾಡಿದ್ದರಿಂದ ಜಿಲ್ಲಾಡಳಿತ ಧ್ವಜ ಸ್ತಂಭ ತೆರವುಗೊಳಿಸಿದೆ. ಇದಕ್ಕೆ ಜೆಡಿಎಸ್ ಪಕ್ಷದವರ ಕುಮ್ಮಕ್ಕೂ ಸಹ ಇದೆ ಎಂದು ಆರೋಪಿಸಿದರು. ಹಿಂದೆ ಕುಮಾರಸ್ವಾಮಿ ಅವರು ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಮಾತಾಡಿ, ಅವರ ಸಹವಾಸ ಬೇಡ ಎಂದಿದ್ದರು. ಈಗ ತಮ್ಮ ಅಸ್ತಿತ್ವದ ಬೇಳೆ ಬೇಯಿಸಿಕೊಳ್ಳಲು ಹಾಗೂ ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ ಹೀನಾಯವಾಗಿ ಸೋತ, ಹೆಚ್‌ಡಿಕೆ, ಲೋಕಸಭಾ ಚುನಾವಣೆ ಯಲ್ಲಿ ಲಾಭ ಪಡೆಯಲು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಅಧಿಕಾರಕ್ಕಾಗಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲಾಗುತ್ತಿದ್ದು, ಇದಕ್ಕೆಲ್ಲಾ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಜನರು ತಕ್ಕೆ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಹಾಸನ ನಗರದ ರೈಲ್ವೆ ಮೇಲು ಸೇತುವೆ ಬಂದ್ ಆಗಿರುವುದರಿಂದ ಸಮಸ್ಯೆ ಆಗಿದ್ದು, ಈ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದೆ. ಮೇಲ್ವೇತುವೆ ಯನ್ನು ಫೆಬ್ರವರಿ ಅಂತ್ಯದೊಳಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಯವರು ಆಗಮಿಸಿ ಉದ್ಘಾಟನೆ ಮಾಡಲಿದ್ದು, ಶೀಘ್ರವೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಶೀವಲಿಂಗೇಗೌಡರ ಹಾಗೂ ಬಿ. ಶಿವರಾಂರ ನಡುವಿನ ವಾಗ್ವಾದದ ಕುರಿತು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಾಂಗ್ರೆಸ್ ಕೆಲ ಮುಖಂಡರು ಗುಂಪುಗಾರಿಕೆ ಮಾಡಿಕೊಂಡು ಒಬ್ಬರ ವಿರುದ್ದ ಮತ್ತೊಬ್ಬರು, ಯಾರ ವಿರುದ್ದ ಯಾರೂ ವ್ಯತಿರಿಕ್ತ ಹೇಳಿಕೆ ಕೊಡುವುದು ಬೇಡ. ಕೌಂಟರ್ ಹೇಳಿಕೆ ಕೂಡ ಕೊಡಬಾರದು. ಈ ಸಂಬಂಧ ಎಲ್ಲರೊಂದಿಗೂ ಹೈಕಮಾಂಡ್ ಮಾತನಾಡಿ ಸೂಚನೆ ಕೊಟ್ಟಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಗೆವಾಳು ದ್ಯಾವಪ್ಪ, ಅಶೋಕ ನಾಯಕರಹಳ್ಳಿ, ನಗರಸಭೆ ಮಾಜಿ ಸದಸ್ಯ ಅಬ್ದೂಲ್ ಖಯ್ಯುಂ, ನಾಗರಾಜ್, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
Hassan
ರತನ್ ಟಾಟಾ ಮತ್ತು ಪುನೀತ್ ರಾಜಕುಮಾರ್ ಸ್ಮರಣಾರ್ಥ ಉಚಿತ ವೈದ್ಯಕೀಯ ತಪಾಸಣೆ
ಆಲೂರು: ತಮ್ಮ ಸರಳತೆ ಮತ್ತು ಮಾನವೀಯ ಗುಣಗಳಿಂದಲೇ ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ಅಪ್ಪು ಮನೆ ಮಾಡಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳು ಪುನೀತ್‌ರನ್ನು ನೆನೆಯುತ್ತಿದ್ದಾರೆ ಎಂದು ಅಡಗೂರು ಯೋಗ ಕೇಂದ್ರದ ಚೇತನ್ ಗುರೂಜಿ ಹೇಳಿದರು.
ಪಟ್ಟಣದ ಲಯನ್ಸ್ ಸೇವಾ ಸಂಸ್ಥೆಯ ನೂತನ ಕಟ್ಟಡದಲ್ಲಿ ಆಲೂರು ಲಯನ್ ಸೇವಾ ಸಂಸ್ಥೆಯ ಶಿಬಿರಾರ್ಥಿಗಳು, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ, ಹಾಸನ ರಾಜೀವ್ ಆಯುರ್ವೇದ ಆಸ್ಪತ್ರೆ ಹಾಗೂ ಜೀವ ರಕ್ಷಾ ರಕ್ತ ನಿಧಿ ಸಹಕಾರದಿಂದ ಆಯೋಜಿಸಿದ್ದ ಭಾರತರತ್ನ ರತನ್ ಟಾಟಾ ಮತ್ತು ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪುನೀತ್ ಒಬ್ಬ ಆದರ್ಶ ವ್ಯಕ್ತಿತ್ವ ಹೊಂದಿದ್ದ ಅಪರೂಪದ ದೇವತಾ ಮನುಷ್ಯ. ನಗುಮೊಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಎಂದೆಂದಿಗೂ ಅಮರ. ಪುನೀತ್ ತೆರೆಯ ಮೇಲಿನ ಒಳ್ಳೆಯ ನಟರಷ್ಟೇ ಅಲ್ಲ, ತೆರೆಯ ಹಿಂದಿನ ಹೃದಯವಂತ ಕೂಡ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದ್ದರಿಂದ ಇಂದು ದೇಶ ಹಾಗೂ ರಾಜ್ಯದ ಪ್ರತಿ ಗ್ರಾಮದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿ ಖಾಸಗಿ ಗೌರವ ಸಲ್ಲಿಸಿ ಅವರ ಮಾದರಿಯುತ ವ್ಯಕ್ತಿತ್ವವನ್ನು ಯುವಕರು ಅನುಸರಿಸುತ್ತಿದ್ದಾರೆ, ಇನ್ನೂ ಉದ್ಯಮಿಗಳೆಂದರೆ ಜನ-ಸಾಮಾನ್ಯರ ಮನದಲ್ಲಿ ಬಿಡಿಗಾಸು ಬಿಚ್ಚದವರು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುವವರು ಎಂಬ ಭಾವನೆ ಹೆಚ್ಚಿನವರಲ್ಲಿ ಇರುವುದು ಸಹಜ. ಆದರೆ ಉದ್ಯಮಿ ರತನ್ ಟಾಟಾ ಈ ಉದ್ಯಮಿಗಳಿಗಿಂದ ದೇಶದ ಪ್ರತಿಯೊಬ್ಬರಿಗೂ ಗೌರವ ಹೆಮ್ಮೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ದೇಶದ ಜನರ ಬೆಂಬಲಕ್ಕೆ ನಿಂತು ಸುಮಾರು 500 ಕೋಟಿ ದೇಣಿಗೆ ನೀಡಿದವರು ರತನ್ ಟಾಟಾ. ಇದರ ಜೊತೆಗೆ ಟಾಟಾ ಗ್ರೂಪ್ 1,000 ಕೋಟಿ ದೇಣಿಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಆಲೂರು ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ್ ಮಾತನಾಡಿ, ಆಲೂರು ಲಯನ್ ಸೇವಾ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಇದರಿಂಧ ಸಾರ್ವಜನಿಕರು ಹೆಚ್ಚಿನ ಅನುಕೂಲವನ್ನು ಪಡೆದಿದ್ದಾರೆ. ರಕ್ತದಾನ ಮಹಾದಾನ ಈ ಬಾರಿ ಆಲೂರು ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಸಯೋಗದೊಂದಿಗೆ ಉಚಿತ ರಕ್ತದಾನ ಶಿಬಿರ ಸ್ಪರ್ಧಿಸಿದ್ದ ಹಿನ್ನೆಲೆ ಸುಮಾರು 40 ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ ಇವರಿಗೆ ನಮ್ಮ ಏನ್ ಸಂಸ್ಥೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ ಸೇವಾ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್. ವಲಯ ಅಧ್ಯಕ್ಷ ರಘು ಪಾಳ್ಯ, ಲಯನ್ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ರೇಣುಕ ಪ್ರಸಾದ್, ನಾಗರಾಜ್. ಸದಸ್ಯರಾದ ಸುದೇಶ್ ಆನಂದ್. ಗಿರೀಶ್.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ನಟರಾಜ್. ಉಪಾಧ್ಯಕ್ಷರಾದ ನವೀನ್ ಬೈರಾಪುರ. ಶಶಿಧರ ಬೇಕ್ಕಡಿ. ಮಗ್ಗೆ ಘಟಕದ ಅಧ್ಯಕ್ಷ ರಮೇಶ್. ಉಪಾಧ್ಯಕ್ಷ ರವಿ, ರಾಜೀವ್ ಕಾಲೇಜಿನ ವೈದ್ಯರು. ನರ್ಸ್ ಗಳು. ಹಾಗೂ ಎಚ್, ಡಿ, ಎಫ್, ಸಿ ಬ್ಯಾಂಕ್ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಸತೀಶ್ ಚಿಕ್ಕಕಣಗಾಲು
Hassan
ರೈತರ ಜಮೀನು ಕಬಳಿಕೆ ಮಾಡುತ್ತಿರುವ ವಕ್ಫ್ : ಕೆ.ಎಸ್. ಈಶ್ವರಪ್ಪ ಬೇಸರ
ಹಾಸನ: ರೈತರಿಗೆ ತಲಾ ತಲಾಂತರಗಳಿಂದ ಬಂದಿರುವ ಜಮೀನನ್ನು ಯಾವದ್ಯಾವುದೋ ಕಾರಣಗಳಿಂದ ವಕ್ಫ್ ಆಸ್ತಿಯಾಗಿ ಕಬಳಿಕೆಯಾಗುತ್ತಿರುವುದು ನಿಜಕ್ಕೂ ನನಗೆ ತುಂಬಾ ನೋವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬೇಸರದಲ್ಲಿ ಹೇಳಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕುಟುಂಬ ಸಮೇತವಾಗಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಪುನಿತರಾದರು. ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಈ ವರ್ಷವೂ ಕೂಡ ಆ ತಾಯಿ ಹಾಸನಾಂಬೆ ದರ್ಶನ ಭಾಗ್ಯ ನಮಗೆ ಕೊಟ್ಟಿದ್ದು, ಆ ತಾಯಿಯ ಕೃಪೆಯಿಂದ ಇಡೀ ಕರ್ನಾಟಕ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದೆ. ಆದರೆ ಧರ್ಮ, ರಾಜ್ಯ, ರಾಜಕಾರಣ ವಿಚಾರಕ್ಕೆ ಬಂದಾಗ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಗೊಂದಲವಿದೆ. ತಾಯಿ ಅದನ್ನು ಸರಿ ಮಾಡಮ್ಮ, ಎಲ್ಲಾ ರಾಜಕಾರಣಿಗಳು ಕೂಡ ಧರ್ಮದ ರಾಜಕಾರಣ ಮಾಡುವ ನಿಟ್ಟಿನಲ್ಲಿ ನೀನು ಆಶೀರ್ವಾದ ಮಾಡಮ್ಮ ಎಂದು ಹಾಸನಾಂಬೆ ದೇವಿಯಲ್ಲಿ ಬೇಡಿಕೊಂಡಿದ್ದೇನೆ ಎಂದರು.
ರೈತರಿಗೆ ತಲಾ ತಲಾಂತರಗಳಿಂದ ಬಂದಿರುವ ಜಮೀನನ್ನು ಯಾವದ್ಯಾವುದೋ ಕಾರಣಗಳಿಂದ ವಕ್ಫ್ ಆಸ್ತಿಯಾಗಿ ಕಬಳಿಕೆಯಾಗುತ್ತಿರುವುದು ನಿಜಕ್ಕೂ ನನಗೆ ತುಂಬಾ ನೋವಾಗಿದೆ. ರೈತ ಸಂತೃಪ್ತಿಯಿಂದ ಇದ್ದರೆ ದೇಶ ಸಮೃದ್ದಿಯಾಗಿರುತ್ತದೆ. ಆದರೆ ರೈತರ ಜಮೀನನ್ನೆ ಕಸಿದುಕೊಂಡು ವಕ್ಫ್ ಆಸ್ತಿ ಮಾಡಲು ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಇದಕ್ಕೆ ಸರಿಯಾದ ಕಡಿವಾಣ ಹಾಕಬೇಕು. ಆ ದಿಕ್ಕಿನಲ್ಲಿ ಆಡಳಿತ ನಡೆಸುವವರಿಗೆ ಬುದ್ದಿ ಕೊಡಮ್ಮ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದ, ದೇಶದ ಯಾವುದೇ ದೇವಸ್ಥಾನಕ್ಕೆ ಹೋದರೂ ಕೂಡ ಭಕ್ತರ ಸಂಖ್ಯೆ ಕೋಟಿ ಕೋಟಿ ದಾಟುತ್ತಿದೆ. ಇದರ ಅರ್ಥ ದೇಶದಲ್ಲಿ ಧರ್ಮವನ್ನು ಉಳಿಸುತ್ತೇವೆ ಎಂದು ತೀರ್ಮಾನ ಮಾಡಿಕೊಂಡಿರುವವರ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿರುವ ತುಂಬ ಸಂತೋಷ. ಸಣ್ಣ ದೇವಸ್ಥಾನದಲ್ಲಿ ಆಡಳಿತ ನಡೆಸುತ್ತಿರುವವರು ಅನ್ನಸಂತರ್ಪಣೆ ಮಾಡಿ ಜನರನ್ನ, ಭಕ್ತರನ್ನ ತೃಪ್ತಿ ಪಡಿಸುತ್ತಿರುವುದು ಈ ದೇಶದ ಸೌಭಾಗ್ಯ. ಧರ್ಮ ಜಾಗೃತಿಯಾದಂತಹ ತಾಯಿ ಇನ್ನೂ ನಮಗೆ ಆಶೀರ್ವಾದ ಮಾಡಲಿ. ರಾಜಕೀಯ ಗೊಂದಲಗಳು ನಿವಾರಣೆ ಆಗಲಿ. ರೈತರು ಜಮೀನು ವಕ್ಫ್ ಮಂಡಳಿಗಳಿಂದ ರೈತರಿಗೇ ಸಿಗುವ ರೀತಿಯಲ್ಲಿ ಆಶೀರ್ವಾದ ಮಾಡಲಿ. ಸಂತೋಷದಿಂದ ಎಲ್ಲರೂ ಬದುಕು ರೀತಿಯಲ್ಲಿ ಆಶೀರ್ವಾದ ಮಾಡಮ್ಮ ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಜೊತೆಗೆ ಬೇಗ ಎಲ್ಲಾ ಸಮಸ್ಯೆಗಳು ಪರಿಹಾರ ಆಗಲಿ ವಿಶ್ವಾಸದಲ್ಲಿ ನಾನೀದ್ದೀನಿ ಎಂದು ಹೇಳಿದರು.
Hassan
ನಗರದಲ್ಲಿ ಪುನೀತ್ ರಾಜಕುಮಾರ್ 3ನೇ ವರ್ಷದ ಪುಣ್ಯಸ್ಮರಣೆ
ಹಾಸನ: ನಗರದ ಎನ್.ಆರ್. ವೃತ್ತದ ಬಳಿ ಇರುವ ಪುನೀತ್ ರಾಜಕುಮಾರ್ ಪ್ರತಿಮೆ ಬಳಿ ಪುನೀತ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಇದೆ ವೇಳೆ ಒಕ್ಕೂಟದ ಸುಬ್ರಮಣ್ಯ ಮತ್ತು ರವಿಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಗುತ್ತಿದ್ದು, ಅವರು ನಮ್ಮ
ಕಣ್ಣ ಮುಂದೆ ಇಲ್ಲದೆ ಇರಬಹುದು, ನಮ್ಮ ಸುತ್ತ ಮುತ್ತ ಇನ್ನು ಕೂಡ ಇದ್ದಾರೆ ಎಂದು ತಿಳಿದುಕೊಂಡಿದ್ದೇವೆ. ಅವರ ಆದರ್ಶ, ದಾನ, ಧರ್ಮ ಎಲ್ಲಾವನ್ನು ಪ್ರಸ್ತೂತದ ಯುವಕರು ಅಳವಡಿಸಿಕೊಳ್ಳಬೇಕು. ಇವತ್ತು ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗಿದ್ದು, ಮದ್ಯಾಹ್ನ ಅವರಿಗೆ ಇಷ್ಟವಾದ ಆಹಾರವನ್ನು ಇಟ್ಟು ಸ್ಮರಿಸುವುದಾಗಿ ಹೇಳಿದರು.
ಈಸಂದರ್ಭದಲ್ಲಿ ವಿವೇಕರಾಜು, ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.
-
Mysore6 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State9 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State9 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health9 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan6 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized5 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized11 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State9 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.